ಅಮೆಜಾನ್‌ನಲ್ಲಿ ಭಾರಿ ಹಣ ಉಳಿಸಬಹುದು..! ಹೇಗೆ ಅಂತಿರಾ..?

By Gizbot Bureau
|

ಅಮೆಜಾನ್‌ ಅಂದ್ರೆ ಯಾರಿಗ್ ಗೊತ್ತಿಲ್ಲ ಹೇಳಿ. ಜಗತ್ತಿನ ಪ್ರಸಿದ್ಧ ಇ ಕಾಮರ್ಸ್ ತಾಣ ಅಮೆಜಾನ್‌ನಲ್ಲಿ ಪ್ರತಿ ಸೆಕೆಂಡ್‌ಗೆ ಕೋಟಿ ಕೋಟಿ ವ್ಯವಹಾರ ನಡೆಯುತ್ತದೆ. ಏನಾದರೂ ಖರೀದಿಸಬೇಕಾದರೆ ಎಲ್ಲರೂ ಮೊದಲು ಭೇಟಿ ನೀಡುವುದು ಅಮೆಜಾನ್ ಡಾಟ್‌ ಕಾಂಗೆ ಎಂದರೆ ಸುಳ್ಳಲ್ಲ. ಹೆಚ್ಚಿನ ಜನ ಹಣ ಉಳಿಸಲು ಎಂದೇ ಅಮೆಜಾನ್‌ನಲ್ಲಿ ವಸ್ತುಗಳನ್ನು ಖರೀದಿಸ್ತಾರೆ ಎಂಬುದು ಸತ್ಯ. ಒಳ್ಳೆ ಆಫರ್‌ನೊಂದಿಗೆ ಉತ್ತಮ ವಸ್ತುಗಳನ್ನು ತೆಗೆದುಕೊಳ್ಳಲು ಅಮೆಜಾನ್‌ ದೊಡ್ಡ ವೇದಿಕೆಯಾಗಿದೆ. ಅದಕ್ಕಾಗಿಯೇ ಅಮೆಜಾನ್‌ ಕೂಡ ಜನರಿಗಾಗಿ ಡೀಲ್‌ಗಳ ಮೇಲೆ ಡೀಲ್ ನೀಡ್ತಾನೆ ಇರುತ್ತೆ.

ಅಮೆಜಾನ್‌ನಲ್ಲಿ ಭಾರಿ ಹಣ ಉಳಿಸಬಹುದು..! ಹೇಗೆ ಅಂತಿರಾ..?

ತಿಂಗಳಿಗೊಂದು ಅಮೆಜಾನ್ ವಿಶೇಷ ಸೇಲ್‌, ಹಬ್ಬ, ವಿಶೇಷ ದಿನಗಳಿಗಾಗಿ ಸ್ಪೇಷಲ್‌ ಡೀಲ್‌ಗಳನ್ನು ಅಮೆಜಾನ್ ನೀಡುತ್ತದೆ. ಇಷ್ಟೇ ಅಲ್ಲದೇ ಪ್ರತಿ ದಿನವೂ ನೀವು ಅಮೆಜಾನ್‌ನಲ್ಲಿ ಮೌಲ್ಯಯುತ ಉತ್ಪನ್ನಗಳನ್ನು ರಿಯಾಯಿತಿ ದರಕ್ಕೆ ಖರೀದಿಸಬಹುದಾಗಿದ್ದು, ಕೆಳಗೆ ನಾವು ತಿಳಿಸಿದ ಕ್ರಮಗಳನ್ನು ಅನುಸರಿಸಿದರೆ ಖಂಡಿತ ನಿಮಗೆ ಬಂಪರ್‌ ಉಳಿತಾಯ ಗ್ಯಾರಂಟಿ...

ಟುಡೇಸ್‌ ಡೀಲ್‌ನ ಚೌಕಾಸಿ

ಟುಡೇಸ್‌ ಡೀಲ್‌ನ ಚೌಕಾಸಿ

ನಿಮಗೆ ಹೆಚ್ಚಿನ ಹಣ ಉಳಿಸಲು ಸಹಾಯ ಮಾಡುವುದು ಅಮೆಜಾನ್‌ನ ಟುಡೇಸ್‌ ಡೀಲ್ಸ್. ಅಮೆಜಾನ್‌ನ ಪ್ರತಿ ಪೇಜ್‌ ಮೇಲ್ಭಾಗದಲ್ಲಿ ಟುಡೇಸ್‌ ಡೀಲ್ಸ್‌ ಲಿಂಕ್‌ ಇದ್ದು, ನಿಮಗೆ ಉತ್ತಮ ಅಂದ್ರೆ ಉತಮ್ಮ ಡೀಲ್‌ಗಳು ವಿವಿಧ ಮಾದರಿ, ವರ್ಗಗಳಲ್ಲಿ ದೊರೆಯುತ್ತವೆ. ಕ್ಷಣದಿಂದ ಕ್ಷಣಕ್ಕೆ ಹೊಸ ಡೀಲ್‌ಗಳು ಬರ್ತಾನೆ ಇರುತ್ತವೆ. ಕೊನೆ ಘಳಿಗೆಯವರೆಗೂ ಉತ್ಪನ್ನ ಮಾರಾಟವಾಗದಿದ್ದರೆ ಶೇ.75ರಷ್ಟು ರಿಯಾಯಿತಿ ದೊರೆಯುವ ಸಾಧ್ಯತೆ ಕೂಡ ಇರುತ್ತೆ. ಟುಡೇಸ್‌ ಡೀಲ್ಸ್‌ ದಿನದಿಂದ ದಿನಕ್ಕೆ ಬದಲಾಗುತ್ತಲೆ ಇರುತ್ತದೆ.

ದರ ಪರಿಶೀಲನೆ ಪ್ಲಗ್‌-ಇನ್

ದರ ಪರಿಶೀಲನೆ ಪ್ಲಗ್‌-ಇನ್

ಯಾವ ಇ ಕಾಮರ್ಸ್‌ ತಾಣದಲ್ಲೂ ದರ ಕಡಿಮೆ ಇರುತ್ತೆ ಎಂದು ನಂಬಲೇಬೇಡಿ, ಅದರಲ್ಲೂ ಥರ್ಡ್‌ ಪಾರ್ಟಿ ಸ್ಟೋರ್‌ನ ಮಾರಾಟಗಾರರನ್ನು ನಂಬಬಾರದು, ಅದಕ್ಕಾಗಿಯೇ ಬೇರೆ ಕಡೆಯ ಬೆಲೆಯನ್ನು ಕೂಡ ನಾವು ಪರಿಶೀಲಿಸಬೇಕಾಗುತ್ತದೆ. ಆದ್ದರಿಂದ ನಿಮ್ಮ ಬ್ರೌಸರ್‌ನಲ್ಲಿ ದರ ಪರಿಶೀಲನೆಯ ಪ್ಲಗ್‌-ಇನ್‌ ಇನ್‌ಸ್ಟಾಲ್‌ ಮಾಡಿಕೊಳ್ಳಿ. ಇದರಿಂದ ನಿಮಗೆ ಉತ್ಪನ್ನದ ಅಸಲಿ ದರವೂ ತಿಳಿಯುತ್ತದೆ ಮತ್ತು ಉತ್ತಮವಾದ ಉತ್ಪನ್ನ ಆಯ್ಕೆ ಮಾಡಲು ಮಾರ್ಗದರ್ಶನವೂ ಸಿಕ್ಕಂತಾಗುತ್ತದೆ. ಇನ್‌ವಿಸಿಬಲ್ ಹ್ಯಾಂಡ್‌ನಂತಹ ಬ್ರೌಸರ್‌ ಪ್ಲಗ್-ಇನ್‌ಗಳನ್ನು ಇನ್‌ಸ್ಟಾಲ್‌ ಮಾಡಿದ್ರೆ ಸರಳವಾಗುತ್ತದೆ. ನೀವು ಅಮೆಜಾನ್‌ನಲ್ಲಿ ವಸ್ತುಗಳನ್ನು ಹುಡುಕುತ್ತಿದ್ದರೆ ಈ ಪ್ಲಗ್‌-ಇನ್ ನೊಟಿಫಿಕೇಷನ್ ಪಾಪ್‌ಅಪ್‌ನಲ್ಲಿ ಕಾಣಿಸಿಕೊಂಡು ಬೇರೆ ವೆಬ್‌ಸೈಟ್‌ಗಳ ದರವನ್ನು ನಿಮ್ಮ ಮುಂದೆ ಇಡುತ್ತದೆ.

ಸೂಚಿಸಲಾದ ರಿಟೇಲ್ ಬೆಲೆ ಪರಿಶೀಲಿಸಿ

ಸೂಚಿಸಲಾದ ರಿಟೇಲ್ ಬೆಲೆ ಪರಿಶೀಲಿಸಿ

ಉತ್ಪನ್ನದ ನೈಜ ಸೂಚಿಸಲಾದ ರಿಟೇಲ್‌ ಬೆಲೆಯನ್ನು ನೀವು ತಿಳಿದುಕೊಳ್ಳುವುದು ಅವಶ್ಯಕ. ಡಿಸೈನ್‌ ಅಥವಾ ದೋಷದ ಮೂಲಕ ಹೆಚ್ಚಾಗಿರುವ ರಿಟೇಲ್ ದರವನ್ನು ನೋಡುವುದು ಅಸಾಮಾನ್ಯವೇನಲ್ಲ. ಆದ್ದರಿಂದ ನಿಮ್ಮ ರಿಯಾಯಿತಿ ನೈಜ ಬೆಲೆಗಿಂತ ಹೆಚ್ಚಾಗಿ ಕಂಡುಬರುತ್ತದೆ. ಆದ್ದರಿಂದ ರಿಟೇಲ್ ಬೆಲೆ ಪರಿಶೀಲಿಸಿ.

ಪ್ರೈಸ್ ಟ್ರಾಕಿಂಗ್ ಪ್ಲಗ್‌-ಇನ್‌

ಪ್ರೈಸ್ ಟ್ರಾಕಿಂಗ್ ಪ್ಲಗ್‌-ಇನ್‌

ಅಮೆಜಾನ್‌ನಲ್ಲಿ ವಸ್ತುವನ್ನು ಖರೀದಿಸಿದ ನಂತರ ನಂತರ ಬೆಲೆ ಕುಸಿಯುತ್ತದೆ ಎಂದು ನಿಮಗೆ ಅನಿಸಿದರೆ ಹನಿ ಬ್ರೌಸರ್ ಪ್ಲಗ್‌-ಇನ್‌ ನಿಮಗೆ ಹೇಳಿ ಮಾಡಿಸಿದಂತಿದೆ. ಇದು ನೀವು ಖರೀದಿಸುವ ಉತ್ಪನ್ನದ ಪ್ರೈಸ್ ಟ್ರಾಕಿಂಗ್ ಮಾಡುತ್ತದೆ. ಹನಿ ಪ್ಲಗ್‌-ಇನ್ ಇನ್‌ಸ್ಟಾಲ್ ಮಾಡಿದ ನಂತರ ನೀವು ಖರೀದಿಸಿದ ಅಥವಾ ಖರೀದಿಸಬೇಕಾದ ಉತ್ಪನ್ನದಲ್ಲಿ ಯಾವುದೇ ಬೆಲೆ ಬದಲಾವಣೆಗಳಿದ್ದರೂ ತೋರಿಸುತ್ತದೆ. 30, 60 ಅಥವಾ 90 ದಿನಗಳಲ್ಲಿ ಬೆಲೆ ಕುಸಿದರೆ ನಿಮಗೆ ಎಚ್ಚರಿಕೆ ಸಂದೇಶಗಳು ಕೂಡ ಬರುತ್ತವೆ.

ಮಾರಾಟಗಾರರ ಪರಿಶೀಲನೆ

ಮಾರಾಟಗಾರರ ಪರಿಶೀಲನೆ

ನೀವು ಖರೀದಿಸುವ ಉತ್ಪನ್ನವನ್ನು ಯಾರು ಮಾರಾಟ ಮಾಡುತ್ತಿದ್ದಾರೆ ಮತ್ತು ಯಾರು ಡೆಲಿವರಿ ಮಾಡುತ್ತಿದ್ದಾರೆ ಎಂಬುದನ್ನು ಅಗತ್ಯವಾಗಿ ಪರಿಶೀಲಿಸಿ. ನೀವು ಇಷ್ಟಪಡದ ಅಮೆಜಾನ್‌ ಅಲ್ಲದ ಮಾರಾಟಗಾರರಿಂದ ರಿಟರ್ನ್ಸ್ ಅಥವಾ ಎಕ್ಸ್‌ಚೇಂಜ್ ಪಾಲಿಸಿಯೊಂದಿಗೆ ಉತ್ಪನ್ನವನ್ನು ಅಮೆಜಾನ್ ನಿಮಗೆ ಕಳುಹಿಸಬಹುದು. ಅಮೆಜಾನ್ ಮಾರಾಟ ಮಾಡುವ ಮತ್ತು ರವಾನಿಸುವ ವಸ್ತುಗಳನ್ನು ಅಮೆಜಾನ್ ಪ್ರೈಮ್ ಮೂಲಕ ಉಚಿತ ಸಾಗಾಟಕ್ಕೆ ಅರ್ಹವೆಂದು ಟ್ಯಾಗ್ ಮಾಡಲಾಗಿರುತ್ತದೆ. ಈ ಅಂಶವನ್ನು ಪ್ರಮುಖವಾಗಿ ಗಮನಿಸಿ. ಇದಲ್ಲದೇ ಖರೀದಿಊ ಮುಂಚೆ ಮಾರಾಟಗಾರರ ಫೀಡ್‌ಬ್ಯಾಕ್ ರೇಟಿಂಗ್ ಪರಿಶೀಲಿಸಿ. ಇಲ್ಲಿ ನಿಮಗೇ ಕೆಲವೇ ಕೆಲವು ರಿವ್ಯೂವ್‌ಗಳಿದ್ದು, ಶೇ. 90ಕ್ಕಿಂತ ಕಡಿಮೆ ರೇಟಿಂಗ್ ಹೊಂದಿದ್ದರೆ ನಿಮ್ಮ ಉತ್ಪನ್ನವನ್ನು ಬೇರೆಡೆಯಿಂದ ಖರೀದಿಸುವುದು ಒಳಿತು.

ನಿಧಾನ ಡೆಲಿವರಿ ಆಯ್ಕೆ ಮಾಡಿ

ನಿಧಾನ ಡೆಲಿವರಿ ಆಯ್ಕೆ ಮಾಡಿ

ನಿಮಗೆ ಕಾಯುವ ವ್ಯವದಾನವಿದ್ದರೆ ಉಚಿತ ಸಾಗಾಟ ಲಭ್ಯವಿದೆ. ಅದಲ್ಲದೇ, ನೀವು ಪ್ರೈಮ್ ಸದಸ್ಯರಾಗಿದ್ದರೆ, ನೋ-ರಶ್ ಶಿಪ್ಪಿಂಗ್ ಫಾರ್ ರೀವಾರ್ಡ್ಸ್ ಆಯ್ಕೆಯನ್ನು ಆಯ್ದುಕೊಳ್ಳಬಹುದು. ಇದರಲ್ಲಿ ಪ್ರೈಮ್ ಪ್ಯಾಂಟ್ರಿ, ಕಿಂಡಲ್ ಇಬುಕ್ಸ್, ಅಮೆಜಾನ್ ಇನ್‌ಸ್ಟಾಂಟ್ ವಿಡಿಯೋಗಳು, ಡಿಜಿಟಲ್ ಸಂಗೀತ, ಅಮೆಜಾನ್ ಅಪ್‌ಸ್ಟೋರ್ ಆಪ್‌ಗಳು, ಡಿಜಿಟಲ್ ವಿಡಿಯೋ ಗೇಮ್‌ಗಳು, ಡಿಜಿಟಲ್ ಸಾಫ್ಟ್‌ವೇರ್ ಟೈಟಲ್ಸ್ ಮತ್ತಿತರ ಸೇವೆಗಳು ರೀವಾರ್ಡ್‌ ರೂಪದಲ್ಲಿ ನಿಮಗೆ ಬರಲಿವೆ. ರೀವಾರ್ಡ್‌ಗಳು ಹೆಚ್ಚಿನ ಮೌಲ್ಯದ್ದು ಆಗಿಲ್ಲವಾದ್ರೂ, ನಿಮಗೆ ಆ ಉತ್ಪನ್ನ ಅರ್ಜೆಂಟ್ ಬೇಡ ಅಂದರೆ ನೋ ರಶ್ ಶಿಪ್ಪಿಂಗ್ ಆಯ್ಕೆ ಉಪಯುಕ್ತ.

ಅಮೆಜಾನ್ ಪ್ರೈಮ್‌ಗೆ ಚಂದಾದಾರರಾಗಿ

ಅಮೆಜಾನ್ ಪ್ರೈಮ್‌ಗೆ ಚಂದಾದಾರರಾಗಿ

ನೀವು ಕೊನೆ ಕ್ಷಣದ ವ್ಯಾಪಾರಿಯಾಗಿದ್ದರೆ, ಅಮೆಜಾನ್ ಪ್ರೈಮ್‌ ನಿಮ್ಮ ಶಿಪ್ಪಿಂಗ್‌ ದರವನ್ನು ಉಳಿಸುತ್ತದೆ. ಎರಡು ದಿನ ಉಚಿತ ಮತ್ತು ಕೆಲವು ಸ್ಥಳಗಳಲ್ಲಿ ಅದೇ ದಿನ ಅಥವಾ 2 ಗಂಟೆಗಳ ಎಕ್ಸ್‌ಪ್ರೆಸ್ ಡೆಲಿವರಿ ಅಮೆಜಾನ್ ಪ್ರೈಮ್‌ ಸದಸ್ಯರಿಗೆ ಸಿಗುವುದರಿಂದ ಉತ್ಪನ್ನ ವೇಗವಾಗಿ ಕೈಗೆ ಸಿಗುವುದಲ್ಲದೇ, ಹಣದ ಉಳಿತಾಯವೂ ಆಗುತ್ತದೆ. ಇದಕ್ಕಾಗಿ ನೀವು ಅಮೆಜಾನ್‌ ಪ್ರೈಮ್ ಸದಸ್ಯಾರಗಬೇಕಾಗುತ್ತದೆ. ಇನ್ನು, ಪ್ರೈಮ್ ಸದಸ್ಯತ್ವ ತಿಂಗಳಿಗೆ ಕೇವಲ 129 ರೂ. ಮತ್ತು ವರ್ಷಕ್ಕೆ 999 ರೂ. ಆಗಿದೆ. ಇದರಲ್ಲಿ ಅಮೆಜಾನ್ ಪ್ರೈಮ್ ವಿಡಿಯೋ, ಮ್ಯೂಸಿಕ್, ಇ-ಬುಕ್ಸ್ ಪಡೆಯುತ್ತೀರಿ.

ಅಮೆಜಾನ್ ಚಂದಾದಾರರಾಗಿ ಮತ್ತು ಉಳಿಸಿ

ಅಮೆಜಾನ್ ಚಂದಾದಾರರಾಗಿ ಮತ್ತು ಉಳಿಸಿ

ನೀವು ನಿಯಮಿತವಾಗಿ ಕಾಫಿ, ಡಿಶ್ ಸೋಪ್‌ ಮತ್ತಿತರ ಗೃಹಪಯೋಗಿ ಉತ್ಪನ್ನಗಳನ್ನು ಖರೀದಿಸುತ್ತಿದ್ದರೆ, ಅಮೆಜಾನ್‌ನ ಸಬ್‌ಸ್ಕ್ರೈಬ್ ಮತ್ತು ಸೇವ್ ಪ್ರೋಗ್ರಾಂ ಮೂಲಕ ನಿಯಮಿತವಾಗಿ ಉತ್ಪನ್ನಗಳನ್ನು ವಿತರಿಸಲು ಸೈನ್ ಅಪ್ ಮಾಡಬಹುದು. ತಿಂಗಳಿನಿಂದ ಆರು ತಿಂಗಳವರೆಗೆ ನಿಮಗೆ ಅಗತ್ಯವಿರುವಷ್ಟು ಉತ್ಪನ್ನಗಳನ್ನು ನಿಗದಿಪಡಿಸಬಹುದು. ಒಂದು ತಿಂಗಳಲ್ಲಿ 1 ರಿಂದ 4 ವಸ್ತುಗಳನ್ನು ರವಾನಿಸಿದ್ರೆ ಶೇ.5 ಹಾಗೂ 5 ಅಥವಾ ಅದಕ್ಕಿಂತ ಹೆಚ್ಚಿನ ವಸ್ತುಗಳನ್ನು ಸಾಗಿಸಿದ್ರೆ ಶೇ.15ರಷ್ಟು ಉಳಿಆಯ ಮಾಡಬಹುದು. ಅಮೆಜಾನ್ ಪ್ರೈಮ್ ಸದಸ್ಯರು 5 ಅಥವಾ ಹೆಚ್ಚಿನ ಚಂದಾದಾರಿಕೆ ಹಾಗೂ ಡೈಪರ್ ಮತ್ತು ಮಗುವಿನ ಆಹಾರ ಖರೀದಿಸುವಾಗ ಶೇ.20ರಷ್ಟು ಹಣ ಉಳಿಸಬಹುದು. ಈ ರಿಯಾಯಿತಿ ಪಡೆಯಲು ಎಲ್ಲಾ ವಸ್ತುಗಳನ್ನು ಒಂದೇ ದಿನ, ಒಂದೇ ವಿಳಾಸಕ್ಕೆ ಕಳುಹಿಸಬೇಕು.

ಪ್ರೈಮ್ ಕ್ರೆಡಿಟ್ ಕಾರ್ಡ್ ಪಡೆಯಿರಿ

ಪ್ರೈಮ್ ಕ್ರೆಡಿಟ್ ಕಾರ್ಡ್ ಪಡೆಯಿರಿ

ನೀವು ನಿಯಮಿತ ಅಮೆಜಾನ್ ವ್ಯಾಪಾರಿ ಆಗಿದ್ದರೆ ಅಮೆಜಾನ್ ಪ್ರೈಮ್ ರಿವಾರ್ಡ್ಸ್ ಸಿಗ್ನೇಚರ್ ಕಾರ್ಡ್ ಪಡೆಯಬಹುದು. ನಿಮಗೆ ಅನಮೋದನೆ ಸಿಕ್ಕರೆ 70 ಡಾಲರ್ ಮೌಲ್ಯದ ಅಮೆಜಾನ್ ಗಿಫ್ಟ್ ಕಾರ್ಡ್ ಪಡೆಯುತ್ತೀರಿ. ಇದರ ಜೊತೆ ನಿಮ್ಮ ಅಮೆಜಾನ್ ಖರೀದಿಗಳಲ್ಲಿ ಶೇ.3ಎಷ್ಟು ಕ್ಯಾಶ್‌ಬ್ಯಾಕ್ ಸಿಗುತ್ತದೆ. ನೀವು ಅಮೆಜಾನ್ ಪ್ರೈಮ್ ಸದಸ್ಯರಾಗಿದ್ದರೆ ನಿಮ್ಮ ಖರೀದಿಯಲ್ಲಿ ಶೇ.5ರಷ್ಟು ಕ್ಯಾಶ್‌ಬ್ಯಾಕ್ ದೊರೆಯುತ್ತದೆ.

Best Mobiles in India

English summary
9 Tricks To Get The Best Deals While Shopping on Amazon

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X