ಶಿಯೋಮಿಯ LED ಸ್ಮಾರ್ಟ್ ಬಲ್ಬ್ ಲಾಂಚ್!.ಫೋನಿನಲ್ಲಿ ಲೈಟ್ ಬಣ್ಣ ಬದಲಿಸಬಹುದು!

|

ಶಿಯೋಮಿ ಕಂಪನಿ ಎಂದ ತಕ್ಷಣ ಅಗ್ಗದ ಸ್ಮಾರ್ಟ್‌ಫೋನ್ ಒದಗಿಸುವ ಕಂಪನಿ ಎಂದೆ ಬಹುತೇಕರು ಅಂದುಕೊಳ್ಳಲಿದ್ದು, ಆದರೆ ಶಿಯೋಮಿ ಸ್ಮಾರ್ಟ್‌ಫೋನ್‌ ಜೊತೆಗೆ ಎಲೆಕ್ಟ್ರಾನಿಕ್ಸ್ ಮತ್ತು ಫ್ಯಾಶನ್ ಉತ್ಪನ್ನಗಳ ತಯಾರಿಕೆಯಲ್ಲಿಯೂ ಗುರುತಿಸಿಕೊಂಡಿದೆ. ಹೀಗೆ ಹತ್ತು ಹಲವು ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಲಿರುವ ಶಿಯೋಮಿ ಇದೀಗ LED ಸ್ಮಾರ್ಟ್ ಬಲ್ಬ್ ಲಾಂಚ್ ಮಾಡಿದೆ.

ಶಿಯೋಮಿಯ LED ಸ್ಮಾರ್ಟ್ ಬಲ್ಬ್ ಲಾಂಚ್!.ಫೋನಿನಲ್ಲಿ ಲೈಟ್ ಬಣ್ಣ ಬದಲಿಸಬಹುದು!

ಹೌದು, ಶಿಯೋಮಿ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಮಿ ಹೆಸರಿನಲ್ಲಿ LED ಸ್ಮಾರ್ಟ್ ಬಲ್ಬ್ ರಿಲೀಸ್ ಕ್ಯಾಂಪೆನ್‌ ಮಾಡಿದ್ದು, ಸುಮಾರು 11 ವರ್ಷಗಳವರೆಗೆ ಬಾಳಿಕೆ ಬರುವ ಸಾಮರ್ಥ್ಯ ಹೊಂದಿವೆ ಎನ್ನಲಾಗಿದೆ. ಕಂಪನಿಯ LED ಸ್ಮಾರ್ಟ್ ಬಲ್ಬ್ ಗ್ರಾಹಕರಲ್ಲಿ ಕುತೂಹಲ ಹೆಚ್ಚಿಸಿದ್ದು, ಈ ಹಿಂದೆಯೇ ಕಂಪನಿಯು LED ಸ್ಮಾರ್ಟ್ ಬಲ್ಬ್ ಗಳನ್ನು ಬಿಡುಗಡೆ ಮಾಡುವುದಾಗಿ ಮಾಹಿತಿಯನ್ನು ಹೊರಹಾಕಿತ್ತು. ಹಾಗಾದರೇ ಶಿಯೋಮಿ LED ಸ್ಮಾರ್ಟ್ ಬಲ್ಬ್‌ಗಳು ಏನೆಲ್ಲಾ ವಿಶೇಷತೆಗಳನ್ನು ಹೊಂದಿರಲಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

800 ಲುಮಿನಸ್

800 ಲುಮಿನಸ್

ಶಿಯೋಮಿ ಕಂಪನಿಯ ಈ ಸ್ಮಾರ್ಟ್‌ ಬಲ್ಬ್‌ಗಳು 800 ಲುಮಿನಸ್ ಬ್ರೈಟ್‌ನೆಸ್‌ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, ಹೆಚ್ಚು ಪ್ರಕಾಶಮಾನವಾಗಿ ಬೆಳಕನ್ನು ಒದಗಿಸುತ್ತವೆ. 10W ವ್ಯಾಟ್ಸ್‌ ವಿದ್ಯುತ್ ಶಕ್ತಿಯನ್ನು ಒಳಸಿಕೊಳ್ಳಲಿದ್ದು, ವಿದ್ಯುತ್ ಉಳಿತಾಯವಾಗಲಿದೆ.

ಸ್ಮಾರ್ಟ್‌ಫೋನ್‌ ಕಂಟ್ರೋಲ್

ಸ್ಮಾರ್ಟ್‌ಫೋನ್‌ ಕಂಟ್ರೋಲ್

ಕಂಪನಿಯ LED ಸ್ಮಾರ್ಟ್ ಬಲ್ಬ್‌ಗಳಿಗೆ ಸ್ಮಾರ್ಟ್‌ಫೋನ್‌ ಲಿಂಕ್ ಮಾಡಿಕೊಳ್ಳುವುದರ ಮೂಲಕ ಸ್ಮಾರ್ಟ್‌ಫೋನ್‌ ಅನ್ನು ಬಲ್ಬ್‌ನ ರಿಮೋಟ್ ತರಹ ಬಳಸಿಕೊಳ್ಳಬಹುದಾಗಿದೆ. ಬಲ್ಬ್‌ನ ಬಣ್ಣ ಬದಲಿಸಬಹುದು, ಆನ್‌ ಮತ್ತು ಆಫ್‌ ಟೈಮ್‌ ಸೆಡ್ಯುಲ್‌ ಮಾಡಬಹುದು ಮತ್ತು ಬ್ರೈಟ್‌ನೆಸ್‌ ಏರಿಳಿತ ಮಾಡಿಕೊಳ್ಳಬಹುದಾದ ಆಯ್ಕೆಗಳು ದೊರೆಯಲಿವೆ.

ವಾಯಿಸ್ ಕಂಟ್ರೋಲ್

ವಾಯಿಸ್ ಕಂಟ್ರೋಲ್

ಶಿಯೋಮಿ ಕಂಪನಿಯು ಬಿಡುಗಡೆ ಮಾಡಿರುವುದು ಸ್ಮಾರ್ಟ್‌ ಎಲ್‌ಇಡಿ ಬಲ್ಬ್‌ಗಳಾಗಿದ್ದು, ವಿಶೇಷವೆಂದರೇ ಈ ಬಲ್ಬ್‌ಗಳನ್ನು ವಾಯಿಸ್‌ ಮೂಲಕ ನಿಯಂತ್ರಿಸಬಹುದಾದ ಆಯ್ಕೆ ಇರಲಿದೆ ಎನ್ನಲಾಗಿದೆ. ಗೂಗಲ್ ಅಸಿಸ್ಟಂಟ್, ಅಲೆಕ್ಸಾ ಮೂಲಕ ವಾಯಿಸ್‌ ಕಂಟ್ರೋಲ್ ಮಾಡಬಹುದಾಗಿದೆ. ಹಾಗೂ ಕಂಪನಿಯ ಆಪ್‌ ಮೂಲಕ ನಿಯಂತ್ರಿಸಲೂಬಹುದು.

ಲಭ್ಯತೆ

ಲಭ್ಯತೆ

ಶಿಯೋಮಿ LED ಸ್ಮಾರ್ಟ್ ಬಲ್ಬ್ ಗಳನ್ನು ಖರೀದಿಸಬೇಕಿದ್ದರೇ ಗ್ರಾಹಕರು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಾಗಿನ ಆಗಿ ಹಣ ಪೇ ಮಾಡಿ, ಬಲ್ಬ್‌ಗಳನ್ನು ಆರ್ಡರ್‌ ಮಾಡಬಹುದಾಗಿದೆ. ಒಂದು ವೇಳೆ ಕಂಪನಿಯ ಐಡಿ ಇಲ್ಲದಿದ್ದರೇ ಹೊಸದಾಗಿ ಐಡಿ ಕ್ರಿಯೆಟ್‌ ಮಾಡಿಕೊಂಡು ಲಾಗಿನ ಆಗಬಹುದಾಗಿದೆ.

Best Mobiles in India

English summary
Xiaomi Mi LED Smart Bulb goes on crowdfunding at 12PM today: All you need to know.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X