2000ರೂ. ಪ್ರೈಸ್‌ಟ್ಯಾಗ್‌ನಲ್ಲಿ ಲಭ್ಯವಿರುವ 5 ಬೆಸ್ಟ್ ಬ್ಲೂಟೂತ್ ಸ್ಪೀಕರ್ಸ್‌ಗಳು!

|

ಯಾವುದೇ ಡಿವೈಸ್‌ನಿಂದ ಮ್ಯೂಸಿಕ್‌ನ ಸೌಂಡ್‌ ಕೇಳಲು ಸ್ಪೀಕರ್‌ಗಳು ಅಗತ್ಯವಿದ್ದು, ಇದೀಗ ಮಾರುಕಟ್ಟೆಯಲ್ಲಿ ವಾಯರ್‌ಲೆಸ್‌ ಸ್ಪೀಕರ್ಸ್‌ಗಳ ಅಬ್ಬರ ಜೋರಾಗಿದೆ. ವಾಯರ್‌ಲೆಸ್ ಸ್ಪೀಕರ್‌ಗಳನ್ನು ಬ್ಲೂಟೂತ್ ಮೂಲಕ ಸಂಪರ್ಕಿಸಬಹುದಾಗಿದ್ದು, ಹಲವು ಡಿಸೈನ್‌ಗಳಲ್ಲಿ ಲಭ್ಯ ಇವೆ. ಹಗುರವಾದ ರಚನೆಯನ್ನು ಹೊಂದಿರುವ ಈ ಸಾಧನಗಳನ್ನು ಜೊತೆಗೆ ಕೊಂಡೊಯ್ಯಬಹುದಾಗಿದ್ದು, ಗ್ರಾಹಕರನ್ನು ಸೆಳೆಯುತ್ತಿವೆ.

2000ರೂ. ಪ್ರೈಸ್‌ಟ್ಯಾಗ್‌ನಲ್ಲಿ ಲಭ್ಯವಿರುವ 5 ಬೆಸ್ಟ್ ಬ್ಲೂಟೂತ್ ಸ್ಪೀಕರ್ಸ್‌ಗಳು!

ಹೌದು, ಸ್ಮಾರ್ಟ್‌ಫೋನ್ ಇರಲಿ ಅಥವಾ ಇತರೆ ಯಾವುದೇ ಡಿವೈಸ್‌ ಇರಲಿ ಬ್ಲೂಟೂತ್ ಮೂಲಕ ಸರಳವಾಗಿ ವಾಯರ್‌ಲೆಸ್‌ ಸ್ಪೀಕರ್ಸ್‌ಗಳಿಗೆ ಕನೆಕ್ಟ್‌ ಮಾಡಬಹುದಾಗಿದೆ. ಇವು ನಿಗದಿತ ವ್ಯಾಪ್ತಿಯನ್ನು ರೇಂಜ್‌ ಹೊಂದಿದ್ದು, ಪ್ರಮುಖ ಆಡಿಯೊ ಉತ್ಪನ್ನಗಳ ತಯಾರಿಕಾ ಕಂಪನಿಗಳ ಸ್ಪೀಕರ್ಸ್‌ಗಳು ಟ್ರೆಂಡಿಂಗ್‌ನಲ್ಲಿವೆ. ಕಡಿಮೆ ಬೆಲೆಯಿಂದ ಹೈ ಎಂಡ್‌ ಬೆಲೆಯವರೆಗೂ ವಿವಿಧ ಶ್ರೇಣಿಯಲ್ಲಿ ದೊರೆಯಲಿವೆ. ಹಾಗಾದರೇ ಸದ್ಯ 2000ರೂ. ಬೆಲೆ ಪ್ರೈಸ್‌ ಟ್ಯಾಗ್‌ನಲ್ಲಿ ಲಭ್ಯವಿರುವ ಟಾಪ್‌ 5 ವಾಯರ್‌ಲೆಸ್‌ ಸ್ಪೀಕರ್ಸ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಸೋನಿ SRS XB01

ಸೋನಿ SRS XB01

ಸೋನಿ ಕಂಪನಿಯ SRS XB01 ವಾಯರ್‌ಲೆಸ್ ಸ್ಪೀಕರ್‌ 200ಗ್ರಾಂ ತೂಕವನ್ನು ಹೊಂದಿದ್ದು, ಅತ್ಯುತ್ತಮ ಬಾಸ್‌ ಸೌಂಡ್‌ ಅನ್ನು ಹೊರಸೂಸಲಿದೆ. ಸೈಡ್‌ ಮೌಟೆಂಡ್ ಯುಎಸ್‌ಬಿ ಕೇಬಲ್‌ನಿಂದ ಚಾರ್ಜ್‌ ಮಾಡುವ ಆಯ್ಕೆಯನ್ನು ಹೊಂದಿರುವ ಈ ಸಾಧನ ಒಮ್ಮೆ ಚಾರ್ಜ್‌ ಮಾಡಿದರೇ 6 ಗಂಟೆಗಳ ಕಾಲ ಬ್ಯಾಟರಿ ಬಾಳಿಕೆ ಒದಗಿಸಲಿದೆ. ಹಾಗೇ ಹ್ಯಾಂಡ್ಸ್‌ ಫ್ರಿ ಕಾಲಿಂಗ್‌ ಆಯ್ಕೆಯನ್ನು ಸಹ ಇದು ಹೊಂದಿದೆ. ವಾಟರ್‌ ರೆಸಿಸ್ಟನ್ಸ್‌ ಮಾದರಿಯ ರಚನೆಯನ್ನು ಹೊಂದಿದ್ದು, ಗ್ರೀನ್, ಬ್ಲ್ಯಾಕ್, ವೈಟ್, ಬ್ಲೂ, ರೆಡ್ ಮತ್ತು ಯೆಲ್ಲೊ ಬಣ್ಣಗಳ ಆಯ್ಕೆಗಳಲ್ಲಿ ದೊರೆಯಲಿದೆ. ಈ ಡಿವೈಸ್‌ನ ಬೆಲೆ 2000ರೂ.ಗಳು ಆಗಿದೆ.

ಜೆಬಿಎಲ್‌ ಗೊ

ಜೆಬಿಎಲ್‌ ಗೊ

ಸೌಂಡ್‌ ಉತ್ಪನ್ನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಜೆಬಿಎಲ್‌ ಕಂಪನಿ, ಬೆಸ್ಟ್‌ ವಾಯರ್‌ಲೆಸ್‌ ಸ್ಪೀಕರ್ಸ್‌ಗಳನ್ನು ಪರಿಚಯಿಸಿದೆ. ಅವುಗಳಲ್ಲಿ 'ಜೆಬಿಎಲ್‌ ಗೊ' ವಾಯರ್‌ಲೆಸ್‌ ಪವರ್‌ಫುಲ್ ಸೌಂಡ್‌ ಔಟ್‌ಪುಟ್‌ ಹೊರಹಾಕಲಿದ್ದು, 8.4 x 3.3 x 6.9 ಸುತ್ತಳತೆಯನ್ನು ಹೊಂದಿರುವ ಈ ಡಿವೈಸ್‌ 132ಗ್ರಾಂ ತೂಕವನ್ನು ಪಡೆದಿದೆ. ವಾಯಿಸ್‌ ಕಂಮಾಂಡ್ ಆಯ್ಕೆ ಸಹ ಇದ್ದು, ಗೂಗಲ್‌ ಅಸಿಸ್ಟಂಟ್, ಆಪಲ್ ಸಿರಿ ಬೆಂಬಲವಿದೆ. 5 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಶಕ್ತಿ ಒದಗಿಸಲಿದ್ದು, ಗ್ರೀನ್, ಬ್ಲೂ, ರೆಡ್‌ ಸೇರಿದಂತೆ ಹಲವು ಬಣ್ಣಗಳ ಆಯ್ಕೆಯಲ್ಲಿ ಲಭ್ಯ. ಬೆಲೆಯು 1599ರೂ.ಗಳು ಆಗಿದೆ.

ಮಿ ಬೇಸಿಕ್ 2

ಮಿ ಬೇಸಿಕ್ 2

ಶಿಯೋಮಿ ಕಂಪನಿಯ 'ಮಿ ಬೇಸಿಕ್ 2' ಹೆಸರಿನ ಸ್ಪೀಕರ್‌ 5 ವ್ಯಾಟ್ ಔಟ್‌ಪುಟ್‌ ವಿದ್ಯುತ್‌ ಸಾಮರ್ಥ್ಯದಲ್ಲಿದ್ದು, 1200mAh ಬ್ಯಾಟರಿ ಶಕ್ತಿಯನ್ನು ಪಡೆದಿದೆ. ಬ್ಲೂಟೂತ್ ಮೂಲಕ ಕನೆಕ್ಟ್‌ ಮಾಡಬಹುದಾಗಿದ್ದು, ಜೊತೆಗೆ ಮೈಕ್ರೋಫೋನ್ ಆಯ್ಕೆ ಒಳಗೊಂಡಿರುವುದರಿಂದ ವಾಯರ್‌ಲೆಸ್‌ ಕರೆಗಳನ್ನು ಸ್ವೀಕರಿಸಬಹುದು. ಚಾರ್ಜಿಂಗ್‌ಗಾಗಿ ಮೈಕ್ರೋ ಯುಎಸ್‌ಬಿ ಪೋರ್ಟ್‌ ಆಯ್ಕೆ ಒದಗಿಸಲಾಗಿದೆ. 10 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್ ನೀಡಲಿರುವ ಈ ಡಿವೈಸ್‌ ಮೆಟಲ್ ಮತ್ತು ಪ್ಲಾಸ್ಟಿಕ್‌ನಿಂದ ಬಾಹ್ಯ ರಚನೆಯನ್ನು ಪಡೆದುಕೊಂಡಿದೆ. ಇದರ ಬೆಲೆಯು 1799ರೂ.ಗಳು ಆಗಿದೆ.

ಫಿಲಿಪ್ಸ್‌ BT114

ಫಿಲಿಪ್ಸ್‌ BT114

ಫಿಲಿಪ್ಸ್‌ ಈ ಸಾಧನವು ಭಿನ್ನವಾದ ಡಿಸೈನ್‌ನಲ್ಲಿದ್ದು, ಮುಂಭಾಗದಲ್ಲಿ ಮೆಟಲ್‌ ಮೆಸ್‌ನ ರಚನೆ ಹಾಗೂ ಹಿಂಭಾಗದಲ್ಲಿ ಮೃದುವಾದ ರಬ್ಬರ ರಚನೆಯನ್ನು ಪಡೆದಿದೆ. ಡ್ಯುಯಲ್ ಸ್ಪೀಕರ್ಸ್‌ಗಳನ್ನು ಹೊಂದಿದ್ದು, 12ವ್ಯಾಟ್ಸ್‌ನಲ್ಲಿ ಸಾಮರ್ಥ್ಯದ ಔಟ್‌ಪುಟ್‌ ಸೌಂಡ್‌ ಉತ್ತಮವಾಗಿರಲಿದೆ. ಥಂಬ್‌ ಡ್ರೈವ್ ಆಯ್ಕೆಯಿಂದ ನೇರವಾಗಿ ಮ್ಯೂಸಿಕ್ ಪ್ಲೇ ಮಾಡಬಹುದಾಗಿದ್ದು, ಎಫ್‌ಎಮ್‌ ಬೆಂಬಲವನ್ನು ಪಡೆದಿದೆ. ಜೊತೆಗೆ ಕೊಂಡ್ಯೊಯಲು ಕಂಫರ್ಟ್‌ ಆಗಿದ್ದು, ಅತ್ಯುತ್ತಮ ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯ ಪಡೆದಿದೆ. 1850ರೂ.ಗಳಲ್ಲಿ ಈ ಸಾಧನ ದೊರೆಯಲಿದೆ.

ಎಲ್‌ಜಿ PH2

ಎಲ್‌ಜಿ PH2

ಎಲ್‌ಜಿ ಕಂಪನಿಯ ಈ ವಾಯರ್‌ಲೆಸ್‌ ಸ್ಪೀಕರ್ ದೂಳು ನಿರೋಧಕ ರಚನೆಯನ್ನು ಪಡೆದುಕೊಂಡಿದ್ದು, ಸೌಂಡ್ ಕ್ವಾಲಿಟಿಯಲ್ಲಿಯು ಅತ್ಯುತ್ತಮವಾಗಿದೆ. ಮುಂಬದಿಯಲ್ಲಿ ಫ್ಯಾಬ್ರಿಕ್ ಮೆಸ್‌ ಡಿಸೈನ್ ಹೊಂದಿದ್ದು, ವೃತ್ತಾಕಾರವಾದ ರಚನೆಯನ್ನು ಪಡೆದಿದೆ. ಎಲ್‌ಇಡಿ ಲೈಟ್‌ ಇಂಡಿಕೇಷನ್ ಹೊಂದಿದ್ದು, ಯುಎಸ್‌ಬಿ ಪೋರ್ಟ್‌ಗೆ ರಕ್ಷಣೆಗೆ ರಬ್ಬರ್ ಮುಚ್ಚಳಿಗೆ ಇದೆ. ಈ ಡಿವೈಸ್‌ ಹೆಚ್ಚಾಗಿ ಔಟ್‌ಡೋರ್‌ ಆಕ್ವಿವಿಟಿಯಲ್ಲಿ ತೊಡಗಿರುವವರಿಗೆ ಮತ್ತು ರಾಫ್ಟಿಂಗ್ ಮಾಡವವರಿಗೆ ಬೆಸ್ಟ್‌ ಆಯ್ಕೆ ಆಗಿದೆ. ಇದರ ಬೆಲೆಯು 1899ರೂ.ಗಳು ಆಗಿದೆ.

ಓದಿರಿ :ಶಾಶ್ವತವಾಗಿ 'ಇನ್‌ಸ್ಟಾಗ್ರಾಂ' ಖಾತೆ ಡಿಲೀಟ್ ಮಾಡಬೇಕೆ?.ಹೀಗೆ ಮಾಡಿ!ಓದಿರಿ :ಶಾಶ್ವತವಾಗಿ 'ಇನ್‌ಸ್ಟಾಗ್ರಾಂ' ಖಾತೆ ಡಿಲೀಟ್ ಮಾಡಬೇಕೆ?.ಹೀಗೆ ಮಾಡಿ!

Best Mobiles in India

English summary
Top Bluetooth Speakers In India Under Rs 2000.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X