ಕಡಿಮೆ ಬೆಲೆಗೆ ಲಭ್ಯವಿರುವ 5 ಉತ್ತಮ ವಾಯರ್‌ಲೆಸ್‌ ಇಯರ್‌ಫೋನ್‌ಗಳು!

|

ಪ್ರಸ್ತುತ ವಾಯರ್‌ಲೆಸ್‌ ಇಯರ್‌ಫೋನ್‌ಗಳು ಭಾರೀ ಜನಪ್ರಿಯತೆಗಳಿಸುತ್ತಿದ್ದು, ಸ್ಮಾರ್ಟ್‌ಫೋನ್‌ ಜೊತೆಗೊಂದು ಬೆಸ್ಟ್‌ ಇಯರ್‌ಫೋನ್ ಇರಲಿ ಎನ್ನುತ್ತಾರೆ. ಹೀಗಾಗಿ ಕಂಪೆನಿಗಳು ಮಾರುಕಟ್ಟೆಗೆ ತರಹೇವಾರಿ ಇಯರ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿವೆ. ಆದ್ರೆ, ಗ್ರಾಹಕರು ಮಾತ್ರ ಬಜೆಟ್‌ ಬೆಲೆಯಲ್ಲಿ ಸಿಗುವ ಅತ್ಯುತ್ತಮ ಸೌಂಡ್‌ ಕ್ವಾಲಿಟಿಯ ಹೆಡ್‌ಫೋನ್‌ಗಳಿಗೆನೇ ಹೆಚ್ಚಿನ ಆದ್ಯತೆ ನೀಡುತ್ತಾರೆ

ಕಡಿಮೆ ಬೆಲೆಗೆ ಲಭ್ಯವಿರುವ 5 ಉತ್ತಮ ವಾಯರ್‌ಲೆಸ್‌ ಇಯರ್‌ಫೋನ್‌ಗಳು!

ಹೌದು, ಬೋಟ್‌, ಶಿಯೋಮಿ, ಜೆಬಿಎಲ್, ಟ್ಯಾಗ್, ನಾಯಿಸ್‌ಶಾಟ್ ಸೇರಿದಂತೆ ಕೆಲವು ಜನಪ್ರಿಯ ಆಡಿಯೊ ಉಪಕರಣ ತಯಾರಿಕಾ ಕಂಪೆನಿಗಳು ಕಡಿಮೆ ಬೆಲೆಯ ಪ್ರೈಸ್‌ಟ್ಯಾಗ್‌ನಲ್ಲಿ ಉತ್ತಮ ಸೌಂಡ್‌ ಕ್ವಾಲಿಟಿಯ ಇಯರ್‌ಫೋನ್‌ಗಳನ್ನು ಲಾಂಚ್‌ ಮಾಡಿವೆ. ಈ ಡಿವೈಸ್‌ಗಳು ಹಗುರವಾದ ರಚನೆಯನ್ನು ಪಡೆದಿದ್ದು, ಧರಿಸಿದಾಗ ಸಹ ಕಂಫರ್ಟ್‌ ಅನುಭವ ನೀಡಲಿವೆ. ಹಾಗಾದರೇ ಸದ್ಯ ಕಡಿಮೆ ಬೆಲೆಗೆ ಲಭ್ಯವಿರುವ 5 ಉತ್ತಮ ಇಯರ್‌ಫೋನ್‌ಗಳು ಯಾವುವು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಜೆಬಿಎಲ್ T205BT

ಜೆಬಿಎಲ್ T205BT

ಜನಪ್ರಿಯ ಆಡಿಯೊ ಡಿವೈಸ್‌ ಕಂಪೆನಿಗಳಲ್ಲಿ ಜೆಬಿಎಲ್‌ ಸಹ ಒಂದಾಗಿದ್ದು, ಕಂಪೆನಿಯ 'T205BT' ವಾಯರ್‌ಲೆಸ್‌ ಇಯರ್‌ಫೋನ್ ಅತ್ಯುತ್ತಮ ಬಾಸ್‌ ಮತ್ತು ಸೌಂಡ್‌ ಸಿಸ್ಟಮ್ ಹೊಂದಿದೆ. 12.5mm ಸಾಮರ್ಥ್ಯದ ಸೌಂಡ್‌ ಡ್ರೈವರ್ಸ್‌ಗಳನ್ನು ಹೊಂದಿದ್ದು, ಫ್ರಿಕ್ವೇನ್ಸಿ ಪ್ರತಿಕ್ರಿಯೇ ಪ್ರಮಾಣವು 20 Hz - 20 kHz ನಲ್ಲಿದೆ. 120mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯಿದ್ದು, ಸುಮಾರು 6ಗಂಟೆಗಳ ಕಾಲ ಬ್ಯಾಟರಿ ಬ್ಯಾಕ್‌ಅಪ್‌ ಒದಗಿಸಲಿದೆ. ಬೆಲೆಯು 1999ರೂ.ಗಳು ಆಗಿದ್ದು, ಫ್ಲಿಪ್‌ಕಾರ್ಟ್‌, ಅಮೆಜಾನ್ ಮತ್ತು ಜೆಬಿಎಲ್ ವೆಬ್‌ಸೈಟ್‌ನಲ್ಲಿ ಲಭ್ಯ.

ಶಿಯೋಮಿ ಸ್ಪೋರ್ಟ್ಸ್‌ ಇಯರ್‌ಫೋನ್

ಶಿಯೋಮಿ ಸ್ಪೋರ್ಟ್ಸ್‌ ಇಯರ್‌ಫೋನ್

ಶಿಯೋಮಿ ಕಂಪೆನಿಯ 'ಮಿ ಸ್ಪೋರ್ಟ್ಸ್‌ ಇಯರ್‌ಫೋನ್' 10mm ಸಾಮರ್ಥ್ಯದ ಸೌಂಡ್‌ ಡ್ರೈವರ್ಸ್‌ಗಳನ್ನು ಒಳಗೊಂಡಿದ್ದು, ವಾಯಿಸ್‌ ಅಸಿಸ್ಟಂಟ್ ಸೌಲಭ್ಯವನ್ನು ಪಡೆದಿದೆ. ಅತ್ಯುತ್ತಮ ಬ್ಯಾಟರಿ ಪವರ್‌ ನೀಡಲಾಗಿದ್ದು, ಸುಮಾರು 9ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಒದಗಿಸಲಿದೆ. ಹಾಗೆಯೇ ಡೈನಾಮಿಕ್ ಬಾಸ್‌ ಹೊಂದಿದ್ದು, ಜೊತೆಗೆ ಸ್ವೆಟ್‌ ಪ್ರೂಫ್‌ ಮತ್ತು ಸ್ಲಾಶ್‌ ಪ್ರೂಫ್ ಸೌಲಭ್ಯಗಳನ್ನು ಹೊಂದಿದೆ. 1499ರೂ.ಗಳಿಗೆ ಅಮೆಜಾನ್ ಮತ್ತು ಮಿ ವೆಬ್‌ಸೈಟ್‌ ಮೂಲಕ ಖರೀದಿಸಬಹುದು.

<strong>ಓದಿರಿ : ನೆಟ್‌ಫ್ಲಿಕ್ಸ್‌ನಲ್ಲಿ ಸರ್ಚ್‌ ಹಿಸ್ಟರಿ ಡಿಲೀಟ್ ಮಾಡುವುದು ಹೇಗೆ?</strong>ಓದಿರಿ : ನೆಟ್‌ಫ್ಲಿಕ್ಸ್‌ನಲ್ಲಿ ಸರ್ಚ್‌ ಹಿಸ್ಟರಿ ಡಿಲೀಟ್ ಮಾಡುವುದು ಹೇಗೆ?

ಬೋಟ್ ರಾಕರ್ಜ್ 261 ಸ್ಪೋರ್ಟ್

ಬೋಟ್ ರಾಕರ್ಜ್ 261 ಸ್ಪೋರ್ಟ್

ಜನಪ್ರಿಯ ಆಡಿಯೊ ಕಂಪೆನಿ 'ಬೋಟ್'ನ 'ರಾಕರ್ಜ್ 261 ಸ್ಪೋರ್ಟ್' ವಾಯರ್‌ಲೆಸ್‌ ಇಯರ್‌ಫೋನ್ ಬಾಸ್‌ ಮತ್ತು ಸೌಂಡ್‌ ಸಿಸ್ಟಮ್ ಅತ್ಯುತ್ತಮವಾಗಿವೆ. 11mm ಸಾಮರ್ಥ್ಯದ ಡೈನಾಮಿಕ್ ಸೌಂಡ್‌ ಡ್ರೈವರ್ಸ್‌ಗಳನ್ನು ಹೊಂದಿದ್ದು, ಫ್ರಿಕ್ವೇನ್ಸಿ ಪ್ರತಿಕ್ರಿಯೇ ಪ್ರಮಾಣವು 20 Hz - 20 kHz ನಲ್ಲಿದೆ. 100mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದ್ದು, ಸುಮಾರು 8 ಗಂಟೆಗಳು ಬಾಳಿಕೆ ಬರಲಿದೆ. ಡಿವೈಸ್‌ ಬೆಲೆಯು 1499ರೂ.ಗಳು ಆಗಿದ್ದು, ಫ್ಲಿಪ್‌ಕಾರ್ಟ್‌, ಅಮೆಜಾನ್‌ನಲ್ಲಿ ಲಭ್ಯ.

ಟ್ಯಾಗ್ ಇನ್‌ಫೆರ್ನೊ (Tagg Inferno)

ಟ್ಯಾಗ್ ಇನ್‌ಫೆರ್ನೊ (Tagg Inferno)

ಟ್ಯಾಗ್‌ ಆಡಿಯೊ ಕಂಪೆನಿಯು ಸಹ ಬಜೆಟ್‌ ಬೆಲೆಯಲ್ಲಿ 'ಟ್ಯಾಗ್ ಇನ್‌ಫೆರ್ನೊ' ವಾಯರ್‌ಲೆಸ್‌ ಇಯರ್‌ಫೋನ್ ಹೊಂದಿದೆ. ಈ ಡಿವೈಸ್‌ IPX4 ಸೌಲಭ್ಯವನ್ನು ಪಡೆದಿದ್ದು, CVC 6.0 ನಾಯಿಸ್‌ ಕ್ಯಾನ್ಸಲೇಶನ್ ಆಯ್ಕೆ ಹೊಂದಿದೆ. 100mAh ಸಾಮರ್ಥ್ಯದ ಬ್ಯಾಟರಿ ಒಳಗೊಂಡಿದ್ದು, ಸುಮಾರು 8 ಗಂಟೆಗಳ ಕಾಲ ಬ್ಯಾಟರಿ ಬಾಳಿಕೆ ಒದಗಿಸಲಿದೆ. 2499ರೂ.ಗಳ ಪ್ರೈಸ್‌ಟ್ಯಾಗ್ ಹೊಂದಿರುವ ಈ ಡಿವೈಸ್‌ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಲ್ಲಿ ಲಭ್ಯ.

ನಾಯಿಸ್‌ ಶಾಟ್‌ ಇಯರ್‌ಬಡ್ಸ್‌

ನಾಯಿಸ್‌ ಶಾಟ್‌ ಇಯರ್‌ಬಡ್ಸ್‌

ನಾಯಿಸ್‌ ಶಾಟ್‌ ಇಯರ್‌ಬಡ್ಸ್‌ ವಾಯರ್‌ಲೆಸ್‌ ರಚನೆಯಲ್ಲಿದ್ದು, ಬಜೆಟ್‌ ಬೆಲೆಯ ಅತ್ಯುತ್ತಮ ಇಯರ್‌ಬಡ್ಸ್‌ ಆಗಿವೆ. IPX4 ಸ್ವೆಟ್‌ಪ್ರೊಫ್‌ ಸೌಲಭ್ಯವನ್ನು ಪಡೆದಿದ್ದು, ಲ್ಯಾಪ್‌ಟಾಪ್‌ ಮತ್ತು ಸ್ಮಾರ್ಟ್‌ಫೋನ್‌ಗಳಿಗೆ ಕನೆಕ್ಟ್‌ ಮಾಡಬಹುದಾಗಿದೆ. ಫ್ರಿಕ್ವೇನ್ಸಿ ರೇಂಜ್ 20 Hz ~ 20 kHz ಆಗಿದ್ದು, 450mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಸಿಂಗಲ್ ಚಾರ್ಜ್‌ನಲ್ಲಿ ಸುಮಾರು 3ಗಂಟೆ ನಿರಂತರ ಪ್ಲೇ ಬ್ಯಾಕ್ ಒದಗಿಸಲಿದೆ. ಬೆಲೆಯು 2499ರೂ.ಗಳು ಆಗಿದ್ದು, ಇ ಕಾಮರ್ಸ್‌ ತಾಣಗಳಲ್ಲಿ ಲಭ್ಯ ಇದೆ.

<strong>ಓದಿರಿ : ಬಳಕೆದಾರರು ಕುತೂಹಲದಿಂದ ಕಾಯುತ್ತಿದ್ದ ಹೊಸ ಫೀಚರ್ಸ್ ಈಗ 'ವಾಟ್ಸಪ್‌'ನಲ್ಲಿ ಲಭ್ಯ!</strong>ಓದಿರಿ : ಬಳಕೆದಾರರು ಕುತೂಹಲದಿಂದ ಕಾಯುತ್ತಿದ್ದ ಹೊಸ ಫೀಚರ್ಸ್ ಈಗ 'ವಾಟ್ಸಪ್‌'ನಲ್ಲಿ ಲಭ್ಯ!

Best Mobiles in India

English summary
These 5 Best Wireless Earphones with best sound drivers and best battery life. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X