ಏನಿದು ವೈ-ಫೈ ಬೂಸ್ಟರ್?..ಇದರಿಂದ ಇಂಟರ್ನೆಟ್ ಸ್ಪೀಡ್‌ ಆಗುತ್ತಾ?

|

ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ಡಿವೈಸ್‌ ಮತ್ತು ಲ್ಯಾಪ್‌ಟಾಪ್‌ ಸೇರಿದಂತೆ ಹಲವು ಗ್ಯಾಜೆಟ್‌ಗಳು ಇಂಟರ್ನೆಟ್ ಆಧಾರಿತವಾಗಿ ಕಾರ್ಯನಿರ್ವಹಿಸುತಿದ್ದು, ಇಂಟರ್ನೆಟ್‌ ಇಲ್ಲದಿದ್ದರೇ ಅವುಗಳ ಕಾರ್ಯ ಸ್ಥಬ್ದ. ಟೆಲಿಕಾಂ ನೆಟವರ್ಕ್ ನೀಡುವ ಮೊಬೈಲ್‌ ಡೇಟಾ ಸಾಕಾಗುವುದಿಲ್ಲ, ಅದಕ್ಕಾಗಿ ವೈ-ಫೈ ನೆಟವರ್ಕ್‌ ಬೇಕಾಗುತ್ತದೆ. ಆದರೆ ಇದೀಗ ವೈ ಫೈ ನೆಟವರ್ಕ್‌ಗಳು ನಿಧಾನ ಎನಿಸತೊಡಗಿದ್ದು, ಪರ್ಯಾಯವಾಗಿ ವೈ ಫೈ ಬೂಸ್ಟರ್‌ ಬಳಕೆ ಹೆಚ್ಚಾಗಿದೆ.

ಏನಿದು ವೈ-ಫೈ ಬೂಸ್ಟರ್?..ಇದರಿಂದ ಇಂಟರ್ನೆಟ್ ಸ್ಪೀಡ್‌ ಆಗುತ್ತಾ?

ಹೌದು, ಇಂದಿನ ಬಹುತೇಕ ಆಪ್‌ಗಳು ಮತ್ತು ಸೇವೆಗಳು ಅಧಿಕ ಡೇಟಾವನ್ನು ಬೇಡುತ್ತವೆ ಮತ್ತು ಅತೀಯಾದ ಇಂಟರ್ನೆಟ್‌ ಬಳಕೆಯಿಂದಾ ವೈ ಫೈ ಸಹ ಸ್ಲೋ ಎನ್ನುವಂತಾಗಿದೆ. ವೈ-ಫೈ ನೆಟವರ್ಕ್ ಸಿಗ್ನಲ್‌ಗಳಿಗೆ ಬಲ ತುಂಬಲು 'ವೈ ಫೈ ಬೂಸ್ಟರ್' ಬಳಕೆ ಮಾಡಲಾಗುತ್ತಿದ್ದು, ಈ ಡಿವೈಸ್‌ಗಳ ಬಳಕೆಯಿಂದ ವೈ ಫೈ ಇಂಟರ್ನೆಟಿನ ವೇಗ ಹೆಚ್ಚಿಸಿಕೊಳ್ಳಬಹುದಾಗಿದೆ. ಇಂಟರ್ನೆಟ್‌ ಬೆಂಬಲಿತ ಡಿವೈಸ್‌ಗಳಿಗೆ ಕನೆಕ್ಟ್‌ ಮಾಡಬಹುದಾಗಿದೆ.

ಏನಿದು ವೈ-ಫೈ ಬೂಸ್ಟರ್?..ಇದರಿಂದ ಇಂಟರ್ನೆಟ್ ಸ್ಪೀಡ್‌ ಆಗುತ್ತಾ?

ವೈ ಫೈ ಬೂಸ್ಟರ್ ಸಾಧನಗಳು ಕವರೇಜ್‌ ಹೆಚ್ಚು ವ್ಯಾಪ್ತಿಯ ವರೆಗೂ ವಿಸ್ತರಿಸಲಿದ್ದು, ವೈ ಫೈ ತರಂಗಾಂತರಗಳನ್ನು ಶಕ್ತಗೊಳಿಸಿ ವೇಗ ಅಧಿಕ ಮಾಡುತ್ತವೆ. ಹಾಗೆಯೇ ಇವುಗಳು ಸುರಕ್ಷತೆಯನ್ನು ಪಡೆದಿದ್ದು, ಮನೆಗಳಲ್ಲಿ, ಆಫೀಸ್‌ಗಳಲ್ಲಿ ಉಪಯೋಗಿಸಬಹುದಾಗಿದೆ. ಹಾಗಾದರೇ ವೈ-ಫೈ ಬೂಸ್ಟರ್‌ನ ಇನ್ನಿತರೆ ಉಪಯೋಗಗಳೇನು ಮತ್ತು ಹೇಗೆ ಕೆಲಸ ಮಾಡಲಿದೆ ಎನ್ನುವುದನ್ನು ತಿಳಿಯಲು ಮುಂದೆ ಓದಿರಿ.

ಓದಿರಿ : ಶಿಯೋಮಿ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಬ್ಯಾಡ್‌ ನ್ಯೂಸ್‌!ಓದಿರಿ : ಶಿಯೋಮಿ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಬ್ಯಾಡ್‌ ನ್ಯೂಸ್‌!

ಏನಿದು ವೈ-ಫೈ ಬೂಸ್ಟರ್‌

ಏನಿದು ವೈ-ಫೈ ಬೂಸ್ಟರ್‌

ಮನೆಗಳಲ್ಲಿ ಮತ್ತು ಆಫೀಸ್‌ಗಳಲ್ಲಿ ವೇಗದ ಇಂಟರ್ನೆಟ್ ಸೇವೆ ಪಡೆಯಲು ವೈ ಫೈ ನೆಟವರ್ಕ್‌ ಬಳಸುತ್ತಾರೆ. ಆ ವೈ ಫೈ ನೆಟವರ್ಕ್‌ ವ್ಯಾಪ್ತಿಯನ್ನು ಹೆಚ್ಚಿಸುವ ಮತ್ತು ವೈ ಫೈ ಸಿಗ್ನಲ್‌ಗಳಿಗೆ ಬಲ ಒದಗಿಸುವ ಕೆಲಸವನ್ನು ವೈ-ಫೈ ಬೂಸ್ಟರ್ ಮಾಡಲಿದೆ. ಇರುವ ಇಂಟರ್ನೆಟ್‌ನಲ್ಲೇ ಸೌಲಭ್ಯವನ್ನು ವೇಗವಾಗಿ ಪಡೆಯಲು ಇವು ನೆರವಾಗಲಿವೆ.

ವೈ-ಫೈ ಬೂಸ್ಟರ್ ಏಕೆ ಅಗತ್ಯ

ವೈ-ಫೈ ಬೂಸ್ಟರ್ ಏಕೆ ಅಗತ್ಯ

ವೈ ಫೈ ಕವರೇಜ್‌ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಲು ವೈ-ಫೈ ಬೂಸ್ಟರ್ ಸಾಧನ ಉಪಯುಕ್ತವಾಗಿದೆ. ಇಂಟರ್ನೆಟ್ ಕವರೇಜ್ ಹೆಚ್ಚಿಸುವುದಕ್ಕಾಗಿ ಎಕ್ಟ್ರಾ ಕೇಬಲ್‌, ಹಬ್‌ ಮತ್ತಿತ್ತರ ಡಿವೈಸ್‌ಗಳನ್ನು ಖರೀದಿಸುವುದನ್ನು ಉಳಿಸುತ್ತದೆ. ಹೆಚ್ಚು ಹೆಚ್ಚ ಡಿವೈಸ್‌ಗಳನ್ನು ಕನೆಕ್ಟ ಮಾಡಿದರೂ ವೈ ಫೈ ವೇಗದಲ್ಲಿ ಬದಲಾವಣೆ ಆಗುವುದಿಲ್ಲ.

ಬಳಕೆ ಏಲ್ಲಿ, ಹೇಗೆ

ಬಳಕೆ ಏಲ್ಲಿ, ಹೇಗೆ

ವೈ ಫೈ ಬೂಸ್ಟರ್ ಸಾಧನಗಳು ವಿವಿಧ ಆಕಾರಗಳಲ್ಲಿ ಲಭ್ಯವಿದ್ದು, ಅವುಗಳನ್ನು ಮನೆಯಲ್ಲಿ ಅಥವಾ ಕಛೇರಿಯಲ್ಲಿ ಗೋಡೆಗೆ ತೂಗುಹಾಕಬಹುದು. ಈ ಡಿವೈಸ್‌ಗಳ ಸಂಪರ್ಕ್‌ ಮಾಡಲು ಯಾವುದೇ ಕೇಬಲ್‌ ಕನೆಕ್ಷನ್ ಮಾಡುವ ಅಗತ್ಯ ಇರುವುದಿಲ್ಲ. ವಾಯರ್‌ಲೆಸ್‌ ಟ್ರಾನ್ಸ್‌ಮಿಷನ್‌ ಮಾದರಿಯ ಡಿವೈಸ್‌ಗಳಾಗಿವೆ.

ವೈ-ಫೈ ಬೂಸ್ಟರ್ ಅಯಂಟೆನಾ

ವೈ-ಫೈ ಬೂಸ್ಟರ್ ಅಯಂಟೆನಾ

ವೈ-ಫೈ ಬೂಸ್ಟರ್ ಸಾಧನಗಳು ಎರಡು ಆಯಂಟೆನಾಗಳನ್ನು ಒಳಗೊಂಡಿರುತ್ತವೆ. ಅವುಗಳಲ್ಲಿ ಒಂದು ಟ್ರಾನ್ಸ್‌ಮಿಟ್‌ ಮಾಡಲು ಮತ್ತು ಇನ್ನೊಂದು ಸಿಗ್ನಲ್‌ ಬ್ರಾಡ್‌ಕಾಸ್ಟ್ ಮಾಡುವ ಕಾರ್ಯ ಮಾಡುತ್ತವೆ. ಕೆಲವೊಂದು ವೈ ಫೈ ಬೂಸ್ಟರ್‌ಗಳು ಮೂರು ಆಯಂಟೆನಾ ಒಳಗೊಂಡಿರುತ್ತವೆ. ಆಗ ಮೂರನೇಯ ಆಯಂಟೆನಾ ವಾಯರ್‌ಲೆಸ್‌ ಟ್ರಾನ್ಸ್‌ಮಿಷನ್‌ ಕ್ಯಾಪ್ಚರ್‌ ಮಾಡುತ್ತದೆ.

ಮುಖ್ಯ ಹೈಲೈಟ್ಸ್‌

ಮುಖ್ಯ ಹೈಲೈಟ್ಸ್‌

ಯಾವುದೇ ಬ್ಯ್ರಾಂಡ್‌ನ ರೋಟರ್‌ ಮತ್ತು ಇಂಟರ್ನೆಟ ಸೇವೆಗಳಾದರೂ ಇದು ಕಾರ್ಯನಿರ್ವಹಿಸುತ್ತದೆ. ಟ್ರಾನ್ಸ್‌ಮಿಷನ್‌ ವೇಗವು ಸುಮಾರು 300Mbps ಆಗಿದ್ದು, ವಿದ್ಯುತ್ ಶಕ್ತಿ ಬಳಕೆಯಲ್ಲಿಯೂ ಮಿತವಾಗಿದೆ. ಇನ್‌ಸ್ಟಾಲ್‌ ಮಾಡಲು ಬೇರೆ ಯಾವುದೇ ಹೆಚ್ಚುವರಿ ಪರಿಕರಗಳು ಬೇಕಾಗಿರುವುದಿಲ್ಲ.

ಓದಿರಿ : ಬಜೆಟ್‌ ಬೆಲೆಯಲ್ಲಿ DSLR ಕ್ಯಾಮೆರಾ ಖರೀದಿಸಬೇಕೆ?.ಇಲ್ಲಿವೇ ನೋಡಿ ಬೆಸ್ಟ್‌ ಆಯ್ಕೆ!ಓದಿರಿ : ಬಜೆಟ್‌ ಬೆಲೆಯಲ್ಲಿ DSLR ಕ್ಯಾಮೆರಾ ಖರೀದಿಸಬೇಕೆ?.ಇಲ್ಲಿವೇ ನೋಡಿ ಬೆಸ್ಟ್‌ ಆಯ್ಕೆ!

Most Read Articles
Best Mobiles in India

English summary
Wi-Fi booster extends WiFi network coverage space by boosting or amplifying existing signals. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X