ಕೇವಲ 1000 ರೂ.ಗೆ 6-ಇನ್-1 ಝೆಬ್ರೋನಿಕ್ಸ್ ಗ್ಯಾಜೆಟ್!..ಈಗಲೇ ಖರೀದಿಸಲು 6 ಕಾರಣಗಳು!!

ವಿಶೇಷ ಗ್ಯಾಜೆಟ್‌ಗಳನ್ನು ಪರಿಚಯಿಸುವಲ್ಲಿ ಯಾವಾಗಲೂ ಮುಂದಿರುವ ಝೆಬ್ರೋನಿಕ್ಸ್ ಕಂಪೆನಿ ಇದೀಗ ವಿಶಿಷ್ಟವಾದ 6-ಇನ್-1 ಗ್ಯಾಜೆಟ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ

|

ವಿಶೇಷ ಗ್ಯಾಜೆಟ್‌ಗಳನ್ನು ಪರಿಚಯಿಸುವಲ್ಲಿ ಯಾವಾಗಲೂ ಮುಂದಿರುವ ಝೆಬ್ರೋನಿಕ್ಸ್ ಕಂಪೆನಿ ಇದೀಗ ವಿಶಿಷ್ಟವಾದ 6-ಇನ್-1 ಗ್ಯಾಜೆಟ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದೇ ಮೊದಲ ಬಾರಿಗೆ ಇಂತಹದೊಂದು ಅತ್ಯುತ್ತಮ ಗ್ಯಾಜೆಟ್ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಬಂದಿದ್ದು, ಮಾರುಕಟ್ಟೆಯಲ್ಲಿ ಟ್ರೆಂಡ್ ಸೃಷ್ಟಿಸಲು ರೆಡಿಯಾಗಿದೆ.!!

ಹೌದು, ಗ್ಯಾಜೆಟ್ ಪ್ರಪಂಚವನ್ನು ಮತ್ತಷ್ಟು ಸ್ಮಾರ್ಟ್‌ ಮಾಡುವ ಸಲುವಾಗಿ ಝೆಬ್ರೋನಿಕ್ಸ್ ಕಂಪೆನಿ ಒಂದೇ ಗ್ಯಾಜೆಟ್‌ನಲ್ಲಿ ಆರು ವಿವಿಧ ಸೇವೆಗಳನ್ನು ನೀಡುವ " ಝೆಬ್ರೋನಿಕ್ಸ್ ಎಸ್ಟೀಮ್" ಎಂಬ ಗ್ಯಾಜೆಟ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಗ್ಯಾಜೆಟ್ ಒಟ್ಟು ಆರು ಸೇವೆಗಳನ್ನು ನೀಡಲಿದೆ ಎಂದು ಝೆಬ್ರೋನಿಕ್ಸ್ ಕಂಪೆನಿ ತಿಳಿಸಿದೆ.!!

ಕೇವಲ 1000 ರೂ.ಗೆ 6-ಇನ್-1 ಝೆಬ್ರೋನಿಕ್ಸ್ ಗ್ಯಾಜೆಟ್!..ಖರೀದಿಸಲು 6 ಕಾರಣಗಳು!!

ಮುಖ್ಯವಾಗಿ ಪವರ್‌ಬ್ಯಾಂಕ್ ಎಂದು ಮಾರಾಟ ಮಾಡಲಾಡಲಾಗುತ್ತಿರುವ ಝೆಬ್ರೋನಿಕ್ಸ್ ಎಸ್ಟೀಮ್ ಪವರ್‌ಬ್ಯಾಂಕ್ ಜೊತೆ ಎಲ್‌ಇಡಿ ಟಾರ್ಚ್, ಬ್ಲೂಟೂತ್ ಸ್ಪೀಕರ್, ಎಫ್.ಎಂ. ರೇಡಿಯೊ ಹೀಗೆ ಒಟ್ಟು ಆರು ಸೇವೆಗಳನ್ನು ನೀಡಲಿದೆ.! ಹಾಗಾದರೆ, ಝೆಬ್ರೋನಿಕ್ಸ್ ಎಸ್ಟೀಮ್ ಗ್ಯಾಜೆಟ್ ಹೇಗಿದೆ? ಈ ಗ್ಯಾಜೆಟ್ ವಿಶೇಷತೆಗಳೇನು ಎಂಬುದನ್ನು ಮುಂದೆ ತಿಳಿಯಿರಿ.!!

6 ಇನ್ 1 ಉತ್ಪನ್ನ!!

6 ಇನ್ 1 ಉತ್ಪನ್ನ!!

ಜೆಬ್ರಾನಿಕ್ಸ್ 'ಎಸ್ಟೀಮ್' ಬಹೂಪಯೋಗಿ ಉತ್ಪನ್ನವವಾಗಿದ್ದು, ಪವರ್ ಚಾರ್ಜರ್, ಬ್ಲೂಟೂತ್ ಸ್ಪೀಕರ್, ಎಲ್ ಇ ಡಿ ಟಾರ್ಚ್, ಎಫ್ ಎಂ, ಮೈಕ್ರೋ ಎಸ್ ಡಿ ಕಾರ್ಡ್ ಪ್ಲೇಯರ್, ಪವರ್ ಬ್ಯಾಂಕ್ ಸೇರಿದಂತೆ 6 ಇನ್ 1 ಆಗಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಸೈಕಲ್ ಮೌಂಟ್ ನೊಂದಿಗೆ ಈ ಗ್ಯಾಜೆಟ್ ಲಭ್ಯವಿದೆ.

ಗ್ಯಾಜೆಟ್ ವಿನ್ಯಾಸ ಹೇಗಿದೆ?

ಗ್ಯಾಜೆಟ್ ವಿನ್ಯಾಸ ಹೇಗಿದೆ?

ಜೆಬ್ರಾನಿಕ್ಸ್ 'ಎಸ್ಟೀಮ್' ಕಪ್ಪು ಬಣ್ಣದಲ್ಲಿದ್ದು ಟಾರ್ಚಿನಾಕಾರದಲ್ಲಿದೆ. ಮಧ್ಯಭಾಗದಲ್ಲಿ ನಾಲ್ಕು ಬಟನ್‌ಗಳು. ಪ್ರಮುಖ ಬಟನ್ ಆನ್/ಆಫ್ ಆಗಿ, ಕರೆ ಬಂದಾಗ ಸ್ವೀಕರಿಸಲು, ಮಾತು ನಿಲ್ಲಿಸಲು, ಸಂಗೀತ ಆಲಿಸುತ್ತಿದ್ದಾಗ ತಾತ್ಕಾಲಿಕವಾಗಿ ನಿಲ್ಲಿಸಲು ಮತ್ತು ಪ್ಲೇ ಮಾಡಲು, ಹಲವು ಸೌಲಭ್ಯಗಳನ್ನು ಗ್ಯಾಜೆಟ್‌ನಲ್ಲಿ ನೀಡಲಾಗಿದೆ.!!

ಏನೇನು ಮಾಡಬಹುದು?

ಏನೇನು ಮಾಡಬಹುದು?

ಈ ಗ್ಯಾಜೆಟ್‌ನಿಂದ ನಿಮ್ಮ ಫೋನ್ ಚಾರ್ಜ್ ಮಾಡಬಹುದು, ಎಲ್ ಇ ಡಿ ಟಾರ್ಚ್ ಮಾದರಿ ಬಳಸಬಹುದು, ರೇಡಿಯೋ ಕೇಳಬಹುದು, ಬ್ಲೂಟೂತ್ ಮೂಲಕ ನಿಮಗಿಷ್ಟವಾದ ಹಾಡುಗಳನ್ನು ಕೇಳಬಹುದು, ವೈರ್ ಲೆಸ್ ಮೂಲಕ ನಿರಂತರವಾಗಿ ಮ್ಯೂಸಿಕ್ ಕೇಳಬಹುದು, ಎಸ್ ಡಿ ಕಾರ್ಡ್ ಮೂಲಕ ಮ್ಯೂಸಿಕ್ ಪ್ಲೇ ಮಾಡಬಹುದಾಗಿದೆ.!!

ಮೈಕ್ರೊಎಸ್‌ಡಿ ಕಾರ್ಡ್ ಸ್ಲಾಟ್‌!!

ಮೈಕ್ರೊಎಸ್‌ಡಿ ಕಾರ್ಡ್ ಸ್ಲಾಟ್‌!!

ಟಾರ್ಚ್ ಬಲ್ಬ್ ಇರುವ ಹೆಡ್ ತೆಗೆದರೆ ಯುಎಸ್‌ಬಿ ಕಿಂಡಿ ಮತ್ತು ಮೈಕ್ರೊಎಸ್‌ಡಿ ಕಾರ್ಡ್ ಹಾಕುವ ಸ್ಲಾಟ್‌ಗಳು ಕಾಣಿಸುತ್ತವೆ. ಯುಎಸ್‌ಬಿ ಕಿಂಡಿ ಮೂಲಕ ಚಾರ್ಜ್ ಮಾಡಬಹುದು ಮತ್ತು ಅದನ್ನೇ ಬಳಸಿ ಇತರೆ ಸಾಧನಗಳಿಗೆ ಚಾರ್ಜ್ ಮಾಡಬಹುದುದಾದ ಆಯ್ಕೆಯನ್ನು ಈ ಗ್ಯಾಜೆಟ್‌ನಲ್ಲಿ ನೀಡಲಾಗಿದೆ.!!

ಯಾವುದೇ Xiaomi ಫೋನ್‌ಗಳಲ್ಲಿ Multi Window Screen ಬಳಕೆ ಹೇಗೆ?
ಖರೀದಿಸಲು ಯೋಗ್ಯ ಸಾಧನೆವೇ?

ಖರೀದಿಸಲು ಯೋಗ್ಯ ಸಾಧನೆವೇ?

2000mAh ಸಾಮರ್ಥ್ಯದ ಪವರ್ ಬ್ಯಾಂಕ್ ಇದಾಗಿದ್ದು ಪವರ್‌ಬ್ಯಾಂಕ್ ಆಗಿ ಅಷ್ಟೇನೂ ಶಕ್ತಿಶಾಲಿಯಾದುದಲ್ಲ ಎಂದು ಹೇಳಬಹುದು.! ಆದರೂ ಬ್ಲೂಟೂತ್ ವಿಧಾನದಲ್ಲಿ ತೃಪ್ತಿಕರವಾಗಿ ಕೆಲಸ ಮಾಡುವ, ಸಂಗೀತವನ್ನು ಸರಿಯಾಗಿ ಪ್ಲೇ ಮಾಡುವ ಈ ವಿಶೇಷ ಗ್ಯಾಜೆಟ್ ಬೆಲೆ 1000 ರೂ.ಗಳಾಗಿದ್ದು, ಖರೀದಿಸಲು ಉತ್ತಮ ಗ್ಯಾಜೆಟ್ ಎನ್ನಬಹುದು.!!

Best Mobiles in India

English summary
Zebronics launches Esteem Bluetooth speaker with 6-in-1 features at Rs 1,೦೦೦. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X