Subscribe to Gizbot

ಶಿಯೋಮಿ ಆರ್ಭಟಕ್ಕೆ TV ಮಾರುಕಟ್ಟೆಯೂ ಬಲಿ: ಭಾರತದಲ್ಲಿ ಅತೀ ಕಡಿಮೆ ಬೆಲೆ Mi TV ..!

Written By:

ಭಾರತೀಯ ಮಾರುಕಟ್ಟೆಯಲ್ಲಿ ಫೆಬ್ರವರಿ 14ರಂದು ಪ್ರೇಮಿಗಳ ದಿನಾಚರಣೆಯ ಪ್ರಯುಕ್ತ ಶಿಯೋಮಿಯೂ ಹೊಸದಾಗಿ ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಎಲ್ಲರೂ ಈ ಫೋನ್ ಬಿಡುಗಡೆಗೆ ಕಾಯುತ್ತಿರುವ ಸಂದರ್ಭದಲ್ಲಿ ಶಿಯೋಮಿ ಮತ್ತೊಂದು ವಸ್ತುವನ್ನು ಇದೇ ದಿನದಲ್ಲಿ ಲಾಂಚ್ ಮಾಡಲಿದ್ದು, ಇದು ನೋಟ್ 5 ಗಿಂತಲೂ ಹೆಚ್ಚಿನ ಖ್ಯಾತಿಯನ್ನು ಮಾರುಕಟ್ಟೆಯಲ್ಲಿ ಪಡೆದುಕೊಳ್ಳಲಿದೆ ಎನ್ನಲಾಗಿದೆ.

ಶಿಯೋಮಿ ಇದೇ ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಯಲ್ಲಿ Mi TVಯನ್ನು ಪರಿಚಯ ಮಾಡಲಿದೆ ಎನ್ನಲಾಗಿದೆ. ಈಗಾಗಲೇ ಚೀನಾ ಮಾರುಕಟ್ಟೆಯಲ್ಲಿ ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡಿರುವ Mi TV ನಮ್ಮ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಸಲಿದೆ. ಶಿಯೋಮಿ ಕಡಿಮೆ ಬೆಲೆಗೆ ಅತ್ಯಂತ ಗುಣಮಟ್ಟದ TV ಗಳನ್ನು ಮಾರಾಟ ಮಾಡಲಿದೆ. ಈ ಹಿನ್ನಲೆಯಲ್ಲಿ ಈಗಾಗಲೇ ಟಿವಿ ಮಾರುಕಟ್ಟೆಯೂ ಶಿಯೋಮಿ ಆಗಮನದಿಂದ ಬೆಚ್ಚಿ ಬಿದ್ದಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಹೊಸ ಟೀಸರ್:

ಈಗಾಗಲೇ ಫೆಬ್ರವರಿ 14ರಂದು ಪ್ರೇಮಿಗಳ ದಿನಾಚರಣೆಯ ಪ್ರಯುಕ್ತ ಶಿಯೋಮಿಯೂ ಹೊಸದಾಗಿ ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ಲಾಂಚ್ ಮಾಡುವದರೊಂದಿಗೆ Mi TVಯನ್ನು ಲಾಂಚ್ ಮಾಡಲಿದೆ ಎನ್ನಲಾಗಿತ್ತು. ಸದ್ಯ ಈ ಕುರಿತು ಶಿಯೋಮಿ ವಿಡಿಯೋ ಟೀಸರ್ ಅನ್ನು ಬಿಡುಗಡೆ ಮಾಡಿದೆ.

ಇದು Mi TV 4:

ಇದು Mi TV 4:

ಮೂಲಗಳ ಪ್ರಕಾರ ಭಾರತದಲ್ಲಿ ಶಿಯೋಮಿ Mi TV 4 ಅನ್ನು ಲಾಂಚ್ ಮಾಡಲಿದೆ ಎನ್ನಲಾಗಿದೆ. ಅಲ್ಲದೇ ಈ ತುಂಭ ತೆಳ್ಳಗೆ ಇದ್ದು, 4.9mm ನಟ್ಟಿದೆ. ಅಲ್ಲದೇ ಇದು ಸ್ಮಾರ್ಟ್ ಟಿವಿಯಾಗಿದ್ದು, ಮೊದಲ ಬಾರಿಗೆ ಚೀನಾದ ಹೊರ ಭಾಗದಲ್ಲಿಯೂ ಮಾರಾಟವಾಗಲಿದೆ ಎನ್ನಲಾಗಿದೆ.

Xiaomi Mi A1 : ಶಿಯೋಮಿಯ ಮೊದಲ ಡ್ಯುಯಲ್ ಕ್ಯಾಮೆರಾ ಫೋನ್: ಮಿ A1 ಫಸ್‌ಲುಕ್
ಮೂರು ಮಾದರಿ:

ಮೂರು ಮಾದರಿ:

ಭಾರತದಲ್ಲಿ ಶಿಯೋಮಿ Mi TV 4 ಮೂರು ಮಾದರಿಯಲ್ಲಿ ಕಾಣಿಸಿಕೊಳ್ಳಿದ್ದು 49mm, 55mm ಮತ್ತು 65mm ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿದ್ದು, ಇದು ಮಾರುಕಟ್ಟೆಯಲ್ಲಿ ಭಾರೀ ಸ್ಪರ್ಧೆಯನ್ನು ಒಡ್ಡಲಿದೆ ಎನ್ನಲಾಗಿದೆ. ಈಗಾಗಲೇ ಚೀನಾ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್ ಟಿವಿ ಭಾರಿ ಸದ್ದು ಮಾಡುತ್ತಿದೆ.

ನಾಳೆ 12ಕ್ಕೆ ಲಾಂಚ್:

ನಾಳೆ 12ಕ್ಕೆ ಲಾಂಚ್:

ಪ್ರೇಮಿಗಳ ದಿನಾಚರಣೆಯ ಅಂಗವಾಗಿ ಫೆಬ್ರವರಿ 14 ರಂದು ಮಧ್ಯಾಹ್ನ 12ಕ್ಕೆ ಶಿಯೋಮಿ Mi TV 4 ಲಾಂಚ್ ಮಾಡಲಿದ್ದು, ಇದರೊಂದಿಗೆ ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ಸಹ ಬಿಡುಗಡೆಯಾಗಲದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Xiaomi Mi TV 4 India Launch Expected. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot