ಶಿಯೋಮಿಯ 50 ಇಂಚಿನ ಹೊಸ ಸ್ಮಾರ್ಟ್‌ಟಿವಿ ಶೀಘ್ರದಲ್ಲೇ ಎಂಟ್ರಿ!

|

ಸ್ಮಾರ್ಟ್‌ಫೋನ್‌ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಶಿಯೋಮಿ, ಈಗಾಗಲೇ ಭಾರತೀಯ ಸ್ಮಾರ್ಟ್‌ಟಿವಿ ಕ್ಷೇತ್ರದಲ್ಲಿಯೂ ಸಹ ಪೈಪೋಟಿಯಿಂದ ಮುನ್ನುಗುತ್ತಿದೆ. ಅಗ್ಗದ ಬೆಲೆಯಲ್ಲಿ ಸ್ಮಾರ್ಟ್‌ಟಿವಿಯನ್ನು ಪರಿಚಯಿಸುತ್ತಾ ಗ್ರಾಹಕರನ್ನು ಬಹುಬೇಗನೆ ಸೆಳೆದುಕೊಳ್ಳುತ್ತ ಮುನ್ನಡೆದಿರುವ ಕಂಪನಿ ಇದೀಗ ಮತ್ತೆ ಗ್ರಾಹಕರು ಸಂಭ್ರಮಪಡುವ ಸುದ್ದಿಯನ್ನು ನೀಡಿದ್ದು, ಶೀಘ್ರದಲ್ಲೇ 50 ಇಂಚಿನ ಸ್ಮಾರ್ಟ್‌ಟಿವಿಯನ್ನು ಬಿಡುಗಡೆ ಮಾಡಲಿದೆ.

ಶಿಯೋಮಿಯ 50 ಇಂಚಿನ ಹೊಸ ಸ್ಮಾರ್ಟ್‌ಟಿವಿ ಶೀಘ್ರದಲ್ಲೇ ಎಂಟ್ರಿ!

ಹೌದು, ಶಿಯೋಮಿ 50 ಇಂಚಿನ UHD ಸ್ಮಾರ್ಟ್‌ಟಿವಿಯನ್ನು ದೇಶಿಯ ಮಾರುಕಟ್ಟೆಗೆ ರಿಲೀಸ್‌ ಮಾಡಲು ಮುಂದಾಗಿದ್ದು, ಈ ಸ್ಮಾರ್ಟ್‌ಟಿವಿಯು ಕಂಪನಿಯ 'ಮಿ ಟಿವಿ A4' ಸರಣಿಯಲ್ಲಿ ಲಾಂಚ್ ಆಗಲಿದೆ. ಕಂಪನಿಯು ಈಗಾಗಲೇ ಈ ಮಾದರಿಯ ಸ್ಮಾರ್ಟ್‌ಟಿವಿಯನ್ನು ಚೀನಾದ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿ ಗ್ರಾಹಕರಿಗೆ ಮೋಡಿ ಮಾಡಿದೆ. ಈ ಸ್ಮಾರ್ಟ್‌ಟಿವಿಯು ಪ್ರಿಲೋಡೆಡ್ ಮನರಂಜನೆಯ ಆಯ್ಕೆಗಳನ್ನು ಒಳಗೊಂಡಿರಲಿದೆ.

ಶಿಯೋಮಿಯ 50 ಇಂಚಿನ ಹೊಸ ಸ್ಮಾರ್ಟ್‌ಟಿವಿ ಶೀಘ್ರದಲ್ಲೇ ಎಂಟ್ರಿ!

ಆಕರ್ಷಕವಾಗಿರುವ ಈ ಸ್ಮಾರ್ಟ್‌ಟಿವಿಯಲ್ಲಿ ಮೂರು ಎಚ್‌ಡಿಎಮ್‌ಐ ಪೋರ್ಟ್‌ಗಳನ್ನು ನೀಡಲಾಗಿದ್ದು, ಇದರೊಂದಿಗೆ ಡಾಲ್ಬಿ ಮತ್ತು ಡಿಟಿಎಸ್‌ ಸೌಂಡ್‌ನ್ನು ಹೊಂದಿರಲಿದೆ. ಆಂತರಿಕವಾಗಿ ಆಮ್‌ಲಾಜಿಕ್ L962 ಕ್ವಾಡ್‌ಕೋರ್‌ ಪ್ರೊಸೆಸರ್‌ ಸ್ಮಾರ್ಟ್‌ಟಿವಿಯಲ್ಲಿ ಇರಲಿದೆ. ಹಾಗಾದರೇ ಶಿಯೋಮಿಯ ಸ್ಮಾರ್ಟ್‌ಟಿವಿ ಇನ್ನಿತರೆ ಯಾವೆಲ್ಲ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

50 ಇಂಚಿನ ಡಿಸ್‌ಪ್ಲೇ

50 ಇಂಚಿನ ಡಿಸ್‌ಪ್ಲೇ

ಹೊಸ ಶಿಯೋಮಿ ಸ್ಮಾರ್ಟ್‌ಟಿವಿಯು 3840x2160 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ 50 ಇಂಚಿನ ಡಿಸ್‌ಪ್ಲೇಯನ್ನು ಹೊಂದಿರಲಿದ್ದು, ಈ ಡಿಸ್‌ಪ್ಲೇಯು 4K UHD ಸಾಮರ್ಥ್ಯದಲ್ಲಿರಲಿದೆ. ಇದರೊಂಡಿಗೆ HDR10+ HLG ಮತ್ತು 60Hz ಗಳನ್ನು ಸಹ ಒಳಗೊಂಡಿದ್ದು, ವೀಕ್ಷಣಾ ಕೋನವು 178 ಡಿಗ್ರಿಯಲ್ಲಿರಲಿದೆ.

ಮೆಮೊರಿ ಮತ್ತು ಪ್ರೊಸೆಸರ್‌

ಮೆಮೊರಿ ಮತ್ತು ಪ್ರೊಸೆಸರ್‌

64 ಬಿಟ್ ಆಮ್‌ಲಾಜಿಕ್ L962 ಕ್ವಾಡ್‌ಕೋರ್‌ ಸಾಮರ್ಥ್ಯದ ಪ್ರೊಸೆಸರ್‌ ಅನ್ನು ಸ್ಮಾರ್ಟ್‌ಟಿವಿ ಹೊಂದಿದ್ದು, ವೇಗದಲ್ಲಿ ಕೆಲಸ ನಿರ್ವಹಿಸಲಿದೆ. 2GB RAM ಶಕ್ತಿಯನ್ನು ಒಳಗೊಂಡಿರುವ ಜೊತೆಗೆ 8GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಸಹ ಹೊಂದಿದೆ.

ಮನರಂಜನೆಯ ಸಂಗಮ

ಮನರಂಜನೆಯ ಸಂಗಮ

ಸ್ಮಾರ್ಟ್‌ಟಿವಿಯಲ್ಲಿ ಗ್ರಾಹಕರಿಗೆ ಇಷ್ಟವಾಗುವ ಹಲವು ಮನರಂಜನೆಯ ಆಯ್ಕೆಗಳನ್ನು ಪ್ರಿಲೊಡೆಡ್ ಮಾಡಲಾಗಿದೆ. ಸುಮಾರು 700,00 ಗಂಟೆಗಳ ಕಾರ್ಯಕ್ರಮಗಳ ಇರಲಿದ್ದು, ಜಿಯೋ ಸಿನಿಮಾ, ಪ್ರೈಮ್ ವಿಡಿಯೊ, ಇರೊಸ್ ನವ್, ಹೂಕ್, ALTಬಾಲಾಜಿ, ಹಂಗಾಮಾ, ಸೋನಿ ಲೈವ್ ಸೇರಿದಂತೆ ಅನೇಕ ಆಯ್ಕೆಗಳು ಇದರಲ್ಲಿ ಸೇರಿವೆ.

ಸದ್ಯ ಲಭ್ಯವಿರುವ ವೇರಿಯಂಟ್‌ಗಳು

ಸದ್ಯ ಲಭ್ಯವಿರುವ ವೇರಿಯಂಟ್‌ಗಳು

ಶಿಯೋಮಿ ಕಂಪನಿಯ 32, 43 ಮತ್ತು 49 ಇಂಚಿನ ಮೂರು ವೇರಿಯಂಟ್ ಸ್ಮಾರ್ಟ್‌ಟಿವಿಗಳು ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇವುಗಳ ಸಾಲಿಗಿಗ 50 ಇಂಚಿನ ಸ್ಮಾರ್ಟ್‌ಟಿವಿಯು ಹೊಸದಾಗಿ ಸೇರ್ಪಡೆಗೊಳ್ಳಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಈಗಾಗಲೇ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿರುವ ಶಿಯೋಮಿಯ 50 ಇಂಚಿನ ಸ್ಮಾರ್ಟ್‌ಟಿವಿಯ ಬೆಲೆಯು 2,399 yuan ಆಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಅಂದಾಜು 25,000ರೂ.ಗಳಿಗೆ ದೊರೆಯಲಿದೆ ಎಂದು ಹೇಳಲಾಗುತ್ತಿದೆ. ಅತೀ ಶೀಘ್ರದಲ್ಲೇ ಧೇಶಿಯ ಮಾರುಕಟ್ಟೆಗೆ ಪ್ರವೇಶವನ್ನು ಪಡೆಯಲಿದೆ.

ಓದಿರಿ :ಶಿಯೋಮಿಯಿಂದ ಮತ್ತೆ ಹೊಸ ಅಗ್ಗದ ಸ್ಮಾರ್ಟ್‌ಫೋನ್ ರಿಲೀಸ್‌ಗೆ ರೆಡಿ.!..ಶೀಘ್ರದಲ್ಲೇ ಲಾಂಚ್! ಓದಿರಿ :ಶಿಯೋಮಿಯಿಂದ ಮತ್ತೆ ಹೊಸ ಅಗ್ಗದ ಸ್ಮಾರ್ಟ್‌ಫೋನ್ ರಿಲೀಸ್‌ಗೆ ರೆಡಿ.!..ಶೀಘ್ರದಲ್ಲೇ ಲಾಂಚ್!

Best Mobiles in India

English summary
Xiaomi to launch a new 50-inch 4K TV in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X