ಸ್ಮಾರ್ಟ್‌ಫೋನ್ ಬ್ಯಾಟರಿ ಸಮಸ್ಯೆಗೆ 10 ಪರಿಹಾರಗಳು

Written By:

ನಿಮ್ಮ ಸ್ಮಾರ್ಟ್‌ಫೋನ್ ಎಷ್ಟೇ ಬ್ರ್ಯಾಂಡೆಡ್ ಆಗಿದ್ದರೂ ಬ್ಯಾಟರಿ ಸಮಸ್ಯೆಯನ್ನು ಎದುರಿಸುತ್ತಿದೆ ಎಂದಾದಲ್ಲಿ ಅದಕ್ಕೆ ಅದು ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂಬುದಾಗಿ ನಾವು ಕೂಡಲೇ ಪತ್ತೆಹಚ್ಚಬಹುದಾಗಿದೆ. ನಿಮ್ಮ ಫೋನ್ ಬ್ಯಾಟರಿ ಸಮಸ್ಯೆಯನ್ನು ತೀವ್ರವಾಗಿ ಎದುರಿಸುತ್ತಿದೆ ಎಂದಾದಲ್ಲಿ ಕೆಲವೊಂದು ವಿಷಯಗಳಲ್ಲಿ ಅದು ಬ್ಯಾಟರಿಯನ್ನು ನುಂಗಿ ಹಾಕುತ್ತಿದೆ ಎಂಬುದು ಖಂಡಿತ. ಹಾಗಿದ್ದರೆ ಫೋನ್‌ನ ಬ್ಯಾಟರಿ ತಿಂದುಹಾಗುವ ಆ ಸಮಸ್ಯೆಗಳೇನು ಎಂಬುದನ್ನು ಇಲ್ಲಿ ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬ್ಯಾಟರಿ ಮುಗಿಸುವ ಹರಸಾಹಸ

ಬ್ಯಾಟರಿ ಮುಗಿಸುವ ಹರಸಾಹಸ

ವೈಬ್ರೇಶನ್ ಆಫ್ ಮಾಡಿ

ನಿಮ್ಮ ಫೋನ್‌ಗೆ ಬರುತ್ತಿರುವ ಸಂದೇಶಗಳು ಮತ್ತು ಕರೆಗಳ ಬಗ್ಗೆ ವಿವರವನ್ನು ನೀಡುವ ವೈಬ್ರೇಶನ್ ಕೂಡ ಬ್ಯಾಟರಿ ಮುಗಿಸುವ ಹರಸಾಹಸವನ್ನು ಮಾಡುತ್ತದೆ. ಆದಷ್ಟು ವೈಬ್ರೇಶನ್ ಅನ್ನು ಬಳಸದೇ ಫೋನ್ ಅನ್ನು ಸೈಲೆಂಟ್ ಮೋಡ್‌ನಲ್ಲಿರಿಸಿ.

ಬ್ಯಾಟರಿ ಉಳಿಸುವ ಟಿಪ್

ಬ್ಯಾಟರಿ ಉಳಿಸುವ ಟಿಪ್

ಸ್ಕ್ರೀನ್ ಡಿಮ್ ಮಾಡಿ

ಬ್ಯಾಟರಿ ಉಳಿಸುವ ಈ ಟಿಪ್ ಅನ್ನು ನೀವು ಯಾವಾಗಲೂ ಅನ್ವಯಿಸಿಕೊಳ್ಳಬಹುದು. ಸ್ಕ್ರೀನ್ ಡಿಮ್ ಮಾಡುವುದು ಸ್ಮಾರ್ಟ್‌ಫೋನ್ ಬ್ಯಾಟರಿ ಮುಗಿಸುವಿಕೆಯನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಲಿದೆ.

ಕಡಿಮೆ ಸಮಯ

ಕಡಿಮೆ ಸಮಯ

ಸ್ಕ್ರೀನ್ ಟೈಮ್ ಔಟ್ ಸಮಯ

ಸ್ಕ್ರೀನ್ ಟೈಮ್ ಔಟ್ ಅನ್ನು ಆದಷ್ಟು ಕಡಿಮೆ ಸಮಯದಲ್ಲಿರಿಸಿ. ಫೋನ್ ಸ್ಕ್ರೀನ್ ಎಷ್ಟು ಸಮಯದಲ್ಲಿ ಆನ್ ಆಗಬೇಕು ಎಂಬುದನ್ನು ನಿರ್ಧರಿಸಿಕೊಳ್ಳಿ.

ಫೋನ್ ಬ್ಯಾಟರಿ ಉಳಿಸಿ

ಫೋನ್ ಬ್ಯಾಟರಿ ಉಳಿಸಿ

ಸ್ವಿಚ್ ಆಫ್ ಮಾಡುವುದು

ನೀವು ಫೋನ್ ಅನ್ನು ಬಳಸದೇ ಇರುವ ಸಂದರ್ಭದಲ್ಲಿ ಅದನ್ನು ಸ್ವಿಚ್ ಆಫ್ ಮಾಡುವುದು ಉತ್ತಮವಾಗಿರುತ್ತದೆ. ಇದರಿಂದ ಕೂಡ ಫೋನ್ ಬ್ಯಾಟರಿಯನ್ನು ನಿಮಗೆ ಉಳಿಸಿಕೊಳ್ಳಬಹುದಾಗಿದೆ.

ನಿಖರ ಚಾರ್ಜ್

ನಿಖರ ಚಾರ್ಜ್

ಬ್ಯಾಟರಿಯನ್ನು ಸರಿಯಾಗಿ ಚಾರ್ಜ್ ಮಾಡಿ

ಫೋನ್ ಬ್ಯಾಟರಿಯನ್ನು ಆದಷ್ಟು ನಿಖರವಾಗಿ ಚಾರ್ಜ್ ಮಾಡಿಟ್ಟುಕೊಳ್ಳಿ. ಅರ್ಧಕರ್ಧ ಚಾರ್ಜ್ ಮಾಡುವುದರಿಂದ ಫೋನ್ ಅನ್ನು 100% ಚಾರ್ಜ್ ಮಾಡಿಟ್ಟುಕೊಳ್ಳುವುದು ಉತ್ತಮವಾಗಿರುತ್ತದೆ.

ಉತ್ತಮ

ಉತ್ತಮ

ಅನಗತ್ಯ ಅಪ್ಲಿಕೇಶನ್‌ಗಳನ್ನು ಮುಚ್ಚಿರಿ

ಕೆಲವೊಂದು ಅಪ್ಲಿಕೇಶನ್‌ಗಳು ಹೆಚ್ಚುವರಿ ಬ್ಯಾಟರಿಯನ್ನು ಖಾಲಿ ಮಾಡುವುದರಿಂದ ಆದಷ್ಟು ಅನಗತ್ಯ ಅಪ್ಲಿಕೇಶನ್‌ಗಳನ್ನು ಮುಚ್ಚುವುದು ಉತ್ತಮವಾಗಿರುತ್ತದೆ.

ಹೆಚ್ಚುವರಿ ಬ್ಯಾಟರಿ

ಹೆಚ್ಚುವರಿ ಬ್ಯಾಟರಿ

ಜಿಪಿಎಸ್ ನಿಷ್ಕ್ರಿಯಗೊಳಿಸಿ

ಕೆಲವೊಂದು ಅಪ್ಲಿಕೇಶನ್‌ಗಳು ಹೆಚ್ಚುವರಿ ಬ್ಯಾಟರಿಯನ್ನು ಮುಗಿಸುವುದರಿಂದ ಅದರಲ್ಲೂ ಜಿಪಿಎಸ್ ಅಪ್ಲಿಕೇಶನ್‌ಗಳು ಹೆಚ್ಚು ಪ್ರಮಾಣದ ಬ್ಯಾಟರಿಯನ್ನು ಬಳಸುತ್ತವೆ. ಆದ್ದರಿಂದ ಇದನ್ನು ಆಫ್ ಮಾಡಿಟ್ಟುಕೊಳ್ಳಿ.

ಬಳಕೆ ಕಡಿಮೆ ಮಾಡಿ

ಬಳಕೆ ಕಡಿಮೆ ಮಾಡಿ

ವೈಫೈ, ಬ್ಲ್ಯೂಟೂತ್, 3ಜಿ ಬಳಕೆ ಕಡಿಮೆ ಮಾಡಿ

ವೈಫೈ, ಬ್ಲ್ಯೂಟೂತ್ ಮತ್ತು 3ಜಿ ಬಳಕೆಯನ್ನು ನೀವು ಮಾಡಿದಂತೆಲ್ಲಾ ಅದು ಬಳಸುವ ಬ್ಯಾಟರಿ ಶಕ್ತಿ ಕೂಡ ಹೆಚ್ಚಾಗಿರುತ್ತದೆ. ನಿಮಗೆ ಬೇಡ ಎಂಬ ಸಂದರ್ಭದಲ್ಲಿ ಆದಷ್ಟು ಇವುಗಳ ಬಳಕೆಯನ್ನು ಕಡಿಮೆ ಮಾಡಿ ಇಲ್ಲವೇ ಆಫ್ ಮಾಡಿಟ್ಟುಕೊಳ್ಳಿ.

ಫೋನ್ ಬ್ಯಾಟರಿ

ಫೋನ್ ಬ್ಯಾಟರಿ

ಅಧಿಸೂಚನೆಗಳನ್ನು ಕನಿಷ್ಟಗೊಳಿಸಿ

ಇಂಟರ್ನೆಟ್‌ನೊಂದಿಗೆ ನೀವು ಹೆಚ್ಚು ಸಂಪರ್ಕದಲ್ಲಿರುವಷ್ಟೂ ಹೊತ್ತು ಅಧಿಸೂಚನೆಗಳು ಬರುತ್ತಲೇ ಇರುತ್ತದೆ. ಆದ್ದರಿಂದ ಈ ಅಧಿಸೂಚನೆಗಳನ್ನು ಆಫ್ ಮಾಡಿಟ್ಟುಕೊಳ್ಳಿ. ಇದರಿಂದ ಕೂಡ ಫೋನ್ ಬ್ಯಾಟರಿಯನ್ನು ಉಳಿಸಿಕೊಳ್ಳಬಹುದಾಗಿದೆ.

ಬ್ಯಾಟರಿ ಮಟ್ಟ ದ್ವಿಗುಣ

ಬ್ಯಾಟರಿ ಮಟ್ಟ ದ್ವಿಗುಣ

ತಂಪಿನ ಹವಾಮಾನ

ಫೋನ್ ಬೆಚ್ಚಗಿದ್ದಷ್ಟೂ ಅದು ಬಳಸುವ ಬ್ಯಾಟರಿ ಮಟ್ಟ ದ್ವಿಗುಣವಾಗಿರುತ್ತದೆ. ಆದ್ದರಿಂದ ಆದಷ್ಟು ಫೋನ್ ನೇರವಾಗಿ ಸೂರ್ಯನ ಬೆಳಕಿನಲ್ಲಿ ಇರಿಸಬೇಡಿ ಇಲ್ಲವೇ ಬಿಸಿಯಾಗಿರುವ ಸ್ಥಳದಲ್ಲಿ ಇರಗೊಡಬೇಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here are 10 essential tips how you can conserve your smartphone’s battery.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot