ಕಳೆದ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್ ಹುಡುಕಲು ಗೂಗಲ್‌ನ ಹೊಸ ಮಾರ್ಗಗಳು!!!

By GizBot Bureau
|

ಪ್ರಕರಣ 1 - ನೀವು ಯಾವುದೋ ಶಾಪಿಂಗ್ ಮಾಲ್ ಗೆ ತೆರಳಿರುತ್ತೀರಿ, ನಿಮ್ಮ ಆಂಡ್ರಾಯ್ಡ್ ಫೋನ್ ನಿಮ್ಮ ಕೈ ತಪ್ಪಿ ಹೋಗುತ್ತದೆ.ಕಳೆದು ಹೋದದ್ದು ತಿಳಿಯುವುದೇ ಇಲ್ಲ, ನಿಮ್ಮ ಫೋನ್ ಇನ್ಯಾರೋ ಪುಣ್ಯಾತ್ಮನ ಕೈ ಸೇರಿರುತ್ತೆ. ಅದೃಷ್ಟವಶಾತ್ ವಾಪಾಸ್ ಸಿಕ್ಕಿದರೆ ನಿಮ್ಮಷ್ಟು ಪುಣ್ಯ ಮಾಡಿದವರು ಮತ್ತೊಬ್ಬರಿಲ್ಲ, ಸಿಗದೇ ಇದ್ದರೆ ಮುಂದಿನ ಕಥೆ ಏನು? ಕಳೆದ ಹೋದ ಸ್ಮಾರ್ಟ್ ಫೋನ್ ಹುಡುಕುವುದು ಹೇಗೆ?

ಪ್ರಕರಣ 2 – ನೀವು ಬಸ್ಸಿನಲ್ಲಿ ಸಂಚರಿಸುತ್ತಿರುತ್ತೀರಿ. ಹಾಗೆಯೇ ನಿದ್ದೆಗೆ ಜಾರಿದಿರಿ ಎಂದಿಟ್ಟುಕೊಳ್ಳೋಣ.. ಬಸ್ಸಿನಲ್ಲಿದ್ದ ಕಳ್ಳನೊಬ್ಬ ಕೈಚಳಕ ತೋರಿಬಿಟ್ಟ, ನಿಮ್ಮ ಫೋನ್ ಗಾಯಬ್.ಎಚ್ಚರವಾಗಿ ನೋಡಿದರೆ ಸ್ಮಾರ್ಟ್ ಫೋನ್ ನಾಪತ್ತೆಯಾಗಿದೆ? ಹಾಗಾದ್ರೆ ಕಳೆದು ಹೋದ ಫೋನನ್ನು ಪುನಃ ಪಡೆದುಕೊಳ್ಳುವುದು ಹೇಗೆ?

ಕಳೆದ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್ ಹುಡುಕಲು ಗೂಗಲ್‌ನ ಹೊಸ ಮಾರ್ಗಗಳು!!!

ಇಂತಹ ಪ್ರಕರಣಗಳು ಹಲವರ ಜೀವನದಲ್ಲಿ ನಡೆದಿರುತ್ತದೆ. ಬಹಳ ಇಷ್ಟ ಪಟ್ಟು, ಕಷ್ಟಪಟ್ಟು ಕೊಂಡುಕೊಂಡ ಫೋನ್ ಕೈಯಲ್ಲಿಲ್ಲ ಅಂದರೆ ಅದರಂತ ಆಘಾತ ಮತ್ತೊಂದಿಲ್ಲ. ಆ ದಿನವೆಲ್ಲ ನಿಮ್ಮ ಮನಸ್ಸು ಪರಿತಪಿಸುತ್ತದೆಯಲ್ಲವೇ?

ಈ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಗೂಗಲ್ ಹಲವು ವೈಶಿಷ್ಟ್ಯತೆಗಳನ್ನು ತಂದಿದೆ ಆ ಮೂಲಕ ಸಾಧನದ ಸುರಕ್ಷತೆಯನ್ನು ಕಾಪಾಡುವ ಗುರಿಯನ್ನು ಹೊಂದಿದೆ. ನಿಮ್ಮ ಫೋನನ್ನು ಟ್ರ್ಯಾಕ್ ಮಾಡಲು ನೆರವಾಗುವ ವೈಶಿಷ್ಟ್ಯಗಳ ಮೊದಲ ವರ್ಷನ್ ನ್ನು ಗೂಗಲ್ 2013 ರಲ್ಲಿ ಬಿಡುಗಡೆ ಮಾಡಿತು ಮತ್ತು ಅದರ ಹೆಸರು ಡಿವೈಸ್ ಮ್ಯಾನೇಜರ್. ಮತ್ತೆ ಕೆಲವು ವರ್ಷಗಳ ನಂತರ ಅದರ ಅಪ್ ಡೇಟೆಡ್ ವರ್ಷನ್ ಬಿಡುಗಡೆಗೊಂಡಿತು ಮತ್ತು ಅದಕ್ಕೆ ಹಲವು ಹೊಸ ವೈಶಿಷ್ಟ್ಯಗಳು ಸೇರಿಕೊಂಡಿದ್ದವು ಮತ್ತು ಅದರ ಹೆಸರನ್ನು “ ಫೈಂಡ್ ಮೈ ಡಿವೈಸ್ “ ಎಂದು ಬದಲಾವಣೆ ಮಾಡಲಾಗಿತ್ತು.

ಎಲ್ಲಾ ಆಂಡ್ರಾಯ್ಡ್ ಡಿವೈಸ್ ಗಳು ಅಂದರೆ ಆಂಡ್ರಾಯ್ಡ್ ಕಿಟ್ ಕ್ಯಾಟ್ ಮತ್ತು ಅದರ ಮುಂದಿನ ವರ್ಷನ್ ಗಳಲ್ಲಿ ರನ್ ಆಗುವ ಎಲ್ಲಾ ಡಿವೈಸ್ ಗಳಲ್ಲೂ ಡಿಫಾಲ್ಟ್ ಆಗಿ ಈ ವೈಶಿಷ್ಟ್ಯ ಇದ್ದೇ ಇರುತ್ತದೆ.ಈ ವೈಶಿಷ್ಟ್ಯಗಳು ಕೆಲಸ ಮಾಡಬೇಕಾದರೆ ಅದಕ್ಕೆ ಇರುವ ಪ್ರಮುಖ ಅಗತ್ಯತೆಗಳೆಂದರೆ ಸ್ಟೇಬಲ್ ಆಗಿರುವ ಇಂಟರ್ನೆಟ್ ಕನೆಕ್ಷನ್ ಮತ್ತು ಗೂಗಲ್ ಗೆ ನೀವು ಸೈನ್ ಇನ್ ಆಗಿರಬೇಕು ಮತ್ತು ಲೋಕೇಷನ್ ಅನೇಬಲ್ ಆಗಿರಬೇಕು.

ಈ ವ್ಯವಸ್ಥೆಯು ನಿಮ್ಮ ಫೋನಿರುವ ಜಾಗವನ್ನು ಹುಡುಕಲು ಅನುವು ಮಾಡಿಕೊಡುತ್ತದೆ. ಒಂದು ವೇಳೆ ಕಳೆದು ಹೋದ ನಿಮ್ಮ ಫೋನ್ ಇಂಟರ್ನೆಟ್ ಗೆ ಕನೆಕ್ಟ್ ಆಗಿಲ್ಲದೇ ಇದ್ದರೆ ನೀವು ಫೋನಿರುವ ಸರಿಯಾದ ಜಾಗವನ್ನು ಹುಡುಕಲು ಸಾಧ್ಯವಾಗುವುದಿಲ್ಲ. ಆದರೂ ನೀವು ಗೂಗಲ್ ಮ್ಯಾಪ್ಸ್ ಲೋಕೇಷನ್ ಹಿಸ್ಟರಿ ಮುಖಾಂತರ ಫೈಂಡ್ ಮೈ ಡಿವೈಸ್ ನ್ನು ಬಳಕೆ ಮಾಡಿ ಕೊನೆಯದಾಗಿ ನಿಮ್ಮ ಮೊಬೈಲ್ ಇದ್ದ ಜಾಗವನ್ನು ಹುಡುಕಬಹುದು.

ಸದ್ಯ ಈ ಫೈಂಡ್ ಮೈ ಡಿವೈಸ್ ಗೆ ಇನ್ನಷ್ಟು ಫೀಚರ್ ಗಳು ಸೇರಿಕೊಂಡಿವೆ ಮತ್ತು ಅವು ನಿಮ್ಮ ಕಳೆದು ಹೋದ ಫೋನನ್ನು ಟ್ರ್ಯಾಕ್ ಮಾಡಲು ನೆರವಿಗೆ ಬರುತ್ತದೆ. ಅವುಗಳು ಯಾವುವೆಂದರೆ.

ಕೊನೆಯದಾಗಿ ವೈ-ಫೈ ಸಂಪರ್ಕಗೊಂಡ ಸ್ಥಳ

ಕೊನೆಯದಾಗಿ ವೈ-ಫೈ ಸಂಪರ್ಕಗೊಂಡ ಸ್ಥಳ

ಈ ಆಪ್ ಮುಖಾಂತರ ನೀವು ಜಿಪಿಎಸ್ ಗೆ ಕನೆಕ್ಟ್ ಆಗಿಲ್ಲದೇ ಇದ್ದರೂ ಕೂಡ ,ನೀವು ಕೊನೆಯದಾಗಿ ವೈ- ಫೈ ಆಕ್ಸಿಸ್ ಮಾಡಿದ ಜಾಗದ ಮಾಹಿತಿಯು ದೊರೆಯುತ್ತದೆ. ವೈ-ಫೈ ಆಕ್ಸಿಸ್ ಪಾಯಿಂಟ್ ಮುಖಾಂತರ ನೀವು ನಿಮ್ಮ ಕಳೆದು ಹೋದ ಫೋನಿನ ಹುಡುಕಾಟ ಮಾಡಲು ಹೆಚ್ಚು ಮಾಹಿತಿ ಲಭ್ಯವಾದಂತಾಗುತ್ತದೆ.

ಬ್ಯಾಟರಿಯ ಮಟ್ಟ

ಬ್ಯಾಟರಿಯ ಮಟ್ಟ

ಫೈಂಡ್ ಮೈ ಡಿವೈಸ್ ಆಪ್ ಮುಖಾಂತರ, ನಿಮ್ಮ ಫೋನಿನ ಬ್ಯಾಟರಿ ಇನ್ನೂ ಎಷ್ಟು ಚಾರ್ಜ್ ಇದೆ ಎಂಬುದನ್ನು ತಿಳಿಯಬಹುದು. ಇದರಿಂದಾಗಿ ಬಳಕೆದಾರರು ಫೋನ್ ಶಟ್ ಡೌನ್ ಆಗಲು ಇನ್ನು ಸಮಯ ಇದೆ ಮತ್ತು ಎಷ್ಟು ಬೇಗ ಫೋನಿರುವ ಜಾಗಕ್ಕೆ ತಲುಪುವುದು ಅವರಿಗೆ ಒಳ್ಳೆಯದು ಎಂಬುದನ್ನು ಲೆಕ್ಕಾಚಾರ ಹಾಕಿಕೊಳ್ಳಬಹುದು.

ರಿಂಗ್, ಲಾಕ್, ಇರೇಸ್ ಡಾಟಾ

ರಿಂಗ್, ಲಾಕ್, ಇರೇಸ್ ಡಾಟಾ

ಫೈಂಡ್ ಮೈ ಡಿವೈಸ್ ಮೂಲಕ ಕೇವಲ ನಿಮ್ಮ ಫೋನ್ ಎಲ್ಲಿದೆ ಎಂಬುದನ್ನು ತಿಳಿಯುವುದು ಮಾತ್ರವಲ್ಲ ಬದಲಾಗಿ ನಿಮ್ಮ ಸಾಧನವನ್ನು ಲಾಕ್ ಮಾಡಲು, ಮತ್ತು ಫೋನಿನಲ್ಲಿರುವ ಡಾಟಾವನ್ನು ರಿಮೋಟ್ ಮೂಲಕ ಅಳಿಸಿಹೊಕಲು ಕೂಡ ಅನುವು ಮಾಡಿ ಕೊಡುತ್ತದೆ.

ಆಂಡ್ರಾಯ್ಡ್ ವಿವರ್

ಆಂಡ್ರಾಯ್ಡ್ ವಿವರ್

ನಿಮ್ಮ ಆಂಡ್ರಾಯ್ಡ್ ವಿವರ್ ಸಾಧನಗಳು ಕೇವಲ ನಿಮ್ಮ ಫಿಟ್ನೆಸ್ ಲೆಕ್ಕಾಚಾರಗಳಿಗೆ ಮಾತ್ರವಲ್ಲ ಬದಲಾಗಿ ಅವು ನಿಮ್ಮ ಫೋನಿನ ಲೋಕೆಷನ್ ಪತ್ತೆ ಹಚ್ಚಲು ಮತ್ತು ಫೋನಿನ ಮೂಲಕ ಆಂಡ್ರಾಯ್ಡ್ ವಿಯರ್ ಗಳ ಲೋಕೇಷನ್ ಪತ್ತೆ ಮಾಡಲು ಒಂದಕ್ಕೊಂದು ನೆರವಾಗುತ್ತವೆ. ಆದರೆ ಎರಡೂ ಸಾಧನಗಳು ಲೊಕೇಷನ್ ಅನೇಬಲ್ ಮಾಡಿರಬೇಕು.

ಗೂಗಲ್ ಹೋಮ್

ಗೂಗಲ್ ಹೋಮ್

ನೀವು ಗೂಗಲ್ ಹೋಮ್ ಡಿವೈಸ್ ಮುಖಾಂತರ ನಿಮ್ಮ ಡಿವೈಸ್ ನ ಲೊಕೇಷನ್ ತಿಳಿಯಬಹುದಾಗಿದ್ದು ಕೇವಲ "OK Google, where is my phone?" ಎಂದು ಕೇಳಿದರೆ ಸಾಕಾಗುತ್ತದೆ.

Best Mobiles in India

English summary
5 new ways from Google to find your lost Android smartphone easily. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X