ಸ್ಮಾರ್ಟ್‌ಫೋನ್ ಕಳೆದುಹೋದಾಗ ಸಹಾಯಕ್ಕೆ ಬರುವ 6 ಅಂಶಗಳು

By Shwetha
|

ಒಮ್ಮೆಯಾದರೂ ಜೀವನದಲ್ಲಿ ನಮ್ಮ ಫೋನ್‌ಗಳನ್ನು ನಾವು ಕಳೆದುಕೊಂಡಿರುತ್ತೇವೆ. ಇದು ಕದ್ದು ಹೋಗಿರಬಹುದು, ಮರೆತು ಹೋಗಿರಬಹುದು, ಎಲ್ಲಿಯಾದರೂ ಮಿಸ್ ಪ್ಲೇಸ್ ಆಗಿರಬಹುದು ಅಥವಾ ಬಿದ್ದು ಹೋಗಿರಬಹುದು. ಆದರೆ ಈ ಸಂದರ್ಭಗಳಲ್ಲೆಲ್ಲಾ ನಷ್ಟವುಂಟಾಗುವುದು ನಮಗೇ ಆಗಿದೆ. ನಿಮ್ಮ ಫೋನ್ ನಷ್ಟವಾಗುವುದರ ಜೊತೆಗೆ ನಿಮ್ಮ ವೈಯಕ್ತಿಕ ಡೇಟಾ ಕೂಡ ನಷ್ಟವಾಗುವ ಸಂಭವ ಇರುತ್ತದೆ.

ಓದಿರಿ: ಆಂಡ್ರಾಯ್ಡ್ ಫೋನ್‌ನಲ್ಲಿ ನಷ್ಟವಾದ ಡೇಟಾ ಮರುಪಡೆದುಕೊಳ್ಳುವುದು ಹೇಗೆ?

ನಿಮ್ಮ ಫೋನ್ ಕಳೆದು ಹೋಗುವುದರ ಜೊತೆಗೆ ನಿಮ್ಮ ವೈಯಕ್ತಿಕ ಡೇಟಾ ನಷ್ಟವಾಗುವುದು ಕೂಡ ತುಂಬರಲಾರದ ನಷ್ಟ ಎಂದೆನಿಸಲಿದೆ. ಹಾಗಿದ್ದರೆ ಫೋನ್ ನಷ್ಟವಾದೊಡನೆ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ಈ ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿದ್ದೇವೆ. ಬನ್ನಿ ಆ ಹಂತಗಳೇನು ಎಂಬುದನ್ನು ಇಲ್ಲಿ ನೋಡಿ.

#1

#1

ನಿಮ್ಮ ಫೋನ್‌ಗೆ ಕರೆಮಾಡುವುದು ಅಥವಾ ಎಸ್‌ಎಮ್‌ಎಸ್ ಕಳುಹಿಸುವ ಕಾರ್ಯವನ್ನು ನಿಮಗೆ ಮಾಡಬಹುದಾಗಿದೆ. ನಿಮ್ಮ ಫೋನ್ ಬೇರೆಯವರ ಬಳಿ ಇತ್ತು ಎಂದಾದಲ್ಲಿ ಅದನ್ನವರು ಹಿಂತಿರುಗಿಸುವ ಸಾಧ್ಯತೆ ಕೂಡ ಇರುತ್ತದೆ. ಇಲ್ಲದಿದ್ದರೆ ಫೋನ್ ಮೇಲೆ ಆಸೆ ಕೈಬಿಡಿ.

#2

#2

ನಿಮ್ಮ ಫೋನ್ ಕಳುವಾಯಿತು ಇಲ್ಲವೇ ಬಿದ್ದು ಹೋಯಿತು ಎಂದಾದಲ್ಲಿ, ಡೆಸ್ಕ್‌ಟಾಪ್ ಪಿಸಿಗೆ ಲಾಗಿನ್ ಆಗಿ ಮತ್ತು ನಿಮ್ಮೆಲ್ಲಾ ಪಾಸ್‌ವರ್ಡ್‌ಗಳನ್ನು ಬದಲಾಯಿಸಿ. ನಿಮ್ಮ ಇಮೇಲ್ ಐಡಿ, ಸಾಮಾಜಿಕ ಮಾಧ್ಯಮ ಖಾತೆಗಳಾದ ಫೇಸ್‌ಬುಕ್, ಟ್ವಿಟ್ಟರ್ ಅಥವಾ ನಿಮ್ಮ ಫೋನ್‌ನಲ್ಲಿ ಬಳಸುವ ಇತರ ಅಪ್ಲಿಕೇಶನ್‌ಗಳ ಪಾಸ್‌ವರ್ಡ್ ಬದಲಾಯಿಸಿ.

#3

#3

ನಿಮ್ಮ ಫೋನ್ ಅನ್ನು ಲೊಕೇಟ್ ಮಾಡಲು ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್ ಅನ್ನು ಬಳಸಿಕೊಳ್ಳಬಹುದಾಗಿದೆ. ಇದರಲ್ಲಿ ರಿಂಗ್, ಲಾಕ್ ಅಥವಾ ಫೋನ್‌ನಲ್ಲಿರುವ ಮಾಹಿತಿಯನ್ನು ಅಳಿಸುವ ಆಯ್ಕೆಗಳಿರುತ್ತವೆ. ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್‌ನೊಂದಿಗೆ ಇದರಲ್ಲಿ ಯಾವುದಾದರೂ ಒಂದನ್ನು ಮಾಡಬಹುದಾಗಿದೆ. ನಿಮ್ಮ ಡಿವೈಸ್ ಅನ್ನು ನೀವು ಅಳಿಸಿದಲ್ಲಿ, ನಿಮ್ಮ ಫೋನ್ ಅನ್ನು ಬಳಸುವ ವ್ಯಕ್ತಿಗೆ ಅದು ಅಪ್ರಯೋಜನ ಎಂದೆನಿಸಲಿದೆ.

#4

#4

ನಿಮ್ಮ ಟೆಲಿಕಾಮ್ ಆಪರೇಟರ್ ಅನ್ನು ಸಂಪರ್ಕಿಸಿ ಮತ್ತು ಸಿಮ್ ಕಾರ್ಡ್‌ಗಳನ್ನು ಬ್ಲಾಕ್ ಮಾಡಿ. ಈ ವಿಧಾನದಲ್ಲಿ, ಕರೆಗಳನ್ನು ಮಾಡಲು ಆ ವ್ಯಕ್ತಿಯು ನಿಮ್ಮ ಸಿಮ್ ಕಾರ್ಡ್‌ಗಳನ್ನು ಬಳಸುವುದಿಲ್ಲ. ಕಾನೂನು ಬಾಹಿರ ಚಟುವಟಿಕೆಗಳಿಗೆ ನಿಮ್ಮ ಸಿಮ್ ಕಾರ್ಡ್ ಅನ್ನು ಬಳಸುವ ಅನಧಿಕೃತ ವ್ಯಕ್ತಿಗಳನ್ನು ಈ ರೀತಿಯಾಗಿ ನಿರ್ಬಂಧಿಸಬಹುದಾಗಿದೆ.

#5

#5

ಕೆಲವೊಮ್ಮೆ ಪೊಲೀಸ್ ಬಳಿ ಹೋಗಿ ಡಿವೈಸ್ ಕದ್ದು ಹೋದ ಬಗ್ಗೆ ದೂರು ದಾಖಲಿಸಿದರೂ ಏನೂ ಪ್ರಯೋಜನವಾಗುವುದಿಲ್ಲ. ಆದರೂ ಪೊಲೀಸ್ ಅನ್ನು ಸಂಪರ್ಕಿಸಿ ದೂರು ದಾಖಲಿಸಿ. ನಿಮ್ಮ ಅದೃಷ್ಟವಿದ್ದಲ್ಲಿ ಅವರುಗಳೇ ಸ್ವತಃ ಫೋನ್ ಅನ್ನು ಹುಡುಕಿಕೊಡುವ ಜವಬ್ದಾರಿಯನ್ನು ಕೈಗೊಳ್ಳುತ್ತಾರೆ.

#6

#6

ನಿಮ್ಮ ಇಮೇಲ್ ಖಾತೆಗಳು ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳ ಮೇಲೆ ನಿಗಾವಹಿಸಿ. ನಿಮ್ಮ ಸಾಮಾಜಿಕ ಮಾಧ್ಯಮವನ್ನು ಬೇರೆ ಯಾರಾದರೂ ಬಳಸಿ ಅನಗತ್ಯ ಪೋಸ್ಟ್‌ಗಳನ್ನು ಹಾಕುತ್ತಿಲ್ಲ ಮತ್ತು ನಿಮ್ಮ ಇಮೇಲ್ ಬಳಸಿ ಸ್ಪ್ಯಾಮ್ ಇಮೇಲ್ ಅಥವಾ ಹಾಕ್ಸ್ ಇಮೇಲ್‌ಗಳನ್ನು ಇತರರಿಗೆ ಕಳುಹಿಸುತ್ತಿಲ್ಲ ಎಂಬುದನ್ನು ದೃಢೀಕರಿಸಿಕೊಳ್ಳಿ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಒಂದೇ ಆಂಡ್ರಾಯ್ಡ್ ಡಿವೈಸ್‌ನಲ್ಲಿ ಎರಡು ವಾಟ್ಸಾಪ್ ಖಾತೆಗಳನ್ನು ಬಳಸುವುದು ಹೇಗೆ?</a><br /><a href='ಫೇಸ್‌ಬುಕ್‌ ಪೇಜ್‌' ಕ್ರಿಯೇಟ್ ಮಾಡುವುದು ಹೇಗೆ?
ಫೋನ್ ಬ್ಯಾಟರಿ ಉಳಿಸುವ ಟಾಪ್ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು" title="ಒಂದೇ ಆಂಡ್ರಾಯ್ಡ್ ಡಿವೈಸ್‌ನಲ್ಲಿ ಎರಡು ವಾಟ್ಸಾಪ್ ಖಾತೆಗಳನ್ನು ಬಳಸುವುದು ಹೇಗೆ?
'ಫೇಸ್‌ಬುಕ್‌ ಪೇಜ್‌' ಕ್ರಿಯೇಟ್ ಮಾಡುವುದು ಹೇಗೆ?
ಫೋನ್ ಬ್ಯಾಟರಿ ಉಳಿಸುವ ಟಾಪ್ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು" />ಒಂದೇ ಆಂಡ್ರಾಯ್ಡ್ ಡಿವೈಸ್‌ನಲ್ಲಿ ಎರಡು ವಾಟ್ಸಾಪ್ ಖಾತೆಗಳನ್ನು ಬಳಸುವುದು ಹೇಗೆ?
'ಫೇಸ್‌ಬುಕ್‌ ಪೇಜ್‌' ಕ್ರಿಯೇಟ್ ಮಾಡುವುದು ಹೇಗೆ?
ಫೋನ್ ಬ್ಯಾಟರಿ ಉಳಿಸುವ ಟಾಪ್ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
While losing your phone will make you feel guilty, but losing out on your data could have consequences. Let's look at 6 Things to do when you lose your phone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X