ನಿಮ್ಮ ಫೇಸ್‌ಬುಕ್ ಪುಟಕ್ಕೆ ಲೈಕ್ಸ್ ಬರುತ್ತಿಲ್ಲವೇ? ಹಾಗಾದರೆ ಹೀಗೆ ಮಾಡಿ

By Shwetha
|

42 ಮಿಲಿಯನ್ ಸಕ್ರಿಯ ಫೇಸ್‌ಬುಕ್ ಪುಟಗಳಿದ್ದು ನಿಮ್ಮ ಪುಟ ಇಲ್ಲಿ ತಲೆಯೆತ್ತಿ ನಿಲ್ಲಬೇಕೆಂಬ ಬಯಕೆ ನಿಮ್ಮದಾಗಿದ್ದಲ್ಲಿ ನಿಮ್ಮದೇ ಅಭಿಮಾನಿಗಳ ರಚನೆಯನ್ನು ನೀವು ಮಾಡುವುದು ಅತ್ಯವಶ್ಯಕವಾಗಿದೆ. ಹಾಗಿದ್ದರೆ ಹೆಚ್ಚಿನ ಫೇಸ್‌ಬುಕ್ ಫ್ಯಾನ್ ಪುಟ ಲೈಕ್ ಅನ್ನು ಪಡೆದುಕೊಳ್ಳುವುದು ಹೇಗೆ ಎಂಬುದನ್ನು ನೀವು ಆಲೋಚಿಸಲೇಬೇಕು.

ಇದನ್ನೂ ಓದಿ: ಫೇಸ್‌ಬುಕ್ ಸಂಸ್ಥೆಯ ಹೊಸ ಕಟ್ಟಡ ಹೇಗಿದೆ ಗೊತ್ತೇ?

ಇಂದಿನ ಲೇಖನದಲ್ಲಿ ಫೇಸ್‌ಬುಕ್ ಫ್ಯಾನ್ ಪುಟ ಲೈಕ್‌ಗಳನ್ನು ಪಡೆದುಕೊಳ್ಳುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ. ಕೆಲವೊಂದು ಸರಳ ವಿಧಾನಗಳನ್ನು ನಿಮ್ಮದಾಗಿಸುವುದರ ಮೂಲಕ ಫೇಸ್‌ಬುಕ್ ಪುಟದಲ್ಲಿ ಅಧಿಕ ಲೈಕ್ ಅನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.

ನಿಮ್ಮ ಇಮೇಲ್ ಸಂಪರ್ಕಗಳನ್ನು ಆಮಂತ್ರಿಸಿ

ನಿಮ್ಮ ಇಮೇಲ್ ಸಂಪರ್ಕಗಳನ್ನು ಆಮಂತ್ರಿಸಿ

ಬಿಲ್ಟ್ ಆಡಿಯನ್ಸ್ ಪರಿಕರವನ್ನು ಬಳಸಿಕೊಂಡು ಒಂದೇ ಸಮಯಕ್ಕೆ 5,000 ಆಮಂತ್ರಣಗಳನ್ನು ನಿಮ್ಮ ಇಮೇಲ್ ಸಂಪರ್ಕಗಳಿಗೆ ನಿಮಗೆ ಕಳುಹಿಸಬಹುದು.

ನಿಮ್ಮ ಅಭಿಮಾನಿಗಳಾಗಲು ನಿಮ್ಮ ಸ್ನೇಹಿತರನ್ನು ಆಮಂತ್ರಿಸಿ

ನಿಮ್ಮ ಅಭಿಮಾನಿಗಳಾಗಲು ನಿಮ್ಮ ಸ್ನೇಹಿತರನ್ನು ಆಮಂತ್ರಿಸಿ

ನಿಮ್ಮ ಪುಟದ ಬಿಲ್ಡ್ ಆಡಿಯನ್ಸ್ ಟೂಲ್‌ನೊಳಗೆಯೇ ಸಜೆಸ್ಟ್ ಟು ಫ್ರೆಂಡ್ಸ್ ಅನ್ನು ಬಳಸಿಕೊಂಡು ನಿಮ್ಮ ಪುಟಕ್ಕೆ ನಿಮ್ಮ ಸ್ನೇಹಿತರನ್ನು ಆಮಂತ್ರಿಸಬಹುದಾಗಿದೆ.

ಫ್ಯಾನ್ಸ್‌ಗಳಿಗೆ ಅದ್ಭುತ ಸುದ್ದಿ ಒದಗಿಸಿ

ಫ್ಯಾನ್ಸ್‌ಗಳಿಗೆ ಅದ್ಭುತ ಸುದ್ದಿ ಒದಗಿಸಿ

ನಿಮ್ಮ ಫ್ಯಾನ್‌ (ಅಭಿಮಾನಿಗಳಿಗೆ) ಉತ್ತಮ ವಿಷಯ ಅಂತೆಯೇ ಬಹುಮಾನಗಳನ್ನು ನೀಡಿ ಇದು ನಿಮಗೆ ಪುಟದಲ್ಲಿ ಲೈಕ್ ಅನ್ನು ಹೆಚ್ಚಿಸಲು ಸಹಕಾರಿಯಾಗಿದೆ. ನಿಮ್ಮ ಫ್ಯಾನ್ಸ್‌ಗಳಿಗೆ ಯಾವ ರೀತಿಯ ವಿಷಯ ಮತ್ತು ಬಹುಮಾನಗಳು ಇಷ್ಟವಾಗುತ್ತವೆ ಎಂದು ಅವರಲ್ಲಿ ಕೇಳಿ.

ನಿಮ್ಮ ಪುಟಕ್ಕೆ ಲಿಂಕ್ ಮಾಡಿ

ನಿಮ್ಮ ಪುಟಕ್ಕೆ ಲಿಂಕ್ ಮಾಡಿ

ನಿಮ್ಮ ಫೇಸ್‌ಬುಕ್ ಪ್ರೊಫೈಲ್ ಪುಟ ಹೆಚ್ಚು ವೀಕ್ಷಣೀಯವಾಗಿರುವುದರಿಂದ ಇದರ ಪ್ರಯೋಜನವನ್ನು ಪಡೆದುಕೊಂಡು ನಿಮ್ಮ ಪುಟಕ್ಕೆ ಇದನ್ನು ಲಿಂಕ್ ಮಾಡಿ.

ಫ್ಯಾನ್ ಗೇಟ್

ಫ್ಯಾನ್ ಗೇಟ್

"ಲೈಕ್ ಗೇಟ್" ವಿಷಯವನ್ನು ಒಳಗೊಂಡಿರುವ "ರಿವೀಲ್ ಟ್ಯಾಬ್‌" ನೊಂದಿಗೆ ನಿಮ್ಮ ಫೇಸ್‌ಬುಕ್ ಪುಟದ ಲೈಕ್‌ಗಳನ್ನು ಹೆಚ್ಚಿಸಬಹುದಾಗಿದೆ. ನಿಮ್ಮ ಪುಟದ ಫ್ಯಾನ್ ಆದವರಿಗೆ ಮಾತ್ರ ಇದನ್ನು ನೋಡಬಹುದಾಗಿದೆ.

ಫೇಸ್‌ಬುಕ್ ಪೇಜ್ ಕ್ರಾಸ್ ಪ್ರಮೋಶನ್ ಬಳಸಿ

ಫೇಸ್‌ಬುಕ್ ಪೇಜ್ ಕ್ರಾಸ್ ಪ್ರಮೋಶನ್ ಬಳಸಿ

ಬಹು ಫೇಸ್‌ಬುಕ್ ಪೇಜ್‌ ಒಡೆತನ ನಿಮ್ಮದಾಗಿದ್ದಲ್ಲಿ ಒಂದು ಪುಟವನ್ನು ಇನ್ನೊಂದಕ್ಕೆ ಲಿಂಕ್ ಮಾಡುತ್ತಾ ಕ್ರಾಸ್ ಪ್ರಮೋಶನ್ ಅನ್ನು ಕೂಡ ಮಾಡಬಹುದಾಗಿದೆ.

ನಿಮ್ಮ ಪ್ರೇಕ್ಷಕರನ್ನು ಅರಿತುಕೊಳ್ಳಿ

ನಿಮ್ಮ ಪ್ರೇಕ್ಷಕರನ್ನು ಅರಿತುಕೊಳ್ಳಿ

ನಿಮ್ಮ ಪ್ರೇಕ್ಷಕರು ಹೇಗೆ ಎಂಬುದನ್ನು ನೀವು ಮೊದಲು ಅರಿತುಕೊಳ್ಳಬೇಕು ಇದರ ನಂತರ ವಿಷಯ ಮತ್ತು ಫಲಿತಾಂಶದತ್ತ ಮುಖ ಮಾಡಿ. ವಯಸ್ಸು ಮತ್ತು ಲಿಂಗವನ್ನು ಆಧರಿಸಿ ನಿಮ್ಮ ಪ್ರೇಕ್ಷಕರ ಮನೋಭಾವವನ್ನು ನಿಮಗೆ ಅರಿತುಕೊಳ್ಳಬಹುದಾಗಿದೆ.

ಸರಿಯಾದ ಕ್ರಮ ತೆಗೆದುಕೊಳ್ಳಿ

ಸರಿಯಾದ ಕ್ರಮ ತೆಗೆದುಕೊಳ್ಳಿ

ನೀವು ಕೆಲವೊಮ್ಮೆ ನಿಮ್ಮ ಪುಟವನ್ನು ಲೈಕ್ ಮಾಡಲು ಹೇಳಿದರೂ ಜನರು ಅದನ್ನು ತಿರಸ್ಕರಿಸುತ್ತಾರೆ. ಈ ಸಮಯದಲ್ಲಿ ಅವರಿಗೆ ನಿಮ್ಮ ಪುಟವನ್ನು ಲೈಕ್ ಮಾಡಲು ಒತ್ತಿ ಹೇಳಿ.

ಪಠ್ಯ ಸಂದೇಶಗಳ ಮೂಲಕ ನಿಮ್ಮ ಪುಟವನ್ನು ಸೇರುವುದು

ಪಠ್ಯ ಸಂದೇಶಗಳ ಮೂಲಕ ನಿಮ್ಮ ಪುಟವನ್ನು ಸೇರುವುದು

32665 ಎಂಬ ಸಂಖ್ಯೆಗೆ ಪಠ್ಯ ಸಂದೇಶವನ್ನು ಕಳುಹಿಸುವ ಮೂಲಕ ನಿಮ್ಮ ಪುಟವನ್ನು ಸೇರುವಂತೆ ಜನರಿಗೆ ತಿಳಿಸಬಹುದು.

ಸೋಶಿಯಲ್ ಪ್ಲಗಿನ್ಸ್ ಬಳಕೆ

ಸೋಶಿಯಲ್ ಪ್ಲಗಿನ್ಸ್ ಬಳಕೆ

ಫೇಸ್‌ಬುಕ್ ಲೈಕ್ ಬಾಕ್ಸ್‌ನಂತಹ ಸೋಶಿಯಲ್ ಪ್ಲಗಿನ್ಸ್‌ನಲ್ಲಿ ಸಾವಿರಾರು ಉಚಿತ ಅಭಿಮಾನಿಗಳನ್ನು ನೀವು ಪಡೆಯಬಹುದಾಗಿದ್ದು ಇದು ಖಂಡಿತ ಪ್ರಯೋಜನಕಾರಿ ಎಂದೆನಿಸಲಿದೆ.

ನಿಮ್ಮ ಸೈಟ್‌ಗೆ ಪೇಜ್ ಬ್ಯಾಡ್ಜ್ ಇನ್‌ಸ್ಟಾಲ್ ಮಾಡಿ

ನಿಮ್ಮ ಸೈಟ್‌ಗೆ ಪೇಜ್ ಬ್ಯಾಡ್ಜ್ ಇನ್‌ಸ್ಟಾಲ್ ಮಾಡಿ

ಫೇಸ್‌ಬುಕ್ ಬ್ಯಾಡ್ಜ್‌ಗಳು ತುಂಬಾ ಸರಳವಾಗಿದ್ದು, ನಿಮ್ಮ ಫೇಸ್‌ಬುಕ್ ಪ್ರೊಫೈಲ್‌ಗೆ ಲಿಂಕ್ ಮಾಡಲು ಪರಿಣಾಮಕಾರಿ ವಿಧಾನವಾಗಿದೆ. ವಿಡ್ಜೆಟ್‌ಗಳಂತೆಯೇ, ಬ್ಯಾಡ್ಜಸ್‌ಗಳು ಚಿತ್ರಗಳಾಗಿದ್ದು, ಇವುಗಳು ಸೋಶಿಯಲ್ ಪ್ಲಗಿನ್‌ಗಿಂತಲೂ ವೇಗವಾಗಿ ಲೋಡ್ ಆಗುತ್ತವೆ.

ಅದ್ಭುತ ವಿಷಯಗಳು

ಅದ್ಭುತ ವಿಷಯಗಳು

ನಿಜಕ್ಕೂ ಅದ್ಭುತವಾದ ವಿಷಯಗಳನ್ನು ಪೋಸ್ಟ್ ಮಾಡುವುದು ಇನ್ನೂ ಮಹತ್ವಕಾರಿಯಾದ ಅಂಶವಾಗಿದೆ.

 ಲೈಕ್‌ಗಳನ್ನು ಖರೀದಿಸಿ

ಲೈಕ್‌ಗಳನ್ನು ಖರೀದಿಸಿ

ಇನ್ನು ಫೇಸ್‌ಬುಕ್ ಪುಟಕ್ಕೆ ಹೆಚ್ಚುವರಿ ಲೈಕ್‌ಗಳನ್ನು ಪಡೆಯಲು ಅವುಗಳನ್ನು ಖರೀದಿಸಿ.

ಟ್ವಿಟ್ಟರ್‌ನೊಂದಿಗೆ ಫೇಸ್‌ಬುಕ್ ಪುಟ ಸಂಪರ್ಕಿಸಿ

ಟ್ವಿಟ್ಟರ್‌ನೊಂದಿಗೆ ಫೇಸ್‌ಬುಕ್ ಪುಟ ಸಂಪರ್ಕಿಸಿ

ನಿಮ್ಮ ಪುಟವನ್ನು ಟ್ವಿಟ್ಟರ್‌ಗೆ ಸಂಪರ್ಕಪಡಿಸುವುದು ನಿಜಕ್ಕೂ ಅದ್ಭುತ ವಿಧಾನವಾಗಿದ್ದು ನಿಮ್ಮ ಟ್ವಿಟ್ಟರ್ ಫಾಲೋವರ್ಸ್ ಫೇಸ್‌ಬುಕ್ ಫ್ಯಾನ್‌ಗಳಾಗಿ ಮಾರ್ಪಡುತ್ತಾರೆ.

ಫೋಟೋ ಅಪ್‌ಲೋಡ್ ಮತ್ತು ಟ್ಯಾಗ್‌ಗಾಗಿ ಫ್ಯಾನ್ಸ್‌ಗಳು

ಫೋಟೋ ಅಪ್‌ಲೋಡ್ ಮತ್ತು ಟ್ಯಾಗ್‌ಗಾಗಿ ಫ್ಯಾನ್ಸ್‌ಗಳು

ನಿಮ್ಮ ಫ್ಯಾನ್‌ಗಳೊಂದಿಗೆ ಈವೆಂಟ್ ಅನ್ನು ನೀವು ಹೋಸ್ಟ್ ಮಾಡಿದ್ದೀರಿ ಎಂದಾದಲ್ಲಿ ಹೆಚ್ಚು ಫೋಟೋಗಳನ್ನು ಪೋಸ್ಟ್ ಮಾಡಿ ಮತ್ತು ಚಿತ್ರಗಳಿಗೆ ಟ್ಯಾಗ್ ಮಾಡಲು ಅವರನ್ನು ಕೇಳಿಕೊಳ್ಳಿ.

ನಿಮ್ಮ ಕಮೆಂಟಿಂಗ್ ಸಿಸ್ಟಮ್ ಖಾತ್ರಿಪಡಿಸಿಕೊಳ್ಳಿ

ನಿಮ್ಮ ಕಮೆಂಟಿಂಗ್ ಸಿಸ್ಟಮ್ ಖಾತ್ರಿಪಡಿಸಿಕೊಳ್ಳಿ

ನೀವು ಮಾಡಿರುವ ಪ್ರತಿಯೊಂದು ಕಮೆಂಟ್ ಕೂಡ ನ್ಯೂಸ್ ಫೀಡ್‌ನಲ್ಲಿ ಪ್ರಕಟವಾಗುತ್ತವೆ ಹಾಗೂ ನಿಮ್ಮ ಪುಟಕ್ಕೆ ಇದು ಹೆಚ್ಚು ಟ್ರಾಫಿಕ್ ಅನ್ನು ತರುತ್ತವೆ.

ಸಾಂಪ್ರದಾಯಿಕ ಮೀಡಿಯಾ

ಸಾಂಪ್ರದಾಯಿಕ ಮೀಡಿಯಾ

ಸುದ್ದಿಪತ್ರಿಕೆ, ಮೀಡಿಯಾ ಖರೀದಿ, ರೇಡಿಯೊ, ಟಿವಿ ಮೊದಲಾದ ಸಾಂಪ್ರದಾಯಿಕ ಮಾಧ್ಯಮವನ್ನು ಬಳಸಿಕೊಂಡು ಫಲಿತಾಂಶಗಳನ್ನು ಪಡೆದುಕೊಳ್ಳಬಹುದು.

ನ್ಯೂಸ್‌ಲೆಟ್ಟರ್ ಪ್ರಮೋಶನ್

ನ್ಯೂಸ್‌ಲೆಟ್ಟರ್ ಪ್ರಮೋಶನ್

ನೀವು ಇಮೇಲ್ ಮಾರ್ಕೆಟಿಂಗ್ ಅನ್ನು ಮಾಡುತ್ತಿದ್ದೀರಿ ಎಂದಾದಲ್ಲಿ ನಿಮ್ಮ ಚಂದಾದಾರರಿಗೆ ಸಂದೇಶವನ್ನು ಕಳುಹಿಸಿ ಮತ್ತು ಫ್ಯಾನ್ ಪೇಜ್ ಬಗ್ಗೆ ಅವರಿಗೆ ಮಾಹಿತಿ ನೀಡಿ.

ಸೂಕ್ಷ್ಮದೃಷ್ಟಿಯುಳ್ಳ ಕಾಮೆಂಟ್ ಹಾಕಿ

ಸೂಕ್ಷ್ಮದೃಷ್ಟಿಯುಳ್ಳ ಕಾಮೆಂಟ್ ಹಾಕಿ

ನಿಮ್ಮ ಟಾರ್ಗೆಟ್ ಆಡಿಯನ್ಸ್ ಜೊತೆಗೆ ಹೆಚ್ಚಿನ ಸಂಪರ್ಕವನ್ನು ಪಡೆದುಕೊಳ್ಳಲು ಇದೊಂದು ಉತ್ತಮ ವಿಧಾನವಾಗಿದೆ. ಫೇಸ್‌ಬುಕ್‌ನ ಬಲ ಮೇಲ್ಭಾಗದಲ್ಲಿರುವ ನೀಲಿ ಪಟ್ಟಿಗೆ ಹೋಗಿ ಮತ್ತು ಕೆಳಭಾಗಕ್ಕೆ ಮುಖ ಮಾಡಿರುವ ಬಾಣದ ಗುರುತನ್ನು ಆಯ್ಕೆಮಾಡಿ.

ಬ್ಯುಸಿನೆಸ್ ಕಾರ್ಡ್ಸ್

ಬ್ಯುಸಿನೆಸ್ ಕಾರ್ಡ್ಸ್

ಬ್ಯುಸಿನೆಸ್ ಕಾರ್ಡ್‌ಗಳು ಕಡಿಮೆ ದರದಲ್ಲಿ ದೊರೆಯುತ್ತವೆ ಮತ್ತು ಪರಿಣಾಮಕಾರಿಯಾಗಿದೆ. ಇದನ್ನು ಬಳಸಿ ನಿಮ್ಮ ಫೇಸ್‌ಬುಕ್ ಫ್ಯಾನ್‌ಗಳನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.

Best Mobiles in India

English summary
There are well over forty-two million active Facebook pages so if you want your page to stand out from the crowd you will need to build up your fan base and do what it takes to get more Facebook fan page likes.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X