ಆಂಡ್ರಾಯ್ಡ್ ಫೋನ್ ಸ್ಲೋ ಆಗಿದೆಯೇ? ಇಲ್ಲಿದೆ ಸೂಪರ್ ಸಲಹೆಗಳು
ನಿಮ್ಮ ಆಂಡ್ರಾಯ್ಡ್ ಫೋನ್ ನಿಧಾನಗತಿಯಲ್ಲಿದೆಯೇ? ಈ ಸಮಸ್ಯೆ ಯಾವುದೇ ಕಡಿಮೆ ದರದ ಮತ್ತು ಹೆಚ್ಚಿನ ದರದ ಫೋನ್‌ಗಳಲ್ಲಿ ಕಾಣುವುದು ಸರ್ವೇ ಸಾಮಾನ್ಯವಾಗಿದೆ. ಹಾಗಿದ್ದರೆ ಫೋನ್‌ನ ವೇಗವನ್ನು ವರ್ಧಿಸುವುದು ಹೇಗೆ ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ ಇಲ್ಲಿ ನಾವು ಕೆಲವೊಂದು ಸರಳ ವಿಧಾನಗಳನ್ನು ನಿಮ್ಮ ಫೋನ್‌ನಲ್ಲಿ ಅಳವಡಿಸುವ ಮೂಲಕ ವೇಗ ವರ್ಧಿಸುವ ಉಪಾಯವನ್ನು ತಿಳಿಸಲಿದ್ದೇವೆ.
ಹಾಗಿದ್ದರೆ ಆ ಸರಳ ಸಲಹೆಗಳನ್ನು ಅರಿತುಕೊಳ್ಳುವ ತವಕ ನಿಮ್ಮದಾಗಿದೆ ಎಂದಾದಲ್ಲಿ ಇಲ್ಲಿ ನಾವು ಆ ವಿಧಾನಗಳನ್ನು ಸರಳ ಸ್ಲೈಡರ್‌ನಲ್ಲಿ ನೀಡುತ್ತಿದ್ದೇವೆ. ಬನ್ನಿ ಆ ಹಂತಗಳನ್ನು ಅರಿಯೋಣ.

#1
ಕೆಲವೊಂದು ಬಗ್ಸ್ ಹೊಂದಿಸುವುದು, ಹೊಸ ಫೀಚರ್‌ಗಳನ್ನು ಅಳವಡಿಸುವುದು, ಹೀಗೆ ಕೆಲವೊಂದು ಸಮಸ್ಯೆಗಳನ್ನು ಹೊಂದಿಸಿಕೊಳ್ಳಿ. ಫೋನ್ ಅಪ್‌ಡೇಟ್ ಅನ್ನು ನಿಯಮಿತವಾಗಿ ಮಾಡುವುದು ಇಂತಹ ಕೆಲವೊಂದು ಸಮಸ್ಯೆಗಳನ್ನು ದೂರಮಾಡುತ್ತದೆ.

#2
ಫೋನ್ ರೀಸೆಟ್ ಮಾಡುವುದು ಅದನ್ನು ಪುನಃ ಹೊಸ ಸ್ಥಿತಿಗೆ ತರುತ್ತದೆ. ಇದೊಂದು ತಾತ್ಕಾಲಿಕ ಪರಿಹಾರವಾಗಿದ್ದು, ನಿಮ್ಮ ಫೋನ್ ಅನ್ನು ಪುನಃ ಬಳಸಿದಾಗ, ಹಿಂದಿನ ಸ್ಥಿತಿಗೇ ಇದು ಮರಳಬಹುದು.

#3
ಯಾವುದೇ ಮುಖ್ಯ ಮಾಹಿತಿಯನ್ನು ಬ್ಯಾಕಪ್ ಮಾಡಿ ತದನಂತರವೇ ಫೋನ್ ರೀಸೆಟ್ ಪ್ರಕ್ರಿಯೆ ನಡೆಸಿ.

#4
ಕಡಿಮೆ ಇಂಟರ್ನಲ್ ಮೆಮೊರಿ ಕೂಡ ನಿಮ್ಮ ಫೋನ್ ನಿಧಾನಗತಿಯಲ್ಲಿ ಚಾಲನೆಯಾಗುವುದಕ್ಕೆ ಕಾರಣವಾಗಿರಬಹುದು.

#5
ಕೆಲವು ಕಡಿಮೆ ದರದ ಸ್ಮಾರ್ಟ್‌ಫೋನ್‌ಗಳು ಕಡಿಮೆ ಸ್ಥಳಾವಕಾಶವನ್ನು ಹೊಂದಿರುತ್ತವೆ ಈ ಸಮಯದಲ್ಲಿ ನಿಮ್ಮ ಫೈಲ್‌ಗಳನ್ನು ಎಸ್‌ಡಿ ಕಾರ್ಡ್‌ಗೆ ಸರಿಸುವುದು ನಿಮಗೆ ಸಹಾಯ ಮಾಡುತ್ತದೆ.

#6
ಉತ್ತಮ ಆಂಟಿವೈರಸ್ ಅಪ್ಲಿಕೇಶನ್, ಸ್ಟಾರ್ಟಪ್ ಮ್ಯಾನೇಜರ್, ಅಪ್ಲಿಕೇಶನ್ ಕ್ಯಾಶ್ ಕ್ಲೀನರ್ ಹೀಗೆ ಮೊದಲಾದ ಸೇವೆಗಳನ್ನು ಒಳಗೊಂಡಿರುವ ಅಪ್ಲಿಕೇಶನ್‌ಗಳಿಗಾಗಿ ಗೂಗಲ್ ಪ್ಲೇಯನ್ನು ಹುಡುಕಾಡಿ.

#7
ಬೇಡದೇ ಇರುವ ಅಪ್ಲಿಕೇಶನ್ ಅನ್‌ಇನ್‌ಸ್ಟಾಲ್ ಮಾಡಿ

#8
ಫೋನ್ ರೀಸ್ಟಾರ್ಟ್ ಮಾಡಿ

#9
ನಿಮ್ಮ ಫೋನ್‌ನೊಂದಿಗೆ ನೀವು ಮಾಡಬಹುದಾದ ಹೆಚ್ಚುವರಿ ಆಯ್ಕೆಗಳನ್ನು ರೂಟಿಂಗ್ ನಿಮಗೆ ನೀಡುತ್ತದೆ. ರೂಟಿಂಗ್ ಕೊಂಚ ಜವಬ್ದಾರಿಯುತ ಕ್ರಿಯೆಯಾಗಿದ್ದರೂ, ನಿಮಗೆ ರೂಟಿಂಗ್ ಪ್ರಕ್ರಿಯೆ ಗೊತ್ತಿದ್ದರೆ ಫೋನ್‌ನ ರೂಟಿಂಗ್ ಅನ್ನು ಸರಳವಾಗಿ ನಡೆಸಬಹುದಾಗಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟ
ಹೆಚ್ಚಿನ ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ


Click it and Unblock the Notifications








