ನಿಮ್ಮ ಆಂಡ್ರಾಯ್ಡ್ ಫೋನ್‌ನ ಬಲಾಢ್ಯ ಅಂಗರಕ್ಷಕರು

By Shwetha
|

ದುಬಾರಿ ಫೋನ್ ಅನ್ನು ಖರೀದಿಸುವುದು ಮತ್ತು ಅದನ್ನು ಜೋಪಾನವಾಗಿರಿಸುವುದು ಪ್ರಯಾಸದ ಕೆಲಸವೇ ಸರಿ. ಫೋನ್‌ನ ಜೊತೆಗೆ ಅದರಲ್ಲಿರುವ ಮಾಹಿತಿಗಳೂ ಲೀಕ್ ಔಟ್ ಆಗದಂತೆ ನಾವು ಕಾಪಾಡಿಕೊಳ್ಳಬೇಕು. ಮೊಬೈಲ್ ಹ್ಯಾಕಿಂಗ್ ಎಂಬ ಮಹಾಮಾರಿ ಇಂದಿನ ಟೆಕ್ ಲೋಕಕ್ಕೆ ಅಡಿಇಟ್ಟಿದ್ದು ನಿಮ್ಮೆಲ್ಲಾ ವೈಯಕ್ತಿಕ ಮಾಹಿತಿಗಳನ್ನು ನುಂಗಿ ನೀರು ಕುಡಿಯುವಂತಹ ಛಾತಿ ಇದಕ್ಕಿದೆ.

ಓದಿರಿ: ರೂ 8000 ಕ್ಕೆ ಲಾಲಿಪಪ್ ಫೋನ್‌ಗಳ ರಸದೌತಣ

ನೀವು ಕೊಂಚ ಮುತುವರ್ಜಿಯನ್ನು ವಹಿಸಿ ನಿಮ್ಮ ವೈಯಕ್ತಿಕ ಮಾಹಿತಿಗಳಿಗೆ ದಿಗ್ಬಂಧನವನ್ನು ವಿಧಿಸಿದಲ್ಲಿ ನಿಮ್ಮೆಲ್ಲಾ ಮಾಹಿತಿಗಳು ಹೊರಹೋಗುವುದು ತಪ್ಪುತ್ತದೆ. ಬನ್ನಿ ಇಂದಿನ ಲೇಖನದಲ್ಲಿ ನಿಮ್ಮ ಆಂಡ್ರಾಯ್ಡ್ ಫೋನ್‌ನ ಜಾಗರೂಕತೆಯನ್ನು ಮಾಡುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ.

ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್

ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್

ನಿಮ್ಮ ಮೊಬೈಲ್ ಕಳೆದುಹೋದಾಗ ಇಲ್ಲವೇ ಬೇರೆಯವರ ಕೈಗೆ ಸಿಕ್ಕಿದಾಗ ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್ ಅಂಗರಕ್ಷಕನಾಗಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ಡಿವೈಸ್‌ನಲ್ಲಿ ಇದನ್ನು ಹೊಂದಿಸಲಾಗಿದೆ ಎಂಬುದನ್ನು ಖಾತ್ರಿಪಡಿಸಿ.

ಸ್ಕ್ರೀನ್ ಲಾಕ್ ಹೊಂದಿಸಿ

ಸ್ಕ್ರೀನ್ ಲಾಕ್ ಹೊಂದಿಸಿ

ಪಿನ್, ಪಾಸ್‌ವರ್ಡ್, ಅಥವಾ ಪ್ಯಾಟ್ರನ್ ಇರುವ ಸ್ಕ್ರೀನ್ ಲಾಕ್ ಅನ್ನು ಹೊಂದಿಸಿ. ಸೆಟ್ಟಿಂಗ್ಸ್ > ಸೆಕ್ಯುರಿಟಿ > ಸ್ಕ್ರೀನ್ ಲಾಕ್ ಇಲ್ಲಿ ನಿಮಗೆ ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಬಹುದಾಗಿದೆ.

ಲಾಕ್ ಸ್ಕ್ರೀನ್‌ಗೆ ನಿಮ್ಮ ಸಂಪರ್ಕ ಮಾಹಿತಿ ಸೇರಿಸುವುದು

ಲಾಕ್ ಸ್ಕ್ರೀನ್‌ಗೆ ನಿಮ್ಮ ಸಂಪರ್ಕ ಮಾಹಿತಿ ಸೇರಿಸುವುದು

ನಿಮ್ಮ ಸಂಪರ್ಕ ಮಾಹಿತಿಯನ್ನು ಲಾಕ್ ಸ್ಕ್ರೀನ್‌ನಲ್ಲಿರಿಸುವುದರಿಂದ ನಿಮ್ಮ ಕಳೆದು ಹೋದ ಡಿವೈಸ್ ಮರಳಿ ದೊರೆಯುವ ಸಂಭವ ಇರುತ್ತದೆ. ಈ ಸಂಪರ್ಕ ಮಾಹಿತಿಯನ್ನು ಅನುಸರಿಸಿ ನಿಮ್ಮ ಫೋನ್ ಲಭ್ಯವಾದವರು ನಿಮ್ಮನ್ನು ಸಂಪರ್ಕಿಸಬಹುದು. ಸೆಟ್ಟಿಂಗ್ಸ್ > ಸೆಕ್ಯುರಿಟಿ > ಓನರ್ ಇನ್‌ಫೋ ಇಲ್ಲಿ ಹೊಂದಿಸಿ.

ನಿಮ್ಮ ಫೋನ್ ಎನ್‌ಕ್ರಿಪ್ಟ್ ಮಾಡಿ

ನಿಮ್ಮ ಫೋನ್ ಎನ್‌ಕ್ರಿಪ್ಟ್ ಮಾಡಿ

ನಿಮ್ಮ ಫೋನ್ ಅನ್ನು ಎನ್‌ಕ್ರಿಪ್ಟ್ ಮಾಡುವುದು ನಿಮ್ಮ ಡಿವೈಸ್ ಕಳೆದು ಹೋದಲ್ಲಿ ಡೇಟಾವನ್ನು ಸುರಕ್ಷಿತವಾಗಿರಿಸುತ್ತದೆ. ಆಂಡ್ರಾಯ್ಡ್ ಜೆಲ್ಲಿಬೀನ್ 4.1 ಅಥವಾ ಮೇಲಿನ ಆವೃತ್ತಿಯಲ್ಲಿ ಎನ್‌ಕ್ರಿಪ್ಟ್ ನಡೆಸಬಹುದಾಗಿದೆ. ಸೆಟ್ಟಿಂಗ್ಸ್ > ಸೆಕ್ಯುರಿಟಿ > ಎನ್‌ಕ್ರಿಪ್ಟ್ ಫೋನ್.

ವಿಶ್ವಾಸಾರ್ಹ ಮೂಲಗಳಿಂದ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ

ವಿಶ್ವಾಸಾರ್ಹ ಮೂಲಗಳಿಂದ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ

ನೀವು ಡೌನ್‌ಲೋಡ್ ಮಾಡುತ್ತಿರುವುದು ವಿಶ್ವಾಸಾರ್ಹ ಮೂಲದಿಂದಲೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಈ ಸೇವೆ ಯಾವುದಾದರೂ ಫೀಸ್ ಅನ್ನು ಹೊಂದಿರಬಹುದೇ ಎಂಬುದನ್ನು ಗೊತ್ತುಪಡಿಸಿಕೊಳ್ಳಿ. ಇದು ಯಾವುದಾದರೂ ಗೌಪ್ಯ ಮಾಹಿತಿಯನ್ನು ಕೇಳುತ್ತಿದೆಯೇ ಎಂಬುದನ್ನು ಕಂಡುಕೊಳ್ಳಿ.

ಜಾಹೀರಾತುಗಳ ಬಗ್ಗೆ ಎಚ್ಚರವಿರಲಿ

ಜಾಹೀರಾತುಗಳ ಬಗ್ಗೆ ಎಚ್ಚರವಿರಲಿ

ನಿಮ್ಮ ಫೋನ್‌ನ ಪಾಸ್‌ವರ್ಡ್ ಅಥವಾ ವೈಯಕ್ತಿಕ ಮಾಹಿತಿಯನ್ನು ಕೇಳುವಂತಹ ಜಾಹೀರಾತುಗಳ ಬಗ್ಗೆ ಗಮನ ಹರಿಸಿ. ನಿಮ್ಮ ಫೋನ್‌ಗೆ ಹಾನಿಯನ್ನುಂಟು ಮಾಡುವಂತಹ ಅಪ್ಲಿಕೇಶನ್‌ಗಳನ್ನು ಈ ಜಾಹೀರಾತುಗಳು ಒಳಗೊಂಡಿರಬಹುದು ಎಂಬುದು ನಿಮ್ಮ ಗಮನದಲ್ಲಿರಲಿ.

ನಿಮ್ಮ ಡೇಟಾ ಬ್ಯಾಕಪ್ ಮಾಡಿ

ನಿಮ್ಮ ಡೇಟಾ ಬ್ಯಾಕಪ್ ಮಾಡಿ

ನಿಮ್ಮ ಫೋನ್‌ನ ಮಾಹಿತಿಯನ್ನು ಮರುಪಡೆದುಕೊಳ್ಳಲು ಡೇಟಾ ಬ್ಯಾಕಪ್ ಮಾಡುವುದು ಅನುಕೂಲ ಮಾಡಿಕೊಡುತ್ತದೆ.

Best Mobiles in India

English summary
Your Android smartphone/tablet is your very own personal haven of everything ranging from memories to sensitive data. We have compiled here some really cool tips and tricks coming straight from Google's global Android team giving you step by step instructions on how to keep your android device safe.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X