ವೇಗವಾಗಿ ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡುವುದು ಹೇಗೆ..? ಇಲ್ಲಿವೆ ಟಿಪ್ಸ್‌..!

By Gizbot Bureau
|

ವಿಡಿಯೋ ಮತ್ತು ಗೇಮಿಂಗ್‌ ಉದ್ಯಮ ಬೆಳೆದಂತೆಲ್ಲ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಚಾರ್ಜಿಂಗ್‌ನದ್ದೆ ದೊಡ್ಡ ಸಮಸ್ಯೆಯಾಗಿದೆ. ಯಾವುದಾದರೂ ಅವಸರದ ಕೆಲಸವಿದ್ದಾಗ ಚಾರ್ಜಿಂಗ್‌ ಪೂರ್ತಿ ಕಡಿಮೆಯಾಗಿದ್ದು, ವೇಗವಾಗಿ ಚಾರ್ಜ್‌ ಆಗಬೇಕಾದ ಅನಿವಾರ್ಯತೆ ಇರುತ್ತದೆ. ಆದರೆ, ನಿಧಾನ ಚಾರ್ಜಿಂಗ್‌ನಿಂದ ಬಳಕೆದಾರರು ಕಿರಿಕಿರಿ ಅನುಭವಿಸುತ್ತಾರೆ. ಹೊಸ ಮೊಬೈಲ್‌ ಖರೀದಿಸಿದಾಗ ಇರುವ ವೇಗದ ಚಾರ್ಜಿಂಗ್‌ ಸಾಮರ್ಥ್ಯ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಸಾಗುತ್ತದೆ. ಅದಕ್ಕಾಗಿಯೇ, ವೇಗದ ಚಾರ್ಜಿಂಗ್‌ ಬಳಕೆಗೆ ಎಲ್ಲ ಬಳಕೆದಾರರು ಬಯಸುತ್ತಾರೆ. ಆಗಿದ್ದರೆ, ನಿಮ್ಮ ಸ್ಮಾರ್ಟ್‌ಫೋನ್‌ನ್ನು ವೇಗವಾಗಿ ಚಾರ್ಜ್‌ ಮಾಡುವುದು ಹೇಗೆ ಅಂತಾ ಒಂದಿಷ್ಟು ಟಿಪ್ಸ್‌ ಇವೆ.. ಓದಿ ಇಷ್ಟ ಆದರೆ ಬಳಸಿ..

ವಾಲ್‌ಪ್ಲಗ್‌ ಬಳಸಿ

ವಾಲ್‌ಪ್ಲಗ್‌ ಬಳಸಿ

ವೇಗದ ಚಾರ್ಜಿಂಗ್‌ಗಾಗಿ ವಾಲ್‌ಪ್ಲಗ್‌ ಬಳಸಿ. ಗುಣಮಟ್ಟದ ಎಸಿ ವಾಲ್‌ಪ್ಲಗ್‌ಗಳು 1 ಆಂಪ್‌ ವಿದ್ಯುತ್‌ನ್ನು ಸ್ಮಾರ್ಟ್‌ಫೋನ್‌ಗೆ ಹರಿಸುತ್ತವೆ. ಇದು ಸಾಮಾನ್ಯ ಯುಎಸ್‌ಬಿ 2.0 ಸಾಕೆಟ್‌ಗಿಂತ ಎರಡು ಪಟ್ಟು ಹೆಚ್ಚಾಗಿರುತ್ತದೆ. ಇನ್ನು, ಥರ್ಡ್‌ ಪಾರ್ಟಿ ಎಸಿ ವಾಲ್‌ಪ್ಲಗ್‌ಗಳು 2.4 ಆಂಪ್‌ವರೆಗೆ ವಿದ್ಯುತ್‌ನ್ನು ಹರಿಸುವುದರಿಂದ ನಿಮ್ಮ ಸ್ಮಾರ್ಟ್‌ಫೋನ್‌ ಮತ್ತು ಯುಎಸ್‌ಬಿ ಕೇಬಲ್‌ಗೆ ಯಾವ ವಾಲ್‌ಪ್ಲಗ್‌ ಸೂಕ್ತ ಎಂಬುದನ್ನು ಅರಿಯುವುದು ಒಳ್ಳೆಯದು.

ವೈರ್‌ಲೆಸ್‌ ಚಾರ್ಜಿಂಗ್‌ ಪ್ಯಾಡ್‌

ವೈರ್‌ಲೆಸ್‌ ಚಾರ್ಜಿಂಗ್‌ ಪ್ಯಾಡ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ S10 ಮತ್ತು ಐಫೋನ್‌ XS ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ಜನಪ್ರಿಯ ಫೋನ್‌ಗಳು ವೈರ್‌ಲೆಸ್‌ ಚಾರ್ಜಿಂಗ್‌ ವ್ಯವಸ್ಥೆಯನ್ನು ಬೆಂಬಲಿಸುತ್ತವೆ. ವೈಯರ್‌ ಚಾರ್ಜಿಂಗ್‌ಗಿಂತ ವೈರ್‌ಲೆಸ್‌ ಚಾರ್ಜಿಂಗ್‌ ನಿಧಾನವಾದರೂ, Qi ಚಾರ್ಜಿಂಗ್‌ಗೆ ಬೆಂಬಲ ನೀಡಿದರೆ 7.5 ವ್ಯಾಟ್‌ನಷ್ಟು ವಿದ್ಯುತ್‌ ಪ್ರವಹಿಸುತ್ತದೆ.

ಹೆಚ್ಚಿನ ಸಾಮರ್ಥ್ಯದ ಕಾರ್‌ ಚಾರ್ಜರ್

ಹೆಚ್ಚಿನ ಸಾಮರ್ಥ್ಯದ ಕಾರ್‌ ಚಾರ್ಜರ್

ಹೆಚ್ಚಿನ ಆಂಪ್‌ ಸಾಮರ್ಥ್ಯದ ವಾಲ್‌ಚಾರ್ಜರ್‌ನಂತೆ 1 ಆಂಪ್‌ಗಿಂತ ಹೆಚ್ಚಿನ ಸಾಮರ್ಥ್ಯದ ಕಾರ್‌ ಚಾರ್ಜರ್‌ಗಳು ವೇಗದ ಚಾರ್ಜಿಂಗ್‌ಗೆ ಹೆಸರುವಾಸಿಯಾಗಿವೆ. ಈ ಪ್ರಕಾರದಲ್ಲಿ ನೀವು 2.0 ಮತ್ತು 3.0 ಕ್ವಿಕ್‌ ಚಾರ್ಜರ್‌ಗಳಂತಹ ದೈನಂದಿನ ಚಾರ್ಜರ್‌ಗಳು 2.4 ಆಂಪ್‌ ವಿದ್ಯುತ್‌ನ್ನು ಸ್ಮಾರ್ಟ್‌ಫೋನ್‌ಗೆ ಪ್ರವಹಿಸುತ್ತವೆ.

ಕ್ವಿಕ್‌ ಚಾರ್ಜ್‌ ಪೊರ್ಟೆಬಲ್‌ ಚಾರ್ಜರ್‌

ಕ್ವಿಕ್‌ ಚಾರ್ಜ್‌ ಪೊರ್ಟೆಬಲ್‌ ಚಾರ್ಜರ್‌

ವಾಲ್‌ ಮತ್ತು ಕಾರ್‌ ಚಾರ್ಜರ್‌ನಂತೆ ಪೊರ್ಟೆಬಲ್‌ ಚಾರ್ಜರ್‌ಗಳು ಕ್ವಿಕ್‌ ಚಾರ್ಜ್‌ ಸಾಮರ್ಥ್ಯ ಹೊಂದಿದ್ದು, ವೈಯರ್‌ ಅಥವಾ ವೈಯರ್‌ಲೆಸ್‌ ಸಾಧನಗಳಿಗೆ ವೇಗದ ಚಾರ್ಜಿಂಗ್‌ ಅವಕಾಶ ನೀಡುತ್ತವೆ. ಕ್ವಿಕ್ ಚಾರ್ಜ್‌ 3.0 ಮತ್ತು Qi 7.5 ವ್ಯಾಟ್‌ನಷ್ಟು ವೇಗದ ಚಾರ್ಜಿಂಗ್‌ ನೀಡುವ ಸಾಧನಗಳನ್ನು ಈ ಪ್ರಕಾರಗಳಲ್ಲಿ ಕಾಣಬಹುದು.

ಯುಎಸ್‌ಬಿ 3.0ಗೆ ಅಪ್‌ಗ್ರೇಡ್‌ ಆಗಿ

ಯುಎಸ್‌ಬಿ 3.0ಗೆ ಅಪ್‌ಗ್ರೇಡ್‌ ಆಗಿ

ಗುಣಮಟ್ಟದ ಯುಎಸ್‌ವಿ 3.0 ಚಾರ್ಜರ್‌ಗಳು 1.5 ಆಂಪ್‌ಗಳಷ್ಟು ವಿದ್ಯುತ್ ಪ್ರವಹಿಸಲು ಸಹಾಯ ಮಾಡುತ್ತವೆ. ಯುಎಸ್‌ಬಿ 3.0 ಪೋರ್ಟ್‌ಗೆ ಯುಎಸ್‌ಬಿ 3.0 ಕೇಬಲ್‌ ಬಳಸಿದರೆ ಸ್ಮಾರ್ಟ್‌ಫೋನ್‌ ವೇಗವಾಗಿ ಚಾರ್ಜಿಂಗ್‌ ಆಗುತ್ತದೆ. ನಿಮ್ಮ ಕಂಪ್ಯೂಟರ್‌ನಲ್ಲಿ ಯುಎಸ್‌ಬಿ 3.0 ಪೋರ್ಟ್‌ ಇದ್ದರೆ ಮೊಬೈಲ್‌ ಏರೋಪ್ಲೇನ್‌ ಮೋಡ್‌ ಎನೆಬಲ್‌ ಮಾಡಿ ಚಾರ್ಜಿಂಗ್‌ ಹಾಕಿ.

ಐಪ್ಯಾಡ್‌ ಚಾರ್ಜರ್‌ ಬಳಸಿ

ಐಪ್ಯಾಡ್‌ ಚಾರ್ಜರ್‌ ಬಳಸಿ

ನಿಮ್ಮ ಐಪೋನ್‌ 6 ಮತ್ತು ಇತ್ತೀಚಿನ ಐಫೋನ್‌ಗಳಿಗೆ ಐಪ್ಯಾಡ್‌ ಚಾರ್ಜರ್‌ ಬಳಸಿ. ಈ ಚಾರ್ಜರ್‌ಗಳು 1 ಆಂಪ್‌ಕ್ಕಿಂತ ಹೆಚ್ಚಿನ ವಿದ್ಯುತ್‌ ಪ್ರವಹಿಸುವುದರಿಂದ ಸ್ಮಾರ್ಟ್‌ಫೋನ್‌ ವೇಗವಾಗಿ ಚಾರ್ಜ್‌ ಆಗುತ್ತದೆ.

ಸ್ವಿಚ್‌ಆಪ್‌ ಮಾಡಿ ಚಾರ್ಜ್‌ ಹಾಕಿ

ಸ್ವಿಚ್‌ಆಪ್‌ ಮಾಡಿ ಚಾರ್ಜ್‌ ಹಾಕಿ

ನಿಮ್ಮ ಮೊಬೈಲ್‌ ವೇಗವಾಗಿ ಚಾರ್ಜಿಂಗ್‌ ಆಗಬೇಕೆಂದರೆ ಚಾರ್ಜಿಂಗ್‌ ಸಮಯದಲ್ಲಿ ಸ್ಮಾರ್ಟ್‌ಫೋನ್‌ನ್ನು ಸ್ವಿಚ್‌ ಆಫ್‌ ಮಾಡಿ. ಸ್ವಿಚ್‌ ಆಫ್‌ ಮಾಡುವುದರಿಂದ ಬ್ಯಾಕ್‌ಗ್ರೌಂಡ್‌ನಲ್ಲಿ ಆಪ್‌ಗಳು ಕಾರ್ಯನಿರ್ವಹಿಸುವುದಿಲ್ಲ.

ಸ್ಕ್ರೀನ್‌ ಲಾಕ್‌ ಮಾಡಿ

ಸ್ಕ್ರೀನ್‌ ಲಾಕ್‌ ಮಾಡಿ

ಮೊಬೈಲ್‌ ಸ್ವಿಚ್‌ ಆಫ್‌ ಮಾಡದಿದ್ದರೂ, ಚಾರ್ಜಿಂಗ್‌ ಸಮಯದಲ್ಲಿ ಮೊಬೈಲ್‌ ಸ್ಕ್ರೀನ್‌ ಲಾಕ್‌ ಮಾಡಿ. ಇದರಿಂದಲೂ ಕೂಡ ಹೆಚ್ಚಿನ ಬ್ಯಾಟರಿ ವ್ಯರ್ಥವಾಗುವುದಿಲ್ಲ.

ಲೋ ಪವರ್‌ ಮೋಡ್‌ ಆನ್‌ ಮಾಡಿ

ಲೋ ಪವರ್‌ ಮೋಡ್‌ ಆನ್‌ ಮಾಡಿ

ನಿಮ್ಮ ಸ್ಮಾರ್ಟ್‌ಫೋನ್‌ನ ಬ್ಯಾಟರಿ ಕನಿಷ್ಟ ಮಟ್ಟಕ್ಕೆ ಇಳಿದಾಗ ಲೋ ಪವರ್‌ ಮೋಡ್‌ ಆನ್‌ ಮಾಡಿ. ಈ ಮೋಡ್‌ನಿಂದ ಐಒಎಸ್‌ ಮತ್ತು ಆಂಡ್ರಾಯ್ಡ್ ಸಾಧನಗಳಲ್ಲಿ ಸ್ವಯಂಚಾಲಿತವಾಗಿ ಸ್ಕ್ರೀನ್ ರೆಸಲೂಷನ್‌, ಅನಿಮೇಷನ್ ಮತ್ತು ಬ್ಯಾಕ್‌ಗ್ರೌಂಡ್‌ ಆಪ್‌ಗಳನ್ನು ಸ್ಥಗಿತಗೊಳಿಸುತ್ತದೆ.

Best Mobiles in India

English summary
9 Tricks To Charge Your Phone Quickly

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X