ಲಾಂಚ್‌ ಆಯ್ತು ವಿಯು 4K ಸ್ಮಾರ್ಟ್‌ಟಿವಿ ; ಆರಂಭಿಕ ಬೆಲೆ 43,000ರೂ.ಗಳು.!!

|

ಮಾರುಕಟ್ಟೆಗೆ ಅಗ್ಗದ ಬೆಲೆಯಲ್ಲಿ ಸ್ಮಾರ್ಟ್‌ಟಿವಿ ಉತ್ಪನ್ನಗಳನ್ನು ಪರಿಚಯಿಸಿ ಗುರುತಿಸಿಕೊಂಡಿರುವ ಸ್ವದೇಶಿ ಟೆಲಿವಿಷನ್ ತಯಾರಿಕಾ ಕಂಪನಿ 'ವಿಯು'. ಇದೀಗ ಮತ್ತೆ ನಾಲ್ಕು ಹೊಸ ಆಂಡ್ರಾಯ್ಡ್‌ 4K ಮಾದರಿಯ ಸ್ಮಾರ್ಟ್‌ಟಿವಿಗಳನ್ನು ಬಿಡುಗಡೆ ಮಾಡಿದೆ. ಈ ಮೂಲಕ 4K ಕ್ವಾಲಿಟಿಯ ಸ್ಮಾರ್ಟ್‌ಟಿವಿ ವಲಯದಲ್ಲಿ ಭಾರೀ ಬದಲಾವಣೆ ತರಲು ಮುಂದಾಗಿದ್ದು, ಗ್ರಾಹಕರಿಗೆ ಖುಷಿ ನೀಡಿದೆ.

ಲಾಂಚ್‌ ಆಯ್ತು ವಿಯು 4K ಸ್ಮಾರ್ಟ್‌ಟಿವಿ ; ಆರಂಭಿಕ ಬೆಲೆ 43,000ರೂ.ಗಳು.!!

ಹೌದು, ವಿಯು ಟೆಲಿವಿಷನ್‌ ಸಂಸ್ಥೆಯು ವಿವಿಧ ಗ್ರಾತ್ರಗಳ ಒಟ್ಟು ನಾಲ್ಕು ಆಂಡ್ರಾಯ್ಡ್‌ 4K ಮಾದರಿಯ ಸ್ಮಾರ್ಟ್‌ಟಿವಿಗಳನ್ನು ರಿಲೀಸ್ ಮಾಡಿದ್ದು, 43, 50, 55 ಮತ್ತು 65 ಇಂಚಿನ ಆಯ್ಕೆಗಳಲ್ಲಿ ದೊರೆಯಲಿವೆ. ಈ ಸ್ಮಾರ್ಟ್‌ಟಿವಿಗಳಲ್ಲಿ ಆಂಡ್ರಾಯ್ಡ್‌ 8.o Oreo ಅಪರೇಟಿಂಗ್ ಸಿಸ್ಟಮ್ ಕಾರ್ಯನಿರ್ವಹಿಸಲಿದ್ದು, ಜೊತೆಗೆ ಡಾಲ್ಬಿ ಸೌಂಡ್‌ ಹಾಗೂ ಆಕ್ಟಿವೈಯಸ್‌ ರಿಮೋಟ್‌ ಅನ್ನು ಒಳಗೊಂಡಿವೆ.

ಲಾಂಚ್‌ ಆಯ್ತು ವಿಯು 4K ಸ್ಮಾರ್ಟ್‌ಟಿವಿ ; ಆರಂಭಿಕ ಬೆಲೆ 43,000ರೂ.ಗಳು.!!

ಆಧುನಿಕ ಫೀಚರ್ಸ್‌ಗಳನ್ನು ಹೊಂದಿರುವ ಕಂಪನಿ ಆಂಡ್ರಾಯ್ಡ್‌ 4K ಸ್ಮಾರ್ಟ್‌ಟಿವಿಗಳು ಸ್ಪರ್ಧಾತ್ಮಕ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಾಗಲಿದ್ದು, ಸ್ಮಾರ್ಟ್‌ಟಿವಿ ವಲಯದಲ್ಲಿ ಕಂಪನಿ ಇನ್ನಷ್ಟು ಮುಂದಾಗಲಿದೆ ಎಂದು 'ವಿಯು' ಟೆಲಿವಿಷನ್‌ ಸಂಸ್ಥೆಯ ಸಿಇಓ ದೇವತಾ ಸಾರಾ ಅವರು ಭರವಸೆ ವ್ಯಕ್ತಪಡಿಸಿದ್ದಾರೆ. ಹಾಗಾದರೇ ವಿಯು ಟೆಲಿವಿಷನ್ ಸಂಸ್ಥೆಯ ಹೊಸ ಆಂಡ್ರಾಯ್ಡ್‌ 4K ಸ್ಮಾರ್ಟ್‌ಟಿವಿಗಳು ಏನೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ನಾಲ್ಕು ವೇರಿಯಂಟ್

ನಾಲ್ಕು ವೇರಿಯಂಟ್

ವಿಯು ಟಿಲಿವಿಷನ್ ಕಂಪನಿಯು ಒಟ್ಟು ನಾಲ್ಕು ಹೊಸ ಸ್ಮಾರ್ಟ್‌ಟಿವಿ ಲಾಂಚ್ ಮಾಡಿದ್ದು, ಅವುಗಳು 43, 50, 55 ಮತ್ತು 65 ಇಂಚಿನ ಗಾತ್ರಗಳ ಆಯ್ಕೆಗಳಲ್ಲಿ ಗ್ರಾಹಕರಿಗೆ ದೊರೆಯಲಿವೆ. ಸ್ಮಾರ್ಟ್‌ಟಿವಿಯ ಡಿಸ್‌ಪ್ಲೇಯ ಗುಣಮಟ್ಟ ಉತ್ತಮವಾಗಿದ್ದು, ಹೈ ರೆಸಲ್ಯೂಶನ್‌ನಲ್ಲಿ ಸಾಮರ್ಥ್ಯ ನೀಡಲಾಗಿದ್ದು, ಗ್ರಾಹಕರನ್ನು ಸೆಳೆಯಲು ನಾಲ್ಕು ಭಿನ್ನ ಸ್ಕ್ರೀನ್‌ ಗಾತ್ರಗಳಲ್ಲಿ ಪರಿಚಯಿಸಿದೆ.

ಮನರಂಜನೆಗೆ ಹೆಚ್ಚಿನ ಆಯ್ಕೆಗಳು

ಮನರಂಜನೆಗೆ ಹೆಚ್ಚಿನ ಆಯ್ಕೆಗಳು

ಗೂಗಲ್‌ ಗೇಮ್ಸ್, ಗೂಗಲ್‌ ಪ್ಲೇ, ಗೂಗಲ್ ಮೂವೀಸ್‌ ಒಳಗೊಂಡಂತೆ ಹಾಟ್‌ಸ್ಟಾರ್‌, ಸೋನಿLIV, Eros Now, ಜೀ5 ಮತ್ತು ಹಂಗಾಮಾ ಮನರಂಜನೆಯ ಆಪ್‌ಗಳ ಜೊತೆಗೆ ಇನ್ನಷ್ಟು ಆಪ್‌ಗಳು ಸಹ ದೊರೆಯಲಿವೆ. ಮನರಂಜನೆಗೆ ಹೆಚ್ಚಿನ ಆಯ್ಕೆಗಳು ಆಂಡ್ರಾಯ್ಡ್‌ ಸ್ಮಾರ್ಟ್‌ಟಿವಿಯಲ್ಲಿ ಇರಲಿವೆ.

ಹೈಲೈಟ್ಸ್ ಫೀಚರ್ಸ್‌ಗಳು

ಹೈಲೈಟ್ಸ್ ಫೀಚರ್ಸ್‌ಗಳು

ವಿಯು ಹೊಸ ಆಂಡ್ರಾಯ್ಡ್‌ 4K ಸ್ಮಾರ್ಟ್‌ಟಿವಿಗಳಲ್ಲಿ ಡಾಲ್ಬಿ ಸೌಂಡ್‌ ನೀಡಿರುವುದು ಆಕರ್ಷಣೆ ಆಗಿದ್ದು, ಇದರೊಂದಿಗೆ MPEG ಶಬ್ದ ಕಡಿಮೆಗೊಳಿಸುವ ತಂತ್ರಜ್ಞಾನ ಇರಲಿದೆ. ಆಕ್ಟಿವೈಯಸ್‌ ರಿಮೋಟ್‌ ನೀಡಲಾಗಿದ್ದು, ಈ ರಿಮೀಟ್‌ ಅನ್ನು ಬ್ಲೂಟೂತ್ ನಿಂದ ಸ್ಮಾರ್ಟ್‌ಟಿವಿಗೆ ಕನೆಕ್ಟ್‌ ಮಾಡಿ ವೈಯಸ್‌ ಮೂಲಕವೇ ಸ್ಮಾರ್ಟ್‌ಟಿವಿಯನ್ನು ನಿಯಂತ್ರಿಸಬಹುದಾದ ಆಯ್ಕೆ ಇರಲಿದೆ.

ಬೆಲೆ.?

ಬೆಲೆ.?

ವಿಯು ಕಂಪನಿಯ 43 ಇಂಚಿನ ಆರಂಭಿಕ ಆಂಡ್ರಾಯ್ಡ್‌ 4K ಸ್ಮಾರ್ಟ್‌ಟಿವಿ ದರವು 43,000ರೂ.ಗಳಿಗೆ, ಇನ್ನೂ 50 ಇಂಚಿನ ಸ್ಮಾರ್ಟ್‌ಟಿವಿಯ ಬೆಲೆಯು 51,000ರೂ.ಗಳು ಆಗಿದ್ದು, 55 ಇಂಚಿನ ಸ್ಮಾರ್ಟ್‌ಟಿವಿಯು 59,000ರೂ.ಗಳಿಗೆ ಲಭ್ಯವಾಗಲಿದ್ದು, ಮತ್ತು 65 ಇಂಚಿನ ಸ್ಮಾರ್ಟ್‌ಟಿವಿಯ ಬೆಲೆಯು 1,10,000ರೂ.ಗಳು ಆಗಿದೆ.

Best Mobiles in India

English summary
Vu now has four new TVs on Android platform starting at Rs 43,000.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X