ನಿಮ್ಮ ಆಂಡ್ರಾಯ್ಡ್ ಫೋನ್ ಅಪ್‌ಡೇಟ್ ಮಾಡುವ ಮುನ್ನ 'ಡೀಪ್ ಕ್ಲೀನ್' ಮಾಡಿ!

|

ಸ್ಮಾರ್ಟ್‌ಫೋನ್ ಅನ್ನು ಅಪ್ ಡೇಟ್ ಮಾಡುವುದು ಒಳ್ಳೆಯದೇ ಆದರೂ, ಯಾವುದೇ ಸ್ಮಾರ್ಟ್‌ಫೋನ್ ಅಪ್‌ಡೇಟ್ ಅದ ನಂತರ ಹೊಸ ಹೊಸ ಸೇವೆಗಳ ಜೊತೆಗೆ ಕೆಲವು ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುತ್ತವೆ. ಸ್ಮಾರ್ಟ್‌ಫೋನ್ ಅಪ್‌ಡೇಟ್ ಆದ ನಂತರ ನಾವು ಮಾಡುವ ಕೆಲವು ಸಣ್ಣ ತಪ್ಪುಗಳಿಂದ ನಮ್ಮ ಸ್ಮಾರ್ಟ್‌ಫೋನ್ ಸ್ಲೋ ಕೂಡ ಆಗಬಹುದಾಗಿದೆ.

ನಿಮ್ಮ ಆಂಡ್ರಾಯ್ಡ್ ಫೋನ್ ಅಪ್‌ಡೇಟ್ ಮಾಡುವ ಮುನ್ನ 'ಡೀಪ್ ಕ್ಲೀನ್' ಮಾಡಿ!

ಬಹುತೇಕರು ಸ್ಮಾರ್ಟ್‌ಫೋನ್ ಅಪ್‌ಡೇಟ್ ಮಾಡುವ ಮಾಡುವ ತಪ್ಪುಗಳಿಂದ ಇಂತಹ ಹಲವು ಸಮಸ್ಯೆಗಳು ಕಾಣೀಸಿಕೊಳ್ಳುತ್ತವೆ. ಹಾಗಾಗಿ, ಇಂದಿನ ಲೇಖನದಲ್ಲಿ ಸ್ಮಾರ್ಟ್‌ಫೋನ್ ಅನ್ನು ಅಪ್‌ಡೇಟ್ ಏಕೆ ಮಾಡಬೇಕು? ಸ್ಮಾರ್ಟ್‌ಫೋನ್ ಅಪ್‌ಡೇಟ್ ಮಾಡುವುದಕ್ಕೂ ಮುನ್ನ ಮತ್ತು ನಂತರ ಏನು ಮಾಡಬೇಕು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಹೊಸ ಸೇವೆಗಳು ಮತ್ತು ಸುರಕ್ಷತೆ!

ಹೊಸ ಸೇವೆಗಳು ಮತ್ತು ಸುರಕ್ಷತೆ!

ಸ್ಮಾರ್ಟ್ ಫೋನ್ ಬಳಕೆದಾರರು ತಮ್ಮ ಫೋನ್ ಅನ್ನು ಸಮಯಕ್ಕೆ ಸರಿಯಾಗಿ ಅಪ್ ಡೇಟ್ ಮಾಡುವುದು ಬಹಳ ಮುಖ್ಯಸ್ಮಾರ್ಟ್‌ಫೋನ್‌ನಲ್ಲಿರುವ ಸಾಫ್ಟ್ ವೇರ್ ಅನ್ನು ತಿಂಗಳಿಗೆ ಕಡಿಮೆ ಎಂದರೂ ಒಂದು ಬಾರಿಯಾದರು ಅಪ್‌ಡೇಟ್ ಮಾಡಲೇ ಬೇಕು. ಇದರಿಂದ ನಿಮ್ಮ ಫೋನ್ ನಲ್ಲಿ ಹೊಸ ಸೇವೆಗಳು ಮತ್ತು ಅದರೊಂದಿಗೆ ಹೆಚ್ಚು ಸುರಕ್ಷತೆ ಸಿಗುತ್ತದೆ.

ಹೊಸ ಸೇವೆಗಳು

ಹೊಸ ಸೇವೆಗಳು

ಎಲ್ಲ ಫೋನ್ ತಯಾರಕರು, ತಮ್ಮ Settings ನಲ್ಲಿ ಒಂದು ಕ್ಲಿಕ್ ನಿಂದ ಹೊಸ ಆಪರೇಟಿಂಗ್ ಸಿಸ್ಟಮ್ ಅನ್ನು ಇನ್ ಸ್ಟಾಲ್ ಅಥವಾ ಅಪ್ ಗ್ರೇಡ್ ಮಾಡಲು ಹೇಳುತ್ತೆ. ಈ ಅಪ್ ಡೇಟ್ ಅನ್ನು ಮಾಡುವ ಮುನ್ನ ನೀವು ನಿಮ್ಮ ಮೊಬೈಲ್ ನಲ್ಲಿರುವ ಡೇಟಾ ಕ್ಲೀನ್ ಮಾಡಿದರೆ ಒಳ್ಳೆಯದು. ಹಲವು ಬಾರಿ, ಹಾಗೆಯೇ ಅಪ್ಡೇಟ್ ಮಾಡುವುದರಿಂದ ನಿಮ್ಮ ಫೋನ್ ನ ಸಾಫ್ಟ್ ವೆರ್ ಕ್ರ್ಯಾಶ್ ಆಗುವ ಲಕ್ಷಣ ಹೆಚ್ಚಾಗಿರುತ್ತೆ.

ಫೋನಿನ ಮೆಮೊರಿ ಬಗ್ಗೆ ಗಮನ ಇರಲಿ!

ಫೋನಿನ ಮೆಮೊರಿ ಬಗ್ಗೆ ಗಮನ ಇರಲಿ!

ಫೋನ್ ಗಳಲ್ಲಿ ಮೊದಲು ಇಪತ್ತರಿಂದ ಮೂರ್ವತ್ತು ಮೆಸೇಜ್ ಗಳು ಮಾತ್ರ ಇಟ್ಟು ಕೊಳ್ಳಬಹುದಾಗಿತ್ತು. ಇವಾಗ, 16 GB , 32 GB , 64 GB ಮೆಮೊರಿ ಇರುವ ಫೋನೆಗಳು ಸರ್ವೇ ಸಾಮಾನ್ಯ ವಾಗಿದೆ. ಇಷ್ಟು ಮೆಮೊರಿ ಇದೆ ಎಂದು ಮೊಬೈಲ್ ಅನ್ನು ಫೋಟೋ , ಹಾಡು ಮತ್ತು ವಿಡಿಯೋಗಳಿಂದ ತುಂಬಾ ಬೇಡಿ. ಇದರಿಂದ ನಿಮ್ಮ ಫೋನ್ ಸ್ಪೀಡ್ ತುಂಬಾ ನಿಧಾನ ಆಗುತ್ತೆ. ಮೆಮೊರಿ ಎಷ್ಟಿದೆ ಅದರ ಅರ್ಧ ಮಾತ್ರ ಉಪಯೋಗಿಸಿ.

ಆನ್ ಲೈನ್ ಕ್ಲೌಡ್ ಸೇವೆ !

ಆನ್ ಲೈನ್ ಕ್ಲೌಡ್ ಸೇವೆ !

ನಿಮಗೆ ಅತ್ಯಂತ ಮುಖ್ಯವಾಗಿರುವ ಫೈಲ್ ಮತ್ತು ಫೋಟೋ ಗಳನ್ನು ಗೂಗಲ್ ಡ್ರೈವ್, ಡ್ರಾಪ್ ಬಾಕ್ಸ್ ಇನ್ನಿತರ ಆನ್ಲೈನ್ ಕ್ಲೌಡ್ ಸ್ಟೋರೇಜ್ ನಲ್ಲಿ ಡೌನ್ ಲೋಡ್ ಮಾಡಿಡಿ. ಫೋಟೋಗಳಿಗೆ ಎಂದು ಗೂಗಲ್, ‘ಗೂಗಲ್ ಫೋಟೋಸ್' ಎನ್ನುವ ಸ್ಟೋರೇಜ್ ಜಾಗದಲ್ಲಿ ಇಟ್ಟು ಕೊಳ್ಳಬಹುದು. ಇದು ಎಲ್ಲರಿಗೂ ಕಾಣುವುದೇ ಎಂದು ಚಿಂತಿಸಬೇಡಿ. ಇದು ನಿಮ್ಮ ಅನುಮತಿ ಇಲ್ಲದೆ ಯಾರಿಗೂ ನಿಮ್ಮ ಫೋಟೋ ಅನ್ನು ತೋರಿಸಲ್ಲ. ಈ ರೀತಿಯ ಆನ್ ಲೈನ್ ಸೇವೆ ಅನ್ನು ಬಳಸುವುದರಿಂದ ನಿಮ್ಮ ಫೋನ್ ಮೆಮೊರಿ ಉಪಯೋಗ ಆಗದೆ ವೇಗವಾಗುವುದು.

ಡೀಪ್ ಕ್ಲೀನ್ ಮಾಡಿ!

ಡೀಪ್ ಕ್ಲೀನ್ ಮಾಡಿ!

ತುಂಬಾ ಹೊತ್ತಿನಿಂದ ನಿಮ್ಮ ಫೋನ್ ಅಲ್ಲಿ ಇರುವ ಹಲವು ಬೇಡವಾದ ಫೋಟೋ ಗಳನ್ನು, ಫೈಲ್ ಅನ್ನು ಫೋನ್ ಮೆಮೊರಿ ಅಲ್ಲಿ ಶೇಖರಿಸಿ ಮೊಬೈಲ್ ಸ್ಪೀಡ್ ಅನ್ನು ಕಡಿಮೆ ಮಾಡುತ್ತದೆ. ಇದಕ್ಕಾಗಿ ನಿಮ್ಮ ಫೋನ್ ಅಲ್ಲಿರುವ ಈ ಅನವಶ್ಯಕ ಫೈಲುಗಳನ್ನು ಡಿಲೀಟ್ ಮಾಡಿ. ಫೋನ್ ಅಲ್ಲಿ ಸೆಟ್ಟಿಂಗ್ಸ್ ಎಂಬ ಆಯ್ಕೆ ಮಾಡಿ, ಫೋನ್ ರಿಸೆಟ್ ಅನ್ನು ಒತ್ತಿದರೆ, ಬೇಡವಾದ ಎಲ್ಲಾ ಫೈಲ್ ಡಿಲೀಟ್ ಆಗುತ್ತೆ. ಆದರೆ ಎಚ್ಚರ, ಫೋನ್ ರಿಸೆಟ್ ಮಾಡುವ ಮುನ್ನ ಬೇಕಾಗಿರುವ ಫೈಲ್ ಅನ್ನು ಸೇವ್ ಮಾಡಿ.!

ಕಡಿಮೆ ಆಪ್ ಗಳ ಬಳಕೆ!

ಕಡಿಮೆ ಆಪ್ ಗಳ ಬಳಕೆ!

ಫೋನ್ ನಲ್ಲಿ ಒಂದೇ ಸಮನೆ ಹಲವು ಆಪ್ ಓಪನ್ ಮಾಡಿ ಉಪಯೋಗಿಸಿದರೆ, ಅದರಿಂದ ಫೋನ್ ಸ್ಲೋ ಆಗುತ್ತೆ. ಇದಕ್ಕಾಗಿ, ನಿಮ್ಮ ಫೋನ್ ಅಲ್ಲಿ ಸಮಯದಿಂದ ಸಮಯಕ್ಕೆ ಆಪ್ ಗಳ ಬಳಕೆ ಅನ್ನು ಗಮನದಲ್ಲಿಟ್ಟು ಬೇಡವಾದ ಆಪ್ ಅನ್ನು ಕ್ಲೋಸ್ ಮಾಡಿ. ಪ್ರತಿ ತಿಂಗಳಿಗೊಮ್ಮೆ ಸ್ಮಾರ್ಟ್‌ಫೋನಿನಲ್ಲಿರುವ ಆಪ್‌ಗಳು ಯಾವುವು ಎಂಬುದನ್ನು ಚೆಕ್ ಮಾಡಿ. ಬೇಡವಾದ ಆಪ್‌ಗಳಿದ್ದರೆ ಅವುಗಳನ್ನು ಡಿಲೀಡ್ ಮಾಡಿಬಿಡಿ.

Best Mobiles in India

English summary
4 things to do before - and after - an Android update to avoid problems. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X