ಸ್ಮಾರ್ಟ್ ಫೋನ್ ರಕ್ಷಣೆಗೆ ಹೋಳಿ ಹಬ್ಬದಲ್ಲಿ ಈ ಟ್ರಿಕ್ಸ್ ಬಳಸಿ

By Gizbot Bureau
|

ಇಂದಿನ ದಿನಗಳಲ್ಲಿ ಯಾರೂ ಕೂಡ ಒಂದು ನಿಮಿಷವೂ ತಮ್ಮ ಫೋನ್ ನ್ನು ಬಿಟ್ಟು ಇರುವುದಕ್ಕೆ ಇಷ್ಟಪಡುವುದಿಲ್ಲ. ಆದರೆ ಕೆಲವೇ ದಿನಗಳಲ್ಲಿ ಹೋಳಿ ಹಬ್ಬ ಸಮೀಪಿಸುತ್ತಿದೆ. ನಾವೆಲ್ಲರೂ ಹೋಳಿ ಹಬ್ಬವನ್ನು ಚೆನ್ನಾಗಿ ತಿಳಿದಿದ್ದೇವೆ. ಇದು ಬಣ್ಣಗಳ ಹಬ್ಬ. ನೀರಿನ ಓಕುಳಿಯ ಹಬ್ಬ. ಇಂತಹ ಹೋಳಿ ಸಂದರ್ಬದಲ್ಲಿ ನೀರಿನಿಂದಾಗಿ ನಿಮ್ಮ ಸ್ಮಾರ್ಟ್ ಫೋನಿಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಆದರೆ ನೀವು ಹೋಳಿ ಹಬ್ಬವನ್ನು ನಿಮ್ಮ ಸ್ಮಾರ್ಟ್ ಫೋನ್ ನ್ನು ಬಿಡದೆ ಎಂಜಾಯ್ ಮಾಡಬೇಕು ಎಂದು ಅಂದುಕೊಂಡಿದ್ದರೆ ಈ ಕೆಳಗೆ ನಾವು ತಿಳಿಸುವ ಕೆಲವು ಟ್ರಿಕ್ಸ್ ಗಲನ್ನು ಬಳಸಿಕೊಳ್ಳಬೇಕಾಗುತ್ತದೆ. ಹಾಗಾದ್ರೆ ಆ ಟ್ರಿಕ್ಸ್ ಗಳು ಏನು ಎಂಬ ಪಟ್ಟಿಯನ್ನು ಇಲ್ಲಿ ಗಮನಿಸಿ.

ಝಿಪ್ ಲಾಕ್ ಇರುವ ಬ್ಯಾಕ್ ಗಳು

ಝಿಪ್ ಲಾಕ್ ಇರುವ ಬ್ಯಾಕ್ ಗಳು

ನಿಮ್ಮ ಸ್ಮಾರ್ಟ್ ಫೋನ್ ನ್ನು ಬಣ್ಣಗಳ ನೀರಿನಿಂದ ರಕ್ಷಿಸಿಕೊಳ್ಳುವುದಕ್ಕಾಗಿ ಝಿಪ್ ಲಾಕ್ ಇರುವ ಬ್ಯಾಕ್ ಗಳು ಉತ್ತಮ ಆಯ್ಕೆಯಾಗಿರುತ್ತದೆ. ಝಿಪ್ ಲಾಕ್ ಇರುವ ಬ್ಯಾಗಿನಲ್ಲಿ ನಿಮ್ಮ ಸ್ಮಾರ್ಟ್ ಫೋನ್ ನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು. ಝಿಪ್ ಲಾಕ್ ಇರುವ ಬ್ಯಾಗ್ ಗಳು ನಿಮಗೆ ಧೂಳು, ಬಣ್ಣಗಳು ಮತ್ತು ನೀರಿನಿಂದ ಮೊಬೈಲ್ ಗೆ ರಕ್ಷಣೆ ನೀಡುತ್ತದೆ.

ಝಿಪ್ ಲಾಕ್ ಇರುವ ಬ್ಯಾಗ್ ಗಳು ಸಣ್ಣ ಸೈಜಿನಲ್ಲಿ ಇರುತ್ತದೆ ಮತ್ತು ಅದನ್ನು ನಿಮ್ಮ ಪಾಕೆಟ್ ನಲ್ಲಿ ಹಾಕಿಟ್ಟುಕೊಳ್ಳುವುದಕ್ಕೂ ಕೂಡ ಸಾಧ್ಯವಾಗುತ್ತದೆ. ನೀವು ಯಾವುದೇ ತೊಂದರೆ ಇಲ್ಲದೆ ಬಣ್ಣಗಳ ಓಕುಳಿಯನ್ನು ಎಂಜಾಯ್ ಮಾಡುವುದಕ್ಕೆ ಇದು ನೆರವಾಗುತ್ತದೆ.

ಒಂದು ವೇಳೆ ನಿಮ್ಮ ಹತ್ತಿರದ ಶಾಪ್ ಗಳಲ್ಲಿ ಈ ಬ್ಯಾಗ್ ಲಭ್ಯವಾಗದೇ ಇದ್ದಲ್ಲಿ ಯೋಚಿಸಬೇಡಿ. ಆನ್ ಲೈನ್ ನಲ್ಲೂ ಕೂಡ ಖರೀದಿಸುವುದಕ್ಕೆ ಅವಕಾಶವಿದೆ.

ವಾಟರ್ ಪ್ರೂಫ್ ಕೇಸ್ ಗಳು

ವಾಟರ್ ಪ್ರೂಫ್ ಕೇಸ್ ಗಳು

ಮೊಬೈಲ್ ಫೋನ್ ಗಳಿಗೆ ನೀರು ಶತ್ರುವೆಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ನಿಮ್ಮ ಸ್ಮಾರ್ಟ್ ಫೋನ್ ನ್ನು ಇದು ಹಾಳು ಮಾಡುವ ಸಾಧ್ಯತೆ ಇದೆ. ನೀರು ನಿಮ್ಮ ಫೋನ್ ಎಂದೆಂದಿಗೂ ಸ್ವಿಚ್ ಆನ್ ಆಗದಂತೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಬಬಲ್ಡ್ ಶೀಲ್ಡ್:

ಹೋಳಿಯ ಸಂದರ್ಬದಲ್ಲಿ ಬಣ್ಣಗಳ ನೀರನ್ನು ಹೆಚ್ಚಾಗಿ ಬಳಕೆ ಮಾಡುವುದರಿಂದಾಗಿ ಈ ಸಂದರ್ಬದಲ್ಲಿ ಸ್ಮಾರ್ಟ್ ಫೋನ್ ಗಳು ಹಾಳಾಗುವುದು ಅಧಿಕವಾಗಿರುತ್ತದೆ. ಹಾಗಾಗಿ ಹಲವಾರು ವಾಟರ್ ಪ್ರೂಫ್ ಕವರ್ ಗಳು/ಕೇಸ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಇವು ನೀರು ಮತ್ತು ಧೂಳಿನಿಂದ ಇವು ನಿಮ್ಮ ಸ್ಮಾರ್ಟ್ ಫೋನಿಗೆ ರಕ್ಷಣೆಯನ್ನು ನೀಡುತ್ತದೆ. ಆನ್ ಲೈನ್ ನಲ್ಲೂ ಕೂಡ ನೀವು ಇವುಗಳನ್ನು ಖರೀದಿಸುವುದಕ್ಕೆ ಅವಕಾಶವಿದೆ.

ಬ್ಲೂಟೂತ್ ಹೆಡ್ ಸೆಟ್ ಗಳನ್ನು ಬಳಕೆ ಮಾಡಿ

ಬ್ಲೂಟೂತ್ ಹೆಡ್ ಸೆಟ್ ಗಳನ್ನು ಬಳಕೆ ಮಾಡಿ

ಹೋಳಿಯ ಸಂದರ್ಬದಲ್ಲೂ ನೀವು ಹೆಚ್ಚಿನವರ ಜೊತೆಗೆ ಮಾತುಕತೆಯಲ್ಲಿ ಸ್ಮಾರ್ಟ್ ಫೋನ್ ಮೂಲಕ ಸಂಪರ್ಕದಲ್ಲಿರುತ್ತೀರಿಯಾದರೆ ಬ್ಲೂಟೂತ್ ಹೆಡ್ ಸೆಟ್ ಗಳನ್ನು ಬಳಕೆ ಮಾಡಿ. ಝಿಪ್ ಲಾಕ್ ಬ್ಯಾಗ್ ನಲ್ಲಿ ನಿಮ್ಮ ಫೋನ್ ನ್ನು ಇಟ್ಟು ವಾಟರ್ ಪ್ರೂಫ್ ಕೇಸ್ ಬಳಕೆ ಮಾಡುವುದರ ಜೊತೆಗೆ ಬ್ಲೂಟೂತ್ ಇಯರ್ ಫೋನ್ ಗಳು ಹೆಚ್ಚು ನೆರವಿಗೆ ಬರುತ್ತದೆ.

ಬ್ಲೂಟೂತ್ ಹೆಡ್ ಸೆಟ್ ಮೂಲಕ ನೀವು ಸ್ವಯಂಚಾಲಿತವಾಗಿ ಕೇವಲ ಒಂದು ಬಟನ್ ಸಹಾಯದಿಂದ ಫೋನ್ ರಿಸೀವ್ ಮಾಡುವುದು ಮತ್ತು ಕಟ್ ಮಾಡುವ ಕೆಲಸವನ್ನು ಮಾಡುವುದಕ್ಕೆ ಸಾಧ್ಯವಾಗುತ್ತದೆ.

ನಿಮ್ಮ ಹತ್ತಿರದ ಶಾಪ್ ನಲ್ಲೇ ನೀವು ಇದನ್ನು ಖರೀದಿಸಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಬ್ಲೂಟೂತ್ ಇಯರ್ ಫೋನ್ ಗಳು ಸಾಮಾನ್ಯವಾಗಿರುವುದಕಿಂದ ಎಲ್ಲಾ ಶಾಪ್ ಗಳಲ್ಲೂ ಲಭ್ಯವಿರುತ್ತದೆ. ಒಂದು ವೇಳೆ ಉತ್ತಮ ಆಯ್ಕೆ ಇಲ್ಲದೆ ಇದ್ದಲ್ಲಿ ಆನ್ ಲೈನ್ ನಲ್ಲಿ ಖರೀದಿಸಬಹುದು.

ಕಡಿಮೆ ಬೆಲೆಯ ಮತ್ತು ಹಳೆಯ ಮೊಬೈಲ್ ಬಳಕೆ ಮಾಡಿ

ಕಡಿಮೆ ಬೆಲೆಯ ಮತ್ತು ಹಳೆಯ ಮೊಬೈಲ್ ಬಳಕೆ ಮಾಡಿ

ಇದೊಂದು ಬಹಳ ಸರಳವಾಗಿರುವ ಮತ್ತು ಸುಲಭವಾಗಿರುವ ಮಾರ್ಗವಾಗಿದೆ. ಮೇಲಿನ ಮೂರು ವಸ್ತುಗಳನ್ನು ಖರೀದಿಸುವುದಕ್ಕೆ ನಿಮಗೆ ಅಸಾಧ್ಯವಾಗಿದ್ದಲ್ಲಿ ನಾವು ಹೇಳುವ ಕೊನೆಯ ವಿಧಾನವೆಂದರೆ ಕಡಿಮೆ ಬೆಲೆಯ ಹಳೆಯ ಯಾವುದಾದರೂ ಮೊಬೈಲ್ ನ್ನು ಬಳಕೆ ಮಾಡಿ.

ಈಗಿನ ಕಾಲದಲ್ಲಿ ಒಂದೇ ಮನೆಯಲ್ಲಿ ಹಲವು ಮೊಬೈಲ್ ಫೋನ್ ಗಳು ಲಭ್ಯವಿರುತ್ತದೆ. ನಿಮ್ಮಲ್ಲಿರುವ ಯಾವುದಾದರೂ ಹಳೆಯ ಫೋನ್ ನ್ನು ಬಳಕೆ ಮಾಡಿ ಹೋಳಿ ಆಡುವುದರಿಂದ ನಿಮ್ಮ ಒಳ್ಳೆಯ ದುಬಾರಿ ಫೋನ್ ಗಳು ತೊಂದರೆಯಿಂದ ಮುಕ್ತವಾಗಿರುತ್ತದೆ. ಕೇವಲ ಫೋನ್ ಮಾತ್ರವೇ ಅಲ್ಲ ಬದಲಾಗಿ ಬಟ್ಟೆಯೂ ಕೂಡ ಹಳೆಯದ್ದೇ ಆಗಿರುವುದು ಸೂಕ್ತ.

Best Mobiles in India

English summary
4 Tips To Keep Your Smartphone Safe During Holi

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X