ನಿಮ್ಮನ್ನು ನಿದ್ದೆಯಿಂದ ಎಬ್ಬಿಸುವುದಕ್ಕೆ ಬಂದಿದೆ ಶಿಯೋಮಿಯ ಸ್ಮಾರ್ಟ್ ಅಲಾರಾಂ..!

|

ಬೆಳಿಗ್ಗೆ ಕೋಳಿ ಕೂಗಿದ್ರೂ ನಿಮಗೆ ಎಚ್ಚರವಾಗೋದಿಲ್ಲವಾ? ಯಾವುದೋ ನೆನಪಿನಲ್ಲಿ ಇಡಬೇಕಾದ ದಿನಾಂಕವು ನಿಮಗೆ ನೆನಪೇ ಇರುವುದಿಲ್ಲವೇ? ಹಾಗಾದ್ರೆ ಅದಕ್ಕಾಗಿ ಈಗ ನಿಮಗೆ ಸ್ಮಾರ್ಟ್ ಅಲಾರಾಂ ಕ್ಲಾಕ್ ಲಭ್ಯವಾಗುತ್ತಿದೆ. ಹೌದು ಇದು ಸ್ಮಾರ್ಟ್ ದುನಿಯಾ ಅಲ್ವಾ? ಅದಕ್ಕಾಗಿಯೋ ಶಿಯೋಮಿ ಸಂಸ್ಥೆ ಸ್ಮಾರ್ಟ್ ಅಲಾರಾಂ ಗಡಿಯಾರವನ್ನು ಬಿಡುಗಡೆಗೊಳಿಸಿದೆ.

ನಿಮ್ಮನ್ನು ನಿದ್ದೆಯಿಂದ ಎಬ್ಬಿಸುವುದಕ್ಕೆ ಬಂದಿದೆ ಶಿಯೋಮಿಯ ಸ್ಮಾರ್ಟ್ ಅಲಾರಾಂ..!

ಶಿಯೋಮಿ ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿ ಇತರೆ ಗೆಜೆಟ್ ಗಳನ್ನು ಬಿಡುಗಡೆಗೊಳಿಸುವುದರಲ್ಲೂ ಕೂಡ ಗುರುತಿಸಿಕೊಂಡಿದೆ. ಸ್ಮಾರ್ಟ್ ಹೋಮ್ ತಯಾರಿಕಾ ವಸ್ತುಗಳು, ಲ್ಯಾಪ್ ಟಾಪ್, ಟ್ಯಾಬ್ಲೆಟ್ಸ್, ಸ್ಮಾರ್ಟ್ ಶೂ, ಪೆನ್ ಗಳು ಮತ್ತು ಕೊಡೆಗಳನ್ನು ಕೂಡ ಇದು ಬಿಡುಗಡೆಗೊಳಿಸಿದೆ. ಇತ್ತೀಚೆಗೆ ಶಿಯೋಮಿ ಕಂಪೆನಿ ಬಿಡುಗಡೆಗೊಳಿಸಿರುವ ಮತ್ತೊಂದು ವಸ್ತು ಎಂದರೆ ಅದು ಸ್ಮಾರ್ಟ್ ಅಲಾರಾಂ ಕ್ಲಾಕ್. ಹೌದು ಇದು ಶಿಯೋಮಿಯ ಸ್ವಂತ ಎಐ ಅಸಿಸ್ಟೆಂಟ್ ಶಿಯೋ ಎಐ ಮೂಲಕ ಕಾರ್ಯ ನಿರ್ವಹಿಸುತ್ತದೆ.

ಸ್ಮಾರ್ಟ್ ಗಡಿಯಾರದ ಬೆಲೆ:

ಸ್ಮಾರ್ಟ್ ಗಡಿಯಾರದ ಬೆಲೆ:

ಶಿಯೋಮಿಯ ಸ್ಮಾರ್ಟ್ ಗಡಿಯಾರವು ಚೀನಾ ಮಾರುಕಟ್ಟೆಯಲ್ಲಿ RMB 149 ಆಗಿದ್ದು ಭಾರತೀಯ ಮಾರುಕಟ್ಟೆ ಬೆಲೆಯಲ್ಲಿ ಹೇಳುವುದಾದರೆ ಅಂದಾಜು 1,600 ರುಪಾಯಿ ಆಗಲಿದೆ. ಹೆಸರೇ ಸೂಚಿಸುವಂತೆ ದೊಡ್ಡ ಡಿಸ್ಪ್ಲೇ ಹೊಂದಿರುವ ಇದು ಗಡಿಯಾರದ ಐಕಾನ್ ಗಳನ್ನು ಮತ್ತು ನೋಟಿಫಿಕೇಷನ್ ಗಳನ್ನು ನೀಡುತ್ತದೆ. ಸ್ಮಾರ್ಟ್ ಸ್ಪೀಕರ್ ಗಿಂತಲೂ ಇದು ದೊಡ್ಡದಿದೆ.

ಅಲಾರಾಂನ ಸ್ಮಾರ್ಟ್‌ನೆಸ್‌

ಅಲಾರಾಂನ ಸ್ಮಾರ್ಟ್‌ನೆಸ್‌

30 ವಿಭಿನ್ನ ಅಲಾರಾಂ ವಾಯ್ಸ್ ಗಳಲ್ಲಿ ಈ ಸ್ಮಾರ್ಟ್ ಅಲಾರಾಂನ್ನು ಸೆಟ್ ಮಾಡಬಹುದು. ವಾಯ್ಸ್ ಅಥವಾ ಡಿವೈಸ್ ನ ಮೇಲ್ಬಾಗದಲ್ಲಿ ಕ್ಲಿಕ್ ಮಾಡುವ ಮೂಲಕ ಅಲಾರಾಂನ್ನು ಸ್ನೋಝ್ ಮಾಡುವುದಕ್ಕೆ ಬಳಕೆದಾರರಿಗೆ ಅವಕಾಶವಿದೆ.ಇದರಲ್ಲಿ ಬಳಕೆದಾರರು ಸುಮಾರು 80 ರಿಮೈಂಡರ್ ಗಳನ್ನು ಸೆಟ್ ಮಾಡಿ ಇಡಲು ಅವಕಾಶವಿರುತ್ತದೆ. ಅಷ್ಟೇ ಅಲ್ಲದೆ ಹವಾಮಾನ ವರದಿ, ಇತ್ತೀಚೆಗಿನ ಸುದ್ದಿಗಳು, ಸ್ಟಾಕ್ ರಿಪೋರ್ಟ್ ಮತ್ತು ಜನರಲ್ ಅಪ್ ಡೇಟ್ ಗಳನ್ನು ಇದರಲ್ಲಿ ಪಡೆಯಲು ಸಾಧ್ಯವಿದೆ.

ಇತರೆ ಗ್ಯಾಡ್ಜೆಟ್‌ಗಳ ಕಂಟ್ರೋಲ್‌

ಇತರೆ ಗ್ಯಾಡ್ಜೆಟ್‌ಗಳ ಕಂಟ್ರೋಲ್‌

ಅಷ್ಟೇ ಅಲ್ಲದೆ ಇತರೆ ಶಿಯೋಮಿ ವಸ್ತುಗಳಾದ ಬಲ್ಬ್, ಲ್ಯಾಂಪ್ ಮತ್ತು ಇತ್ಯಾದಿ ವಸ್ತುಗಳನ್ನು ಈ ಸ್ಮಾರ್ಟ್ ಅಲಾರಾಂನಿಂದ ಕಂಟ್ರೋಲ್ ಮಾಡಲು ಸಾಧ್ಯವಾಗುತ್ತದೆ. ಇದು ಸ್ಟೋರಿಗಳನ್ನು ಓದುವುದಕ್ಕೆ, ಪದ್ಯಗಳನ್ನು ಓದಲು ಮತ್ತು ಜೋಕ್ ಗಳನ್ನು ಮಾಡಲು ಕೂಡ ಬಳಕೆ ಮಾಡಬಹುದು. ಸುಮಾರು 2,000 ರೇಡಿಯೋ ಸ್ಟೇಷನ್ ಗಳಿಂದ ಆಡಿಯೋ ಸ್ಟ್ರೀಮಿಂಗ್ ಮಾಡಲು ಇದು ಅವಕಾಶ ನೀಡುತ್ತದೆ.

ಗಡಿಯಾರದ ವೈಶಿಷ್ಟ್ಯತೆಗಳು

ಗಡಿಯಾರದ ವೈಶಿಷ್ಟ್ಯತೆಗಳು

ವೈಶಿಷ್ಟ್ಯತೆಗಳ ವಿಚಾರಕ್ಕೆ ಬಂದರೆ ದೊಡ್ಡ ಡಿಸ್ಪ್ಲೇಯನ್ನು ಇದು ಹೊಂದಿದ್ದು ಕ್ವಾಡ್-ಕೋರ್ ಸಾಕೆಟ್ ನ್ನು ಒಳಗೊಂಡಿದೆ ಅದು 1.3GHz ನಷ್ಟಿದೆ. ಬ್ಲೂಟೂತ್ 4.0 LE ಮತ್ತು 2.4GHz ವೈ-ಫೈ ಕನೆಕ್ಷನ್ ಗೆ ಬೆಂಬಲ ನೀಡುತದೆ. ಇದು ಶಿಯೋ ಎಐ ನಿಂದ ಪವರ್ಡ್ ಆಗಿದ್ದು ಆಂಡ್ರಾಯ್ಡ್ ಜೆಲ್ಲಿ ಬೀನ್ 4.2 ಮತ್ತು ಮೇಲಿನ ಎಲ್ಲದರಲ್ಲೂ ಜೊತೆಗೆ ಐಓಎಸ್ 8 ಮತ್ತು ಅದಕ್ಕಿಂತ ಮೇಲಿನ ಎಲ್ಲಾ ಓಎಸ್ ಗಳಲ್ಲೂ ಕಂಪ್ಯಾಟಿಬಲ್ ಆಗಿದೆ.

ಲಭ್ಯತೆ

ಲಭ್ಯತೆ

ಸದ್ಯಕ್ಕೆ ಸ್ಪೀಕರ್ ಜೊತೆಗಿನ ಈ ಸ್ಮಾರ್ಟ್ ಅಲಾರಾಂ ಕ್ಲಾಕ್ ಕಂಪೆನಿಯ ಅಧಿಕೃತ ವೆಬ್ ಸೈಟ್ ನ ಚೀನಾ ಮಾರುಕಟ್ಟೆಯಲ್ಲಿ ಮಾತ್ರ ಲಭ್ಯವಿದೆ. ಭಾರತೀಯ ಮಾರುಕಟ್ಟೆಯಲ್ಲಿ ಇದನ್ನು ಬಿಡುಗಡೆಗೊಳಿಸಲಾಗುತ್ತದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಇನ್ನಷ್ಟೇ ತಿಳಿದುಬರಬೇಕಿದೆ.

Best Mobiles in India

English summary
Xiaomi Smart Alarm Clock with Xiao AI assistant launched for Rs. 1,600. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X