ಆಂಡ್ರಾಯ್ಡ್ ಫೋನ್‌ನಲ್ಲಿ ಸ್ಪೇಸ್ ಫ್ರಿಗಾಗಿ ಸಲಹೆಗಳು

Written By:

ಸೀಮಿತ ಸ್ಟೋರೇಜ್ ಆಯ್ಕೆಗಳಲ್ಲಿ ಫೋನ್ ಬಂದಾಗ ಸಂಗ್ರಹಣೆಯು ಒಂದು ಸಮಸ್ಯೆಯಾಗಿ ತಲೆದೋರುತ್ತದೆ. ಕೆಲವೊಂದು ಫೋನ್‌ಗಳು ವಿಸ್ತರಣಾ ಸಾಮರ್ಥ್ಯವನ್ನು ಪಡೆದುಕೊಂಡು ಬರುತ್ತವೆ ಆದರೆ ಎಲ್ಲಾ ಡಿವೈಸ್‌ಗಳಲ್ಲಿ ಈ ಅಂಶವನ್ನು ಕಾಣುವುದು ಕಷ್ಟ. ಹಾಗಿದ್ದರೆ ಇಂತಹ ಫೋನ್‌ಗಳಲ್ಲಿ ಸಂಗ್ರಹಣಾ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿಕೊಳ್ಳುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೋನ್‌ ಸ್ಥಳಾವಕಾಶ

ಫೋನ್‌ ಸ್ಥಳಾವಕಾಶ

ಸ್ಪೇಸ್ ಕ್ಲಿಯರ್ ಮಾಡಿ

ನಿಮ್ಮ ಫೋನ್‌ನಲ್ಲಿ ಸ್ಥಳಾವಕಾಶ ನಿಮಗೆ ಅಗತ್ಯ ಎಂದಾದಲ್ಲಿ ಕೆಲವೊಂದು ಫೋಟೋಗಳನ್ನು ನೀವು ಅಳಿಸಬೇಕಾಗುವುದು ಅನಿವಾರ್ಯ.

ಗೂಗಲ್ ಡ್ರೈವ್ ಅಥವಾ ಮೈಕ್ರೋಸಾಫ್ಟ್ ಒನ್ ಡ್ರೈವ್‌

ಗೂಗಲ್ ಡ್ರೈವ್ ಅಥವಾ ಮೈಕ್ರೋಸಾಫ್ಟ್ ಒನ್ ಡ್ರೈವ್‌

ಕ್ಲೌಡ್‌ಗೆ ಸರಿಸಿ

ನಿಮ್ಮ ಹಳೆಯ ಫೋಟೋಗಳನ್ನು ಅಳಿಸುವ ಮನಸ್ಸು ನಿಮಗಿಲ್ಲ ಎಂದಾದಲ್ಲಿ ಆ ಡೇಟಾವನ್ನು ಕ್ಲೌಡ್ ಸೇವೆಗಳಾದ ಗೂಗಲ್ ಡ್ರೈವ್ ಅಥವಾ ಮೈಕ್ರೋಸಾಫ್ಟ್ ಒನ್ ಡ್ರೈವ್‌ಗೆ ಸರಿಸಿಕೊಳ್ಳಿ.

ಒಟಿಜಿ ಪೆನ್ ಡ್ರೈವ್ ಇಲ್ಲವೇ ಮೈಕ್ರೋ ಎಸ್‌ಡಿ ಕಾರ್ಡ್‌

ಒಟಿಜಿ ಪೆನ್ ಡ್ರೈವ್ ಇಲ್ಲವೇ ಮೈಕ್ರೋ ಎಸ್‌ಡಿ ಕಾರ್ಡ್‌

ಹೆಚ್ಚುವರಿ ಸ್ಟೋರೇಜ್

ನಿಮ್ಮ ಎಲ್ಲಾ ಡೇಟಾವನ್ನು ಕಂಪ್ಯೂಟರ್‌ಗೆ ಕೂಡ ವರ್ಗಾಯಿಸಿಕೊಳ್ಳಬಹುದಾಗಿದೆ. ಡೇಟಾ ಕೇಬಲ್ ಅನ್ನು ಒಮ್ಮೆ ನೀವು ಸಂಪರ್ಕ ಪಡಿಸಿಕೊಳ್ಳಿ ನಂತರ ಆಯ್ಕೆಗಳನ್ನು ಆರಿಸಿಕೊಂಡು ಕಂಪ್ಯೂಟರ್‌ಗೆ ಇವುಗಳನ್ನು ವರ್ಗಾಯಿಸಿಕೊಳ್ಳಬಹುದಾಗಿದೆ. ಒಟಿಜಿ ಪೆನ್ ಡ್ರೈವ್ ಇಲ್ಲವೇ ಮೈಕ್ರೋ ಎಸ್‌ಡಿ ಕಾರ್ಡ್‌ಗೂ ವರ್ಗಾವಣೆ ಮಾಡಿಕೊಳ್ಳಬಹುದು.

ಬಳಸದ ಅಪ್ಲಿಕೇಶನ್‌

ಬಳಸದ ಅಪ್ಲಿಕೇಶನ್‌

ಅಪ್ಲಿಕೇಶನ್ ಅಳಿಸಿ

ನೀವು ಬಳಸದ ಅಪ್ಲಿಕೇಶನ್‌ಗಳನ್ನು ಅಳಿಸಿ. ಸೆಟ್ಟಿಂಗ್ಸ್ - ಅಪ್ಲಿಕೇಶನ್ - ಅನ್‌ವಾಂಟೆಡ್ ಆಪ್ಸ್ ಆರಿಸಿ ಮತ್ತು ಅನ್‌ಇನ್‌ಸ್ಟಾಲ್ ಮಾಡಿ

ತಾತ್ಕಾಲಿಕ ಸ್ಟೋರೇಜ್ ಪ್ರದೇಶ

ತಾತ್ಕಾಲಿಕ ಸ್ಟೋರೇಜ್ ಪ್ರದೇಶ

ಕ್ಯಾಶ್ ಕ್ಲಿಯರ್ ಮಾಡಿ

ತಾತ್ಕಾಲಿಕ ಸ್ಟೋರೇಜ್ ಪ್ರದೇಶವನ್ನು ಕ್ಯಾಶ್ ಎಂದು ಕರೆಯುತ್ತೇವೆ. ಇದು ಕೂಡ ಒಮ್ಮೊಮ್ಮೆ ಸ್ಥಳವನ್ನು ಅತಿಕ್ರಮಿಸಿಕೊಳ್ಳಬಹುದು. ಆದ್ದರಿಂದ ಇವುಗಳನ್ನು ಆಗಾಗ್ಗೆ ತೆರವುಗೊಳಿಸುತ್ತಿರಬೇಕು. ಸೆಟ್ಟಿಂಗ್ಸ್ - ಆಪ್ಸ್ - ಕ್ಯಾಶ್ ಇರುವ ಆಪ್ಸ್ ಆರಿಸಿ - ಕ್ಯಾಶ್ ಕ್ಲಿಯರ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In order to create room for more storage you have to delete some irrelevant stuff from your phone.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot