ನೀವು ಆರೋಗ್ಯವಂತರಾಗಬೇಕೇ..? ಇಲ್ಲಿವೆ ಸ್ಮಾರ್ಟ್‌ ಟೂಲ್ಸ್‌..!

By Gizbot Bureau
|

ಇತ್ತೀಚೆಗೆ ಹಲವು ದೊಡ್ಡ ತಂತ್ರಜ್ಞಾನ ಸಂಸ್ಥೆಗಳು ಬಳಕೆದಾರರ ಆರೋಗ್ಯದತ್ತ ಗಮನ ಹರಿಸಿದ್ದು, ಮಾನವನನ್ನು ಸದೃಢವಾಗಿಡಲು ಸಹಾಯ ಮಾಡುತ್ತಿವೆ. ಕೆಲವು ಕಂಪನಿಗಳು ನಿಮ್ಮ ದಿನಚರಿಯೊಂದಿಗೆ ಹೊಂದಾಣಿಕೆ ಮಾಡುವ ಸಾಫ್ಟ್‌ವೇರ್‌ಗಳನ್ನು ಪರಿಚಯಿಸಿದ್ದರೆ, ಕೆಲವರು ಆರೋಗ್ಯದ ಮೇಲೆ ಖಾಳಜಿ ತೋರಲು ನಿಖರವಾದ ಧರಿಸಬಹುದಾದ ಉತ್ಪನ್ನಗಳನ್ನು ನಿಮಗೆ ನೀಡಿದ್ದಾರೆ. ಇನ್ನೂ ಕೆಲವು 'ಸ್ಮಾರ್ಟ್ ಹೋಮ್’ ಉತ್ಪನ್ನಗಳು ಸಹ ಇವೆ. ನಿಮ್ಮ ಆರೋಗ್ಯವನ್ನು ನಿಖರವಾಗಿ ಪತ್ತೆಹಚ್ಚಲು ಮತ್ತು ಆರೋಗ್ಯಕರ ಜೀವನ ನಡೆಸಲು ಅಗತ್ಯವಿರುವ ಆಪ್‌ಗಳು ಮತ್ತು ಸಾಧನಗಳನ್ನು ಇಲ್ಲಿ ಪಟ್ಟಿ ಮಾಡಿದ್ದು, ಆಪ್‌ಗಳಿಂದಿಡಿದು ಸ್ಮಾರ್ಟ್‌ವಾಚ್‌ಗಳು ಮತ್ತು ನೆಕ್‌ಬ್ಯಾಂಡ್‌ಗಳವರೆಗೆ ಎಲ್ಲವನ್ನೂ ಇಲ್ಲಿ ನೀವು ನೋಡಬಹುದು.

ಸ್ಮಾರ್ಟ್ ವಾಚ್

ಸ್ಮಾರ್ಟ್ ವಾಚ್

ನೀವು ವ್ಯಾಯಾಮ, ವಾಕಿಂಗ್, ರನ್ನಿಂಗ್‌ ಅಥವಾ ಯಾವುದೇ ದೈಹಿಕ ಚಟುವಟಿಕೆ ನಡೆಸುತ್ತಿದ್ದರೆ ನಿಮ್ಮೊಂದಿಗೆ ಇರಬೇಕಾದ ತಂತ್ರಜ್ಞಾನದಲ್ಲಿ ಮುಖ್ಯವಾದದ್ದು ಸ್ಮಾರ್ಟ್ ವಾಚ್. ವಿಭಿನ್ನ ಬೆಲೆಯ ಆಯ್ಕೆಗಳೊಂದಿಗೆ ನಿಮಗೆ ಹಲವಾರು ಆಯ್ಕೆಗಳು ಸಿಗುತ್ತವೆ. ಐಫೋನ್ ಬಳಕೆದಾರರು ಆಪಲ್ ವಾಚ್‌ ಕಡೆ ಮುಖ ಮಾಡಬಹುದು. ಆಂಡ್ರಾಯ್ಡ್ ಬಳಕೆದಾರರು ಸ್ಯಾಮ್‌ಸಂಗ್ ಸ್ಮಾರ್ಟ್‌ವಾಚ್‌ಗಳು, ಫಿಟ್‌ಬಿಟ್, ಫಾಸಿಲ್‌ ಮತ್ತಿತರ ಉತ್ಪನ್ನಗಳನ್ನು ಧರಿಸಬಹುದು. ಅದು ನೀವು ಏನು ಮಾಡುತ್ತಿದ್ದೀರಿ ಎಂಬುದರ ಬಗ್ಗೆ ನಿಗಾ ಇಡುವುದಲ್ಲದೆ ನೊಟಿಫಿಕೇಷನ್‌ ನೀಡುವ ಮೂಲಕ ಉತ್ಪಾದಕತೆ ಹೆಚ್ಚಿಸುತ್ತದೆ.

ಆರೋಗ್ಯ ಆಪ್‌ಗಳು

ಆರೋಗ್ಯ ಆಪ್‌ಗಳು

ನಿಮ್ಮ ಆರೋಗ್ಯದ ಬಗ್ಗೆ ನೀವು ನಿಜವಾಗಿಯೂ ಗಂಭೀರತೆಯನ್ನು ಹೊಂದಿದ್ದರೆ ಮತ್ತು ನಿಮ್ಮ ಆರೋಗ್ಯದ ಬಗ್ಗೆ ಸಂಕ್ಷಿಪ್ತ ಮಾಹಿತಿ ತಿಳಿಯಲು ಬಯಸಿದರೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕನಿಷ್ಠ ಒಂದು ಆರೋಗ್ಯ ಆಪ್‌ನ್ನು ನೀವು ಹೊಂದಿರಲೇಬೇಕು. ಕೆಲವು ಆಪ್‌ಗಳು ಪ್ರಗತಿಯನ್ನು ಗಮನಿಸಿದರೆ, ಇತರ ಆಪ್‌ಗಳು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲು ಸಹ ಶಿಫಾರಸು ಮಾಡುತ್ತವೆ. ಅವುಗಳಲ್ಲಿ ಕೆಲವುಗಳೆಂದರೆ ಆಕ್ಟಿವಿಟಿ, ಮೈ ಫಿಟ್‌ನೆಸ್‌ಪಾಲ್, ಮಿ ಫಿಟ್, ನೈಕ್ ರನ್ ಕ್ಲಬ್ ಮತ್ತಿತರ ಆಪ್‌ಗಳಾಗಿವೆ.

ಆಡಿಯೋ ಉತ್ಪನ್ನಗಳು

ಆಡಿಯೋ ಉತ್ಪನ್ನಗಳು

ನೆಕ್‌ಬ್ಯಾಂಡ್‌ಗಳು ವೈದ್ಯಕೀಯ ಸಾಧನಗಳೂ ಆಗಿಲ್ಲವೆಂದರೂ ನೀವು ಜಿಮ್‌ನಲ್ಲಿ ಅಥವಾ ಬೇರೆಡೆ ಕೆಲಸ ಮಾಡುತ್ತಿರುವಾಗ ನಿಜವಾಗಿಯೂ ಅವು ಉಪಯುಕ್ತವಾಗಿರುತ್ತವೆ. ರಿಯಲ್‌ಮಿ ಬಡ್ಸ್, ಸ್ಯಾಮ್‌ಸಂಗ್ ಇಯರ್‌ಬಡ್‌ಗಳು ಮತ್ತು ಏರ್‌ಪಾಡ್‌ಗಳು ಈ ವಿಭಾಗದಲ್ಲಿ ಕೆಲವು ಪ್ರಮುಖ ಉದಾಹರಣೆಗಳಾಗಿವೆ.

ಏರ್ ಪ್ಯೂರಿಫೈಯರ್‌ಗಳು

ಏರ್ ಪ್ಯೂರಿಫೈಯರ್‌ಗಳು

ಏರ್ ಪ್ಯೂರಿಫೈಯರ್‌ಗಳನ್ನು ಎಲ್ಲಾ ಸಮಯದಲ್ಲೂ ತೆಗೆದುಕೊಂಡು ಹೋಗುವುದಕ್ಕೆ ಸಾಧ್ಯವಿಲ್ಲ. ಆದರೆ, ನಿಮಗೆ ತಾಜಾ ಗಾಳಿಯನ್ನು ಉಸಿರಾಡಲು ನೀಡಿ ಮನೆಯಲ್ಲಿ ವ್ಯತ್ಯಾಸ ಸೃಷ್ಟಿಸುತ್ತದೆ. ಇವುಗಳು ಎಲ್ಲಾ ಆಕಾರಗಳು ಮತ್ತು ಗಾತ್ರಗಳಲ್ಲಿ ಬರುತ್ತವೆ, ನಿಮಗೆ ಅಗತ್ಯವಿರುವ ಏರ್‌ ಫ್ಯೂರಿಪೈಯರ್‌ನ್ನು ಖರೀದಿಸುವುದು ನಿಮಗೆ ಬಿಟ್ಟಿದ್ದು. ಇವುಗಳು ‘ಸ್ಮಾರ್ಟ್' ಆಗಿರುವುದರಿಂದ ನಿಮ್ಮ ಸಮಯವನ್ನು ಉಳಿಸುವುದರ ಜೊತೆ ನಿಮ್ಮ ಸುತ್ತಲಿನ ಪರಿಸರವನ್ನು ಸ್ವಯಂಚಾಲಿತವಾಗಿ ನಿರ್ವಹಿಸುತ್ತದೆ.

Best Mobiles in India

Read more about:
English summary
These Gadgets Will Get You On Track To Healthier Life

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X