ಎಲ್ಲರಿಗೂ ಆಂಡ್ರಾಯ್ಡ್ ಬಿಟ್ಟು ಐಫೋನ್ ಖರೀದಿಸುವ ಆಸೆ ಇರಲು 5 ಕಾರಣಗಳು!!..ಯಾವುವು?

ಆಂಡ್ರಾಯ್ಡ್ ಪೋನ್ ಅಷ್ಟು ಕಡಿಮೆ ಬೆಲೆಯಲ್ಲಿ ಲಭ್ಯವಿದ್ದರೂ ಸಹ ಎಲ್ಲರೂ ಐಫೋನ್ ಅನ್ನೇ ಯಾಕೆ ಇಷ್ಟಪಡುತ್ತಾರೆ?..ಅದೆಲ್ಲಾ ಬಿಡಿ, ಆಂಡ್ರಾಯ್ಡ್ ಫೋನ್‌ನಲ್ಲಿ ಇಲ್ಲದೇ ಇರುವಂತಹದ್ದು ಐಫೋನ್‌ಗಳಲ್ಲಿ ಏನಿರುತ್ತದೆ?

|

ಎಲ್ಲರಿಗೂ ಒಮ್ಮೊಮ್ಮೆ ಮೂಡುವ ಪ್ರಶ್ನೆ ಎಂದರೆ, ಆಂಡ್ರಾಯ್ಡ್ ಪೋನ್ ಅಷ್ಟು ಕಡಿಮೆ ಬೆಲೆಯಲ್ಲಿ ಲಭ್ಯವಿದ್ದರೂ ಸಹ ಎಲ್ಲರೂ ಐಫೋನ್ ಅನ್ನೇ ಯಾಕೆ ಇಷ್ಟಪಡುತ್ತಾರೆ?..ಅದೆಲ್ಲಾ ಬಿಡಿ, ಆಂಡ್ರಾಯ್ಡ್ ಫೋನ್‌ನಲ್ಲಿ ಇಲ್ಲದೇ ಇರುವಂತಹದ್ದು ಐಫೋನ್‌ಗಳಲ್ಲಿ ಏನಿರುತ್ತದೆ? ಅಷ್ಟೊಂದು ಹಣವನ್ನು ಯಾಕೆ ನೀಡುತ್ತಾರೆ ಎಂದು ಪ್ರಶ್ನೆಸಿಕೊಳ್ಳುತ್ತಾರೆ!!

ಜೊತೆಗೆ ಒಮ್ಮೆ ಐಫೋನ್ ಅನ್ನು ನಾನು ಬಳಕೆ ಮಾಡಬೇಕು ಎನ್ನುವ ಆಸೆಯನ್ನು ಸಹ ಹೊಂದಿರುತ್ತಾರೆ.!! ಹಾಗಾಗಿ, ಇಂದಿನ ಲೇಖದಲ್ಲಿ ನಾವು ನಿಮಗೆ ಐಫೋನ್ ಪ್ರಿಯರು ಏಕೆ ಹೆಚ್ಚು.? ಅಂಡ್ರಾಯ್ಡ್ ಮತ್ತು ಐಫೋನ್‌ಗೆ ಏನು ವ್ಯತ್ಯಾಸ ಎಂಬುದನ್ನು ತಿಳಿಸಿಕೊಡುತ್ತೇವೆ.! ಕಾಸಿಗೆ ತಕ್ಕ ಕಜ್ಜಾಯವು ಐಫೋನ್‌ಗಳಾಗಿದ್ದು, ಅವುವಳ ವಿಶೇಷತೆ ಏನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಗುಣಮಟ್ಟದಲ್ಲಿ ಐಫೋನ್‌ಗೆ ಸಾಟಿಯಿಲ್ಲ!!

ಗುಣಮಟ್ಟದಲ್ಲಿ ಐಫೋನ್‌ಗೆ ಸಾಟಿಯಿಲ್ಲ!!

2007 ರಲ್ಲಿ ಐಫೋನ್‌ಗಳು ಬಿಡುಗಡೆಯಾದ ನಂತರದಿಂದ ಇಲ್ಲಿಯವರೆಗೂ ಐಫೋನ್‌ಗಳ ಗುಣಮಟ್ಟಕ್ಕೆ ಯಾವುದೇ ಪೋನ್‌ ಸಾಟಿ ಇಲ್ಲ ಎನ್ನಬಹುದು.! ಬಹುಕಾಲ ಬಾಳಿಕೆ ಬರುವಂತಹ ಐಫೋನ್‌ಗಳನ್ನು ಆಪಲ್ ಮೊದಲೇ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಆದರೆ, ಇತ್ತೀಚಿಗೆ ಗುಣಮಟ್ಟದ ಕೆಲವು ಆಂಡ್ರಾಯ್ಡ್ ಪೋನ್‌ಗಳು ಮಾರುಕಟ್ಟೆಗೆ ಕಾಲಿಡುತ್ತಿವೆ.!!

ಐಫೋನ್‌ಗಳಲ್ಲಿ ಸುರಕ್ಷತೆಗೆ ಹೆಚ್ಚು ಆಧ್ಯತೆ!!

ಐಫೋನ್‌ಗಳಲ್ಲಿ ಸುರಕ್ಷತೆಗೆ ಹೆಚ್ಚು ಆಧ್ಯತೆ!!

ಆಪಲ್ ಕಂಪೆನಿ ತನ್ನ ಡಿವೈಸ್ ಬಳಕೆದಾರರ ಸುರಕ್ಷತೆ ಬಗ್ಗೆ ಹೆಚ್ಚು ಗಮನ ಹರಿಸುತ್ತದೆ. ಆಪಲ್‌ನಲ್ಲಿ ಆಪ್ ಅಳವಡಿಸಲು ಆಪ್ ಡೆವಲಪರ್‌ಗಳಿಗೆ ಸಾಕಷ್ಟು ನೀತಿನಿಯಮಗಳಿರುತ್ತವೆ. ಇದರಿಂದ, ಆ ಆಪ್‌ಗಳು ಹೆಚ್ಚು ಉತ್ತಮ ಗುಣಮಟ್ಟದ್ದಾಗಿರುತ್ತವೆ ಎಂಬುದರಲ್ಲಿ ಅನುಮಾನ ಇರುವುದಿಲ್ಲ.! ಹಾಗಾಗಿಯೇ, ಐಫೋನ್‌ಗಳನ್ನು ಹ್ಯಾಕ್ ಮಾಡುವುದು ಸುಲಭವಲ್ಲ!!

ಆಪಲ್‌ನಲ್ಲಿ ಜಾಹಿರಾತು ಕಿರಿಕಿರಿ ಕಡಿಮೆ!!

ಆಪಲ್‌ನಲ್ಲಿ ಜಾಹಿರಾತು ಕಿರಿಕಿರಿ ಕಡಿಮೆ!!

ನೀವು ನಿಮ್ಮ ಆಂಡ್ರಾಯ್ಡ್ ಪೋನ್‌ಗೆ ಯಾವುದಾದರೂ ಆಪ್‌ಗಳನ್ನು ಡೌನ್‌ಲೋಡಿಕೊಂಡರೆ ನಿಮಗೆ ಜಾಹಿರಾತುಗಳ ಕಿರಿಕಿರಿಯೂ ಜೊತೆಯಲ್ಲಿಯೇ ಬರುತ್ತದೆ.!! ನಿಮಗೆ ಸೇವೆಯನ್ನು ನೀಡುವುದಕ್ಕಿಂತ ಹೆಚ್ಚು ಜಾಹಿರಾತುಗಳು ನಿಮ್ಮನ್ನು ಕಾಡುತ್ತವೆ.! ಆದರೆ, ಆಪಲ್ ಫೋನ್‌ಗಳಲ್ಲಿ ಈ ರೀತಿಯ ಹೆಚ್ಚಿನ ಕಿರಿಕಿರಿ ಇಲ್ಲ.!!

ಹ್ಯಾಂಗ್ ಆಗೊಲ್ಲಾ!!

ಹ್ಯಾಂಗ್ ಆಗೊಲ್ಲಾ!!

ಆಂಡ್ರಾಯ್ಡ್ ಫೋನ್‌ಗಳಿಗೆ ಹೋಲಿಸಿದರೆ ಆಪ್ಲ್‌ನಲ್ಲಿಯೇ ಕಡಿಮೆ RAM ಇರುತ್ತದೆ ಎಂದು ನಿಮಗೆ ಗೊತ್ತಿರಬಹುದು. ಆದರೆ, ನಿಮಗೆ ಗೊತ್ತಾ? ಆಪಲ್ ಫೋನ್‌ನಲ್ಲಿ 1GB RAM ಇದ್ದರೂ ಸಹ ಮೊಬೈಲ್ ಹ್ಯಾಂಗಿಂಗ್ ತೊಂದರೆ ಕಡಿಮೆ. ಆದರೆ, ಆಂಡ್ರಾಯ್ಡ್ ಪೋನ್‌ನಲ್ಲಿ 3GB RAM ಇದ್ದರೂ ಸಹ ಮೊಬೈಲ್ ಹ್ಯಾಂಗ್ ಆಗುತ್ತದೆ.!!

ಪ್ರತಿಷ್ಠೆಗಿಂತ ಹೆಚ್ಚಿದೆ ಉಪಯೋಗ!!

ಪ್ರತಿಷ್ಠೆಗಿಂತ ಹೆಚ್ಚಿದೆ ಉಪಯೋಗ!!

ಐಫೋನ್ ಒಂದಿಷ್ಟು ದುಬಾರಿಯಾಗಿರುವುದರಿಂದ ಅದು ಪ್ರತಿಷ್ಠೆಯಾಗಿ ಬದಲಾಗಿದೆ ಎನ್ನುವುದು ಸುಳ್ಳು. ಐಫೋನ್ ದುಬಾರಿಯಾಗಿರುವುದಕ್ಕಿಂತಲೂ ಹೆಚ್ಚಾಗಿ ಗುಣಮಟ್ಟ ಮತ್ತು ಸೆಕ್ಯುರಿಟಿಯ ಮುಖ್ಯವಾಗಿದೆಗಿದೆ.! ಹಾಗಾಗಿಯೇ, ಎಲ್ಲರೂ ಐಫೋನ್ ಬಳಕೆಗೆ ಹೆಚ್ಚು ಇಷ್ಟಪಡುತ್ತಾರೆ.!!

Best Mobiles in India

English summary
I am not an ANDROID PHONE, and never have been. to know more visit to kannada.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X