Subscribe to Gizbot

ಪ್ರಪಂಚದಾದ್ಯಂತ ಇರುವ ಎಲೆಕ್ಟ್ರಿಕ್‌ ಪವರ್‌ ಚಾಲಿತ ವಾಹನಗಳು ಯಾವುವು ಗೊತ್ತೇ?

Written By:

ಎಲೆಕ್ಟ್ರಿಕ್‌ ಮೋಟಿವ್‌ ಪವರ್‌ ಆರಂಭವಾಗಿದ್ದು 1827 ರಲ್ಲಿ. ಸ್ಲೋವಾಕ್‌ ಹಂಗೇರಿಯನ್‌ ಪಾದ್ರಿ 'ಅನ್ಯೊಸ್‌ ಜೆಡ್ಲಿಕ್'‌ ಎಂಬುವವರು ಮೊದಲ ಬಾರಿಗೆ ಎಲೆಕ್ಟ್ರಿಕ್‌ ಮೋಟಾರ್‌ ಅನ್ನು ನಿರ್ಮಿಸುವ ಮುಖಾಂತರ ಎಲೆಕ್ಟ್ರಿಕ್ ಪವರ್‌ ಚಾಲಿತ ವಾಹನಗಳನ್ನು ನಿರ್ಮಿಸಲು ಆರಂಭಿಸಲಾಯಿತು. ಅಂದಹಾಗೆ ಮೊದಲು ಇವರು ಸ್ಟೇಟರ್, ರೋಟರ್‌ ಮತ್ತು ದಿಕ್ಪರಿವರ್ತಕಗಳನ್ನು ನೀಡುವ ಮುಖಾಂತರ ಮೊದಲಿಗೆ ಸಣ್ಣ ಕಾರಿಗೆ ವಿದ್ಯುತ್‌ ಪವರ್‌ ನೀಡಿದರು. 1835 ರ ನಂತರದಲ್ಲಿ ನೆದರ್‌ಲ್ಯಾಂಡ್‌ನ 'ಫ್ರೊಫೆಸರ್‌ ಸಿಬ್ರಾಂಡಸ್' ರವರು ಸ್ಮಾಲ್‌ ಸ್ಕೇಲ್‌ ಎಲೆಕ್ಟ್ರಿಕ್‌ ಕಾರನ್ನು ನಿರ್ಮಿಸಿದರು. ಈ ರೀತಿಯಲ್ಲಿ ವಾಹನಗಳನ್ನು ಎಲೆಕ್ಟ್ರಿಕ್ ಪವರ್‌ನೊಂದಿಗೆ ಚಲಿಸಲು ಆರಂಭಿಸಲಾಯಿತು.

1835 ರಿಂದ ಆರಂಭಗೊಂಡ ವಿದ್ಯುತ್‌ ಚಾಲಿತ ವಾಹನಗಳ ಅಭಿವೃದ್ದಿ ಇಂದು ವಿವಿಧ ಟೆಕ್ನಾಲಜಿಯನ್ನು ಬಳಸಿ ವಿವಿಧ ವಿದ್ಯುತ್‌ ಚಾಲಿತ ವಾಹನಗಳನ್ನು ಅಭಿವೃದ್ದಿಪಡಿಸಲಾಗಿದೆ. ಇಂದಿನ ಲೇಖನದಲ್ಲಿ ಪ್ರಸ್ತುತ ಪ್ರಪಂಚದಾದ್ಯಂತ ಇರುವ ವಿವಿಧ ಎಲೆಕ್ಟ್ರಾನಿಕ್‌ ಪವರ್‌ ಚಾಲಿತ ವಾಹನಗಳು ಯಾವುವು ಎಂದು ನಿಮಗೆ ಪರಿಚಯಿಸುತ್ತಿದ್ದೇವೆ. ಕೆಲವು ರಿಮೋಟರ್ ಕಂಟ್ರೋಲ್‌ ಹೊಂದಿದ್ದು, ಈ ಎಲೆಕ್ಟ್ರಾನಿಕ್‌ ಪವರ್‌ ಚಾಲಿತ ವಾಹನಗಳು ಯಾವುವು ಎಂದು ತಿಳಿಯಲು ಸ್ಲೈಡರ್ ಕ್ಲಿಕ್ಕಿಸಿ ಓದಿರಿ.

ಓದಿರಿ:ಹ್ಯಾಪಿ ಬರ್ತ್‌ಡೇ 'ವರ್ಲ್ಡ್‌ ವೈಡ್ ವೆಬ್‌'

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಲೆಕ್ಟ್ರಿಕ್‌ ಕಾರು

ಎಲೆಕ್ಟ್ರಿಕ್‌ ಕಾರು

ಮೊದಲೇ ಹೇಳಿದ ಹಾಗೆ ಮೊಟ್ಟ ಮೊದಲ ಬಾರಿಗೆ ವಿದ್ಯುತ್‌ ಶಕ್ತಿಯನ್ನು ಕಾರಿಗೆ ನೀಡಿದ್ದು 'ಅನ್ಯೊಸ್‌ ಜೆಡ್ಲಿಕ್'. ಇವರು ಎಲೆಕ್ಟ್ರಿಕ್‌ ಮೋಟಾರ್‌ ಅನ್ನು ನಿರ್ಮಿಸಿ ಎಲೆಕ್ಟ್ರಿಕ್‌ ಪವರ್‌ನ ಕಾರನ್ನು 1834 ರಲ್ಲಿ ನಿರ್ಮಿಸಿದರು. ಇಂದು ಪ್ರಪಂಚದಾದ್ಯಂತ ಸೋಲಾರ್ ಪವರ್‌ ಉಪಯೋಗಿಸುವ ಮತ್ತು ಎಲೆಕ್ಟ್ರಿಕ್‌ ಪವರ್‌ ಚಾಲಿತ ಕಾರುಗಳು ಇವೆ.

 ಎಲೆಕ್ಟ್ರಿಕ್ ಪವರ್‌ ಚಾಲಿತ ರೈಲು

ಎಲೆಕ್ಟ್ರಿಕ್ ಪವರ್‌ ಚಾಲಿತ ರೈಲು

ಇಂದು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಎಲೆಕ್ಟ್ರಿಕ್‌ ಪವರ್‌ ಚಾಲಿತ ರೈಲುಗಳಿವೆ. ಈ ರೈಲುಗಳನ್ನು ಥರ್ಡ್‌ ರೈಲ್‌ ಅಥವಾ ಆನ್‌-ಬೋರ್ಡ್‌ ಎನರ್ಜಿ ರೈಲುಗಳು ಎಂದು ಸಹ ಕರೆಯಲಾಗುತ್ತದೆ.

ಎಲೆಕ್ಟ್ರಿಕ್ ಬಸ್‌

ಎಲೆಕ್ಟ್ರಿಕ್ ಬಸ್‌

ಅಮೆರಿಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್‌ ಬಸ್‌ಗಳನ್ನು ಕಾಣಬಹುದು. ಇವುಗಳಲ್ಲಿ ನಾನ್‌-ಆಟೋನಾಮಸ್‌ ಎಲೆಕ್ಟ್ರಿಕ್‌ ಬಸ್‌ ಮತ್ತು ಆನ್‌ಬೋರ್ಡ್‌ ಸ್ಟೋರ್‌ ಎಲೆಕ್ಟ್ರಿಸಿಟಿ ಬಸ್‌ಗಳು ಎಂದು ವಿಂಗಡಿಸಬಹುದು. ಆನ್‌ಬೋರ್ಡ್‌ ಎಲೆಕ್ಟ್ರಿಸಿಟಿ ಬಸ್‌ಗಳು ಬ್ಯಾಟರಿ ಮೂಲಕ ಎಲೆಕ್ಟ್ರಿಸಿಟಿ ಪವರ್‌ ಪಡೆದುಕೊಳ್ಳುತ್ತವೆ. ಎಲೆಕ್ಟ್ರಿಕ್‌ ಬಸ್‌ ನಮ್ಮ ಬೆಂಗಳೂರಿನಲ್ಲೂ ಸಹ ಇದೆ.

ಎಲೆಕ್ಟ್ರಿಕ್‌ ಬೈಸಿಕಲ್‌

ಎಲೆಕ್ಟ್ರಿಕ್‌ ಬೈಸಿಕಲ್‌

ಎಲೆಕ್ಟ್ರಿಕ್ ಬೈಸಿಕಲ್‌ಗಳು ಇ-ಬೈಕ್‌ ಎಂದು ಸಹ ಪ್ರಖ್ಯಾತವಾಗಿವೆ. ಎಲೆಕ್ಟ್ರಿಕ್‌ ಬೈಸಿಕಲ್‌ ಎಲೆಕ್ಟ್ರಿಕ್ ಮೋಟಾರ್‌ನ ವ್ಯವಸ್ಥೆ ಹೊಂದಿದ್ದು, ಸಂಚಾರಕ್ಕೆ ಇದನ್ನು ಬಳಸಬಹುದಾಗಿದೆ. ಪ್ರಪಂಚದಾದ್ಯಂತ ವಿವಿಧ ರೀತಿಯ ಇ-ಬೈಕ್‌ಗಳು ಇವೆ. ಇ-ಬೈಸಿಕಲ್‌ನ ಬ್ಯಾಟರಿಯನ್ನು ರೀಚಾರ್ಜ್‌ ಮಾಡಿ ಸಂಚಾರಕ್ಕೆ ಬಳಸಬಹುದಾಗಿದೆ. ಎಲೆಕ್ಟ್ರಿಕ್‌ ಬೈಸಿಕಲ್‌ಗಳಿಂದ 16 ರಿಂದ 20 mph ವೇಗದಲ್ಲಿ 25/32 ಕಿಲೋ ಮೀಟರ್‌ವರೆಗೂ ಸಂಚಾರ ಮಾಡಬಹುದಾಗಿದೆ.

ಎಲೆಕ್ಟ್ರಿಕ್ ರಿಕ್ಷಾ

ಎಲೆಕ್ಟ್ರಿಕ್ ರಿಕ್ಷಾ

2008 ರಿಂದ ಹಲವು ನಗರಗಳಲ್ಲಿ ಎಲೆಕ್ಟ್ರಿಕ್ ರಿಕ್ಷಾಗಳು (ಇ-ರಿಕ್ಷಾ) ಎಂದೇ ಪ್ರಖ್ಯಾತವಾಗಿದೆ. 650-1400 ವ್ಯಾಟ್ ಮಟ್ಟದ ಎಲೆಕ್ಟ್ರಿಕ್‌ ಮೋಟಾರ್‌ ಚಾಲಿತ ತ್ರಿಚಕ್ರ ವಾಹನ ಎಲೆಕ್ಟ್ರಿಕ್ ರಿಕ್ಷಾ. ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ರಿಕ್ಷಾವನ್ನು ಚೀನಾದಲ್ಲಿ ನಿರ್ಮಿಸಲಾಗತ್ತದೆ. ಇತ್ತೀಚೆಗೆ ಇತರೆ ಕೆಲವು ದೇಶಗಳು ಸಹ ಎಲೆಕ್ಟ್ರಿಕ್ ರಿಕ್ಷಾ ನಿರ್ಮಿಸುತ್ತಿವೆ ಎನ್ನಲಾಗಿದೆ.

ಎಲೆಕ್ಟ್ರಿಕ್‌ ಸ್ಕೂಟರ್

ಎಲೆಕ್ಟ್ರಿಕ್‌ ಸ್ಕೂಟರ್

ಎಲೆಕ್ಟ್ರಿಕ್‌ ಸ್ಕೂಟರ್‌ಗಳು ಇಂದು ಬಹುಶಃ ಹೆಚ್ಚಿನ ದೇಶಗಳಲ್ಲಿ ದಿನನಿತ್ಯ ಸಂಚಾರದಲ್ಲಿವೆ. 6 ಗಂಟೆಗಳ ಕಾಲ ವಿದ್ಯುತ್‌ನಿಂದ ಚಾರ್ಜ್‌ ಮಾಡಿ ಸಂಚಾರ ಮಾಡಬಹುದಾದ ಇ-ಸ್ಕೂಟರ್‌ಗಳು ಬಜೆಟ್‌ ಬೆಲೆಯಲ್ಲಿ ಖರೀದಿಗೆ ಲಭ್ಯ.

ಎಲೆಕ್ಟ್ರಿಕ್ ವಿಮಾನ

ಎಲೆಕ್ಟ್ರಿಕ್ ವಿಮಾನ

ಎಲೆಕ್ಟ್ರಿಕ್‌ ವಿಮಾನವು ಎಲೆಕ್ಟ್ರಿಕ್‌ ಮೋಟಾರ್‌ ಆಧಾರಿತವಾಗಿ ಹಾರಾಟ ಮಾಡುತ್ತದೆ. ಈ ವಿಮಾನಗಳಿಗೆ ಎಲೆಕ್ಟ್ರಿಸಿಟಿ ಪವರ್‌ 'ಇಂಧನ ಕೋಶಗಳು, ಸೋಲಾರ್‌ ಕೋಶಗಳು, ಪವರ್‌ ಬೀಮಿಂಗ್‌ ಮತ್ತು ಬ್ಯಾಟರಿಗಳ' ಮುಖಾಂತರ ದೊರೆಯುತ್ತದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಸ್ಮಾರ್ಟ್‌ಫೋನ್‌ ಬಳಸಬೇಕೋ/ಬೇಡವೋ? ಈ ಮಾಹಿತಿ ಓದಿ ನಿರ್ಧರಿಸಿ!

ಮೊಬೈಲ್‌ಗಳ ಬ್ಯಾಟರಿ ಸ್ಫೋಟಗೊಳ್ಳುವುದನ್ನು ತಡೆಯುವುದು ಹೇಗೆ?

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

 

English summary
Top 7 Electric Powered Vehicles around the World. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot