ಆಂಡ್ರಾಯ್ಡ್ ಫೋನ್‌ನ ಭದ್ರತೆಗೆ ಇಲ್ಲಿದೆ ಕೀಲಿಕೈ

By Gizbot Bureau
|

ನಿಮ್ಮ ಕೈಯಲ್ಲಿರುವ ನಿಮ್ಮ ಫೋನ್ ಬರಿಯ ನಿರ್ಜೀವ ವಸ್ತುವಲ್ಲ. ನಿಮ್ಮ ಉತ್ತಮ ಸ್ನೇಹಿ ನಿಮ್ಮ ಮನದಾಳದ ಮಾತುಗಳನ್ನು ಹೊರಹಾಕುವ ದಿವ್ಯ ಪೆಟ್ಟಿಗೆ. ನಿಮಗೆ ಬೇಸರವಾದಾಗ ಹಾಡು ಆಲಿಸುವುದರಿಂದ ಹಿಡಿದು ಅತ್ಯಮೂಲ್ಯ ಕ್ಷಣಗಳನ್ನು ಸೆರೆಹಿಡಿಯಲು ನೆರವಾಗುವ ಮಾಯಾ ಪೆಟ್ಟಿಗೆ, ಸಂದೇಶ ರವಾನೆ ಮಾಡುವ ಮೇಘದೂತ ಹೀಗೆ ಹತ್ತು ಹಲವು ಅಂಶಗಳಿಂದ ಈ ಪುಟ್ಟ ಡಿವೈಸ್ ಪ್ರಸಿದ್ಧಿಯ ತುತ್ತತುದಿಗೇರಿದೆ.

ಓದಿರಿ: ನಿಮ್ಮ ಫೋನ್ ಬ್ಯಾಟರಿ ದೀರ್ಘತೆಗಾಗಿ ಹೊಸ ವಿಧಾನ

ಆದರೆ ಈ ದಿವ್ಯ ಆಯುಧವನ್ನು ನೀವು ಬಳಸಿಕೊಂಡಷ್ಟೇ ಅದನ್ನು ಸಂರಕ್ಷಿಸುವುದೂ ಕರ್ತವ್ಯವಾಗಿದೆ. ಇಂದಿನ ಲೇಖನದಲ್ಲಿ ನಿಮ್ಮ ಫೋನ್‌ನ ಸಂರಕ್ಷಣೆಗಾಗಿ ನೀವು ಅನುಸರಿಸಲೇಬೇಕಾದ ಕ್ರಮಗಳನ್ನು ನೀಡುತ್ತಿದ್ದು ಇದನ್ನು ನೀವು ಪಾಲಿಸಲೇಬೇಕು.

ಪಾಸ್‌ವರ್ಡ್ ಭದ್ರತೆ

ಪಾಸ್‌ವರ್ಡ್ ಭದ್ರತೆ

ನಿಮ್ಮ ಫೋನ್‌ಗೆ ಪಿನ್, ಪ್ಯಾಟ್ರನ್ ಅಥವಾ ಪಾಸ್‌ವರ್ಡ್ ಸ್ವರೂಪದಲ್ಲಿ ಭದ್ರತೆಯನ್ನು ಅಳವಡಿಸಲು ಮರೆಯದಿರಿ.

2 ಹಂತದ ಪರಿಶೀಲನೆ

2 ಹಂತದ ಪರಿಶೀಲನೆ

ನಿಮ್ಮ ಫೋನ್‌ನ ಜೊತೆಗೆ ಗೂಗಲ್ ಖಾತೆಯನ್ನು ಸುಭದ್ರವಾಗಿರಿಸುವುದೂ ಮುಖ್ಯವಾಗಿದೆ. ನಿಮ್ಮ ಗೂಗಲ್ ಖಾತೆಯಲ್ಲಿ 2 ಹಂತದ ಪರಿಶೀಲನೆಯನ್ನು ಸಕ್ರಿಯಗೊಳಿಸಿ

ಡಿವೈಸ್ ಮ್ಯಾನೇಜರ್

ಡಿವೈಸ್ ಮ್ಯಾನೇಜರ್

ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಡಿವೈಸ್ ಮ್ಯಾನೇಜರ್ ಅನ್ನು ಸಕ್ರಿಯಗೊಳಿಸಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಈ ಅಪ್ಲಿಕೇಶನ್ ಬಳಸಿ ನಿಮ್ಮ ಕಳೆದು ಹೋದ ಆಂಡ್ರಾಯ್ಡ್ ಫೋನ್ ಅನ್ನು ಹುಡುಕಿಕೊಳ್ಳಬಹುದಾಗಿದೆ.

ವಿಶ್ವಾಸಾರ್ಹ ಮೂಲ

ವಿಶ್ವಾಸಾರ್ಹ ಮೂಲ

ವಿಶ್ವಾಸಾರ್ಹವಲ್ಲದ ಮೂಲದಿಂದ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವಾಗ ಆದಷ್ಟು ಜಾಗ್ರತೆ ವಹಿಸಿ. ಅಧಿಕೃತ ವೆಬ್‌ಸೈಟ್‌ನಿಂದ ಆಂಡ್ರಾಯ್ಡ್ ಅಪ್ಲಿಕೇಶನ್‌ ಡೌನ್‌ಲೋಡ್ ಮಾಡಿ.

ಡೀಫಾಲ್ಟ್ ವೆಬ್ ಬ್ರೌಸರ್

ಡೀಫಾಲ್ಟ್ ವೆಬ್ ಬ್ರೌಸರ್

ಡೀಫಾಲ್ಟ್ ಆಂಡ್ರಾಯ್ಡ್ ವೆಬ್ ಬ್ರೌಸರ್ ಬಗ್ಸ್ ಮತ್ತು ಭದ್ರತಾ ಕೊರತೆಗಳಿಂದ ಬಂದಿರುತ್ತದೆ. ಆದ್ದರಿಂದ ಕ್ರೋಮ್‌ನ ಅತ್ಯಾಧುನಿಕ ಆವೃತ್ತಿಯನ್ನು ಡೌನ್‌ಲೋಡ್ ಮಾಡಿ ಹಾಗೂ ಅದನ್ನು ಬಳಸಿ.

ಅಪಾಯ

ಅಪಾಯ

ಅಜ್ಞಾತ ವೈಫೈ ನೆಟ್‌ವರ್ಕ್‌ನೊಂದಿಗೆ ಸಂಪರ್ಕ ಹೊಂದಿದಾಗ ನಿಮ್ಮ ಫೋನ್ ಅಪಾಯಕ್ಕೆ ಸಿಲುಕುವುದು ಖಂಡಿತ. ಆದ್ದರಿಂದ ಈ ವಿಷಯದಲ್ಲಿ ಜಾಗ್ರತೆ ವಹಿಸಿ.

ಅಪ್‌ಡೇಟ್

ಅಪ್‌ಡೇಟ್

ನಿಮ್ಮ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ನಿಯಮಿತವಾಗಿ ಅಪ್‌ಡೇಟ್ ಮಾಡಿಕೊಳ್ಳಿ. ನಿಮ್ಮ ಮೊಬೈಲ್ ಓಎಸ್ ಅಪ್‌ಡೇಟ್ ಆದಂತೆ ನಿಮ್ಮ ಫೋನ್ ಅನ್ನು ಅಪ್‌ಡೇಟ್ ಮಾಡಿ.

ಅನಧಿಕೃತ ತೊಂದರೆ

ಅನಧಿಕೃತ ತೊಂದರೆ

ಅನಧಿಕೃತ ತೊಂದರೆಗಳಿಂದ ನಿಮ್ಮ ಫೋನ್ ಅನ್ನು ಅಪ್ಲಿಕೇಶನ್ ಲಾಕ್ ಉಳಿಸುತ್ತದೆ. ಇದರೊಂದಿಗೆ ಯಾರೂ ಕೂಡ ನಿಮ್ಮ ಫೋನ್‌ನ ಸೆಟ್ಟಿಂಗ್ಸ್ ಅನ್ನು ಪ್ರವೇಶಿಸಲಾರರು.

ರೂಟ್ ಮ್ಯಾನೇಜ್‌ಮೆಂಟ್ ಅಪ್ಲಿಕೇಶನ್

ರೂಟ್ ಮ್ಯಾನೇಜ್‌ಮೆಂಟ್ ಅಪ್ಲಿಕೇಶನ್

ರೂಟೆಡ್ ಬಳಕೆದಾರರಿಗೆ, ಉತ್ತಮ ರೂಟ್ ಮ್ಯಾನೇಜ್‌ಮೆಂಟ್ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಿ. ಯಾವುದೇ ಚೈನೀಸ್ ಭಾಷೆ ಅಥವಾ ವಿಶ್ವಾಸಾರ್ಹವಲ್ಲದ ಪಬ್ಲಿಶರ್ ಪ್ರೊಗ್ರಾಮ್‌ನಿಂದ ನಿಮ್ಮ ಫೋನ್ ಅನ್ನು ರೂಟ್ ಮಾಡಬೇಡಿ.

ಆಂಟಿವೈರಸ್ ಅಪ್ಲಿಕೇಶನ್

ಆಂಟಿವೈರಸ್ ಅಪ್ಲಿಕೇಶನ್

ನಿಮ್ಮ ಫೋನ್‌ನಲ್ಲಿ ಎಷ್ಟು ಭದ್ರತಾ ಹಂತಗಳನ್ನು ನೀವು ಸೇರಿಸುತ್ತೀರಿ ಎಂಬುದು ಮುಖ್ಯವಲ್ಲ. ಉತ್ತಮ ಆಂಟಿವೈರಸ್ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ. ಇದು ದೋಷಪೂರಿತ ಅಪ್ಲಿಕೇಶನ್‌ಗಳನ್ನು ಫೋನ್‌ನಿಂದ ನಿವಾರಿಸುತ್ತದೆ.

Best Mobiles in India

English summary
In this article we are giving some important tips on security tips it should be followed by every android users. These tips are considered as very easy to follow and one of the best tips as well.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X