ಏಕಕಾಲದಲ್ಲಿ ಐದಾರು ಮೊಬೈಲ್‌ ಚಾರ್ಜ್ ಮಾಡಲಿದೆ ಈ ವೈರ್‌ಲೆಸ್ ಚಾರ್ಜರ್!!

|

ಮನೆಗಳಲ್ಲಿ ಐದಾರು ಮೊಬೈಲ್ ಇದ್ದು, ಒಂದೋ ಅಥವಾ ಎರಡೋ ಚಾರ್ಜರ್ ಇದ್ದವರ ಪರದಾಟ ತಪ್ಪಿಸುವ ಸಲುವಾಗಿಯೇ ಹೊಸದೊಂದು ಅತ್ಯುತ್ತಮ ಗ್ಯಾಜೆಟ್ ತಯಾರಾಗಿದೆ.! ಒಮ್ಮೆಲೆ ಏಕಕಾಲದಲ್ಲಿ ಐದಾರು ಮೊಬೈಲ್‌ಗಳನ್ನು ಚಾರ್ಜ್‌ ಮಾಡುವಂತಹ ವೈರ್‌ಲೆಸ್ ಚಾರ್ಜರ್ ಅನ್ನು ಫ್ರಾನ್ಸ್‌ನ ಕಂಪನಿಯೊಂದು ಅಭಿವೃದ್ದಿಪಡಿಸಿದೆ.!!

ಮೊಬೈಲ್ ಲೋಕದಲ್ಲಿ ಇದು ಮತ್ತೊಂದು ಅತ್ಯುತ್ತಮ ಗ್ಯಾಜೆಟ್ ಆಗಿದ್ದು, ಈಗಾಗಲೇ ವೈರ್‌ಲೆಸ್‌ ಮೊಬೈಲ್‌ ಚಾರ್ಜರ್‌ ಬಳಕೆಗೆ ಬಂದಿದ್ದರೂ ಸಹ ಏಕಕಾಲದಲ್ಲಿ ಐದಾರು ಮೊಬೈಲ್‌ಗಳನ್ನು ಚಾರ್ಜ್‌ ಮಾಡುವಂತಹ ವೈರ್‌ಲೆಸ್‌ ಮೊಬೈಲ್ ಚಾರ್ಜರ್ ಇದೇ ಮೊದಲ ಬಾರಿಗೆ ಅಭಿವೃದ್ದಿಯಾಗಿ ಆಶ್ಚರ್ಯ ಮೂಡಿಸಿದೆ.!!

ಏಕಕಾಲದಲ್ಲಿ ಐದಾರು ಮೊಬೈಲ್‌ ಚಾರ್ಜ್ ಮಾಡಲಿದೆ ಈ ವೈರ್‌ಲೆಸ್ ಚಾರ್ಜರ್!!

ಸ್ಮಾರ್ಟ್‌ಫೋನ್ ಬಳಕೆದಾರರ ಚಾರ್ಜಿಂಗ್ ತಾಕಲಾಟಕ್ಕೆ ಈ ವೈರ್‌ಲೆಸ್ ಚಾರ್ಜರ್ ಇತಿಶ್ರೀ ಹಾಡಲಿದ್ದು, ಹಾಗಾದರೆ, ಏಕಕಾಲದಲ್ಲಿ ಐದಾರು ಮೊಬೈಲ್‌ಗಳನ್ನು ಚಾರ್ಜ್‌ ಮಾಡುವ ವೈರ್‌ಲೆಸ್‌ ಚಾರ್ಜರ್ ತಂತ್ರಜ್ಞಾನವೇನು?ಈ ಚಾರ್ಜರ್ ಜನರ ಕೈ ಸೇರುವುದು ಯಾವಾಗ? ಎಂಬುದನ್ನು ಮುಂದೆ ತಿಳಿಯಿರಿ.!!

ಮೆಟ್ಯಾಲಿಕ್ ಸ್ಟಿಕ್ಕರ್ ತಂತ್ರಜ್ಞಾನ!!

ಮೆಟ್ಯಾಲಿಕ್ ಸ್ಟಿಕ್ಕರ್ ತಂತ್ರಜ್ಞಾನ!!

ಇನ್ನು ಮುಂದೆ ಮೊಬೈಲ್ ಬಳಕೆದಾರರು ವಿದ್ಯುತ್ ತಂತಿ ಹಂಗಿಲ್ಲದೆ ಮೊಬೈಲ್‌ಗಳನ್ನು ಚಾರ್ಜ್ ಮಾಡಿಕೊಳ್ಳಬಹುದು. ಮೆಟ್ಯಾಲಿಕ್ ಸ್ಟಿಕ್ಕರ್ ತಂತ್ರಜ್ಞಾನದಲ್ಲಿ ಈ ಚಾರ್ಜರ್ ವಿನ್ಯಾಸ ಮಾಡಲಾಗಿರುವುದರಿಂದ ಏಕಕಾಲದಲ್ಲಿ ಐದಾರು ಮೊಬೈಲ್‌ಗಳನ್ನು ಚಾರ್ಜ್ ಮಾಡಿಕೊಳ್ಳಬಹುದು ಎಂದು ಕಂಪೆನಿ ತಿಳಿಸಿದೆ.!

ಹೇಗಿದೆ ಈ ವೈರ್‌ಲೆಸ್ ಚಾರ್ಜರ್?

ಹೇಗಿದೆ ಈ ವೈರ್‌ಲೆಸ್ ಚಾರ್ಜರ್?

ಈ ವೈರ್‌ಲೆಸ್ ಚಾರ್ಜರ್ ಪ್ಯಾಡ್ ಒಂದು ತಟ್ಟೆಯ ಆಕಾರದಲ್ಲಿ ಇರುತ್ತದೆ. ಇದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿರುತ್ತದೆ. ಈ ನೂತನ ಚಾರ್ಜರ್ ಒಂದು ಚಾರ್ಜರ್ ಪ್ಯಾಡ್, ಮತ್ತೊಂದು ಮೆಟ್ಯಾಲಿಕ್ ಸ್ಟಿಕ್ಕರ್ ಎಂಬ ಎರಡು ಸಾಧನಗಳನ್ನು ಒಳಗೊಂಡಿರುತ್ತದೆ.!!

ಚಾರ್ಜರ್ ಕಾರ್ಯನಿರ್ವಹಣೆ ಹೇಗೆ?

ಚಾರ್ಜರ್ ಕಾರ್ಯನಿರ್ವಹಣೆ ಹೇಗೆ?

ಮೆಟ್ಯಾಲಿಕ್ ಸ್ಟಿಕ್ಕರ್ ಅನ್ನು ಮೊಬೈಲ್ ಫೋನ್‌ನ ಹಿಂಬದಿಗೆ ಅಂಟಿಸಿ ಸ್ಟಿಕ್ಕರ್ ಮತ್ತು ಮೊಬೈಲ್ ಬ್ಯಾಟರಿಗೆ ಸಂಪರ್ಕ ಕಲ್ಪಿಸಲಾಗಿರುತ್ತದೆ. ಮೆಟ್ಯಾಲಿಕ್ ಸ್ಟಿಕ್ಕರ್ ಅಂಟಿಸಿರುವ ಮೊಬೈಲ್‌ಗಳನ್ನು ಚಾರ್ಜರ್ ಪ್ಯಾಡ್ ಮೇಲೆ ಇಟ್ಟರೆ ಬ್ಯಾಟರಿ ಚಾರ್ಜ್ ಆಗಲು ಆರಂಭಿಸುತ್ತದೆ.!!

Aadhaar-ಬಾಂಕ್ ಲಿಂಕ್ ಆಗಿದೆಯೇ-ಇಲ್ಲವೇ ಚೆಕ್‌ ಮಾಡಿ..!
ಇಂಡಕ್ಷನ್ ಸ್ಟವ್ ಮಾದರಿ!!

ಇಂಡಕ್ಷನ್ ಸ್ಟವ್ ಮಾದರಿ!!

ಮೆಟ್ಯಾಲಿಕ್ ಸ್ಟಿಕ್ಕರ್ ಸ್ಟಿಕ್ಕರ್ ಅನ್ನು ಎಲೆಕ್ಟ್ರೋ ಮ್ಯಾಗ್ನೆಟಿಕ್ ತಂತ್ರಜ್ಞಾನ ಅಳವಡಿಸಿ ರೂಪಿಸಲಾಗಿದ್ದು, ವಿದ್ಯುತ್ ಇಂಡಕ್ಷನ್ ಸ್ಟವ್ ಮಾದರಿಯಲ್ಲಿ ಈ ಚಾರ್ಜರ್ ಕೆಲಸ ಮಾಡುತ್ತದೆ. ಹಾಗಾಗಿ, ಚಾರ್ಜರ್ ಪ್ಯಾಡ್ ಮೇಲೆ ಮೊಬೈಲ್ ಎಸೆದರೆ ಸಾಕು ಅದು ಸ್ವಯಂ ಚಾಲಿತವಾಗಿ ಚಾರ್ಜ್ ಆಗುತ್ತಲೇ ಇರುತ್ತದೆ!!

ಚಾರ್ಜರ್ ಬಿಡುಗಡೆ ಯಾವಾಗ?

ಚಾರ್ಜರ್ ಬಿಡುಗಡೆ ಯಾವಾಗ?

ಕ್ರೌಡ್ ಫಂಡಿಂಗ್ ಮೂಲಕ ಈ ಸಾಧನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಇದನ್ನು ತಯಾರಿಸಿರುವ ಕಂಪನಿ ತಿಳಿಸಿದೆ.ಈ ವರ್ಷದ ಅಕ್ಟೋಬರ್ ತಿಂಗಳ ಅಂತ್ಯದ ವೇಳೆಗೆ ಈ ನೂತನ ಚಾರ್ಜರ್ ಮಾರುಕಟ್ಟೆಗೆ ಎಂಟ್ರಿ ನೀಡಲಿದ್ದು, ಸ್ಮಾರ್ಟ್‌ಫೋನ್ ಬಳಕೆದಾರರ ಬಹುದೊಡ್ಡ ಸಮಸ್ಯೆಯೊಂದಕ್ಕೆ ಬ್ರೇಕ್ ಬೀಳಲಿದೆ.!!

ವೋಟರ್ ಐಡಿಯಲ್ಲಿ ತಪ್ಪಿದ್ದರೆ ಆನ್‌ಲೈನ್‌ ಮೂಲಕ 2 ನಿಮಿಷದಲ್ಲಿ ಸರಿಪಡಿಸಿಕೊಳ್ಳಿ!!..ಹೇಗೆ ಗೊತ್ತಾ?

Most Read Articles
Best Mobiles in India

English summary
Multidevice charging hubs are all the rage. Nomad's new one incorporates a wireless charging top with four ports. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X