ಇಂತಹ ಅಪ್ರಯೋಜಕ ಗ್ಯಾಜೆಟ್ಸ್‌ಗಳನ್ನು ಕಂಡುಹಿಡಿದ ಪುಣ್ಯಾತ್ಮರು ಯಾರು?!

|

ಪ್ರತಿದಿನವೂ ಹತ್ತಾರು ತಂತ್ರಜ್ಞಾನ ಆಧಾರಿತ ಗ್ಯಾಜೆಟ್‌ಗಳು ಅಭಿವೃದ್ದಿಯಾಗಿ ನಮ್ಮ ಜೀವನ ಬಹಳಷ್ಟು ಸುಲಭವಾಗಿಸುತ್ತಿವೆ ಅಲ್ಲವೇ?. ಆದರೆ, ಹೀಗೆ ಅಭಿವೃದ್ದಿಯಾದ ಎಲ್ಲಾ ಗ್ಯಾಜೆಟ್‌ಗಳು ನಮ್ಮ ಉಪಯೋಗಕ್ಕೆ ಬರುತ್ತವೆ ಎನ್ನುವುದು ನಮ್ಮ ಭ್ರಮೆ. ಏಕೆಂದರೆ, ಸ್ವಲ್ಪವೂ ಉಪಯೋಗಕ್ಕೆ ಬಾರದಂತಹ ನೂರಾರು ಗ್ಯಾಜೆಟ್ಸ್‌ಗಳಿಗೂ ಸಹ ಅಭಿವೃದ್ದಿಯಾಗಿವೆ.

ಹಾಗಂತ, ಈ ಎಲ್ಲಾ ಉಪಯೋಗಕ್ಕೆ ಬಾರದಂತಹ ಗ್ಯಾಜೆಟ್‌ಗಳನ್ನು ಸುಮ್ಮನೆ ತಯಾರಿಸಿದ್ದಾರೆ ಎಂದು ಅಂದುಕೊಳ್ಳಬೇಡಿ. ಆ ಸಮಯದಲ್ಲಿ ಸಂಶೋಧಕನಿಗೆ ಪ್ರಯೋಜನಕಾರಿ ಎಂದೆನಿಸುವ ಗ್ಯಾಜೆಟ್ ಇಂದು ಉಪಯೋಗಕ್ಕೆ ಬಾರದ ಗ್ಯಾಜೆಟ್ ಆಗಿ ಬದಲಾಗಿರಬಹದು ಅಥವಾ ಆ ಸಮಯದ ಗ್ಯಾಜೆಟ್ ಈಗ ನಮ್ಮ ಮುಖದಲ್ಲಿ ನಗು ಮೂಡುವಂತೆ ಮಾಡಿರಬಹದು.

ಇಂತಹ ಅಪ್ರಯೋಜಕ ಗ್ಯಾಜೆಟ್ಸ್‌ಗಳನ್ನು ಕಂಡುಹಿಡಿದ ಪುಣ್ಯಾತ್ಮರು ಯಾರು?!

ಹಾಗಾಗಿ, ಇಂದಿನ ಲೇಖನದಲ್ಲಿ ಪ್ರಪಂಚದಲ್ಲಿರುವ ಉಪಯೋಗಕ್ಕೆ ಬಾರದವು ಎಂದು ಪರಿಗಣಿಸಿರುವ ಟಾಪ್ ಗ್ಯಾಜೆಟ್‌ಗಳ ಪಟ್ಟಿಯನ್ನು ನಾವು ನಿಮ್ಮ ಮುಂದಿಡುತ್ತಿದ್ದೇವೆ. ಸ್ವಲ್ಪವೂ ಉಪಯೋಗಕ್ಕೆ ಬಾರದಂತಹ ಈ ಹತ್ತಾರು ಗ್ಯಾಜೆಟ್‌ಗಳನ್ನು ಕಂಡುಹಿಡಿದವರು ಯಾರು ಎಂದು ನಿಮಗೆ ಅನಿಸುವುದಲ್ಲದೇ, ಬಿದ್ದು ಬಿದ್ದು ನಗುವಂತೆ ಮಾಡುವುದು ಖಂಡಿತಾ.!

ಮೌಸ್ ಟಾಕ್

ಮೌಸ್ ಟಾಕ್

ನೀವು ಈ ಗ್ಯಾಜೆಟ್ ಅನ್ನು ಬಳಸಬೇಕಾದರೆ ನಿಮ್ಮ ಕಿವಿಯ ಬಳಿ ಫೋನ್ ಮತ್ತು ಕಂಪ್ಯೂಟರ್ ಮೌಸ್ ಎರಡನ್ನೂ ಇಡಬೇಕು. ಏಕೆಂದರೆ, ಮೌಸ್‌ನಲ್ಲಿಯೇ ಫೋನ್ ಮಾಡಬಹುದಾದ ಗ್ಯಾಜೆಟ್ ಇದು

ಮೌಸ್ ಸ್ಕೇಲ್!

ಮೌಸ್ ಸ್ಕೇಲ್!

ಕಂಪ್ಯೂಟರ್ ಮೌಸ್ ಅನ್ನು ಬಳಸುವಾಗ ಮೌಸ್ ಎಷ್ಟು ಡಿಗ್ರಿ ದೂರ ಸಾಗುತ್ತದೆ ಎಂದು ಸ್ಕೇಲ್ ಮಾಡುವ ಗ್ಯಾಜೆಟ್ ಮೌಸ್ ಇದು. ಅದನ್ನು ಲೆಕ್ಕಾ ಹಾಕಿ ಏನು ಉಪಯೋಗ

ಹೈಟೈಪ್ ರೈಟರ್

ಹೈಟೈಪ್ ರೈಟರ್

ಕಂಪ್ಯೂಟರ್ ಇಲ್ಲದಿದ್ದಾಗ ಟೈಪ್ ರೈಟರ್ ಇತ್ತು. ಆದರೆ, ಟ್ಯಾಬ್ ಮೇಲೆ ಟೈಪ್ ಮಾಡಲು ಬಂದಿದೆ ಹೈಟೈಪ್ ರೈಟರ್!!

ಸಿಡಿ-ಪ್ಲೇಯಿಂಗ್ ಶೂಸ್

ಸಿಡಿ-ಪ್ಲೇಯಿಂಗ್ ಶೂಸ್

ನಿಮ್ಮ ಹಣವನ್ನು ವ್ಯರ್ಥ ಮಾಡಲು ಇದು ಸರಿಯಾದ ಮಾರ್ಗವಾಗಿದೆ. ಇಂದಿನ ಎಲೆಕ್ಟ್ರಾನಿಕ್ ಶೂ ಹೆಜ್ಜೆ ಲೆಕ್ಕವನ್ನು ಮೊಬೈಲ್‌ಗೆ ರವಾನಿಸಸುವುದು ವಿಶೇಷವೇನಲ್ಲ. ಆದರೆ, ಶೂ ಒಳಗೆ ಸಿಡಿ ಹಾಕಿ ಸಾಂಗ್ ಕೇಳುವ ಈ ಗ್ಯಾಜೆಟ್ ಕಂಡುಹಿಡಿದವರು ಯಾರು?

ಫೀಟ್ ಟ್ಯಾನರ್

ಫೀಟ್ ಟ್ಯಾನರ್

ನಿಮ್ಮ ಪಾದಗಳನ್ನು ಕಡಿಯುತ್ತಿದ್ದರೆ ಕೆರೆಯಲು ಕಂಡುಹಿಡಿದಿರುವ ನಿಷ್ಪ್ರಯೋಜಕ ಗ್ಯಾಜೆಟ್ ಇದು

ಲ್ಯಾಪ್ಟಾಪ್ ಸ್ಟೀರಿಂಗ್ ವೀಲ್

ಲ್ಯಾಪ್ಟಾಪ್ ಸ್ಟೀರಿಂಗ್ ವೀಲ್

ಚಾಲನೆ ಮಾಡುವಾಗ ಮೊಬೈಲ್‌ನಲ್ಲಿ ಮಾತಾನಡಬಾರದು ಎಂದು ಹೇಳಿದ್ದು, ಆದರೆ ಲ್ಯಾಪ್ಟಾಪ್ ಅನ್ನು ಬಳಸಬೇಡಿ ಎಂದಲ್ಲ

ರೆಟ್ರೊ ಸೆಲ್ಫೋನ್ ಹ್ಯಾಂಡ್ಸೆಟ್

ರೆಟ್ರೊ ಸೆಲ್ಫೋನ್ ಹ್ಯಾಂಡ್ಸೆಟ್

ಮೊಬೈಲ್ ಸಂಪರ್ಕದಲ್ಲಿ ಮಾತನಾಡಲು ಎಕ್ಟ್ರಾ ಹ್ಯಾಂಡ್ಸೆಟ್

ಫುಡ್ ಪ್ಯಾಂಪರ್!

ಫುಡ್ ಪ್ಯಾಂಪರ್!

ಈ ಗ್ಯಾಜೆಟ್ ನಿಮ್ಮ ಆಹಾರವನ್ನು ಬಿಸಿ ಮಾಡುವುದಿಲ್ಲ, ಮೃದುಗೊಳಿಸುವುದಿಲ್ಲ. ರುಚಿ ಸುಧಾರಿಸುವುದಿಲ್ಲ. ಆದರೆ, ನಿಮ್ಮ ಆಹಾರವನ್ನು ಪ್ರೀತಿಯಿಂದ ಇಟ್ಟುಕೊಳ್ಳುತ್ತದಂತೆ

ನಿಷ್ಪ್ರಯೋಜಕ ಬಾಕ್ಸ್

ನಿಷ್ಪ್ರಯೋಜಕ ಬಾಕ್ಸ್

ತಾನೇ ಮಾತನಾಡುವ ಈ ಬಾಕ್ಸ್‌ ಅನ್ನು ಸರಗೊಂಡ ಎಂಜಿನಿಯರ್ ಕಂಡುಹಿಡಿದದ್ದಂತೆ. ಜಾತ್ರೆಯಲ್ಲಿನ ಮೊಬೈಲ್ ತರ

ಟಿವಿ ಹ್ಯಾಟ್

ಟಿವಿ ಹ್ಯಾಟ್

ನೀವು ಬಸ್‌ನಲ್ಲಿ ಪ್ರಯಾಣಿಸುವಾಗ ಅಥವಾ ಎಲ್ಲರಿಯಾದರೂ ಕುಳಿತು ಮೊಬೈಲ್‌ನಲ್ಲಿ ಸಿನಿಮಾವನ್ನು ನೋಡುವಾಗ ಧರಿಸಲು ಟಿವಿ ಹ್ಯಾಟ್ ಕಂಡುಹಿಡಿದಿದ್ದರು.

ರಿವರ್ಸ್ ಕೀಬೋರ್ಡ್

ರಿವರ್ಸ್ ಕೀಬೋರ್ಡ್

ರಿವರ್ಸ್ ಕೀಬೋರ್ಡ್ ಒಂದು ಟೈಪ್ ಮಾಡುವ ಒಂದು ಹೊಸ ಮಾರ್ಗ ಎಂದು ಗ್ಯಾಜೆಟ್ ಮಾಲಿಕ ಹೇಳಿದ್ದು, ಹಣ ಮತ್ತು ಸಮಯವನ್ನು ವ್ಯರ್ಥ ಮಾಡುವ ಹೊಸ ಮಾರ್ಗವೇ ಹೊಸ ವಿಧಾನದಲ್ಲಿ ಕೀಬೋರ್ಡ್ ಟೈಪ್ ಮಾಡಲು ಪ್ರಯತ್ನಿಸುವುದು.

ನಾಗ್-ರೋಬೋಟ್

ನಾಗ್-ರೋಬೋಟ್

ಈ ನಾಗ್-ರೋಬೋ ನಿರಂತರವಾಗಿ ನೀವು ಫ್ರಿಜ್ ಅನ್ನು ಎಷ್ಟು ತೆರೆದುಬಿಟ್ಟಿದ್ದೀರಾ ಎಂಬುದನ್ನು ಗಮನಿಸುತ್ತದೆಯಂತೆ. ಆದರೆ, ಫ್ರಿಜ್ ಬಾಗಿಲು ತೆರೆದು ಬಿಡುವವರ ಸಂಖ್ಯೆ 1000 ಕ್ಕೆ ಒಬ್ಬನಂತೆ.

ಜಾಕೆಟ್ ಜಿಪಿಎಸ್

ಜಾಕೆಟ್ ಜಿಪಿಎಸ್

ಮೊಬೈಲ್ ಫೋನಿನಲ್ಲಿಯೇ ಜಿಪಿಎಸ್ ಇದ್ದರೂ ಈ ಜಾಕೆಟ್ ಜಿಪಿಎಸ್ ಖರೀದಿಸುವವರು ಯಾರು. ಅದಕ್ಕೂ ಬಳಸುವುದು ಹೇಗೆ?

ಎಲೆಕ್ಟ್ರಾನಿಕ್ ಬಬಲ್-ರಾಪ್

ಎಲೆಕ್ಟ್ರಾನಿಕ್ ಬಬಲ್-ರಾಪ್

ಸೋಪು ನೀರಿನಲ್ಲಿ ಗಾಳಿಯ ಗುಳ್ಳೆಗಳನ್ನು ಊದಲು ಹುಟ್ಟಿದ ಗ್ಯಾಜೆಟ್ ಇದು. ಯಾರಿಗೆ ಬೇಕ್ರಿ?

ಏರ್‌ ಕಂಡಿಷನ್ ಶೂ.

ಏರ್‌ ಕಂಡಿಷನ್ ಶೂ.

ಶೂ ಕೆಳಭಾಗದಲ್ಲಿ ರಂಧ್ರಗಳನ್ನು ಹೊಂದಿರುವ ಈ ಎಲೆಕ್ಟ್ರಾನಿಕ್ ಸರ್ಕ್ಯೂಟ್ ಏರ್‌ ಕಂಡಿಷನ್ ಶೂ ಶುದ್ಧ ಮೂರ್ಖತನ

ಡಿವಿಡಿ ರಿವೈಂಡರ್

ಡಿವಿಡಿ ರಿವೈಂಡರ್

ಡಿವಿಡಿ ಹೊಂದಿದ್ದ ಯಾರಾದರೂ ಅದನ್ನು ರಿವೈಂಡ್ ಮಾಡುವ ಅಗತ್ಯವಿಲ್ಲ ಎಂದು ತಿಳಿಯಬಹುದು. ಆದರೆ, ಚೀನಾದವರು ಕೇಳಬೇಕಲ್ಲ.!

WhatsApp group voice and video calling is now live - KANNADA GIZBOT
ಪೆಟ್ ರಾಕ್ ಯುಎಸ್‌ಬಿ ಕೇಬಲ್

ಪೆಟ್ ರಾಕ್ ಯುಎಸ್‌ಬಿ ಕೇಬಲ್

ಈ ಅನುಪಯುಕ್ತ ಗ್ಯಾಜೆಟ್ ಪಟ್ಟಿಯ ಅತ್ಯಂತ ಅನುಪಯುಕ್ತ ಗ್ಯಾಜೆಟ್ ಪ್ರಶಸ್ತಿ ಪೆಟ್ ರಾಕ್ ಯುಎಸ್‌ಬಿ ಕೇಬಲ್‌ಗೆ ಸಿಗುತ್ತದೆ. ಈ ಅಣ್ಣ ಕಲ್ಲನ್ನು ನೀಡಿರುವುದು ಯುಎಸ್‌ಬಿ ಕೇಬಲ್ ನೆಲಕ್ಕೆ ಬೀಳದಂತೆ ತಡೆಯಲು

Best Mobiles in India

English summary
Let's get it out in the open. We are literally ruled by technology nowadays. We can't deny the fact that we have witnessed most life-altering digital inventions ever. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X