ನೀವು ಕೇಳರಿಯದ ಗೂಗಲ್ ನೌನ ಚಮತ್ಕಾರೀ ಗುಣಗಳು

Posted By:

ಗೂಗಲ್ ನೌ ಅನ್ನು ಹೊಂದಿರುವುದು ಎಂದರೆ ವೈಯಕ್ತಿಕ ಸಹಾಯವನ್ನು ಪಡೆದುಕೊಂಡಿರುವಂತೆ. ನಿಮ್ಮ ಫೋನ್‌ನಲ್ಲಿಯೇ ಸುಲಭವಾಗಿ ಹುಡುಕುವುದು, ನಿರ್ವಹಿಸುವುದು ಮತ್ತು ಮಾಹಿತಿಯನ್ನು ಸಂಘಟಿಸುವುದು ಎಂದಾಗಿದೆ. ನಿಮಗೆ ಸಂಬಂಧಿಸಿದ ಹುಡುಕಾಟಗಳು, ಫ್ಲೈಟ್ ಟಿಕೆಟ್‌ಗಳು, ಹೋಟೆಲ್ ರಿಸರ್ವೇಶನ್‌ಗಳು, ಸ್ನೇಹಿತರ ಸ್ಥಾನ ಮುಂತಾದ ಕೆಲಸಗಳನ್ನು ಗೂಗಲ್ ನೌ ಕಾರ್ಡ್‌ಗಳನ್ನು ಬಳಸಿಕೊಂಡು ನಿರ್ವಹಸಿಬಹುದಾಗಿದೆ.

ಇದನ್ನೂ ಓದಿ: ನೋಕಿಯಾ ಲ್ಯೂಮಿಯಾ 830 ಖರೀದಿಯ ತಾಣಗಳು

ಕೆಳಗಿನ ಸಲಹೆಗಳು ಮತ್ತು ಸೂಚನೆಗಳನ್ನು ಅನುಸರಿಸುವ ಮೂಲಕ ಗೂಗಲ್ ನೌನಿಂದ ಇನ್ನಷ್ಟನ್ನು ಪಡೆದುಕೊಳ್ಳಿ. ನಿಮ್ಮ ಬೆರಳಲ್ಲೇ ನಿಮಗೆ ಬೇಕಾಗಿರುವ ಮಾಹಿತಿಗಳನ್ನು ಈ ವ್ಯವಸ್ಥೆ ಒದಗಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೂಗಲ್ ಸಂಶೋಧಕ ವಿಷಯಗಳು

ಗೂಗಲ್ ಸಂಶೋಧಕ ವಿಷಯಗಳು

#1

ನೀವು ಹುಡುಕಾಡಿರುವ ಮತ್ತು ಕ್ಲಿಕ್ ಮಾಡಿರುವ ಲಿಂಕ್‌ಗಳ ಎಲ್ಲಾ ವರದಿಗಳನ್ನು ಗೂಗಲ್ ನೌ ಕಾಪಿಡುತ್ತದೆ. ನಿಮ್ ಹಿಂದಿನ ಹುಡುಕಾಟಗಳ ಬಗ್ಗೆ ಅರಿಯುವ ಕುತೂಹಲ ನಿಮಗಿದ್ದಲ್ಲಿ ನಿಮ್ಮ ಸಂಶೋಧನಾ ವಿಷಯಗಳನ್ನು ಇಲ್ಲಿ ಪರಿಶೀಲಿಸಿ.

ರಿಮೈಂಡರ್ ಪಡೆದುಕೊಳ್ಳಿ

ರಿಮೈಂಡರ್ ಪಡೆದುಕೊಳ್ಳಿ

#2

ನೀವು ಯಾವುದೇ ಟಿವಿ ಶೋ, ಸಂಗೀತ ಕಾರ್ಯಕ್ರಮವನ್ನು ಗೂಗಲ್ ನೌನಲ್ಲಿ ಹುಡುಕಾಡಬಹುದು. ಸರ್ಚ್ ಕಾರ್ಡ್‌ನ ಕೆಳಭಾಗದಲ್ಲಿ "ರಿಮೈಂಡ್ ಯೂ ಎಬೌಟ್ ನ್ಯೂ ಎಪಿಸೋಡ್ಸ್" ಆಯ್ಕೆಯನ್ನು ಕಾಣುತ್ತೀರಿ. ಯಾವುದಾದರೂ ಹೊಸ ಅಪ್‌ಡೇಟ್ ಇದ್ದಲ್ಲಿ ಗೂಗಲ ನೌ ಸ್ವಯಂಚಾಲಿತವಾಗಿ ನಿಮಗೆ ನೆನಪಿಸುತ್ತದೆ.

ಕಮ್ಯೂಟ್ ಶೇರಿಂಗ್

ಕಮ್ಯೂಟ್ ಶೇರಿಂಗ್

#3

ನೀವಿರುವ ಸ್ಥಳದ ಬಗ್ಗೆ ನಿಮ್ಮ ಸ್ನೇಹಿತರು ಮತ್ತು ಮನೆಯವರಿಗೆ ಮಾಹಿತಿ ನೀಡಬೇಕೆಂಬುದು ನಿಮ್ಮ ಬಯಕೆಯಾಗಿದ್ದರೆ ಗೂಗಲ್ ಪ್ಲಸ್‌ನಲ್ಲಿ ಲೊಕೇಶನ್ ಶೇರಿಂಗ್ ಅನ್ನು ಸಕ್ರಿಯಗೊಳಿಸುವ ಮೂಲಕ ಇದನ್ನು ಮಾಡಬಹುದು. ಗೂಗಲ್ ನೌನಲ್ಲಿ ಕಮ್ಯೂಟ್ ಶೇರಿಂಗ್ ಅನ್ನು ಸಕ್ರಿಯಗೊಳಿಸುವ ಮೂಲಕ ನೀವಿರುವ ಸ್ಥಳದಲ್ಲಿನ ಟ್ರಾಫಿಕ್ ಜಾಮ್, ಬ್ರೇಕ್‌ಡೌನ್ಸ್ ಮೊದಲಾದ ವಿಷಯಗಳನ್ನು ಹಂಚಿಕೊಳ್ಳಬಹುದು. ಇದನ್ನು ಮಾಡಲು ಗೂಗಲ್ ನೌನಲ್ಲಿ, ಮೆನು>ಸೆಟ್ಟಿಂಗ್ಸ್>ಗೂಗಲ್ ನೌ>ಟ್ರಾಫಿಕ್ ಹೀಗೆ ಮಾಡಿ.

ಜಿಮೇಲ್ ಕಾರ್ಡ್ಸ್ ಮತ್ತು ರಿಸರ್ವೇಶನ್ಸ್

ಜಿಮೇಲ್ ಕಾರ್ಡ್ಸ್ ಮತ್ತು ರಿಸರ್ವೇಶನ್ಸ್

#4

ನೀವು ಗೂಗಲ್ ಕಾರ್ಡ್ಸ್ ಅನ್ನು ಹೊಂದಿರುವಿರಿ, ಜಿಮೇಲ್ ಕಾರ್ಡ್ ಕೂಡ ನಿಮ್ಮ ಬಳಿ ಇದೆ. ನಿಮಗೆ ರಿಸರ್ವೇಶನ್ ಮತ್ತು ಬುಕ್ಕಿಂಗ್‌ಳನ್ನು ಮಾಡುವ ಸಂದರ್ಭದಲ್ಲಿ ನಿಮ್ಮ ಜಿಮೇಲ್ ಅನ್ನು ಪ್ರವೇಶಿಸುವ ಮೂಲಕ, ಗೂಗಲ್ ನೌಗೆ ನಿಮ್ಮ ಖಾತೆಯನ್ನು ಪ್ರವೇಶಿಸುವ ಅನುಮತಿಯನ್ನು ನೀಡುವ ಮೂಲಕ ಈ ರೀತಿಯ ರಿಸರ್ವೇಶನ್‌ಗಳನ್ನು ಮಾಡಬಹುದು.

ವಾಯ್ಸ್ ಸ್ಪೀಚ್

ವಾಯ್ಸ್ ಸ್ಪೀಚ್

#5

ಮೈಕ್ರೋಫೋನ್ ಅನ್ನು ಸಕ್ರಿಯಗೊಳಿಸುವುದು ಒಂದು ತಟ್ಟುವಿಕೆಯಷ್ಟು ಸುಲಭವಾದ ಕ್ರಿಯೆಯಾಗಿದೆ. ಗೂಗಲ್ ನೌಗೆ ಹೋಗಿ ಇಲ್ಲಿ ಮೆನು ನಂತರ ಸೆಟ್ಟಿಂಗ್ಸ್ ಮತ್ತು ವಾಯ್ಸ್ ನಂತರ 'ಹಾಟ್‌ವುಡ್ ಡಿಟೆಕ್ಷನ್' ಇದನ್ನು ಟಿಕ್ ಮಾಡಿ.

ಫೋಟೋಗಳಿಗಾಗಿ ವೈಯಕ್ತಿಕ ಹುಡುಕಾಟ

ಫೋಟೋಗಳಿಗಾಗಿ ವೈಯಕ್ತಿಕ ಹುಡುಕಾಟ

#6

ನಿಮ್ಮ ಗೂಗಲ್ ಪ್ಲಸ್‌ಗೆ ನೀವು ನಿಯಮಿತವಾಗಿ ಫೋಟೋಗಳನ್ನು ಅಪ್‌ಲೋಡ್ ಮಾಡುತ್ತಿದ್ದರೆ ಗೂಗಲ್ ಮೂಲಕ ನಿಮ್ಮ ಫೋಟೋಗಳನ್ನು ನಿಮಗೆ ಹುಡುಕಾಡಬಹುದು. ಉದಾಹರಣೆಗೆ ನಿಮಗೆ ಬೀಚ್‌ಗಳು ಇಷ್ಟವಾಗಿದ್ದರೆ 'ಮೈ ಫೋಟೋಸ್ ಆಫ್ ಬೀಚಸ್' ಇದಕ್ಕಾಗಿ ಹುಡುಕಿ.

ಗೂಗಲ್ ನೌ ಟಿವಿ ಕಾರ್ಡ್ಸ್

ಗೂಗಲ್ ನೌ ಟಿವಿ ಕಾರ್ಡ್ಸ್

#7

ಸ್ಮಾರ್ಟ್ ಟಿವಿಯನ್ನು ಹೊಂದಿರುವವರಿಗೆ ಮಾತ್ರ ಗೂಗಲ್ ನೌ ಟಿವಿ ಕಾರ್ಡ್ಸ್ ಇದೆ. ನಿಮ್ಮ ಸ್ಮಾರ್ಟ್‌ ಟಿವಿ ಸಂಪರ್ಕ ಹೊಂದಿರುವ ಅದೇ ವೈಫೈ ಡಿವೈಸ್‌ಗೆ ಗೂಗಲ್ ನೌ ಸಂಪರ್ಕ ಹೊಂದಿದ್ದರೆ ಸಾಕು ಮೈಕ್ರೋಫೋನ್‌ಗೆ ತಟ್ಟಿ ಟಿವಿ ಶೋದ ಮಾಹಿತಿಗಳನ್ನು ಪಡೆದುಕೊಳ್ಳಬಹುದು.

ಕ್ರೋಮ್‌ನಲ್ಲಿ ಗೂಗಲ್ ನೌ

ಕ್ರೋಮ್‌ನಲ್ಲಿ ಗೂಗಲ್ ನೌ

#8

ಗೂಗಲ್ ನೌ ಅನ್ನು ಡೆಸ್ಕ್‌ಟಾಪ್‌ಗೆ ತರಲು ಇಚ್ಛಿಸುತ್ತೀರಾ? ನೀವು ಕ್ರೋಮ್ ಅನ್ನು ಹೊಂದಿದ್ದರೆ ಸಾಕು, ನಿಮ್ಮ ಕ್ರೋಮ್ ಅನ್ನು ಆರಂಭಿಸಿ chrome://flags/ ಅನ್ನು ಸರ್ಚ್ ಬಾರ್‌ನಲ್ಲಿ ಟೈಪ್ ಮಾಡಿ. ಸಂಶೋಧನೆಗಳ ಪಟ್ಟಿಯನ್ನು ನಿಮಗೆ ಕಂಡುಕೊಳ್ಳಬಹುದು. ನಿಮ್ಮ ಬ್ರೌಸರ್ ಅನ್ನು ರೀಲಾಂಚ್ ಮಾಡಿ ಗೂಗಲ್ ನೌ ಕಾರ್ಡ್‌ಗಳಂತಹ ಇದನ್ನು ಸಕ್ರಿಯಗೊಳಿಸಬೇಕೇ ಎಂಬುದನ್ನು ಕುರಿತು ಅಧಿಸೂಚನೆಯನ್ನು ಪಡೆದುಕೊಳ್ಳುತ್ತೀರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about 8 Tips & Tricks To Get The Most Out of Google Now.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot