Subscribe to Gizbot

ಈ ವರ್ಷದಲ್ಲಿ ವಿಶ್ವದ ಗಮನ ಸೆಳೆದ ರೋಬೊಟ್‌ಗಳಿವು!!

Written By:

ಅಮೆರಿಕದ ಲಾಸ್‌ ವೆಗಸ್‌ನಲ್ಲಿ ನಡೆದ ಕನ್ಸೂಮರ್ ಎಲೆಕ್ಟ್ರಾನಿಕ್‌ ಷೊನಲ್ಲಿ (ಸಿಇಎಸ್ 2018) ಈ ಬಾರಿ ರೋಬೊಟ್‌ಗಳದ್ದೆ ಪ್ರಪಂಚ ಸೃಷ್ಟಿಯಾಗಿತ್ತು ಎಂದರೆ ತಪ್ಪಾಗಲಾರದು.! ಏಕೆಂದರೆ, ಇತರೆ ಎಲ್ಲಾ ಗ್ಯಾಜೆಟ್‌ಗಳಿಗಿಂತ ವಿಶ್ವದ ವಿವಿಧ ಭಾಗದ ಸಂಶೋಧಕರಿಂದ ತಯಾರಾದ ರೋಬೊಟ್‌ಗಳು ಈ ಬಾರಿ ವಿಶ್ವದ ಗಮನ ಸೆಳೆದು ಆಶ್ಚರ್ಯ ಮೂಡಿಸಿದವು!!

ರೋಬೊಟ್‌ಗಳ ಲೋಕವೇ ವಿಸ್ಮಯವಾರಿರುವುದರಿಂದ ರೋಬೊಟ್‌ಗಳ ಕುರಿತು ಸಂಶೋಧನೆ ಸದಾ ಕಾಲವೂ ನಡೆಯುತ್ತಲೇ ಇದೆ. ಹಾಗೆಯೇ, ಈ ಬಾರಿ ಮೂರನೇ ತಲೆಮಾರಿನ ಬುದ್ಧಿವಂತ ರೋಬೊಟ್‌ಗಳನ್ನು ಸಂಶೋಧಕರು ತಯಾರಿಸಿ ಪ್ರದರ್ಶನಕ್ಕಿಟ್ಟಿದ್ದರು. ಇವು ಮನುಷ್ಯನ ಬುದ್ದಿಮತ್ತೆಗೆ ಸವಾಲಾಗಿದ್ದವು!!

ಈ ವರ್ಷದಲ್ಲಿ ವಿಶ್ವದ ಗಮನ ಸೆಳೆದ ರೋಬೊಟ್‌ಗಳಿವು!!

ಹಾಗಾಗಿ, ಈ ವರ್ಷದ ಕನ್ಸೂಮರ್ ಎಲೆಕ್ಟ್ರಾನಿಕ್‌ ಷೊನಲ್ಲಿ ಪ್ರದರ್ಶನಕ್ಕಿಟ್ಟ ಅತ್ಯುತ್ತಮ ರೋಬೊಗಳು ಜನರಲ್ಲಿ ಆಶ್ಚರ್ಯದ ಜೊತೆಗೆ ಕುತೋಹಲವನ್ನು ಮೂಡಿಸಿವೆ.!! ಹಾಗಾದರೆ, ನ್ಸೂಮರ್ ಎಲೆಕ್ಟ್ರಾನಿಕ್‌ ಷೊನಲ್ಲಿ ಪ್ರದರ್ಶನವಾದ ಅತ್ಯುತ್ತಮ ರೋಬೊಟ್‌ಗಳು ಯಾವುವು? ಅವುಗಳ ವಿಶೇಷತೆಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮತ್ತೆ ಬಂದಿತ್ತು ಸ್ಯಾನ್‌ಬೋಟ್‌ ಎಲ್ಫ್!!

ಮತ್ತೆ ಬಂದಿತ್ತು ಸ್ಯಾನ್‌ಬೋಟ್‌ ಎಲ್ಫ್!!

2016 ರ ಬರ್ಲಿನ್‌ನಲ್ಲಿ ನಡೆದ ನ್ಸೂಮರ್ ಎಲೆಕ್ಟ್ರಾನಿಕ್‌ ಷೊನಲ್ಲಿ ಮೊದಲ ಬಾರಿ ಪ್ರದರ್ಶನಕ್ಕಿಡಲಾಗಿದ್ದ 'ಸ್ಯಾನ್‌ಬೋಟ್‌ ಎಲ್ಫ್' ಇದೀಗ ಲಾಸ್ ವೇಗಸ್‌ ಸಿಇಎಸ್‌ಗೂ ಬಂದಿತ್ತು. ಈಗಾಗಲೇ ಪ್ರಯಾಣಿಕರ ಸೇವೆ, ಭದ್ರತಾ ಕೆಲಸ ವಿಮಾನ ನಿಲ್ದಾಣಗಳು ಮತ್ತು ಬಂದರುಗಳಲ್ಲಿ ಬಳಕೆಯಾಗುತ್ತಿರುವ ಈ ರೋಬೊಟ್ ಮತ್ತೆ ಅಭಿವೃದ್ದಿಯಾಗಿದೆ.!!

ಸ್ಟಾರ್ಮ್‌ ಟ್ರೂಪರ್ ರೋಬೊಟ್ಸ್!!

ಸ್ಟಾರ್ಮ್‌ ಟ್ರೂಪರ್ ರೋಬೊಟ್ಸ್!!

ಮುಖವನ್ನು ಗುರುತಿಸುವ ಶಕ್ತಿ ಮತ್ತು ಮಾನವರ ಜೊತೆಗೆ ಸಂವಹನ ನಡೆಸುವ ತಂತ್ರಜ್ಞಾನವಿರುವ ಸ್ಟಾರ್ಮ್‌ ಟ್ರೂಪರ್ ರೋಬೊಟ್ಸ್ ಈ ವರ್ಷದ ವಿಶೇಷ ರೋಬೊಟ್‌ಗಳ ಜೊತೆ ಸ್ಥಾನಪಡೆದಿತ್ತು. ಜಾಗತಿಕ ಮಟ್ಟದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ UBTECH ಹೆಸರಿನ ಕೃತಕ ಬುದ್ಧಿಮತ್ತೆ ಕಂಪನಿ ಈ ಸ್ಟಾರ್ಮ್‌ ಟ್ರೂಪರ್ ರೋಬೊಟ್ಸ್ ತಯಾರಿಸಿತ್ತು.!!

ಯುಒ ಅಲ್ಬೆರ್ಟ್ ರೋಬೊಟ್!!

ಯುಒ ಅಲ್ಬೆರ್ಟ್ ರೋಬೊಟ್!!

ಜಪಾನ್, ಅಮೆರಿಕ ಮತ್ತು ಯುರೋಪ್‌ಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಯುಒ ಅಲ್ಬೆರ್ಟ್ ರೋಬೊಟ್ ಅನ್ನು ಹಲವು ವರ್ಷಗಳ ಹಿಂದೆಯೇ ಇವುಗಳನ್ನು ಪರಿಚಯಿಸಲಾಗಿದೆ. ಆದರೆ, ಪ್ರತಿ ವರ್ಷ ಹೊಸತನದಿಂದ ಇವು ಸುದ್ದಿ ಮಾಡುತ್ತಿದ್ದು, ಮೊಬೈಲ್ ತಂತ್ರಜ್ಞಾನ ಕಂಪನಿ ಮೆಗಾ ಕಾರ್ಪ್‌ ಸಾಫ್ಟ್‌ಬ್ಯಾಂಕ್‌ ತಯಾರಿಸಿದ ಯುಒ ಅಲ್ಬೆರ್ಟ್ ರೋಬೊಟ್ ಈ ಬಾರಿಯೂ ಅತ್ತಮ ಕಾರ್ಯನಿರ್ವಹಣೆ ತೋರಿದೆ.!!

How to view all photos, pages, comments and posts you liked on Facebook (KANNADA)
ವಾಕರ್ ರೋಬೊಟ್!!

ವಾಕರ್ ರೋಬೊಟ್!!

ವಿಶ್ವದ ಮೊದಲ ವಾಣಿಜ್ಯ ರೋಬೊಟ್‌ಗಳು ಎಂಬ ಹೆಸರು ಪಡೆರಿರುವ ವಾಕರ್ ರೋಬೊಟ್‌ಗಳಿಗೆ ಸಿಇಎಸ್ ಹೊಸ ರೀತಿಯ ವೇದಿಕೆಯನ್ನು ಒದಗಿಸಿತ್ತು. ದೊಡ್ಡ ಮತ್ತು ಸಂಕೀರ್ಣವಾದ ವಾಕರ್ ರೋಬೊಟ್‌ಗಳನ್ನು ಈ ಬಾರಿ ಪ್ರದರ್ಶನಕ್ಕಿಡಲಾಗಿತ್ತು. ಇವುಗಳು ಕೂಡ ವೀಕ್ಷಕರ ಗಮನಸೆಳೆದವು.!!

ಮಿನಿ ರೋಬೊಟ್‌ಗಳು!!

ಮಿನಿ ರೋಬೊಟ್‌ಗಳು!!

ಸಣ್ಣ ಗಾತ್ರದ ಸುಂದರವಾದ ರೋಬೊಟ್‌ಗಳನ್ನು ತಯಾರು ಮಾಡುವಲ್ಲಿ ಹರಾನ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. 3ಡಿ ಪ್ರಿಂಟರ್‌ ದೇಹ ಹೊಂದಿರುವ ಇವುಗಳು ಪೂರ್ಣ ತಿರುಗುವ ತಲೆಯಲ್ಲಿ ಎರಡು ಕ್ಯಾಮೆರಾಗಳನ್ನು ಹೊಂದಿವೆ.!!

ಓದಿರಿ:ಗೂಗಲ್' ಎಂದರೇನು?..ಈ ಹೆಸರು ಬಂದಿದ್ದು ಹೇಗೆ?!..ಗೂಗಲ್ ಅನ್ನೆ ಗೂಗಲ್ ಮಾಡೋಣವೇ?!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Nevertheless, I was annoyed by Aibo because it's a toy first and foremost, and at CES 2018,to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot