ಒಮ್ಮೆ ಚಾರ್ಜ್ ಮಾಡಿದರೆ 250ಕಿ.ಮಿ ಓಡುತ್ತೆ ಈ ಬೈಕ್!...ಜಸ್ಟ್ 250!!

Written By:

20 ಮತ್ತು 21 ನೇ ಶತಮಾನವನ್ನು ಆಳುತ್ತಿರುವ ಪೆಟ್ರೋಲಿಯಂ ಉತ್ಪನ್ನಗಳು ಇನ್ನು ಕೆಲವೇ ದಿವಸಗಳಲ್ಲಿ ಮಾನವನಿಗೆ ಬೇಡವಾಗಲಿದ್ದು, ಮುಂದೆ ಎಲೆಕ್ಟ್ರಿಕ್ ಆಧಾರಿತ ವಾಹನಗಳು ಎಲ್ಲಾ ರೋಡುಗಳಲ್ಲಿ ಚಲಿಸಲಿವೆ.!..ಇದಕ್ಕೆ ಉದಾಹರಣೆ "G12H" ಎನ್ನುವ ಹೊಸ ಬೈಕ್!!

ಹೌದು, ಕ್ರೊವೇಶಿಯಾ ದೇಶದ ರಿಮಾಕ್ ಎಂಬ ಕಂಪೆನಿ ಎಲೆಕ್ಟ್ರಿಕ್ ಆಧಾರಿತ ಇ-ಬೈಕ್ ಅನ್ನು ಬಿಡುಗಡೆ ಮಾಡಿದ್ದು, ಈ ಬೈಕ್ ಎಲ್ಲೆಡೆ ಹವಾ ಸೃಷ್ಟಿಸಿದೆ.!! ಒಮ್ಮೆ ಚಾರ್ಜ್ ಮಾಡಿದರೆ 250 ಕಿ.ಮೀಟರ್ ಓಡುವ ಬೈಕ್ ಇದಾಗಿದ್ದು, ಎಲೆಕ್ಟ್ರಿಕ್ ಬೈಕ್‌ಗಳಲ್ಲಿಯೇ ಅಪ್‌ಡೇಟ್ ಆಗಿರುವ ಬೈಕ್ ಇದಾಗಿದೆ.!!

ಹಾಗಾದರೆ, ರಿಮಾಕ್ ಕಂಪೆನಿ ಬಿಡುಗಡೆ ಮಾಡಿರುವ ನೂತನ ಇ-ಬೈಕ್ ಹೇಗಿದೆ? ಅದರ ವಿಶೆಷತೆಗಳೇನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳ ಮೂಲಕ ತಿಳಿಯಿರಿ. ಹಾಗೂ ಭವಿಷ್ಯದ ಸಾರಿಗೆ ಹೇಗಿರುತ್ತದೆ ಎಂದು ಊಹಿಸಿ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪರಿಸರ ಸ್ನೇಹಿ ಬೈಕ್!!

ಪರಿಸರ ಸ್ನೇಹಿ ಬೈಕ್!!

ಸಂಪೂರ್ಣವಾಗಿ ಕೇವಲ ವಿಧ್ಯತ್ ಮೂಲಕವೇ ಕಾರ್ಯ ನಿರ್ವಹಿಸುವ ನೂತನ "G12H" ಇ-ಬೈಕ್ ಪರಿಸರ ಸ್ನೇಹಿ ಬೈಕ್ ಆಗಿದೆ.!! 0% ಪರ್ಸೆಂಟ್ ಕಾರ್ಬನ್ ಸಹಾಯವಿಲ್ಲದೆ ಓಡುವ ಬೈಕ್ ಪರಿಸರಕ್ಕೆ ಪೂರಕವಾದುದ್ದು.!!

ಒಮ್ಮೆ ಚಾರ್ಜ್ ಮಾಡಿದರೆ 250 ಕಿ.ಮೀಟರ್ !!

ಒಮ್ಮೆ ಚಾರ್ಜ್ ಮಾಡಿದರೆ 250 ಕಿ.ಮೀಟರ್ !!

ತಂತ್ರಜ್ಞಾನ ಬದಲಾದಂತೆ ಅವಿಷ್ಕಾರಗಳು ಸಹ ಹುಟ್ಟಿಕೊಳ್ಳುತ್ತವೆ. ಮೊದಲು ಎಲೆಕ್ಟ್ರಿಕ್ ಬೈಕ್ ಎಂದರೆ ಮೂಗು ಮುರಿಯುತ್ತಿದ್ದವರು, "G12H" ಇ-ಬೈಕ್ ಬಿಡುಗಡೆಯಾದ ಮೇಲೆ ಮೂಗಿನ ಮೇಲೆ ಬರಳಿಡುತ್ತಿದ್ದಾರೆ. ಏಕೆಂದರೆ ಒಮ್ಮೆ ಚಾರ್ಜ್ ಮಾಡಿದರೆ ಈ ಬೈಕ್ 250 ಕಿ.ಮೀಟರ್ ಓಡುತ್ತದೆ.!!

G12H

G12H" ಇ-ಬೈಕ್ ಶಕ್ತಿ ಏನು?

ಗಂಟೆಗೆ 45 ಕಿ.ಮಿ ಸ್ಪೀಡ್‌ನಲ್ಲಿ ಓಡುವ ಈ ಬೈಕ್ 3 ಕಿಲೊವ್ಯಾಟ್ ಶಕ್ತಿಯ ಬ್ಯಾಟರಿಯನ್ನು ಹೊಂದಿದೆ. ಹಾಗೂ ಕೇವಲ 80 ನಿಮಿಷಗಳಲ್ಲಿ ಬ್ಯಾಟರಿ ಸಂಪೂರ್ಣ ಚಾರ್ಜ್ ಆಗುತ್ತದೆ.!!

ಬೆಲೆ ಎಷ್ಟು?

ಬೆಲೆ ಎಷ್ಟು?

ಭಾರತೀಯ ಮಾರುಕಟ್ಟೆಗೆ ಹೋಲಿಸಿದರೆ ಈ ಇ-ಬೈಕ್ ಬೆಲೆ ದುಬಾರಿ ಎನ್ನಬಹುದು. 9800 ಡಾಲರ್ ಬೆಲೆ ಹೊಂದಿರುವ ಈ ಇ-ಬೈಕ್ ಬೆಲೆ ರೂಪಾಯಿ ಲೆಕ್ಕದಲ್ಲಿ 6 ಲಕ್ಷ ರೂಪಾಯಿಗಳಾಗುತ್ತವೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
These electric bikes can get you to and from work for under $0.03 per day.to know more vist to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot