ಏರ್‌ಟೆಲ್‌ನಿಂದ 2GB 4G ಡಾಟಾ ಉಚಿತವಾಗಿ ಪಡೆಯುವುದು ಹೇಗೆ?

|

ಜಿಯೋ ಆಗಮನದ ನಂತರ ಭಾರತದ ಅಗ್ರಮಾನ್ಯ ಟೆಲಿಕಾಂ ಕಂಪೆನಿ ಭಾರತಿ ಏರ್‌ಟೆಲ್‌ ಸಹ ನಡುಗಿದ್ದು ಸುಳ್ಳಲ್ಲ. ಗ್ರಾಹಕರಿಂದ ಉತ್ತಮ ಸರ್ವಿಸ್ ನೀಡುವ ಸಂಸ್ಥೆ ಎಂದು ಹೆಸರು ಪಡೆದಿರುವ ಏರ್‌ಟೆಲ್ ತನ್ನ ಗ್ರಾಹಕರನ್ನು ತನ್ನಲ್ಲೇ ಹಿಡಿದಿಡಲು ಬಹಳಷ್ಟು ಪ್ರಯತ್ನಿಸುತ್ತಿದೆ. ಇದಕ್ಕಾಗಿ 4G ಗೆ ಅಪ್‌ಡೇಟ್ ಆಗುವ ತನ್ನ ಪ್ರಸ್ತುತ ಗ್ರಾಹಕರನ್ನು ತನ್ನಲ್ಲೇ ಉಳಿಸಿಕೊಳ್ಳಲು ಅವರಿಗೆ ಬಹುದೊಡ್ಡ ಕೊಡುಗೆ ‍ನೀಡಿದೆ.

ಈಗಾಗಲೇ ಫ್ರೀ ಡಾಟಾ ಆಫರ್ ನೀಡಿದ ಜಿಯೋ 25 ಮಿಲಿಯನ್‌ಗಿಂತಲೂ ಹೆಚ್ಚು ಗ್ರಾಹಕರನ್ನು ಹೊಂದಿದೆ. ಇದರಿಂದ ಏರ್‌ಟೆಲ್ ಕಂಪೆನಿಗೆ ಹೆಚ್ಚೇನು ನಷ್ಟವಾಗಿಲ್ಲ!. ಆದರೆ, ಇದೇ ರೀತಿಯ ಸ್ಥಿತಿಯನ್ನು ಏರ್‌ಟೆಲ್ ನಿರೀಕ್ಷೆ ಮಾಡುವಂತಿಲ್ಲ.!! ಅದಕ್ಕೆ ಕೆಲವು ಕಾರಣಗಳು ಹೀಗಿವೆ.

ಓದಿರಿ:ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರು ವಾಟ್ಸಾಪ್ ಡಾಟವನ್ನು ಬ್ಯಾಕಪ್ ಮಾಡುವುದು ಹೇಗೆ?

2G, 3G ಗಳನ್ನು ಬಳಸುತ್ತಿದ್ದ ಹೆಚ್ಚು ಗ್ರಾಹಕರು ಅಗ್ಗದ ದರಗಳಲ್ಲಿಯೇ ಸಿಗುತ್ತಿರುವ 4G ಮೋಬೈಲ್‌ಗಳನ್ನು ಖರೀದಿಸುತ್ತಿದ್ದಾರೆ. ಹಾಗಾಗಿ ಕಡೆಮೆ ಬೆಲೆಯಲ್ಲಿ 4G ಡಾಟವನ್ನು ನೀಡುವ ಕಂಪೆನಿಯನ್ನು ಹುಡುಕುತ್ತಿದ್ದಾರೆ. ಇದು ಏರ್‌ಟೆಲ್‌ ಗ್ರಾಹಕರು ಜಿಯೋ ಕಡೆ ಮುಖಮಾಡಲು ಸಾಧ್ಯವಿದೆ. ಹಾಗಾಗಿ 4G ಗೆ ಅಪ್‌ಡೇಟ್ ಆಗುವ ತನ್ನ ಗ್ರಾಹಕರನ್ನು ತನ್ನಲ್ಲೇ ಉಳಿಸಿಕೊಳ್ಳಲು ಏರ್‌ಟೆಲ್ ಉಚಿತ 2GB 4G ಡಾಟಾವನ್ನು ತನ್ನ ಗ್ರಾಹಕರಿಗೆ ನೀಡಿದೆ. ಏರ್‌ಟೆಲ್‌ ನಲ್ಲಿ ಉಚಿತ 2GB 4G ಡಾಟಾವನ್ನು ಹೇಗೆ ಪಡೆಯುವುದು ಎಂದು ತಿಳಿಯಲು ಈ ಕೆಳಗಿನ ಟಿಪ್ಸ್ ಫಾಲೊಮಾಡಿ.

airtel.in ವೆಬ್‌ಸೈಟ್‌ಗೆ ಭೇಟಿ ನೀಡಿ.

airtel.in ವೆಬ್‌ಸೈಟ್‌ಗೆ ಭೇಟಿ ನೀಡಿ.

ನೀವು ಈಗಾಗಲೇ ಏರ್‌ಟೆಲ್ ಬಳಕೆದಾರರಾಗಿದ್ದು, 4G ಗೆ ಅಪ್‌ಡೇಟ್ ಆಗಬೇಕಿದ್ದರೆ
ಏರ್‌ಟೆಲ್‌ನ ಅಫಿಶಿಯಲ್ ವೆಬ್‌ಸೈಟ್‌ಗೆ ಭೇಟಿ ನೀಡಿ.

ನಿಮ್ಮ ಎಲ್ಲಾ ಮಾಹಿತಿಗಳನ್ನು ನಮೂದಿಸಿ.

ನಿಮ್ಮ ಎಲ್ಲಾ ಮಾಹಿತಿಗಳನ್ನು ನಮೂದಿಸಿ.

4G ಗೆ ಅಪ್‌ಡೇಟ್ ಆಗಬೇಕಿದ್ದರೆ ಏರ್‌ಟೆಲ್‌ ವೆಬ್‌ಸೈಟ್‌ನಲ್ಲಿ ನೀಡಿರುವ ಅರ್ಜಿಯನ್ನು ತುಂಬಬೇಕು. ನಿಮ್ಮ ಹೆಸರು, ವಿಳಾಸ, ಮೊಬೈಲ್ ನಂಬರ್‌ಗಳನ್ನು ನೀವು ಅರ್ಜಿಯಲ್ಲಿ ನಮೂದಿಸಿ. ನಂತರ "Send me a 4G SIM" ಎಂದುಕ್ಲಿಕ್ ಮಾಡಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

4G ಗೆ ಅಪ್‌ಡಾಟ್ ಆಗಿ, 52122 ಗೆ ಮಿಸ್‌ಕಾಲ್‌ ನೀಡಿ.

4G ಗೆ ಅಪ್‌ಡಾಟ್ ಆಗಿ, 52122 ಗೆ ಮಿಸ್‌ಕಾಲ್‌ ನೀಡಿ.

ನೀವು ಅರ್ಜಿ ತುಂಬಿದ ನಂತರ ನಿಮ್ಮ ಸಿಮ್ ಕೆಲವೇ ದಿನಗಳಲ್ಲಿ ಅಪ್‌ಡೇಟ್ ಆಗುತ್ತದೆ. ನಿವು 4G ಸಿಮ್ ಪಡೆದುಕೊಳ್ಳುತ್ತೀರ. ನಂತರ G ಸಿಮ್ ನಲ್ಲಿ 52122 ಗೆ ಮಿಸ್‌ಕಾಲ್‌ ನೀಡಿ.

2GB 4G  ಡಾಟಾವನ್ನು ಫ್ರೀ ಆಗಿ ಪಡೆಯಿರಿ.

2GB 4G ಡಾಟಾವನ್ನು ಫ್ರೀ ಆಗಿ ಪಡೆಯಿರಿ.

ನೀವು 52122 ಗೆ ಮಿಸ್‌ಕಾಲ್‌ ನೀಡಿದ 48 ಗಂಟೆಗಳಲ್ಲಿ ನೀವು ಏರ್‌ಟೆಲ್‌ನಿಂದ 2GB 4G ಡಾಟಾ ಅನ್ನು ಫ್ರೀ ಆಗಿ ಪಡೆದಿರುವ ಮೆಸೇಜ್ ನಿಮಗೆ ತಲುಪುತ್ತದೆ.! ನಂತರ ಡಾಟಾವನ್ನು ಉಪಯೋಗಿಸಿ.

ಇದನ್ನು ನೆನಪಿಡಿ

ಇದನ್ನು ನೆನಪಿಡಿ

1# 2GB 4G ಡಾಟಾ ಆಫರ್ Prepaid ಬಳಕೆದಾರರಿಗೆ ಮಾತ್ರ.
2# ನೀವು 2G ಅಥವಾ 3G ಇಂದ 4Gಗೆ ಅಪ್‌ಡೇಟ್ ಆದರೆ ಮಾತ್ರ ನಿಮಗೆ ಈ ಆಫರ್ ನಿಮಗೆ ಲಭ್ಯವಿರುತ್ತದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
To take on Reliance Jio, Airtel is now offering a promotional data plans with which the 4G user can get free 2GB 4G data just by giving a missed call. to know more please visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X