ಡಿಸ್‌ಪ್ಲೇ ಪ್ರಖರತೆ ಕಡಿಮೆ ಇದ್ದಷ್ಟು ಬ್ಯಾಟರಿ ಬಾಳಿಕೆ ಹೆಚ್ಚಂತೆ!

By Shwetha
|

ಆಪಲ್, ಬ್ಲ್ಯಾಕ್‌ಬೆರ್ರಿ, ಸ್ಯಾಮ್‌ಸಂಗ್ ಮತ್ತು ಇತರ ಜಾಗತಿಕ ಬ್ರ್ಯಾಂಡ್‌ಗಳು ಸ್ಮಾರ್ಟ್‌ಫೋನ್ ಆಧಾರಿತ ಶಕ್ತಿಯುತ ಮೊಬೈಲ್ ಆಪರೇಟರ್ ಸಿಸ್ಟಮ್‌ಗಳ ಮೂಲಕ ಬಂದಿದ್ದು ಗೂಗಲ್‌ನ ಆಂಡ್ರಾಯ್ಡ್, ನೋಕಿಯಾದ ಸಿಂಬಿಯನ್, ಆಪಲ್‌ನ ಐಓಎಸ್ ಮುಂತಾದುವು ಇವುಗಳು ಬಳಕೆದಾರರಿಗೆ ಗೇಮ್ಸ್ ಆಡಲು, ಎಮ್‌ಪಿ 3 ಹಾಡು ಆಲಿಸಲು, ಚಿತ್ರಗಳನ್ನು ತೆಗೆಯಲು ಅನುಮತಿಯನ್ನು ನೀಡುತ್ತವೆ.

ಆದರೆ ಇಷ್ಟೆಲ್ಲಾ ವ್ಯವಸ್ಥೆಗಳನ್ನು ನಿಮ್ಮ ಫೋನ್‌ನಲ್ಲಿ ಹೊಂದಿದ್ದರೂ ಬ್ಯಾಟರಿ ಸಮಸ್ಯೆ ಎಂದೂ ತೀರದ ಅಭಾವವಾಗಿ ಪರಿಣಮಿಸಿದೆ. ಫೋನ್ ತಯಾರಕರು, ಬಳಸುವ ಬಳಕೆದಾರರಿಗೆ ಬ್ಯಾಟರಿ ಸಮಸ್ಯೆ ತೀರದ ತಲೆನೋವಾಗಿದೆ. ಆದರೆ ಇಂದಿನ ಲೇಖನದಲ್ಲಿ ನಿಮ್ಮ ಈ ಸಮಸ್ಯೆಗೆ ನೀವು ಪರಿಹಾರ ಕಂಡುಕೊಳ್ಳುವ ವಿಧಾನಗಳೊಂದಿಗೆ ನಾವು ಬಂದಿದ್ದು ಇದು ಹೆಚ್ಚು ಫಲಪ್ರದವಾಗಿದೆ.

ವೈಬ್ರೇಶನ್ ಆಫ್ ಮಾಡಿ

ವೈಬ್ರೇಶನ್ ಆಫ್ ಮಾಡಿ

ನಿಮಗೆ ಬರುವ ಕರೆ ಇಲ್ಲವೇ ಸಂದೇಶಗಳನ್ನು ತಿಳಿಸಲು ಫೋನ್ ವೈಬ್ರೇಶನ್ ತೀರಾ ಅಗತ್ಯವಾಗಿದೆ. ಆದರೆ ಈ ವೈಬ್ರೇಶನ್ ನಿಮ್ಮ ಫೋನ್ ಬ್ಯಾಟರಿಯನ್ನು ತಿಂದುಹಾಕುವಲ್ಲಿ ಪ್ರಮುಖ ಕಾರಣವಾಗಿದೆ.

ಸ್ಕ್ರೀನ್ ಡಿಮ್ ಮಾಡುವುದು

ಸ್ಕ್ರೀನ್ ಡಿಮ್ ಮಾಡುವುದು

ನಿಮ್ಮ ಫೋನ್ ಸ್ಕ್ರೀನ್ ಅನ್ನು ಆದಷ್ಟು ಕಡಿಮೆ ಇರಿಸುವುದು ಬ್ಯಾಟರಿ ನಷ್ಟವಾಗುವುದನ್ನು ತಡೆಯುತ್ತದೆ. ನಿಮಗೆ ಅಗತ್ಯ ಎಂದೆನಿಸುವ ಸಂದರ್ಭದಲ್ಲಿ ಮಾತ್ರವೇ ಫೋನ್ ಪರದೆಯನ್ನು ಗಾಢವಾಗಿರಿಸಿ.

ಸ್ಕ್ರೀನ್ ಟೈಮ್ ಔಟ್ ಕಡಿಮೆ ಇರಲಿ

ಸ್ಕ್ರೀನ್ ಟೈಮ್ ಔಟ್ ಕಡಿಮೆ ಇರಲಿ

ಇನ್ನು ಸ್ಕ್ರೀನ್ ಟೈಮ್ ಔಟ್ ಅನ್ನು ಆದಷ್ಟು ಕಡಿಮೆ ಮಾಡಿ. ಫೋನ್ ಲಾಕ್ ಆಗುವ ಸಮಯ ಆದಷ್ಟು ನಿರ್ದಿಷ್ಟವಾಗಿರಲಿ.

ಬಳಕೆಯಲ್ಲಿಲ್ಲದಾಗ ಸ್ವಿಚ್ ಆಫ್ ಮಾಡಿ

ಬಳಕೆಯಲ್ಲಿಲ್ಲದಾಗ ಸ್ವಿಚ್ ಆಫ್ ಮಾಡಿ

ನೀವು ಬಳಸುವುದಿಲ್ಲ ಎಂಬಂತಹ ಸಂದರ್ಭದಲ್ಲಿ ಫೋನ್ ಅನ್ನು ಸ್ವಿಚ್ ಆಫ್ ಮಾಡಿ. ನೀವು ಮೀಟಿಂಗ್ ಇಲ್ಲವೇ ನಿದ್ರೆ ಮಾಡುತ್ತಿರುವಾಗ ಫೋನ್ ಆಫ್ ಮಾಡಿ.

ಸರಿಯಾಗಿ ಬ್ಯಾಟರಿ ಚಾರ್ಜ್ ಮಾಡಿ

ಸರಿಯಾಗಿ ಬ್ಯಾಟರಿ ಚಾರ್ಜ್ ಮಾಡಿ

ನಿಮ್ಮ ಫೋನ್ ಬ್ಯಾಟರಿಯನ್ನು ಸರಿಯಾದ ಸಮಯಕ್ಕೆ ಚಾರ್ಜ್ ಮಾಡಿ. ಒಮ್ಮೆ ಚಾರ್ಜ್‌ಗೆ ಇರಿಸಿದ ನಂತರ ಪೂರ್ಣವಾಗಿ ಚಾರ್ಜ್ ಆಗುವವರೆಗೆ ಕಾಯಿರಿ. ಆಗಾಗ್ಗೆ ಚಾರ್ಜ್ ಮಾಡದಿರಿ.

ಅನಗತ್ಯ ಅಪ್ಲಿಕೇಶನ್ ಬೇಡ

ಅನಗತ್ಯ ಅಪ್ಲಿಕೇಶನ್ ಬೇಡ

ನಿಮ್ಮ ಫೋನ್‌ನಲ್ಲಿರುವ ಕೆಲವೊಂದು ಅಪ್ಲಿಕೇಶನ್‌ಗಳು ಹೆಚ್ಚು ಬ್ಯಾಟರಿಯನ್ನು ಬಳಸಿಕೊಳ್ಳುತ್ತಿರುತ್ತವೆ. ಇವುಗಳ ಅವಶ್ಯಕತೆ ನಿಮಗೆ ಇರುವುದಿಲ್ಲ ಆದರೂ ಇವುಗಳು ನಿಮ್ಮ ಫೋನ್‌ನಲ್ಲಿದ್ದು ಬ್ಯಾಟರಿಯನ್ನು ಬಳಸುತ್ತಿರುತ್ತವೆ. ಇವುಗಳನ್ನು ಫೋನ್‌ನಿಂದ ನಿವಾರಿಸಿ.

ಜಿಪಿಎಸ್ ನಿಷ್ಕ್ರಿಯಗೊಳಿಸಿ

ಜಿಪಿಎಸ್ ನಿಷ್ಕ್ರಿಯಗೊಳಿಸಿ

ಕೆಲವೊಂದು ಅಪ್ಲಿಕೇಶನ್‌ಗಳು ಜಿಪಿಎಸ್ ಅನ್ನು ಬಳಸಿ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ ಅಗತ್ಯ ಎಂದೆನಿಸಿದಲ್ಲಿ ಮಾತ್ರವೇ ಜಿಪಿಎಸ್ ಆನ್ ಮಾಡಿ.

ಬ್ಲ್ಯೂಟೂತ್, ವೈಫೈ, 3ಜಿ ಆಫ್ ಮಾಡಿ

ಬ್ಲ್ಯೂಟೂತ್, ವೈಫೈ, 3ಜಿ ಆಫ್ ಮಾಡಿ

ನಿಮಗೆ ಅಗತ್ಯ ಎಂದೆನಿಸಿದ ಸಂದರ್ಭದಲ್ಲಿ ಮಾತ್ರವೇ ಈ ಮೇಲ್ಕಾಣಿಸಿದ ವ್ಯವಸ್ಥೆಗಳನ್ನು ಆನ್ ಮಾಡಿಟ್ಟುಕೊಳ್ಳಿ. ನೀವು ಅರಿಯದಂತೆ ಇವುಗಳನ್ನು ಆನ್ ಮಾಡಿಟ್ಟುಕೊಂಡಿರುವುದು ನಿಮ್ಮ ಫೋನ್ ಬ್ಯಾಟರಿಯನ್ನು ಹೆಚ್ಚು ಪ್ರಮಾಣದಲ್ಲಿ ಮುಗಿಸಬಹುದು.

ಅಧಿಸೂಚನೆಗಳನ್ನು ಕನಿಷ್ಟಗೊಳಿಸಿ

ಅಧಿಸೂಚನೆಗಳನ್ನು ಕನಿಷ್ಟಗೊಳಿಸಿ

ಇಂಟರ್ನೆಟ್‌ನ ಹೆಚ್ಚು ಬಳಕೆಯಿಂದಾಗಿ ಅಧಿಸೂಚನೆಗಳು ಆಗಾಗ್ಗೆ ಬರುತ್ತಿರುತ್ತವೆ. ಫೇಸ್‌ಬುಕ್, ವಾಟ್ಸಾಪ್, ಜಿಮೇಲ್‌ನಲ್ಲಿ ಬರುವ ಈ ಅಧಿಸೂಚನೆಗಳನ್ನು ಆದಷ್ಟು ಕನಿಷ್ಟವಾಗಿಸಿಕೊಳ್ಳಿ. ಈ ಅಧಿಸೂಚನೆಗಳು ಫೋನ್ ಬ್ಯಾಟರಿಯನ್ನು ಅಧಿಕ ಪ್ರಮಾಣದಲ್ಲಿ ಬಳಸಿಕೊಳ್ಳುತ್ತವೆ.

ತಾಪಮಾನ

ತಾಪಮಾನ

ಫೋನ್ ಬೆಚ್ಚಗಿರುವ ಸಂದರ್ಭದಲ್ಲಿ ಬ್ಯಾಟರಿ ಪ್ರಖರವಾಗಿ ಕಾರ್ಯನಿರ್ವಹಿಸುತ್ತದೆ. ಸೂರ್ಯನ ಬೆಳಕಿಗೆ ಅಥವಾ ಯಾವುದೇ ಬಿಸಿಯಾಗಿರುವ ಸ್ಥಳದಲ್ಲಿ ಫೋನ್ ಬಳಕೆ ಮಾಡದಿರಿ.

Best Mobiles in India

English summary
Here are 10 essential tips how you can conserve your smartphone’s battery.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X