ಸ್ಮಾರ್ಟ್‌ಫೋನಿನಲ್ಲಿ ಡೇಟಾ ಸರಿಯಾಗಿ ಕೆಲಸ ಮಾಡುತ್ತಿಲ್ಲವೇ?.ಹಾಗಿದ್ರೆ ಹೀಗೆ ಮಾಡಿ!

|

ಪ್ರಸ್ತುತ ಏಕೆಂದರೇ ಪ್ರಸ್ತುತ ಸ್ಮಾರ್ಟ್‌ಫೋನ್ ಬಳಕೆದಾರರು ಇಂಟರ್ನೆಟ್‌ ಮೂಲಕ ಹಲವು ಆನ್‌ಲೈನ್‌ ಕೆಲಸಗಳನ್ನು ಸ್ಮಾರ್ಟ್‌ಫೋನ್‌ ಮೂಲಕವೇ ಮಾಡಿಮುಗಿಸುತ್ತಾರೆ. ಒಂದು ವೇಳೆ ಅಚಾನಕ್ ಆಗಿ ಸ್ಮಾರ್ಟ್‌ಫೋನಿನಲ್ಲಿ ಇಂಟರ್ನೆಟ್‌ ಕನೆಕ್ಷನ್ ಇಲ್ಲದಿದ್ದರೇ ಅಥವಾ ಅಡಚಣೆಯಾದರೇ ಬಳಕೆದಾರರು ಒಂದು ಕ್ಷಣ ಗೊಂದಲಗೊಂಡು ಬಿಡುತ್ತಾರೆ. ಆದರೆ ಅದನ್ನು ಸುಲಭವಾಗಿ ಪರಿಶೀಲಿಸಬಹುದು.

ಕೆಲವೊಮ್ಮೆ

ಹೌದು, ಕೆಲವೊಮ್ಮೆ ಸ್ಮಾರ್ಟ್‌ಫೋನ್‌ನಲ್ಲಿ ಡೇಟಾ ಸರಿಯಾಗಿ ಕೆಲಸ ಮಾಡುವುದುದೇ ಇಲ್ಲ. ಡೇಟಾ ಪ್ಯಾಕ್‌ ಸೌಲಭ್ಯ ಇದ್ದರೂ ಸಹ ಡೇಟಾ ಕೈ ಕೊಡುತ್ತಿರುತ್ತದೆ. ಇಂತಹ ವೇಳೆ ಸೆಟ್ಟಿಂಗ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ಅಥವಾ ಪರಿಶೀಲಿಸುವ ಮೂಲಕ ಸಮಸ್ಯಯನ್ನು ಸರಿಪಡಿಸಬಹುದು. ಹಾಗಾದರೇ ಮೊಬೈಲ್‌ನಲ್ಲಿ ಡೇಟಾ ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ ಯಾವ ಕ್ರಮ ಅನುಸರಿಸಬೇಕು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಮೊಬೈಲ್ ಡೇಟಾವನ್ನು ನಿಷ್ಕ್ರಿಯಗೊಳಿಸಿ ಮತ್ತೆ ಆನ್ ಮಾಡುವುದು

ಮೊಬೈಲ್ ಡೇಟಾವನ್ನು ನಿಷ್ಕ್ರಿಯಗೊಳಿಸಿ ಮತ್ತೆ ಆನ್ ಮಾಡುವುದು

ಕೆಲಸ ಮಾಡದ ಮೊಬೈಲ್ ಇಂಟರ್ನೆಟ್ ಅನ್ನು ಸರಿಪಡಿಸಲು ಸುಲಭವಾದ ಮಾರ್ಗವೆಂದರೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿನ ಮೊಬೈಲ್ ಡೇಟಾ ಆಯ್ಕೆಯನ್ನು ಸ್ವಿಚ್ ಆಫ್ ಮಾಡಿ ಮತ್ತು ಕೆಲವು ಸೆಕೆಂಡುಗಳ ನಂತರ ಅದನ್ನು ಮತ್ತೆ ಸಕ್ರಿಯಗೊಳಿಸುವುದು. ಹೀಗೆ ಮಾಡಲು ಬಳಕೆದಾರರು ಫೋನ್ ಸೆಟ್ಟಿಂಗ್‌ಗಳ ಮೆನು ಅಥವಾ ನೋಟಿಫಿಕೇಶನ್‌ ಸ್ಲೈಡ್‌ನಲ್ಲಿಯೂ ಮಾಡಬಹುದು.

ಫ್ಲೈಟ್ ಮೋಡ್ ಅನ್ನು ಸಕ್ರಿಯಗೊಳಿಸಿ ಮತ್ತೆ ಆಫ್‌ ಮಾಡಿ

ಫ್ಲೈಟ್ ಮೋಡ್ ಅನ್ನು ಸಕ್ರಿಯಗೊಳಿಸಿ ಮತ್ತೆ ಆಫ್‌ ಮಾಡಿ

ಮೊಬೈಲ್ ಡೇಟಾ ಕಾರ್ಯನಿರ್ವಹಿಸುತ್ತಿದ್ದರೆ ಅದನ್ನು ಸರಿಪಡಿಸಲು ಫ್ಲೈಟ್ ಮೋಡ್ ಆನ್‌-ಆಫ್‌ ಮಾಡುವುದು ಮತ್ತೊಂದು ಪರಿಣಾಮಕಾರಿ ಮಾರ್ಗವಾಗಿದೆ. ಫ್ಲೈಟ್ ಮೋಡ್ ಅನ್ನು ಸಕ್ರಿಯಗೊಳಿಸಲು ಬಳಕೆದಾರರು ಫೋನ್‌ ಸೆಟ್ಟಿಂಗ್‌ ಮೆನುಗೆ ನೋಟಿಫಿಕೇಶನ್‌ ಸ್ಲೈಡ್‌ನಲ್ಲಿಯೂ ಮಾಡಬಹುದು.

ಡೇಟಾ ಅವಧಿ ಒಮ್ಮೆ ಚೆಕ್ ಮಾಡುವುದು

ಡೇಟಾ ಅವಧಿ ಒಮ್ಮೆ ಚೆಕ್ ಮಾಡುವುದು

ಡೇಟಾ ಸರಿಯಾಗಿ ವರ್ಕ್ ಮಾಡದೆ ಇದ್ದಾಗ, ಬಳಕೆದಾರರು ಮೊಬೈಲ್ ಡೇಟಾ ಯೋಜನೆಯನ್ನು ಒಮ್ಮೆ ಪರಿಶೀಲಿಸುವುದು ಉತ್ತಮ. ಏಕೆಂದರೇ ಒಮ್ಮೆಮ್ಮೆ ಮೊಬೈಲ್ ರೀಚಾರ್ಜ್ ಪ್ಯಾಕ್ ಅವಧಿ ಮುಗಿದಿರುವುದು ಬಳಕೆದಾರರಿಗೆ ತಿಳಿದಿರುವುದಿಲ್ಲ.

ಸಿಮ್ ಕಾರ್ಡ್ ತೆಗೆದು ಹಾಕಿ

ಸಿಮ್ ಕಾರ್ಡ್ ತೆಗೆದು ಹಾಕಿ

ಮೊಬೈಲ್ ಡೇಟಾ ವೇಗವನ್ನು ಸರಿಪಡಿಸಲು ಮತ್ತೊಂದು ಪರಿಣಾಮಕಾರಿ ಮಾರ್ಗವೆಂದರೆ ನಿಮ್ಮ ಮೊಬೈಲ್ ಫೋನ್‌ನಿಂದ ಸಿಮ್ ಕಾರ್ಡ್ ತೆಗೆದುಕೊಂಡು ಮತ್ತೆ ಇನ್‌ಸರ್ಟ್‌ ಮಾಡುವುದು. ಮೊಬೈಲ್ ಡೇಟಾ ಸರಿಯಾಗಿ ಕೆಲಸ ಮಾಡಲು ಪ್ರಯತ್ನಿಸುವ ಮಾರ್ಗಗಳಲ್ಲಿ ಇದು ಸಹ ಒಂದಾಗಿದೆ.

ಸ್ಮಾರ್ಟ್‌ಫೋನ್ ರೀ-ಸ್ಟಾರ್ಟ್‌ ಮಾಡುವುದು

ಸ್ಮಾರ್ಟ್‌ಫೋನ್ ರೀ-ಸ್ಟಾರ್ಟ್‌ ಮಾಡುವುದು

ಮೊಬೈಲ್ ಇಂಟರ್ನೆಟ್ ಅನ್ನು ಹೆಚ್ಚಿಸಲು ಸಹಾಯ ಮಾಡುವ ಮತ್ತೊಂದು ಸರಳ ಮಾರ್ಗವೆಂದರೆ ಸ್ಮಾರ್ಟ್‌ಫೋನ್ ರೀ-ಸ್ಟಾರ್ಟ್‌ ಮಾಡುವುದಾಗಿದೆ. ಇದು ನೆಟ್‌ವರ್ಕ್ ಸಮಸ್ಯೆ ಅಥವಾ ಇನ್ನಾವುದೇ ಆಗಿರಲಿ, ಫೋನ್ ಅನ್ನು ರೀ-ಸ್ಟಾರ್ಟ್‌ ಮಾಡುವ ಮೂಲಕ ಮೊಬೈಲ್ ಫೋನ್‌ನಲ್ಲಿನ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಲ್ಯಾಪ್‌ಟಾಪ್‌ಗಳು, ಪಿಸಿಗಳು ಅಥವಾ ಯಾವುದೇ ಗ್ಯಾಜೆಟ್‌ನಲ್ಲಿಯೂ ಈ ಕ್ರಮ ಉತ್ತಮ.

Most Read Articles
Best Mobiles in India

English summary
Here we have listed five tips that can help fix the mobile internet quickly and make it work seamlessly yet again.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X