2018ರಲ್ಲಿ ನೀವು ಖರೀದಿಸಬೇಕಿರುವ ಬೆಸ್ಟ್ ಮೊಬೈಲ್ ಮತ್ತು ಕಂಪ್ಯೂಟರ್ ಉತ್ಪನ್ನಗಳು ಇವು!!

  ಪ್ರತಿದಿನವೂ ಹೊಸ ಹೊಸ ಎಲೆಕ್ಟ್ರಾನಿಕ್ ವಸ್ತುಗಳು ವಿಶ್ವಮಾರುಕಟ್ಟೆಗೆ ಬಿಡುಗಡೆಯಾಗುತ್ತಲೇ ಇವೆ. ಕಂಪ್ಯೂಟರ್‌ ಬಿಡಿಭಾಗಗಳು, ಸಂಗೀತ ಸಾಧನಗಳು, ಗೇಮಿಂಗ್‌ ಗ್ಯಾಜೆಟ್‌ಗಳು, ಮೊಬೈಲ್‌ ಅಕ್ಸೆಸರೀಸ್ ಹೀಗೆ ನೂರಾರು ಮೊಬೈಲ್ ಉತ್ಪನ್ನಗಳು ಯುವಜನರ ಬೇಡಿಕೆಗಳಿಗೆ ಅನುಗುಣವಾಗಿ ವಿನ್ಯಾಸ ಬದಲಾಯಿಸಿಕೊಂಡು ಮಾರುಕಟ್ಟೆಗೆ ಕಾಲಿಡುತ್ತಿವೆ.

  ಹೀಗೆ ಬಿಡುಗಡೆಯಾದ ಎಲ್ಲಾ ಮೊಬೈಲ್ ಮತ್ತು ಕಂಪ್ಯೂಟರ್ ಉತ್ಪನ್ನಗಳು ಗ್ರಾಹಕರನ್ನು ಸಾಕಷ್ಟು ಬೇಗ ತಲುಪುವುದಿಲ್ಲ. ಏಕೆಂದರೆ, ಅದರ ಬಳಕೆಯ ಜನಪ್ರಿಯತೆ ಮತ್ತು ಅದಕ್ಕೆ ನೀಡುವ ಜಾಹಿರಾತು ಮಾತ್ರ ಅದಕ್ಕೆ ಬೇಡಿಕೆಯನ್ನು ಒದಗಿಸಬಹುದು. ಹೀಗೆ ಜನಪ್ರಿಯತೆ ಮತ್ತು ಜಾಹಿರಾತು ಇಲ್ಲದೆ ಎಷ್ಟೋ ಉತ್ಪನ್ನಗಳು ನಮಗೆ ಕಣ್ಣಿಗೆ ಮರೆಯಾಗಿ ಹೋಗಬಹುದು.

  2018ರಲ್ಲಿ ನೀವು ಖರೀದಿಸಬೇಕಿರುವ ಬೆಸ್ಟ್ ಮೊಬೈಲ್ ಮತ್ತು ಕಂಪ್ಯೂಟರ್ ಉತ್ಪನ್ನಗಳು!

  ಹಾಗಾಗಿ, ಇಂದಿನ ಲೇಖನದಲ್ಲಿ ಯುವಜನರ ಬೇಡಿಕೆಗಳಿಗೆ ಅನುಗುಣವಾಗಿ ವಿನ್ಯಾಸ ಬದಲಾಯಿಸಿಕೊಂಡು ಇದೀಗ ಮಾರುಕಟ್ಟೆಗೆ ಕಾಲಿಟ್ಟಿರುವ ಮೊಬೈಲ್ ಮತ್ತು ಕಂಪ್ಯೂಟರ್ ಉತ್ಪನ್ನಗಳನ್ನು ಪರಿಚಯಿಸುತ್ತಿದ್ದೇವೆ. ಅದರಲ್ಲಿಯೂ ಮೊಬೈಲ್ ಮತ್ತು ಕಂಪ್ಯೂಟರ್‌ ಬಳಕೆದಾರರಿಗೆ ಸ್ವಲ್ಪ ವಿಶೇಷ ಮತ್ತು ಉಪಯುಕ್ತ ಗ್ಯಾಜೆಟ್‌ಗಳು ಇವಾಗಿವೆ ಎಂದು ನಮ್ಮ ಅನಿಸಿಕೆ.!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಡಬ್ಲ್ಯೂ ಎಚ್‌–11 ಹೆಡ್‌ಫೋನ್‌

  ಅನಗತ್ಯ ಶಬ್ದವನ್ನು ನಿವಾರಣೆ ಮಾಡು ಡಿಜಿಟಲ್‌ ಆಂಪ್ಲಿಫೈಯರ್ ಅನ್ನು ಹೊತ್ತು ಅಂಬ್ರೇನ್ ಇಂಡಿಯಾ ಕಂಪೆನಿ ಡಬ್ಲ್ಯೂ ಎಚ್‌-11 ಹೆಡ್‌ಫೋನ್‌ ಬಿಡುಗಡೆಯಾಗಿದೆ. ಸುಮಧುರವಾದ ಸಂಗೀತದ ಆನಂದ ನೀಡುವ ಈ ಹೆಡ್‌ಫೋನ್‌ನಲ್ಲಿ ಕಂಟ್ರೋಲ್‌ ಬಟನ್‌ಗಳನ್ನು ಹೆಚ್ಚು ಸರಳವಾಗಿ ನೀಡಲಾಗಿದೆ. ಹಾಗಾಗಿ, ₹2,199 ಬೆಲೆಯ ಈ ಸಾಧನವು ಈಗ ಬಿಡುಗಡೆಯಾಗಿರುವ ಬಜೆಟ್ ಬೆಲೆಯ ಬೆಸ್ಟ್ ಹೆಡ್‌ಫೋನ್‌ ಎಂದು ಹೇಳಬಹುದು.

  ಪೊಲಾರ್ ಮೆನಿಯಾ

  ಈಗ ಮನೆಯನ್ನು ಮತ್ತಷ್ಟು ಸ್ಮಾರ್ಟ್‌ ಆಗಿಸಲು ಈ ಪೊಲಾರ್ ಬಳಸಬಹುದು. ಕೃತಕ ಬುದ್ಧಿಮತ್ತೆ (Artificial Intelligence) ಒಳಗೊಂಡಿರುವ ಈ ಪೊಲಾರ್ ಅನ್ನು ಮನೆಯ ಆಟೋಮೇಷನ್‌ಗೆ ಒಳಪಡಿಸಲು ಹೆಚ್ಚು ಸೂಕ್ತವಾಗಿದೆ. ಪೊಲಾರ್‌ನಿಂದ ಮನೆ, ಕಾರಿನ ಏ.ಸಿ ಯ ಕೆಲಸವನ್ನು ನಿಯಂತ್ರಿಸಬಹುದು. ಈ ಸಾಧನವನ್ನು ಕೊಸ್ಟೋನ್ ಹೋಂ ಅಟೊಮೇಷನ್ ಕಂಪೆನಿ ರೂಪಿಸಿದೆ.

  ವಿಪಿಆರ್‌ಒ ವಿ20 ಎಸ್ ಮೌಸ್‌

  ವೈರ್‌ಲೆಸ್‌ ಬಿಡಿಭಾಗಗಳನ್ನು ತಯಾರು ಮಾಡುವ ರ್ಯಾಪ್ಪೊ ಕಂಪನಿ ‘ವಿಪಿಆರ್‌ಒ ವಿ20 ಎಸ್ ಮೌಸ್‌' ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಗೇಮಿಂಗ್ ಉತ್ಪನ್ನಗಳ ಸಾಲಿಗೆ ಇದು ಹೊಸ ಸೇರ್ಪಡೆಯಾಗಿದೆ. 2,499 ರೂ. ಬೆಲೆಯ ಈ ಮೌಸ್‌ನಲ್ಲಿ ಐದು ಬಟನ್‌ಗಳಿದ್ದು, ಒಂದೊಂದು ಬಟನ್ ಒಂದೊಂದು ಕಾರ್ಯನಿರ್ವಹಣೆಗೆ ಬಳಕೆಯಾಗುತ್ತದೆ.

  ಜೆಬಿಎಲ್ ಗೊ2 ಬ್ಲೂಟೂತ್‌ ಸ್ಪೀಕರ್

  ಹರ್ಮನ್‌ ಇಂಟರ್‌ನ್ಯಾಷನಲ್ ಕಂಪನಿ ಇತ್ತೀಚೆಗೆ ಬಿಡುಗಡೆ ಮಾಡಿರುವ ಜೆಬಿಎಲ್ ಗೊ2 ಬ್ಲೂಟೂತ್‌ ಸ್ಪೀಕರ್ ಸಹ ಖರೀದಿಸಲು ಯೋಗ್ಯವಾದ ಉತ್ಪನ್ನವಾಗಿದೆ. ಪ್ರವಾಸಿಗರಿಗೆ ಇದೊಂದು ಅತ್ಯುತ್ತಮ ಸಂಗಾತಿಯಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಎಲ್ಲಾ ರೀತಿಯಲ್ಲಿಯೂ ಬೆಸ್ಟ್ ಎನಿಸುವ ಈ ಉತ್ಪನ್ನದ ಬೆಲೆ 2,999 ರೂಪಾಯಿಗಳು ಮಾತ್ರ.!

  ಹೈಪರ್ ಎಕ್ಸ್‌ ಗೇಮಿಂಗ್ ಹೆಡ್‌ಸೆಟ್‌

  ಕಿಂಗ್‌ಸ್ಟನ್ ಟೆಕ್ನಾಲಜಿಯ ಗೇಮಿಂಗ್‌ ವಿಭಾಗದಿಂದ ಹೈಪರ್ ಎಕ್ಸ್‌ ಗೇಮಿಂಗ್ ಹೆಡ್‌ಸೆಟ್‌ ಇದೀಗ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಈ ಹೈಪರ್ ಎಕ್ಸ್‌ ಗೇಮಿಂಗ್ ಹೆಡ್‌ಸೆಟ್‌ನಿಂದ ಡೆಯುವ ಅನುಭವ ಅದ್ಭುತವಾಗಿದೆ. ಅಡ್ಜೆಸ್ಟಬಲ್ ಸ್ಟೀಲ್ ಗೇರ್‌ ಮತ್ತು ಕುಷನ್‌ಗಳಿವೆ. ಇದರ ಬೆಲೆ ಸ್ವಲ್ಪ ದುಬಾರಿಯಾಗಿದ್ದು, 4,200. ಬೆಲೆಯನ್ನು ಹೊಂದಿದೆ.

  ನೆಟ್‌ಗೇರ್‌ ವೈಫೈ ರೂಟರ್ (ಎಕ್ಸ್‌ಆರ್ 500)

  ನೆಟ್‌ಗೇರ್‌ ಕಂಪನಿ ಇತ್ತೀಚೆಗೆ ಪ್ರೊ ಗೇಮಿಂಗ್‌ ವೈಫೈ ರೂಟರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅತ್ಯಾಧುನಿಕ ತಂತ್ರಾಂಶ ಮತ್ತು ವೈರ್‌ ಮತ್ತು ವೈರ್‌ಲೆಸ್‌ ವಿಧಾನದಲ್ಲಿ ಕೆಲಸ ಮಾಡುವ ನೆಟ್‌ವರ್ಕ್‌ ಸೌಲಭ್ಯವೂ ಉತ್ತಮವಾಗಿದೆ. 23 ಸಾವಿರ ಬೆಲೆಯ ಈ 256 ಎಂಬಿ ಸಂಗ್ರಹ ಸಾಮರ್ಥ್ಯ ಮತ್ತು 512 ಎಂಬಿ RAM ಮತ್ತು ಗುಣಮಟ್ಟದ ಆಂಟೆನಾ ಹೊಂದಿದೆ.

  ಲ್ಯಾಪ್‌ಟಾಪ್‌ ಸ್ಟ್ಯಾಂಡ್

  ಪ್ರಖ್ಯಾತ ಪೆಟ್ರೊನಿಕ್ಸ್ ಕಂಪನಿಯು ‘ಮೈ ಬಡ್ಡಿ ಎಕ್ಸ್ ಲ್ಯಾಪ್‌ಟಾಪ್ ಸ್ಟ್ಯಾಂಡ್ ಉತ್ಪನ್ನವನ್ನು ಬಿಡುಗಡೆ ಮಾಡಿದೆ. ಈ ‘ಮೈ ಬಡ್ಡಿ ಎಕ್ಸ್ ಲ್ಯಾಪ್‌ಟಾಪ್ ಸ್ಟ್ಯಾಂಡ್ ಅಡ್ಜೆಸ್ಟಬಲ್ ಸ್ಟ್ಯಾಂಡ್‌ ಆಗಿದ್ದು, ನಿಂತಿದ್ದಾಗ, ಕುಳಿತಿದ್ದಾಗಲೂ ಬಳಕೆ ಮಾಡಬಹುದಾಗಿದೆ. 20 ಕೆ.ಜಿ ತೂಕವನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿರುವ ಇದರ ಬೆಲೆ 7,999 ರೂಪಾಯಿಗಳು.!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Choice paralysis is something that you may or may not have heard of, but you'll definitely have been affected by. to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more