ಚಾರ್ಜರ್ ಇಲ್ಲದೇ ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡುವ 5 ವಿಧಾನಗಳು ನಿಮಗೆ ಗೊತ್ತೇ?

Written By:

ಸ್ಮಾರ್ಟ್‌ಫೋನ್‌(Smartphone) ಚಾರ್ಜ್‌ ಮಾಡುವಾಗ ಹೆಚ್ಚು ಬಿಸಿ ಆಗುವುದು, ಮತ್ತು ಚಾರ್ಜರ್ ಬಿಸಿ ಆಗಲು ಮುಖ್ಯ ಕಾರಣಗಳಲ್ಲಿ ಚಾರ್ಜಿಂಗ್‌ ಹೆಚ್ಚು ಮಾಡುವುದು ಮತ್ತು ಚಾರ್ಜಿಂಗ್ ಮಾಡುವ ವಿಧಾನಗಳು ಪ್ರಮುಖವಾಗಿವೆ. ಆದರೆ ಕುತೂಹಲಕಾರಿ ವಿಷಯವೆಂದರೆ ಸ್ಮಾರ್ಟ್‌ಫೋನ್‌ ಅನ್ನು ಯಾವುದೇ ಚಾರ್ಜರ್‌ ಇಲ್ಲದೇ ಹಲವು ವಿಧಾನಗಳಲ್ಲಿ ಚಾರ್ಜ್‌ ಮಾಡಬಹುದು.

'Connect phone to chager' ಎಂಬ ಪಾಪಪ್ ನೋಟಿಫಿಕೇಶನ್‌ ಮೊಬೈಲ್‌ನಲ್ಲಿ ಬಂದ ತಕ್ಷಣವೇ, ಮೊಬೈಲ್‌ಗಿಂತ ಹೆಚ್ಚು ಜನರಿಗೆ ತಲೆಯೇ ಬಿಸಿ ಆಗುತ್ತದೆ. ಇನ್ನೂ ಯಾವುದಾದರೂ ಮುಖ್ಯ ಕೆಲಸ ನಿರ್ವಹಿಸುತ್ತಿದ್ದಲ್ಲಿ, ಫೋನ್‌ನಲ್ಲಿನ ಬ್ಯಾಟರಿ ಪವರ್ ಕಡಿಮೆ ಆದಲ್ಲಿ ಇದೊಂದು ಗಂಭೀರ ಸಮಸ್ಯೆಯೇ ಆಗಿಬಿಡುತ್ತದೆ.

ಆ್ಯಂಡ್ರಾಯ್ಡ್ ನಲ್ಲಿ ಗೂಗಲ್ ಮ್ಯಾಪಿನ ಉಪಯುಕ್ತತೆಯನ್ನು ಉತ್ತಮಗೊಳಿಸಲು ಐದು ಸಲಹೆಗಳು

ಕಡಿಮೆ ಬ್ಯಾಟರಿ ಪವರ್ ನೋಟಿಫಿಕೇಶನ್ ಮತ್ತು ಚಾರ್ಜ್‌ ಮಾಡದ ಪರಿಸ್ಥಿತಿಯಲ್ಲಿರುವ ಸಂದರ್ಭಗಳು ಎಲ್ಲರಿಗೂ ಸಾಮಾನ್ಯವಾಗಿ ಎದುರಾಗುತ್ತವೆ. ಹಾಗಿದ್ರೆ ಅಂತಹ ಪರಿಸ್ಥಿತಿಗಳಲ್ಲಿ ಏನು ಮಾಡುವುದು? ಉತ್ತರ ನಾವು ಹೇಳುತ್ತೇವೆ.

ಗಿಜ್‌ಬಾಟ್‌ನ ಇಂದಿನ ಲೇಖನದಲ್ಲಿ ಫೋನ್‌ ಚಾರ್ಜರ್ ಇಲ್ಲದ ವೇಳೆಯಲ್ಲಿ, ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ಚಾರ್ಜ್‌ ಮಾಡಬಹುದಾದ ಹಲವು ಸೃಜನಾತ್ಮಕ ಮಾರ್ಗಗಳನ್ನು ನಾವು ನಿಮಗೆ ತಿಳಿಸುತ್ತೇವೆ. ಲೇಖನ ಓದಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಫೋನ್‌ ಚಾರ್ಜ್‌ ಮಾಡಲು ಕಿರುಚಿ

ಫೋನ್‌ ಚಾರ್ಜ್‌ ಮಾಡಲು ಕಿರುಚಿ

ಇದೊಂದು ಅತ್ಯಂತ ಸೃಜನಾತ್ಮಕ ಮಾರ್ಗ. ನಿಮ್ಮ ಫೋನ್‌ ಬ್ಯಾಟರಿ ಚಾರ್ಜ್‌ ಮಾಡಲು ಫೋನ್‌ ಹಿಡಿದು ಜೋರಾಗಿ ಕಿರುಚಿ. ಜೋರಾಗಿ ಕಿರಿಚು(ಅರಚು)ವುದರಿಂದ ಎರಡು ಫ್ಲೆಕ್ಸಿಬಲ್ ಎಲೆಕ್ರೋಡ್ಸ್‌ಗಳ ನಡುವೆ ಜಿಂಕ್‌ ಆಕ್ಸೈಡ್ ಕೇಬಲ್ ವೈಬ್ರೇಶನ್, ವಿದ್ಯುತ್‌ ಅನ್ನು ಜೆನೆರೇಟ್ ಮಾಡುತ್ತದೆ. ಈ ಎಲೆಕ್ಟ್ರಿಸಿಟಿ ಉತ್ತಮವಾಗಿ ಫೋನ್‌ ಚಾರ್ಜ್‌ ಮಾಡಲು ಸಹಾಯಕವಾಗುತ್ತದೆ. ಜಸ್ಟ್‌ ಜೋರಾಗಿ ಕೂಗಿರಿ.

ಕ್ರಾಂಕ್ ಕೇಸ್'ನಿಂದ ಸ್ಮಾರ್ಟ್‌ಫೋನ್‌ ರೀಚಾರ್ಜ್‌ ಮಾಡಿ

ಕ್ರಾಂಕ್ ಕೇಸ್'ನಿಂದ ಸ್ಮಾರ್ಟ್‌ಫೋನ್‌ ರೀಚಾರ್ಜ್‌ ಮಾಡಿ

ಕ್ರಾಂಕ್ ಕೇಸ್, ನಿಮ್ಮ ಸ್ವಂತ ರಿಸ್ಟ್‌ಗಿಂತ ಹೆಚ್ಚಿನ ಮಟ್ಟದಲ್ಲಿ ಸ್ಮಾರ್ಟ್‌ಫೋನ್‌ ಚಾರ್ಜ್ ಮಾಡಲು ಅವಕಾಶ ನೀಡುತ್ತದೆ. ಈ ಡಿವೈಸ್ LED ಚಾರ್ಜ್‌ ಸೂಚಕವಾಗಿದ್ದು, ಬ್ಯಾಟರಿ ಲೈಫ್ ಗುಣಮಟ್ಟವನ್ನು ತೋರಿಸುತ್ತದೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಗಾಳಿಗೆ ಹಿಡಿದು ಚಾರ್ಜ್‌ ಮಾಡಿ

ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಗಾಳಿಗೆ ಹಿಡಿದು ಚಾರ್ಜ್‌ ಮಾಡಿ

ಗಾಳಿ ಶಕ್ತಿ(ಪವನ ಶಕ್ತಿ) ಬಳಸಿ ಫೋನ್ ಬ್ಯಾಟರಿ ಚಾರ್ಜ್‌ ಮಾಡಿ. ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ಐಫ್ಯಾನ್ ಕೇಸ್‌ಗೆ ಸೆಟ್‌ ಮಾಡಿ, ಬೈಸಿಕಲ್ ಹ್ಯಾಂಡಲ್‌ಬಾರ್‌ಗೆ ಫಿಕ್ಸ್ ಮಾಡಿ. ನಂತರ 6 ಗಂಟೆಗಳ ಕಾಲ ರೈಡ್‌ ಮಾಡಿ. ಇದು ನಿಮ್ಮ ಫೋನ್‌ ಸಂಪೂರ್ಣ ಚಾರ್ಜ್‌ ಮಾಡುತ್ತದೆ.

ದೇಹದ ಉಷ್ಣಾಂಶದಿಂದಲೂ ಸ್ಮಾರ್ಟ್‌ಫೋನ್ ರೀಚಾರ್ಜ್ ಮಾಡಿ

ದೇಹದ ಉಷ್ಣಾಂಶದಿಂದಲೂ ಸ್ಮಾರ್ಟ್‌ಫೋನ್ ರೀಚಾರ್ಜ್ ಮಾಡಿ

ಫೋನ್‌ ಚಾರ್ಜ್‌ ಮಾಡಲು ಚಾರ್ಜರ್ ಪ್ಲಗ್‌ ಇನ್‌ ಮಾಡುವ ಅವಶ್ಯಕತೆ ಇಲ್ಲ. ನೀವು ಮಲಗುವ ವೇಳೆ ಫೋನ್‌ ಅನ್ನು ಪಕ್ಕದಲ್ಲಿ ಇಡಿ. ಆದರೆ ಚಾರ್ಜರ್ ಕನೆಕ್ಟ್ ಮಾಡಬೇಡಿ.

ಪಾಕೆಟ್‌ಪವರ್ ಬಳಸಿ, ನೀವು ಮಲಗಿರುವ ವೇಳೆಯು ಫೋನ್ ರೀಚಾರ್ಜ್ ಮಾಡಬಹುದು. ಇದೊಂದು ರೀತಿಯ ಜೀನ್ಸ್ ಶಾರ್ಟ್ಸ್‌ ಆಗಿದ್ದು, 8 ಗಂಟೆಗಳ ಒಳಗೆ ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ಚಾರ್ಜ್‌ ಮಾಡುತ್ತದೆ. ನಂತರ ನೀವು 24 ನಿಮಿಷಗಳ ಕರೆ ಮಾಡಬಹುದು. ಈ ಜೀನ್ಸ್ ಶಾರ್ಟ್ಸ್‌ 37 ಡಿಗ್ರಿ ಉಷ್ಣಾಂಶವನ್ನು ತಲುಪಿ ಚಾರ್ಜ್‌ ಮಾಡುತ್ತದೆ.

ಹಣ್ಣು ಮತ್ತು ತರಕಾರಿ ಬಳಸಿ ಫೋನ್ ಚಾರ್ಜ್‌ ಮಾಡಿ

ಹಣ್ಣು ಮತ್ತು ತರಕಾರಿ ಬಳಸಿ ಫೋನ್ ಚಾರ್ಜ್‌ ಮಾಡಿ

ಜಿಂಕ್ ಮತ್ತು ಕಾಫರ್ ವೈರ್‌ ಹಾಗೂ ಸನ್‌ಗ್ಲಾಸ್ ಅನ್ನು 800 ಆಪಲ್ ಮತ್ತು ಟೊಮೊಟೊಗಳಿಗೆ ಲಿಂಕ್‌ ಮಾಡಿ. ನಂತರ ಈ ದೊಡ್ಡ ಜಾಲದಿಂದ ಸರ್ಕ್ಯೂಟ್ 20mAh ಎಲೆಕ್ಟ್ರಿನ್ ಅನ್ನು ಜೆನೆರೇಟ್ ಮಾಡುತ್ತದೆ. 6V ಬ್ಯಾಟರಿ ಪವರ್ ಚಾರ್ಜ್‌ ಮಾಡಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
5 Ways to Juice Up Your Smartphone Without a Charger. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot