Subscribe to Gizbot

ನಿಮ್ಮ ಫೋನ್ ಬಗ್ಗೆ ನಿಮಗೆ ಇರಲಿ ಹೆಮ್ಮೆ !!!

Posted By:

ಇಂದಿನ ತಂತ್ರಜ್ಞಾನ ಯುಗದಲ್ಲಿ ಎಲ್ಲವೂ ಆಧುನಿಕವಾಗಿರಬೇಕೆಂದು ಇಂದಿನ ಮನುಕುಲ ಆಲೋಚಿಸುತ್ತದೆ. ಆಧುನಿಕ ಚಿಂತನೆಯೊಂದಿಗೆ ಬಂದಿರುವ ಇಂದಿನ ಮಾನವ ಕುಲಕ್ಕೆ ತಂತ್ರಜ್ಞಾನ ಕೂಡ ಅಪೂರ್ವ ಕೊಡುಗೆಯನ್ನು ನೀಡುತ್ತಿದೆ. ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್, ಲ್ಯಾಪ್‌ಟಾಪ್, ಕ್ಯಾಮೆರಾ ಹೀಗೆ ತಂತ್ರಜ್ಞಾನ ಅವನು ಬಳಸುವ ತಾಂತ್ರಿಕ ಉಪಕರಣಗಳಲ್ಲೇ ಮಹತ್ತರ ಮಾರ್ಪಾಡುಗಳನ್ನು ಮಾಡುತ್ತಿದೆ.

ಓದಿರಿ: ನಿಮ್ಮ ಆಂಡ್ರಾಯ್ಡ್ ಫೋನ್‌ನ ಬಲಾಢ್ಯ ಅಂಗರಕ್ಷಕರು

ಇನ್ನು ಈ ಉಪಕರಣಗಳ ಮೂಲಕ ನಾವು ಬಹಳಷ್ಟು ಕೆಲಸಗಳನ್ನು ಮಾಡಬಹುದಾಗಿದ್ದು ಉದಾಹರಣೆಗೆ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನೀವು ಮಾಡಬಹುದಾದ ಕೆಲಸಗಳನ್ನು ಇಂದಿನ ಲೇಖನದಲ್ಲಿ ನಾವು ನಿಮಗೆ ನೀಡುತ್ತಿದ್ದೇವೆ. ಕೆಳಗಿನ ಸ್ಲೈಡರ್‌ಗಳಲ್ಲಿ ಮಾಹಿತಿಯನ್ನು ಓದಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಕ್ರೀನ್ ಶಾಟ್

ಸ್ಕ್ರೀನ್ ಶಾಟ್ ತೆಗೆಯಿರಿ

ನಿಮ್ಮ ಫೋನ್‌ನ ಪರದೆಯಲ್ಲಿ ನೀವು ಏನಾದರೂ ಸೆರೆಹಿಡಿಯಲು ಬಯಸುತ್ತೀರಾ? ಆಂಡ್ರಾಯ್ಡ್ ಫೋನ್‌ನಲ್ಲಿ ಹೋಮ್ ಪವರ್ ಬಟನ್ ಮತ್ತು ಸೈಡ್ ವಾಲ್ಯೂಮ್ ಬಟನ್ ಎರಡನ್ನೂ ಒಂದೇ ಸಮಯದಲ್ಲಿ ಒತ್ತಿಹಿಡಿಯಿರಿ. ಸ್ಕ್ರೀನ್ ಶಾಟ್ ಕ್ಯಾಮೆರಾ ರೋಲ್‌ನಲ್ಲಿ ಗೋಚರಿಸುತ್ತದೆ ಅಥವಾ ಫೋಟೋ ಸೆಕ್ಶನ್‌ನಲ್ಲಿ ಉಳಿಯುತ್ತದೆ.

ಬ್ಲಾಕ್ ಮಾಡಿ

ಕರೆಗಳು ಮತ್ತು ಪಠ್ಯಗಳನ್ನು ಬ್ಲಾಕ್ ಮಾಡಿ

ಆಂಡ್ರಾಯ್ಡ್‌ನಲ್ಲಿ ಸೆಟ್ಟಿಂಗ್ಸ್ > ಕಾಲ್ ಸೆಟ್ಟಿಂಗ್ಸ್ > ಕಾಲ್ ಬ್ಲಾಕ್. ಇನ್‌ಕಮಿಂಗ್ ಕಾಲ್ಸ್ ಅಡಿಯಲ್ಲಿ ಕಾಲ್ ಬ್ಲಾಕ್ ಲಿಸ್ಟ್ ತಟ್ಟಿರಿ.

ಪಾಸ್‌ವರ್ಡ್

ನೈಜ ಪಾಸ್‌ವರ್ಡ್ ಬಳಸಿ

ಸೆಟ್ಟಿಂಗ್ಸ್ > ಲಾಕ್ ಸ್ಕ್ರೀನ್ ಮತ್ತು ಸ್ಕ್ರೀನ್ ಲಾಕ್ ತಟ್ಟಿರಿ. ಯಾವ ಬಗೆಯ ಭದ್ರತೆ ಬೇಕು ಎಂಬುದನ್ನು ನಿಮಗೆ ಆರಿಸಬಹುದು ಇಲ್ಲಿ ಸರಳವಾದ ಸ್ವೈಪ್ ಪಾಸ್‌ವರ್ಡ್ ಅನ್ನು ಕೂಡ ಆರಿಸಬಹುದು. ಪಾಸ್‌ವರ್ಡ್ ಆರಿಸಿ ಮತ್ತು ನಿಮಗೆ ಬೇಕಾದ ಪಾಸ್‌ವರ್ಡ್‌ನಲ್ಲಿ ಟೈಪ್ ಮಾಡಿ.

ಪಠ್ಯ

ಸುಲಭವಾಗಿ ಪಠ್ಯವನ್ನು ನೋಡಿ

ಸೆಟ್ಟಿಂಗ್ಸ್ > ಅಕ್ಸೆಸಿಬಿಲಿಟಿ ಗೆ ಹೋಗಿ. ವಿಶನ್ ಅಡಿಯಲ್ಲಿ, ಫಾಂಟ್ ಗಾತ್ರ ಸ್ಪರ್ಶಿಸಿ ಮತ್ತು ಅದನ್ನು ದೊಡ್ಡದಾಗಿ ಹೊಂದಿಸಿ.

ದೊಡ್ಡದಾಗಿ ಓದಿ

ಕೆಲವು ಅಂಶಗಳನ್ನು ದೊಡ್ಡದಾಗಿ ಓದಿ

ಸೆಟ್ಟಿಂಗ್ಸ್ > ಅಕ್ಸೆಸಿಬಿಲಿಟಿ ಮತ್ತು ಟಾಕ್‌ಬ್ಯಾಕ್ ಸ್ಪರ್ಶಿಸಿ. ನಿಮಗೆ ಇದು ಕಂಡುಬಂದಿಲ್ಲ ಎಂದಾದಲ್ಲಿ ಅದನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಿ.

ಕಸ್ಟಮೈಸ್ ಮಾಡಿ

ಅಲರ್ಟ್ ವೈಬ್ರೇಶನ್ ಪ್ಯಾಟ್ರನ್‌ಗಳನ್ನು ಕಸ್ಟಮೈಸ್ ಮಾಡಿ

ಸಂಪರ್ಕಗಳಿಗೆ ಹೋಗಿ ಮತ್ತು ಕಾಂಟಾಕ್ಟ್ ಹೆಸರನ್ನು ಸ್ಪರ್ಶಿಸಿ. ವೈಬ್ರೇಶನ್ ಪ್ಯಾಟ್ರನ್ ಅಡಿಯಲ್ಲಿ, ಡೀಫಾಲ್ಟ್ ಸ್ಪರ್ಶಿಸಿ ಮತ್ತು ಪ್ರಸ್ತುತ ಪ್ಯಾಟ್ರನ್ ಆರಿಸಿ.

ಕ್ಯಾಮೆರಾ ಎಲ್‌ಇಡಿ

ಅಧಿಸೂಚನೆಗಳಿಗಾಗಿ ಫ್ಲ್ಯಾಶ್ ಕ್ಯಾಮೆರಾ ಎಲ್‌ಇಡಿ

ಇದಕ್ಕಾಗಿ ಸೆಟ್ಟಿಂಗ್ಸ್ > ಅಕ್ಸೆಸಿಬಿಲಿಟಿ ಮತ್ತು "ಫ್ಲ್ಯಾಶ್ ನೋಟಿಫಿಕೇಶನ್" ಅನ್ನು ಆನ್ ಮಾಡಿಕೊಳ್ಳಿ.

ಉತ್ತಮ ವಿಧಾನಗಳು

ಚಿತ್ರಗಳನ್ನು ತೆಗೆಯಲು ಉತ್ತಮ ವಿಧಾನಗಳು

ಆಂಡ್ರಾಯ್ಡ್ ಫೋನ್‌ನಲ್ಲಿ ಚಿತ್ರಗಳನ್ನು ತೆಗೆಯಲು ವಾಯ್ಸ್ ಕಂಟ್ರೋಲ್‌ಗೆ ಸ್ಕ್ರಾಲ್ ಡೌನ್ ಮಾಡಿ ಮತ್ತು ಅದನ್ನು ಆನ್ ಮಾಡಿಕೊಳ್ಳಿ. ಕ್ಯಾಪ್ಚರ್, ಶೂಟ್, ಸ್ಮೈಲ್ ಮತ್ತು ಚೀಸ್ ಆದೇಶಗಳೊಂದಿಗೆ ಚಿತ್ರಗಳನ್ನು ನಿಮಗೆ ತೆಗೆಯಬಹುದು.

ಬಹುಚಿತ್ರ

ಒಮ್ಮೆಲೆ ಬಹುಚಿತ್ರಗಳನ್ನು ತೆಗೆಯುವುದು

ಚಲಿಸುತ್ತಿರುವ ವಸ್ತುವಿನ ಚಿತ್ರಗಳನ್ನು ನೀವು ತೆಗೆಯುತ್ತಿದ್ದೀರಿ ಎಂದಾದಲ್ಲಿ, ಆಂಡ್ರಾಯ್ಡ್ ಫೋನ್‌ನಲ್ಲಿ ಸುಲಭವಾಗಿ ನಿಮಗಿದನ್ನು ಇದನ್ನು ಮಾಡಬಹುದಾಗಿದೆ. ಕ್ಯಾಮೆರಾ ಅಪ್ಲಿಕೇಶನ್ ತೆಗೆಯಿರಿ. ಸೆಟ್ಟಿಂಗ್ಸ್ ತೆರೆಯಲು ಗೇರ್ ಐಕಾನ್ ಸ್ಪರ್ಶಿಸಿ ಮತ್ತು ಶಾಟ್ ಆನ್ ಬರ್ಸ್ಟ್ ಮಾಡಿ.

ಸ್ವಯಂಚಾಲಿತವಾಗಿ ಆಫ್ ಮಾಡಿ

ಮ್ಯೂಸಿಕ್ ಅನ್ನು ಸ್ವಯಂಚಾಲಿತವಾಗಿ ಆಫ್ ಮಾಡಿ

ಆಂಡ್ರಾಯ್ಡ್‌ನಲ್ಲಿ ಮ್ಯೂಸಿಕ್ ಪ್ಲೇಯರ್‌ಗೆ ಹೋಗಿ ಮತ್ತು ಸೆಟ್ಟಿಂಗ್ಸ್‌ಗೆ ಹೋಗಿ. ಮತ್ತು ಎಷ್ಟು ಸಮಯದವರೆಗೆ ಮ್ಯೂಸಿಕ್ ಪ್ಲೇ ಆಗಬೇಕು ಎಂಬುದನ್ನು ಹೊಂದಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
You’ve had your smartphone for a while, but let’s face it: You’ve never read the manual. You take great pride that you know how to use it, and then it happens: You see someone do something extraordinary with his or her phone that you did not know was even possible.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot