ಶಿಯೋಮಿ ಸ್ಮಾರ್ಟ್‌ಟಿವಿ : ಕಡಿಮೆ ಅವಧಿಯಲ್ಲಿ ದಾಖಲೆಯ ಮಾರಾಟ!

|

ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಗಳಿಸಿರುವ ಶಿಯೋಮಿ ಕಂಪನಿಯು ಕಳೆದ ವರ್ಷ ಸ್ಮಾರ್ಟ್‌ಟಿವಿ ವಲಯಕ್ಕೂ ಕಾಲಿರಿಸಿದ್ದು, ಕಂಪನಿಯು ಅಗ್ಗದ ಬೆಲೆಯಲ್ಲಿ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿ ಗ್ರಾಹಕರನ್ನು ಸೆಳೆದಿದೆ. ಕಳೆದ 14 ತಿಂಗಳಲ್ಲಿ ಕಂಪನಿಯ ದಾಖಲೆಯ ಸುಮಾರು 20 ಲಕ್ಷ (2 ಮಿನಿಯಲ್‌) LED ಸ್ಮಾರ್ಟ್‌ಟಿವಿಗಳು ಮಾರಾಟವಾಗಿದ್ದು, ಮಾರುಕಟ್ಟೆಯಲ್ಲಿ ಭಾರಿ ಡಿಮ್ಯಾಂಡ್‌ನಲ್ಲಿರುವ ಬ್ರ್ಯಾಂಡ್‌ಗಳಲ್ಲಿ ಶಿಯೋಮಿಯು ಸೇರಿಕೊಂಡಿದೆ.

ಶಿಯೋಮಿ ಸ್ಮಾರ್ಟ್‌ಟಿವಿ : ಕಡಿಮೆ ಅವಧಿಯಲ್ಲಿ ದಾಖಲೆಯ ಮಾರಾಟ!

ಹೌದು, ಶಿಯೋಮಿ ಕಂಪನಿಯು ವಿವಿಧ ಪ್ರೈಸ್‌ಟ್ಯಾಗ್‌ನಲ್ಲಿ ಹಲವು ಸ್ಮಾರ್ಟ್‌ಟಿವಿಗಳನ್ನು ಬಿಡುಗಡೆ ಮಾಡಿದ್ದು, ಆ ಸ್ಮಾರ್ಟ್‌ಟಿವಿಗಳು ದೇಶಿಯ ಮಾರುಕಟ್ಟೆಯಲ್ಲಿ ಅತ್ಯುತ್ತಮ ಸೇಲ್ ಕಾಣುತ್ತಿವೆ. ಕೇವಲ 14 ತಿಂಗಳ ಅವಧಿಯಲ್ಲಿ 2 ಮಿಲಿಯನ್ ಮಾರಾಟ ಕಂಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಶಿಯೋಮಿ, ತನ್ನ ಗ್ರಾಹಕರಿಗೆ ಮುಂದಿನ ದಿನಗಳಲ್ಲಿ ಹೊಸ ತಂತ್ರಜ್ಞಾನಗಳ ಮೂಲಕ ಇನ್ನು ಅತ್ಯುತ್ತಮ ಉತ್ಪನ್ನಗಳನ್ನು ಪರಿಚಯಿಸುವುದಾಗಿ ತಿಳಿಸಿದೆ.

ಶಿಯೋಮಿ ಸ್ಮಾರ್ಟ್‌ಟಿವಿ : ಕಡಿಮೆ ಅವಧಿಯಲ್ಲಿ ದಾಖಲೆಯ ಮಾರಾಟ!

ದೇಶಿಯ ಮಾರುಕಟ್ಟೆಯ ಸ್ಮಾರ್ಟ್‌ಟಿವಿ ವಲಯದಲ್ಲಿ ಹೆಚ್ಚಿನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಕಂಪನಿಯು ಅತೀ ಕಡಿಮೆ ಅವಧಿಯಲ್ಲಿ ಗಟ್ಟಿ ಸ್ಥಾನ ಕಂಡುಕೊಂಡಿದೆ. ಕಂಪನಿಯ ಸ್ಮಾರ್ಟ್‌ಟಿವಿಗಳ ಲಿಸ್ಟ್‌ನಲ್ಲಿ ಅಗ್ಗದ ಬಲೆಯ ಟಿವಿಗಳ ಮಾರಾಟವೇ ಮುಂದಿದೆ. ಹಾಗಾದರೇ ಸದ್ಯ ಭರ್ಜರಿ ಮಾರಾಟ ಕಾಣುತ್ತಿರುವ ಶಿಯೋಮಿ ಕಂಪನಿಯ ಸ್ಮಾರ್ಟ್‌ಟಿವಿಗಳ ಕುರಿತು ಕೆಲವು ಸಂಗತಿಗಳನ್ನು ಮುಂದೆ ತಿಳಿಯೋಣ ಬನ್ನಿರಿ.

ಓದಿರಿ : ಆಡುವ ವಯಸ್ಸಿನಲ್ಲೇ ದೇಶವೇ ಮೆಚ್ಚುವಂತಹ ಸಾಧನೆ ಮಾಡಿದ 'ಅಯುಷ್'! ಓದಿರಿ : ಆಡುವ ವಯಸ್ಸಿನಲ್ಲೇ ದೇಶವೇ ಮೆಚ್ಚುವಂತಹ ಸಾಧನೆ ಮಾಡಿದ 'ಅಯುಷ್'!

ಮಾರುಕಟ್ಟೆಯಲ್ಲಿ ನಂಬರ್‌ ಒನ್‌ ಸ್ಥಾನ

ಮಾರುಕಟ್ಟೆಯಲ್ಲಿ ನಂಬರ್‌ ಒನ್‌ ಸ್ಥಾನ

ಪ್ರಸ್ತುತ ವಿವಿಧ 8 ಮಾದರಿಯ ಸ್ಮಾರ್ಟ್‌ಟಿವಿಗಳನ್ನು ಹೊಂದಿರುವ ಶಿಯೋಮಿಯು ಕಳೆದ ವರ್ಷ Q2, Q3 ಮತ್ತು Q4 ಸೆಗ್ಮೆಂಟ್ ವಲಯದಲ್ಲಿ ಹೆಚ್ಚಿನ ಮಾರಾಟ ಕಂಡು ದೇಶದಲ್ಲಿ ನಂಬರ್ ಒನ್ ಸ್ಮಾರ್ಟ್‌ಟಿವಿ ಬ್ರ್ಯಾಂಡ್‌ ಸ್ಥಾನ ಪಡೆದುಕೊಂಡಿದೆ ಎಂದು IDC ಸ್ಮಾರ್ಟ್‌ಹೋಮ್ ಡಿವೈಸ್‌ ಟ್ರಾಕರ್‌ ವರದಿಯಿಂದ ತಿಳಿದು ಬಂದಿದೆ.

ಹೆಚ್ಚಿನ ಆಫರ್‌

ಹೆಚ್ಚಿನ ಆಫರ್‌

ಶಿಯೋಮಿ ಕಂಪನಿಯ ಸ್ಮಾರ್ಟ್‌ಟಿವಿಗಳು ಆನ್‌ಲೈನ್‌ ಮಾರುಕಟ್ಟೆಯ ಮುಖಾಂತರವೇ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದ್ದು, ಗ್ರಾಹಕರು ಕಂಪನಿಯ ಅಧಿಕೃತ ವೆಬ್‌ಸೈಟ್‌ (Mi.com)ನಲ್ಲಿ ಖರೀದಿಸಬಹುದಾಗಿದೆ. ಇದಲ್ಲದೇ ಪ್ರಮುಖ ಇ ಕಾಮರ್ಸ್‌ ಜಾಲತಾಣಗಳಲ್ಲಿಯೂ ಖರೀದಿಗೆ ದೊರೆಯುತ್ತವೆ ಹಾಗೆಯೇ ಕೇಲವೊಮ್ಮೆ ವಿಶೇಷ ಡಿಸ್ಕೌಂಟ್‌ಗಳು ಮತ್ತು ಎಕ್ಸ್‌ಚೇಂಜ್ ಆಫರ್‌ ಸಹ ಇರುತ್ತವೆ.

ಯಶಸ್ಸಿನ ಅಂಶ

ಯಶಸ್ಸಿನ ಅಂಶ

ಶಿಯೋಮಿ ದೇಶಿಯ ಮಾರುಕಟ್ಟೆಯಲ್ಲಿ ಸ್ಥಾನ ಹೊಂದಲು ಗ್ರಾಹಕರಿಗೆ ಅಗತ್ಯವಿರುವ ಉತ್ಪನ್ನಗಳನ್ನು ಅಗ್ಗದ ಬೆಲೆಯಲ್ಲಿ ಪರಿಚಯಿಸುವುದೇ ಪ್ರಮುಖ ಕಾರಣ ಎನ್ನಬಹುದಾಗಿದೆ. ಈ ನಿಟ್ಟಿನಲ್ಲಿ ಕಂಪನಿಯು ಸ್ಮಾರ್ಟ್‌ಟಿವಿಗಳನ್ನು ಸಹ ಅಗ್ಗದ ದರದಲ್ಲಿ ಬಿಡುಗಡೆ ಮಾಡುವುದರ ಮೂಲಕ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಿದೆ ಮತ್ತು ಯಶಸ್ಸಿನೊಂದಿಗೆ ಮುನ್ನುಗ್ಗುತ್ತಿದೆ. .

ಲಭ್ಯವಿರುವ ಸ್ಮಾರ್ಟ್‌ಟಿವಿ ಮತ್ತು ಬೆಲೆ

ಲಭ್ಯವಿರುವ ಸ್ಮಾರ್ಟ್‌ಟಿವಿ ಮತ್ತು ಬೆಲೆ

* 32 ಇಂಚಿನ 4ಎ ಟಿವಿ ಬೆಲೆ-12,499.ರೂ.ಗಳು
* 43 ಇಂಚಿನ 4ಎ ಪ್ರೊ ಟಿವಿ ಬೆಲೆ-21,999.ರೂ
* 32 ಇಂಚಿನ 4 ಎಎ ಟಿವಿ ಬೆಲೆ-12,999.ರೂ
* 55 ಇಂಚಿನ 4 ಎಎ ಟಿವಿ ಬೆಲೆ-39,999.ರೂ
* 55 ಇಂಚಿನ 4 ಪ್ರೊ ಟಿವಿ ಬೆಲೆ-44,999.ರೂ
* 49 ಇಂಚಿನ 4 ಎಎ ಪ್ರೊ ಟಿವಿ ಬೆಲೆ-29,999.ರೂ
* 43 ಇಂಚಿನ 4 ಎ ಟಿವಿ ಬೆಲೆ-22,999.ರೂ
* 32 ಇಂಚಿನ 4 ಸಿ ಪ್ರೊ ಟಿವಿ ಬೆಲೆ-12,999.ರೂ

ಓದಿರಿ : ಒನ್‌ಪ್ಲಸ್ 'ಬುಲೆಟ್ ವಾಯರ್‌ಲೆಸ್‌ ಇಯರ್‌ಫೋನ್ 2' ಲಾಂಚ್!.ಸೌಂಡ್ ಹೇಗಿದೆ?ಓದಿರಿ : ಒನ್‌ಪ್ಲಸ್ 'ಬುಲೆಟ್ ವಾಯರ್‌ಲೆಸ್‌ ಇಯರ್‌ಫೋನ್ 2' ಲಾಂಚ್!.ಸೌಂಡ್ ಹೇಗಿದೆ?

Best Mobiles in India

English summary
Xiaomi India sells over 20 lakh smart LED Mi TVs in 14 months.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X