ಆಧಾರ್ ಕಾರ್ಡ್‌ ಕಳೆದು ಹೋದರೆ ಮರಳಿ ಪಡೆಯಲು ಈ ಕ್ರಮ ಅನುಸರಿಸಿ!

|

ನಿಮ್ಮ ಆಧಾರ್ ಕಾರ್ಡ್‌ ಕಳೆದುಹೋಗಿದೆಯಾ? ಅಥವಾ ಮೂಲ ಆಧಾರ್ ಕಾರ್ಡ್‌ ಪ್ರತಿ ಹಾನಿಯಾಗಿದೆಯಾ? ಮತ್ತೆ ಆಧಾರ್ ಕಾರ್ಡ್‌ ಮರಳಿ ಪಡೆಯುವುದು ಹೇಗೆ ಎಂದು ಯೋಚಿಸುತ್ತಿದ್ದಿರಾ? ಈ ಎಲ್ಲ ಪ್ರಶ್ನೇಗಳಿಗೂ ಒಂದೇ ಉತ್ತರವೆಂದರೇ ಕಳೆದುಹೋದ ಆಧಾರ್ ಕಾರ್ಡ್‌ ಅನ್ನು ಸುಲಭವಾಗಿ ಮರಳಿ ಪಡೆಯಬಹುದಾಗಿದೆ.

ಆಧಾರ್ ಕಾರ್ಡ್

ಹೌದು, ಆಧಾರ್ ಕಾರ್ಡ್ ಕಳೆದುಹೋಗಿದ್ದರೇ ಅಧಿಕೃತ ಯುಐಡಿಎಐ ವೆಬ್‌ಸೈಟ್‌ನಲ್ಲಿ ನಿಮ್ಮ ಮೊಬೈಲ್ ನಂಬರ್ ಬಳಸಿ ಮರಳಿ ಪಡೆಯಬಹುದು. ಆಧಾರ್ ಕಾರ್ಡ್ ನೋಂದಣಿ ಸಂಖ್ಯೆಯನ್ನು ಒದಗಿಸುವ ಮೂಲಕವೂ ಯುಐಡಿಎಐನ ಅಧಿಕೃತ ವೆಬ್ಸೈಟ್‌ನಿಂದ ನಕಲಿ ಆಧಾರ್ ಕಾರ್ಡ್ ಪಡೆಯಲು ಅವಕಾಶವಿದೆ. ಆಧಾರ್ ಕಾರ್ಡ್ ಕಳೆದುಕೊಂಡಾಗ ಈ ಮುಂದಿನ ಕ್ರಮಗಳನ್ನು ಅನುಸರಿಸಿ.

ಮೊಬೈಲ್

ಒಂದು ವೇಳೆ ನೀವು ಆಧಾರ್ ಕಳೆದುಕೊಂಡರೆ ಮೊಬೈಲ್ ನಂಬರ್ ಅಥವಾ ಇ-ಮೇಲ್ ಐಡಿ ಬಳಸಿ ಆನ್‌ಲೈನ್‌ ಮೂಲಕ ನಕಲು ಪ್ರತಿ ಪ್ರಿಂಟ್ ಮಾಡಬಹುದು. ಆದರೆ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ನೀಡಿದರೇ ಮಾತ್ರ ಒಟಿಪಿ ಬರುತ್ತದೆ. ಅದಕ್ಕೆ 50ರೂ.ಶುಲ್ಕ ಪಾವತಿಸಬೇಕಾಗುತ್ತದೆ. ಮೊಬೈಲ್ ನಂಬರ್ ಲಿಂಕ್ಡ್ ಆಗಿದ್ದರೇ ನೋಂದಣಿ ಸಂಖ್ಯೆ ಇಲ್ಲದಿದ್ದರೂ ನಡೆಯುತ್ತದೆ.

ಇ-ಮೇಲ್

ಒಟಿಪಿಯನ್ನು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಇ-ಮೇಲ್ ಐಡಿಗೆ ಕಳುಹಿಸಲಾಗುತ್ತದೆ. ಸ್ವೀಕರಿಸಿದ ಒಟಿಪಿಯನ್ನು ನಮೂದಿಸುವ ಮೂಲಕ ನೀವು ಧೃಡಿಕರಿಸಿದ ನಂತರ, ನಿಮ್ಮ ಆಧಾರ್ ಸಂಖ್ಯೆಯನ್ನು ಮೊಬೈಲ್ ಸಂಖ್ಯೆ / ಇಮೇಲ್ ಐಡಿಗೆ ಕಳುಹಿಸಲಾಗುತ್ತದೆ. ಸ್ವೀಕರಿಸಿದ ಆಧಾರ್ ಸಂಖ್ಯೆಯನ್ನು ನಿಮ್ಮ ಆಧಾರ್ ಡೌನ್‌ಲೋಡ್ ಮಾಡಲು ಅಥವಾ ನಿಮ್ಮ ಆಧಾರ್‌ನ ಮರುಮುದ್ರಣಕ್ಕೆ ಆದೇಶಿಸಬಹುದು.

ಇ-ಆಧಾರ್ ಕಾರ್ಡ್ ಪಡೆಯಲು ಹೀಗೆ ಮಾಡಿ:

ಇ-ಆಧಾರ್ ಕಾರ್ಡ್ ಪಡೆಯಲು ಹೀಗೆ ಮಾಡಿ:


* ಅಧಿಕೃತ ಯುಐಡಿಎಐ ವೆಬ್‌ಸೈಟ್‌ https://uidai.gov.in/ ಗೆ ಭೇಟಿ ನೀಡಿ.
* ನಿಮ್ಮ ನೋಂದಣಿ ಸಂಖ್ಯೆ ವಿವರ ನಮೂದಿಸಿ (ನೋಂದಣಿ ಸಂಖ್ಯೆ, ದಿನಾಂಕ, ಸಮಯ, ಹೆಸರು, ಪಿನ್ ಕೋಡ್) ಆಧಾರ್ ಸ್ವೀಕೃತಿ ಪಾವತಿಯಲ್ಲಿ ಇರುವಂತೆ. ಅಥವಾ ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿ.
* ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಅದನ್ನು ನಮೂದಿಸಿ ಮುಂದುವರೆಯಿರಿ.

ನಂಬರ್

* ನಿಮ್ಮ ಮೊಬೈಲ್ ನಂಬರ್ ಗೆ ಆಧಾರ್ ಅಥವಾ ದಾಖಲಾತಿ ಐಡಿ ಬಂದ ನಂತರ https://eaadhaar.uidai.gov.in/ ಭೇಟಿ ನೀಡಿ.
* ಅಲ್ಲಿ ನೀವು ಆಧಾರ್ ನಂಬರ್ ಅಥವಾ ದಾಖಲಾತಿ ಸಂಖ್ಯೆ ನಮೂದಿಸಬೇಕು.
* ಆಧಾರ್ ನಂಬರ್ ನಮೂದಿಸಿ, ವಿಳಾಸ, ಪಿನ್ ಕೋಡ್, ಸೆಕ್ಯುರಿಟಿ ಕೋಡ್ ಮತ್ತು ಮೊಬೈಲ್ ನಂಬರ್ ನಮೂದಿಸಿ.
* ನಿಮ್ಮ ಮೊಬೈಲ್ ನಂಬರ್ ಗೆ ಬರುವ OTP ನಮೂದಿಸಿ, Validate and Generat ಮೇಲೆ ಕ್ಲಿಕ್ ಮಾಡಿ.
* ಆನ್ಲೈನ್ ನಲ್ಲಿ ನಕಲಿ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬಹುದು. ಆಧಾರ್ ಪಿಡಿಎಫ್ ಫೈಲ್ ಜನರೇಟ್ ಮಾಡಬಹುದು.

Most Read Articles
Best Mobiles in India

English summary
visit website www.uidai.gov.in to download the duplicate copy of Aadhaar.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X