ಆ್ಯಂಡ್ರಾಯ್ಡ್ ನಲ್ಲಿ ಗೂಗಲ್ ಮ್ಯಾಪಿನ ಉಪಯುಕ್ತತೆಯನ್ನು ಉತ್ತಮಗೊಳಿಸಲು ಐದು ಸಲಹೆಗಳು.

|

ಆ್ಯಂಡ್ರಾಯ್ಡ್ ಬಳಕೆದಾರರಿಗೆ ಗೂಗಲ್ ಮ್ಯಾಪುಗಳು ಅತ್ಯಂತ ಸಹಕಾರಿ. ಮ್ಯಾಪುಗಳ ಸಹಾಯದಿಂದ ಯಾವುದೇ ಜಾಗಕ್ಕಾದರೂ ಸಲೀಸಾಗಿ ಹೋಗಬಹುದು, ಹತ್ತಿರದ ಜಾಗಗಳನ್ನು ಹುಡುಕಬಹುದು.

ಆಂಡ್ರಾಯ್ಡ್‌ನಲ್ಲಿ ಗೂಗಲ್‌ ಮ್ಯಾಪ್‌ ಉತ್ತಮಗೊಳಿಸಲು ಟಾಪ್‌ 5 ಟಿಪ್ಸ್

ದಾರಿ ಮತ್ತು ಜಾಗದ ಹುಡುಕಾಟವಷ್ಷೇ ಅಲ್ಲದೆ ಗೂಗಲ್ ಮ್ಯಾಪಿನಿಂದ ಇನ್ನೂ ಅನೇಕ ಕೆಲಸಗಳನ್ನು ಮಾಡಬಹುದು.

ಓದಿರಿ: ರಿಲಾಯನ್ಸ್ 'ಜಿಯೋಟಿವಿ' ಆಪ್‌ ಓಪನ್‌ ಸಮಸ್ಯೆ ಪರಿಹಾರಕ್ಕಾಗಿ ಈ ಸಲಹೆಗಳು

ಆ್ಯಂಡ್ರಾಯ್ಡಿನಲ್ಲಿ ಗೂಗಲ್ ಮ್ಯಾಪುಗಳ ಉಪಯುಕ್ತತೆಯನ್ನು ಹೆಚ್ಚಿಸಿಕೊಳ್ಳಲು ಮತ್ತು ಇನ್ನೂ ಅನೇಕ ಲಾಭಗಳನ್ನು ಪಡೆಯಲು ಇಲ್ಲಿವೆ ಐದು ಉತ್ತಮ ಸಲಹೆಗಳು. ಒಮ್ಮೆ ಓದಿ.

ವಾಹನ ಚಲಾಯಿಸುವಾಗ ಗೂಗಲ್ ನೌ ಕಮ್ಯಾಂಡನ್ನು ಉಪಯೋಗಿಸಿ.

ವಾಹನ ಚಲಾಯಿಸುವಾಗ ಗೂಗಲ್ ನೌ ಕಮ್ಯಾಂಡನ್ನು ಉಪಯೋಗಿಸಿ.

ವಾಹನ ಚಲಾಯಿಸುವಾಗ ಗೂಗಲ್ ಮ್ಯಾಪ್ಸ್ ಅತ್ಯಂತ ಉಪಯುಕ್ತ. ಆದರೆ ವಾಹನ ಚಲಾಯಿಸುತ್ತಲೇ ಮ್ಯಾಪಿನ ಕಡೆಗೆ ನೋಡುವುದು ಕಷ್ಟದ ಕೆಲಸ. ಗೂಗಲ್ ನೌ ಬಳಸಿಕೊಂಡು ಈ ತೊಂದರೆಯನ್ನು ನಿವಾರಿಸಿಕೊಳ್ಳಬಹುದು. ಗೂಗಲ್ ನೌಗೆ ನೀವು ಕಮ್ಯಾಂಡ್ ನೀಡಿದರೆ ಅದು ನಿಮ್ಮ ಮಾತನ್ನು ಕೇಳಿ ದಾರಿಯ ಬಗ್ಗೆ ಉತ್ತರ ನೀಡುತ್ತದೆ, ಮ್ಯಾಪು ನೋಡುವ ಅವಶ್ಯಕತೆಯಿಲ್ಲ.

ಗೂಗಲ್ ಮ್ಯಾಪ್ ಆಫ್ ಲೈನ್ ಅನ್ನು ಬಳಸಿ.

ಗೂಗಲ್ ಮ್ಯಾಪ್ ಆಫ್ ಲೈನ್ ಅನ್ನು ಬಳಸಿ.

ಗೂಗಲ್ ಮ್ಯಾಪನ್ನು ಆಫ್ ಲೈನಾಗಿ ಬಳಸಿಕೊಂಡು ಬಹಳಷ್ಟು ಡೇಟಾವನ್ನು ಉಳಿಸಬಹುದು. ತಮಗೆ ಬೇಕಾದ ಹಾದಿಯ ಮ್ಯಾಪನ್ನು ಡೌನ್ ಲೋಡ್ ಮಾಡಿಕೊಂಡು ಆಫ್ ಲೈನಿನಲ್ಲಿ ಬಳಸಿಕೊಳ್ಳಬಹುದು.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ವೇಗ ಮತ್ತು ವೇಗದ ಮಿತಿಯನ್ನು ಗಮನಿಸಿ.

ನಿಮ್ಮ ವೇಗ ಮತ್ತು ವೇಗದ ಮಿತಿಯನ್ನು ಗಮನಿಸಿ.

ಗೂಗಲ್ ಮ್ಯಾಪಿನಲ್ಲಿ ದಾರಿಯ ವಿವರಗಳ ಜೊತೆಜೊತೆಗೇ ನಿಮ್ಮ ವೇಗ ಮತ್ತು ಆ ದಾರಿಯಲ್ಲಿರುವ ವೇಗದ ಮಿತಿಯನ್ನು ತಿಳಿದುಕೊಳ್ಳಬಹುದು. ವೆಲೊಸಿರ್ಯಾಪ್ಟರ್ - ಮ್ಯಾಪ್ ಸ್ಪೀಡ್ ಲಿಮಿಟ್ ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು.

ಗೂಗಲ್ ಮ್ಯಾಪ್ ಬಳಸಿ ಪ್ರವಾಸವನ್ನು ಯೋಜಿಸಿ.

ಗೂಗಲ್ ಮ್ಯಾಪ್ ಬಳಸಿ ಪ್ರವಾಸವನ್ನು ಯೋಜಿಸಿ.

ಗೂಗಲ್ ಮ್ಯಾಪ್ ಬಳಸಿಕೊಂಡು ಬಳಕೆದಾರರು ಸಾರ್ವಜನಿಕ ಸಾರಿಗೆಯ ಕುರಿತ ಮಾಹಿತಿಯನ್ನು ಪಡೆಯಬಹುದು. ಪಬ್ಲಿಕ್ ಟ್ರಾನ್ಸ್ ಫೊರ್ಟೇಷನ್ ಟ್ಯಾಬ್ ಮೇಲೆ ಕ್ಲಿಕ್ಕಿಸಿ ನಂತರ ಡಿಪಾರ್ಟ್ ಅಟ್ ಬಟನ್ ಅನ್ನು ಕ್ಲಿಕ್ಕಿಸಿ.

ಇದರಿಂದ ನಿಮಗೆ ಎಷ್ಟು ಘಂಟೆಗೆ ತಲುಪಿತ್ತೀರಿ ಎನ್ನುವ ಮಾಹಿತಿ ದೊರೆಯುತ್ತದೆ, ಪ್ರಯಾಣದ ಸಮಯದಲ್ಲಿರುವ ಟ್ರಾಫಿಕ್ಕಿನ ಬಗ್ಗೆಯೂ ತಿಳಿಯುತ್ತದೆ.

ನಿಮ್ಮ ಹಾದಿಗೆ ಮಲ್ಟಿಪಲ್ ಸ್ಟಾಪ್ಸ್ ಹಾಕಿ.

ನಿಮ್ಮ ಹಾದಿಗೆ ಮಲ್ಟಿಪಲ್ ಸ್ಟಾಪ್ಸ್ ಹಾಕಿ.

ಒಂದುವೇಳೆ ನಿಮಗೆ ಗೂಗಲ್ ಮ್ಯಾಪ್ ತೋರಿಸಿದ ಹಾದಿಗಿಂತ ವಿಭಿನ್ನ ಹಾದಿಯಲ್ಲಿ ಹೋಗಬೇಕೆಂದಿದ್ದರೆ, ಬಲ ಮೇಲ್ತುದಿಯಲ್ಲಿರುವ ಮೂರು ಚುಕ್ಕೆಯ ಗುರುತಿನ ಮೇಲೆ ಕ್ಲಿಕ್ಕಿಸಿ ಅಲ್ಲಿರುವ ಹ್ಯಾಂಬರ್ಗರ್ ಆಯ್ಕೆಯ ಮೇಲೆ ಕ್ಲಿಕ್ಕಿಸಿ.

ನಂತರ ನಿಮಗೆ ಬೇಕಾದ ಹಾದಿಯನ್ನು ಆಯ್ದುಕೊಳ್ಳಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Here's what you can do with google Maps, other than just checking out routes and discovering places.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X