ನೀವು ತಿಳಿದಿರಲೇಬೇಕು ಈ 13 ಗೂಗಲ್ ಮ್ಯಾಪ್ಸ್‌ ಟ್ರಿಕ್ಸ್‌..!

By GizBot Bureau
|

ಒಂದಾನೊಂದು ಕಾಲದಲ್ಲಿ ಅಡ್ರೆಸ್ ಹುಡುಕಾಡುವುದು ಎಷ್ಟು ಕಷ್ಟದ ಕೆಲಸವಾಗಿತ್ತು. ಆದರೆ ಈಗ ಖಂಡಿತ ಸಮಸ್ಯೆ ಇಲ್ಲ. ಮೊದಲೆಲ್ಲ ಭಾಷೆ ಬರದ ಜಾಗದಲ್ಲಿ ಸಂಚರಿಸುವುದು ಎಂದರೆ ಅದು ಬ್ರಹ್ಮವಿದ್ಯೆ ಎಂಬಂತೆ ಭಾಸವಾಗುತ್ತಿತ್ತು. ಆದರೆ ಈಗ ಗೂಗಲ್ ಮ್ಯಾಪ್ ಎಲ್ಲವನ್ನೂ ಸರಾಗ ಗೊಳಿಸಿದೆ. ಯಾವ ಜಾಗಕ್ಕೆ ಬೇಕಾದರೂ ಸುಲಭದಲ್ಲಿ ತಲುಪಬಹುದಾದ ಅವಕಾಶವನ್ನು ಜನಸಾಮಾನ್ಯರಿಗೆ ಕಲ್ಪಿಸಿದ ಕೀರ್ತಿ ಗೂಗಲ್ ಮ್ಯಾಪ್ ಗೆ ಸೇರಬೇಕು.

ನೀವು ತಿಳಿದಿರಲೇಬೇಕು ಈ 13 ಗೂಗಲ್ ಮ್ಯಾಪ್ಸ್‌ ಟ್ರಿಕ್ಸ್‌..!

ಗೂಗಲ್ ಮ್ಯಾಪ್ ಮನುಷ್ಯನ ಜೀವನಶೈಲಿಯನ್ನು ಸರಾಗಗೊಳಿಸಿದೆ. ಆದರೆ ಇದರಲ್ಲಿರುವ ಕೆಲವು ಪ್ರಮುಖ ವೈಶಿಷ್ಟ್ಯತೆಗಳ ಬಗ್ಗೆ ಜನರಿಗೆ ತಿಳಿದೇ ಇಲ್ಲ. ಕೇವಲ ಅಡ್ರೆಸ್ ಹುಡುಕಾಡುವುದು ಮಾತ್ರ ಅಲ್ಲ, ಅದರ ಜೊತೆಜೊತೆಗೆ ಗೂಗಲ್ ಮ್ಯಾಪ್ ನಿಮಗೆ ಹಲವು ರೀತಿಯಲ್ಲಿ ಅನುಕೂಲವನ್ನು ಮಾಡಿಕೊಡುತ್ತದೆ. ಗೂಗಲ್ ಮ್ಯಾಪ್ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾಗಿರುವ ಪ್ರಮುಖ 13 ಅಂಶಗಳನ್ನು ನಾವಿಲ್ಲಿ ಪಟ್ಟಿ ಮಾಡಿದ್ದೇವೆ.

ನಿಮ್ಮ ಪಾರ್ಕಿಂಗ್ ಜಾಗವನ್ನು ಸೇವ್ ಮಾಡುವುದು 

ನಿಮ್ಮ ಪಾರ್ಕಿಂಗ್ ಜಾಗವನ್ನು ಸೇವ್ ಮಾಡುವುದು 

ಒಂದು ವೇಳೆ ನಿಮಗೆ ನೀವು ವೆಹಿಕಲ್ ಪಾರ್ಕ್ ಮಾಡಿದ ಜಾಗವನ್ನು ಮರೆತು ಬಿಡುವ ಅಭ್ಯಾಸವಿದ್ದಲ್ಲಿ ಖಂಡಿತ ಗೂಗಲ್ ಮ್ಯಾಪ್ ಬಳಕೆ ಮಾಡಬಹುದು. ಲೋಕೇಷನ್ ಸೆಟ್ಟಿಂಗ್ಸ್ ಆಧಾರದಲ್ಲಿ ನಿಮ್ಮ ಪಾರ್ಕಿಂಗ್ ಜಾಗವನ್ನು ಸೇವ್ ಮಾಡಿ ಇಡುವ ಸೌಲಭ್ಯ ಗೂಗಲ್ ಮ್ಯಾಪ್ ನಲ್ಲಿದೆ. ನಿಮ್ಮ ವೆಹಿಕಲ್ ಪಾರ್ಕ್ ಮಾಡಿದ ನಂತರ ನೀಲಿ ಡಾಟ್ ನ್ನು ಟ್ಯಾಪ್ ಮಾಡಿ ಸೇವ್ ಯುವರ್ ಪಾರ್ಕಿಂಗ್ ಅನ್ನೋ ಆಯ್ಕೆಯನ್ನು ಕ್ಲಿಕ್ಕಿಸಿದರೆ ನಿಮ್ಮ ಪಾರ್ಕಿಂಗ್ ಜಾಗ ಸೇವ್ ಆಗಿರುತ್ತದೆ ಮತ್ತು ಮರಳಿ ಬಂದಾಗ ನೀವುದನ್ನು ಸುಲಭದಲ್ಲಿ ಹುಡುಕಾಡಬಹುದು.

ಹಲವು ಜಾಗಗಳಿಗೆ ಡೈರೆಕ್ಷನ್ ತಿಳಿದುಕೊಳ್ಳುವುದು 

ಹಲವು ಜಾಗಗಳಿಗೆ ಡೈರೆಕ್ಷನ್ ತಿಳಿದುಕೊಳ್ಳುವುದು 

ಒಂದು ವೇಳೆ ನೀವು ನಿಮ್ಮ ಮಗುವನ್ನು ಆಫೀಸಿಗೆ ತೆರಳುವ ಮಧ್ಯದಲ್ಲೇ ಸ್ಕೂಲಿಗೆ ಡ್ರಾಪ್ ಮಾಡಿ ಹೋಗಬೇಕು ಎಂದಾದದಲ್ಲಿ ನೀವು ಒಂದೇ ಪ್ರಯಾಣದಲ್ಲಿ ಹಲವು ಜಾಗಗಳನ್ನು ಡ್ರಾಪ್ ಲೋಕೇಷನ್ ಆಗಿ ಮಾರ್ಕ್ ಮಾಡಬಹುದು. ಪ್ರವಾಸದಲ್ಲಿ ಸಂದರ್ಬದಲ್ಲೂ ಇದು ನಿಮ್ಮ ಬಳಕೆಗೆ ಬರುತ್ತದೆ.

ನಿಮ್ಮ ಸ್ವಂತ ಗೂಗಲ್ ಮ್ಯಾಪ್ ತಯಾರಿಸುವುದು 

ನಿಮ್ಮ ಸ್ವಂತ ಗೂಗಲ್ ಮ್ಯಾಪ್ ತಯಾರಿಸುವುದು 

ಇದು ನೀವು ನಮ್ಮ ಫ್ಯಾಮಿಲಿ ಅಥವಾ ಸ್ನೇಹಿತರ ಜೊತೆ ನಿಮ್ಮ ಪ್ರಯಾಣದ ವಿವರವನ್ನು ಹಂಚಿಕೊಳ್ಳುವ ಸಂದರ್ಬದಲ್ಲಿ ಬಹಳವಾಗಿ ನೆರವಿಗೆ ಬರುವ ವೈಶಿಷ್ಟ್ಯತೆಗಳಲ್ಲಿ ಒಂದಾಗಿದೆ. ನೀವು ನಿಮ್ಮ ಸ್ವಂತ ಮ್ಯಾಪ್ ನ್ನು ತಯಾರಿಸಬಹುದು ಮತ್ತು ಅದರಲ್ಲಿ ನಿಮ್ಮ ಆಸಕ್ತಿ, ಡೈರೆಕ್ಷನ್, ರೂಟ್ ಇತ್ಯಾದಿ ವಿವರಗಳನ್ನು ಸೇರಿಸಬಹುದು. ಅದಕ್ಕಾಗಿ ನೀವು ಮೈ ಮ್ಯಾಪ್ ಆಯ್ಕೆಯನ್ನು ಬಳಸಬೇಕು. ನಿಮ್ಮ ಬ್ರೌಸರ್ ಅಥವಾ ಪಿಸಿಯನ್ನು ಬಳಸಿ ಗೂಗಲ್ ಮ್ಯಾಪ್ ನ ಗೂಗಲ್ ಮೈ ಮ್ಯಾಪ್ ನ್ನು ತೆರೆಯಿರಿ ಮತ್ತು ಗೂಗಲ್ ಅಕೌಂಟ್ ಬಳಸಿ ಸೈನ್ ಇನ್ ಆಗಿ ನಿಮ್ಮ ಸ್ವಂತ ಮ್ಯಾಪ್ ಅನ್ನು ತಯಾರಿ ಮಾಡಿ.

ಡ್ರೈವ್ ಮಾಡುವಾಗ ವಾಯ್ಸ್ ಕಮಾಂಡ್ ಗಳನ್ನು ಬಳಕೆ ಮಾಡುವುದು 

ಡ್ರೈವ್ ಮಾಡುವಾಗ ವಾಯ್ಸ್ ಕಮಾಂಡ್ ಗಳನ್ನು ಬಳಕೆ ಮಾಡುವುದು 

ಗೂಗಲ್ ಮ್ಯಾಪ್ ನಲ್ಲಿ ವಾಯ್ಸ್ ಕಮಾಂಡ್ ಗಳು ಬರುತ್ತದೆ. ಒಂದು ವೇಳೆ ನೀವು ಡ್ರೈವಿಂಗ್ ಮಾಡುತ್ತಾ ಇದ್ದಾಗ ಮ್ಯಾಪ್ ಬಳಸುತ್ತಿದ್ದರೆ, ಈ ವಾಯ್ಸ್ ಕಮಾಂಡ್ ಗಳನ್ನು ಫಾಲೋ ಮಾಡುವುದನ್ನು ಮರೆಯಬೇಡಿ. ಗೂಗಲ್ ಮ್ಯಾಪ್ ನಲ್ಲಿ ವಾಯ್ಸ್ ಕಮಾಂಡ್ ಗಳ ಮೂಲಕ ನೀವು ಹಲವಾರು ಫಂಕ್ಷನಾಲಿಟಿಯನ್ನು ಸಾಧಿಸಬಹುದು.

ನಿಮ್ಮ ಇಷ್ಟದ ಜಾಗಗಳಿಗೆ ಲೇಬಲ್ ಮಾಡಿ 

ನಿಮ್ಮ ಇಷ್ಟದ ಜಾಗಗಳಿಗೆ ಲೇಬಲ್ ಮಾಡಿ 

ಕೆಲವು ಪ್ಲೇಸ್ ಗಳಿರುತ್ತದೆ ಅವುಗಳನ್ನು ನಾವು ಯಾವಾಗಲೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಬಯಸುತ್ತೇವೆ. ಉದಾಹರಣೆಗೆ ಹೋಟೆಲ್ ಗಳಿರಬಹುದು ಅಥವಾ ಯಾವುದೋ ಗಿಫ್ಟ್ ಸೆಂಟರ್ ಇರಬಹುದು ಇಲ್ಲವೇ ನಿಮ್ಮ ಸ್ನೇಹಿತರ ಮನೆ ಇರಬಹುದು. ಅಂತಹ ಜಾಗಗಗಳನ್ನು ಲೇಬಲ್ ಮಾಡಿ ಇಟ್ಟುಕೊಳ್ಳಿ. ಆಗ ಇನ್ನೊಂದು ದಿನ ಸುಲಭದಲ್ಲಿ ಆ ಜಾಗವನ್ನು ತಲುಪುವುದಕ್ಕೆ ಸಹಾಯವಾಗುತ್ತದೆ.

ಆಫ್ ಲೈನ್ ಮ್ಯಾಪ್ 

ಆಫ್ ಲೈನ್ ಮ್ಯಾಪ್ 

ಮ್ಯಾಪ್ ನಲ್ಲಿ ಡೌನ್ ಲೋಡ್ ಸೆಕ್ಷನ್ ಕೂಡ ಇದೆ. ಒಂದು ವೇಳೆ ನೀವು ಜಿಪಿಎಸ್ ಸೌಲಭ್ಯವಿಲ್ಲದ ಪ್ರದೇಶಕ್ಕೆ ತೆರಳುತ್ತಿದ್ದರೆ ಅಥವಾ ಇಂಟರ್ನೆಟ್ ಪ್ಯಾಕ್ ಖಾಲಿ ಆದ ಸಂದರ್ಬದಲ್ಲಿ ಯಾವುದೋ ಸ್ಥಳವನ್ನು ಹುಡುಕಾಡುವುದಕ್ಕೆ ಪರದಾಡಬೇಕಾಗಿಲ್ಲ. ನೀವು ಹೋಗಬೇಕಾಗಿರುವ ಜಾಗವನ್ನು ಆಫ್ ಲೈನ್ ಮ್ಯಾಪ್ ನಲ್ಲಿ ಸೇವ್ ಮಾಡಿ ಇಟ್ಟುಕೊಳ್ಳಬಹುದು. ಆಗ ಒಂದು ವೇಳೆ ಇಂಟರ್ನೆಟ್ ಸೌಲಭ್ಯವಿಲ್ಲದೆ ಇದ್ದಾಗಲೂ ಕೂಡ ಮ್ಯಾಪ್ ನಿಮಗೆ ದಾರಿತೋರುಗನಾಗಿ ಕೆಲಸ ಮಾಡುತ್ತದೆ.

ನಿಮ್ಮ ಡೀಫಾಲ್ಟ್ ವಿಳಾಸವನ್ನು ಸೆಟ್ ಮಾಡಿ 

ನಿಮ್ಮ ಡೀಫಾಲ್ಟ್ ವಿಳಾಸವನ್ನು ಸೆಟ್ ಮಾಡಿ 

ಆಫ್ ಲೈನ್ ಮ್ಯಾಪ್ ಸೆಟ್ಟಿಂಗ್ ಬಗ್ಗೆ ನಿಮಗೆ ತಿಳಿದಿದೆ. ಅದೇ ರೀತಿ ನೀವು ನಿಮ್ಮ ಮನೆಯ ವಿಳಾಸ, ಆಫೀಸಿನ ವಿಳಾಸ ಮತ್ತು ಇತರೆ ಕೆಲವು ಪ್ರಮುಖವಾದ ನಿಮ್ಮ ವಿಳಾಸವನ್ನು ಡೀಫಾಲ್ಟ್ ಆಗಿ ಸೇವ್ ಮಾಡಿ ಇಟ್ಟುಕೊಳ್ಳಿ. ಇದು ಸುಲಭದಲ್ಲಿ ವೇಗವಾಗಿ ನೇವಿಕೇಷನ್ ಆರಂಭಿಸುವುದಕ್ಕೆ ನೆರವು ನೀಡುತ್ತದೆ. ಅಷ್ಟೇ ಅಲ್ಲ, ಟ್ರಾಫಿಕ್ ನ ಅಲರ್ಟ್ ಗಳನ್ನು ನೀಡುವುದಕ್ಕೂ ಕೂಡ ಡೀಫಾಲ್ಟ್ ಅಡ್ರೆಸ್ ಸೇವ್ ಮಾಡಿ ಇಟ್ಟುಕೊಳ್ಳುವುದರಿಂದ ಸಹಾಯವಾಗಲಿದೆ.

ನಿಮ್ಮ ಲೋಕೇಷನ್ ನ್ನು ಶೇರ್ ಮಾಡಿ 

ನಿಮ್ಮ ಲೋಕೇಷನ್ ನ್ನು ಶೇರ್ ಮಾಡಿ 

ಒಂದು ವೇಳೆ ನಿಮ್ಮ ಸ್ನೇಹಿತರು ಯಾವುದೋ ಸಂದರ್ಬದಲ್ಲಿ ನಿಮ್ಮ ಸ್ಥಳವನ್ನು ಹುಡುಕಾಡುವುದಕ್ಕೆ ಕಷ್ಟ ಪಡುತ್ತಿದ್ದರೆ ನೀವು ನಿಮ್ಮ ಲೋಕೇಷನ್ ನ್ನು ಅವರೊಂದಿಗೆ ಹಂಚಿಕೊಳ್ಳಬಹುದು. ಲೋಕೇಷನ್ ಶೇರಿಂಗ್ ವೈಶಿಷ್ಟ್ಯತೆಯ ಮೂಲಕ ಈ ಕೆಲಸವನ್ನು ನೀವು ಸಾಧಿಸಬಹುದು ಮತ್ತು ಲೋಕೇಷನ್ ನ್ನು ಇಂತಿಷ್ಟು ಸಮಯದವರೆಗೆ ಹಂಚಿಕೊಳ್ಳಲು ಅಲ್ಲಿ ಸಮಯವನ್ನೂ ನಿಗದಿಗೊಳಿಸಲು ಅವಕಾಶವಿರುತ್ತದೆ. ನೀವು 1 ತಾಸಿನವರೆಗೆ ನಿಮ್ಮ ಲೋಕೇಷನ್ ನಿಮ್ಮ ಸ್ನೇಹಿತರೆ ತಿಳಿಯುವಂತೆಯೂ ಮಾಡಬಹುದು.

ಹತ್ತಿರದಲ್ಲಿರುವ ಸ್ಥಳಗಳು ಮತ್ತು ಬ್ಯುಸಿನೆಸ್ ಜಾಗಗಳು 

ಹತ್ತಿರದಲ್ಲಿರುವ ಸ್ಥಳಗಳು ಮತ್ತು ಬ್ಯುಸಿನೆಸ್ ಜಾಗಗಳು 

ನಿಮ್ಮ ಹತ್ತಿರದಲ್ಲಿರುವ ಸ್ಥಳಗಳು ಮತ್ತು ಬ್ಯುಸಿನೆಸ್ ಜಾಗಗಳನ್ನು ಗೂಗಲ್ ಮ್ಯಾಪ್ ನಲ್ಲಿ ಆಡ್ ಮಾಡಿ ಇಡುವುದನ್ನು ಮರೆಯಬೇಡಿ. ಸಡನ್ ಆಗಿ ಯಾವುದೋ ವಸ್ತು ಖರೀದಿಸಬೇಕು ಎಲ್ಲಿ ಸಿಗುತ್ತದೆ ಎಂದು ನೆನಪಿಗೆ ಬರದಿದ್ದರೆ ಆಗ ಗೂಗಲ್ ಮ್ಯಾಪ್ ನಲ್ಲಿ ಹುಡುಕಿದರೆ ಸಾಕು.ಥಟ್ ಅಂತ ನೆನಪಿಗೆ ಬರುತ್ತೆ.

ಸಿಂಗಲ್ ಹ್ಯಾಂಡೆಡ್ ಝೂಮ್ 

ಸಿಂಗಲ್ ಹ್ಯಾಂಡೆಡ್ ಝೂಮ್ 

ನೇವಿಗೇಟ್ ಮಾಡುತ್ತಾ ಇರುವಾಗ ಝೂಮ್ ಮಾಡುವುದು ಸ್ವಲ್ಪ ಕಷ್ಟದ ಕೆಲಸ.ಹಾಗಾಗಿ ಡಬಲ್ ಟ್ಯಾಪಿಂಗ್ ಮಾಡಿದರೆ ಮ್ಯಾಪ್ ಸ್ವಯಂಚಾಲಿತವಾಗಿ ಝೂಮ್ ಆಗುತ್ತದೆ. ಮತ್ತಷ್ಟು ಝೂಮ್ ಮಾಡಬೇಕು ಎಂದಾದರೆ ಇನ್ನೊಮ್ಮೆ ಡಬಲ್ ಟ್ಯಾಪಿಂಗ್ ಮಾಡಬಹುದು.

ರೈಲು ಮತ್ತು ಬಸ್ಸಿನ ಸಮಯ ನಿಗದಿ 

ರೈಲು ಮತ್ತು ಬಸ್ಸಿನ ಸಮಯ ನಿಗದಿ 

ಭಾರತದಲ್ಲಿ ಗೂಗಲ್ ಮ್ಯಾಪ್ ನಲ್ಲಿ ರೈಲು ಮತ್ತು ಬಸ್ಸಿನ ಸೇವೆಗಳ ಸಮಯವನ್ನು ನಿಮ್ಮ ಸಿಟಿಯಲ್ಲಿ ನಿಗದಿಗೊಳಿಸುವುದಕ್ಕೂ ಕೂಡ ಸಹಾಯ ಮಾಡುತ್ತದೆ. ನಿಮಗೆ ಅಗತ್ಯ ಬಿದ್ದಾಗ ಸಾರ್ವಜನಿಕ ಸೇವೆಯ ಈ ಸೌಲಭ್ಯದ ಸಮಯವನ್ನು ಹುಡುಕಾಟ ನಡೆಸಬಹುದು. ಬಸ್ಸಿನ ಸಮಯ ಅದರ ನಿಲುಗಡೆ ಜಾಗಗಳು ಮತ್ತು ಅಲ್ಲಿಗೆ ತಲುಪಲು ಬೇಕಾಗುವ ಸಮಯ ಇತ್ಯಾದಿಗಳನ್ನು ಸೇವ್ ಮಾಡಬಹುದು.

ನಿಮ್ಮ ಸ್ವಂತ ಚಲನೆಯನ್ನು ಟ್ರ್ಯಾಕ್ ಮಾಡಿ 

ನಿಮ್ಮ ಸ್ವಂತ ಚಲನೆಯನ್ನು ಟ್ರ್ಯಾಕ್ ಮಾಡಿ 

ನೀವು ಯಾವುದೋ ಜಾಗದಕ್ಕೆ ತೆರಳಿರುತ್ತೀರಿ ಮತ್ತು ಅದನ್ನು ಭವಿಷ್ಯದಲ್ಲಿ ಮುಂದೊಂದು ದಿನ ನೆನಪಿಸಿಕೊಳ್ಳಲು ಪರಿತಪಿಸಬೇಕಾಗಿಲ್ಲ. ನಿಮ್ಮ ಸ್ವಂತ ಚಲನೆಯನ್ನು ಟ್ರ್ಯಾಕ್ ಮಾಡಿಟ್ಟುಕೊಳ್ಳುವ ಸಾಮರ್ಥ್ಯ ಗೂಗಲ್ ಮ್ಯಾಪ್ ಗಿದೆ. ನೀವು ಎಲ್ಲೆಲ್ಲಿ ಸಂಚರಿಸಿದ್ದೀರಿ, ಯಾವ ಜಾಗಕ್ಕೆ ತೆರಲಿದ್ದೀರಿ ಎಂಬ ವಿವರವನ್ನು ನೀವು ಸೇವ್ ಮಾಡಿ ಇಟ್ಟುಕೊಳ್ಳಬಹುದು ಮತ್ತು ಅಗತ್ಯ ಬಿದ್ದಾಗ ಅದನ್ನು ಸರ್ಚ್ ಮಾಡಬಹುದು.

ಲೋಕಲ್ ಗೈಡ್ ಆಗುವ ಮೂಲಕ ಹಣ ಸಂಪಾದಿಸಿ 

ಲೋಕಲ್ ಗೈಡ್ ಆಗುವ ಮೂಲಕ ಹಣ ಸಂಪಾದಿಸಿ 

ಗೂಗಲ್ ನಲ್ಲಿ ರಿವಾರ್ಡ್ ಕೂಡ ಸಿಗುತ್ತದೆ. ನೀವು ಗೂಗಲ್ ಮ್ಯಾಪ್ ನಲ್ಲಿ ಸಮಯ ಕಳೆದು ಸಲಹೆ ಸೂಚನೆ ಅಂದರೆ ಅಭಿಪ್ರಾಯಗಳನ್ನು ತಿಳಿಸಿದಲ್ಲಿ ನಿಮಗೆ ಹಣವೂ ಸಿಗುತ್ತದೆ. ಅಂದರೆ ಲೋಕಲ್ ಗೈಡ್ ಆಗಿ ನೀವು ಕೆಲಸ ಮಾಡಿದರೆ ನೀನು ಮನೆಯಿಂದಲೇ ಹಣ ಸಂಪಾದನೆಯನ್ನು ಕೂಡ ಮಾಡಬಹುದು. ಅದಕ್ಕಾಗಿ ನೀವು ಗೂಗಲ್ ಮ್ಯಾಪ್ ನಲ್ಲಿ ಆಗಾಗ ಪಿಕ್ಚರ್ ಗಳನ್ನು ಹಾಕುವುದು, ರಿವ್ಯೂ ಗಳನ್ನು ಕೊಡುವುದು, ಮಾಹಿತಿಗಳನ್ನು ಹಂಚಿಕೊಳ್ಳುವುದು, ಸ್ಥಳೀಯ ವಿವರಗಳನ್ನು ನೀಡುವುದು ಇತ್ಯಾದಿ ಕೆಲಸಗಳನ್ನು ಮಾಡುತ್ತಾ ಇರಬೇಕಾಗುತ್ತದೆ.

Most Read Articles
Best Mobiles in India

English summary
13 Google Maps tricks you should know. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more