ಸ್ಮಾರ್ಟ್‌ಫೋನ್ ಬ್ಯಾಟರಿ ಸೇವ್ ಮಾಡಲು ಇಲ್ಲಿದೆ ಸೂಪರ್ ಟಿಪ್ಸ್

By Shwetha
|

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಬ್ಯಾಟರಿ ಸಮಸ್ಯೆ ಕಟ್ಟಿಟ್ಟ ಬುತ್ತಿಯಾಗಿದೆ. ನಿಮ್ಮ ಸ್ಮಾರ್ಟ್‌ಫೋನ್ ಸ್ವಿಚ್ ಆಫ್ ಆಗದೇ ಇದ್ದಲ್ಲೂ ಇದು ಚಾರ್ಜ್ ಸಮಸ್ಯೆಯನ್ನು ಅನುಭವಿಸುತ್ತಿರುತ್ತದೆ. ಈ ಸಮಯದಲ್ಲಿ ಫೋನ್‌ನ ಫೀಚರ್‌ಗಳನ್ನು ಬಳಸುವುದು ಕಷ್ಟಕರವಾಗಿರುತ್ತದೆ. ಆದ್ದರಿಂದ ನಿಮ್ಮ ಫೋನ್‌ನಲ್ಲಿ ಚಾರ್ಜ್ ಇರುವಂತೆ ನೋಡಿಕೊಳ್ಳುವುದು ಅತ್ಯವಶ್ಯಕವಾಗಿದೆ.

ಸ್ಮಾರ್ಟ್‌ಫೋನ್‌ನ ಬ್ಯಾಟರಿ ಲೈಫ್ ಉಳಿಸುವುದು ಎಂದರೆ ಡಿವೈಸ್ ಬಳಸುವುದನ್ನು ನಿಲ್ಲಿಸುವುದು ಎಂದರ್ಥವಲ್ಲ. ಇದಕ್ಕಾಗಿ ಕೆಲವೊಂದು ಸಲಹೆಗಳನ್ನು ನೀವು ಪಾಲಿಸಿದರೆ ಆಯಿತು ನಿಮ್ಮ ಫೋನ್‌ನಲ್ಲಿ ಬ್ಯಾಟರಿಯನ್ನು ನೀವು ಉಳಿಸಬಹುದಾಗಿದೆ. ಇಂದಿನ ಲೇಖನದಲ್ಲಿ ಸ್ಮಾರ್ಟ್‌ಫೋನ್ ಬ್ಯಾಟರಿ ಜೀವನವನ್ನು ದೀರ್ಘವಾಗಿಸುವ ಅತ್ಯಮೂಲ್ಯ ಸಲಹೆಗಳನ್ನು ನೀಡುತ್ತಿದ್ದು ನಿಜಕ್ಕೂ ಇದು ಹೆಚ್ಚು ಕಾತರಮಯವಾಗಿದೆ.

ಕನೆಕ್ಟಿವಿಟಿ ಆಫ್ ಮಾಡಿ

ಕನೆಕ್ಟಿವಿಟಿ ಆಫ್ ಮಾಡಿ

ಕನೆಕ್ಟಿವಿಟಿ ಫೀಚರ್‌ಗಳು ಆನ್‌ನಲ್ಲಿದ್ದಾಗ ಇದು ಬ್ಯಾಟರಿಯನ್ನು ಹೆಚ್ಚು ಬಳಸಿಕೊಳ್ಳುತ್ತದೆ. ಎನ್‌ಎಫ್‌ಸಿ,ಜಿಪಿಎಸ್,ಬ್ಲ್ಯೂಟೂತ್,ವೈಫೈ ಮತ್ತು 3ಜಿ/4ಜಿ ಎಲ್‌ಟಿಇ ನಿಮ್ಮ ಸ್ಮಾರ್ಟ್‌ಫೋನ್‌ನ ಹೆಚ್ಚುವರಿ ಬ್ಯಾಟರಿಯನ್ನು ನುಂಗಿಹಾಕಬಹುದು. ನಿಮಗೆ ಬೇಡದೇ ಇದ್ದ ಸಂದರ್ಭದಲ್ಲಿ ಈ ಸೌಲಭ್ಯಗಳನ್ನು ಆಫ್ ಮಾಡಿ.

ಹಿನ್ನಲೆ ಅಪ್ಲಿಕೇಶನ್‌ಗಳು

ಹಿನ್ನಲೆ ಅಪ್ಲಿಕೇಶನ್‌ಗಳು

ಕೆಲವೊಂದು ಅಪ್ಲಿಕೇಶನ್‌ಗಳನ್ನು ನೀವು ಕ್ಲೋಸ್ ಮಾಡಿದ್ದರೂ ಹಿನ್ನಲೆಯಲ್ಲಿ ಇದು ಚಾಲನೆಯಾಗುತ್ತಿರುತ್ತದೆ. ಇದು ಕ್ಲೋಸ್ ಆಗಿರದೆ ಮಿನಿಮೈಸ್ ರೂಪಲ್ಲಿರುತ್ತದೆ. ಸೆಟ್ಟಿಂಗ್ > ಬ್ಯಾಟರಿ ಇಲ್ಲಿಗೆ ಹೋಗಿ ಹಿನ್ನಲೆಯಲ್ಲಿ ರನ್ ಆಗುತ್ತಿರುವ ಅಪ್ಲಿಕೇಶನ್‌ಗಳನ್ನು ನಿಮಗೆ ಅರಿತುಕೊಳ್ಳಬಹುದಾಗಿದೆ.

ಪವರ್ ಸೇವಿಂಗ್ ಮೋಡ್ ಆನ್ ಮಾಡಿ

ಪವರ್ ಸೇವಿಂಗ್ ಮೋಡ್ ಆನ್ ಮಾಡಿ

ಎಲ್ಲಾ ಸ್ಮಾರ್ಟ್‌ಫೋನ್‌ಗಳು ಈ ಫೀಚರ್ ಅನ್ನು ಹೊಂದಿರುವುದಿಲ್ಲ, ಆದರೆ ನಿಮ್ಮ ಡಿವೈಸ್ ಈ ಫೀಚರ್ ಅನ್ನು ಹೊಂದಿದ್ದರೆ ಇದನ್ನು ಆನ್ ಮಾಡಿ ಬ್ಯಾಟರಿ ಜೀವನವನ್ನು ಉಳಿಸಬಹುದಾಗಿದೆ.

ಲೈವ್ ವಾಲ್‌ಪೇಪರ್‌ಗಳನ್ನು ಬಳಸದಿರಿ

ಲೈವ್ ವಾಲ್‌ಪೇಪರ್‌ಗಳನ್ನು ಬಳಸದಿರಿ

ಲೈವ್ ವಾಲ್‌ಪೇಪರ್‌ಗಳು ನೋಡದಲ್ಲಿ ಉತ್ತಮವಾಗಿದ್ದರೂ ಆದರೆ ಇವುಗಳು ಹೆಚ್ಚುವರಿ ಬ್ಯಾಟರಿಯನ್ನು ಬಳಸಿಕೊಳ್ಳುತ್ತವೆ. ಇಂತಹ ವಾಲ್‌ಪೇಪರ್‌ಗಳನ್ನು ಫೋನ್‌ನಲ್ಲಿ ಬಳಸುವುದನ್ನು ನಿಲ್ಲಿಸಿ. ಡಾರ್ಕ್ ವಾಲ್‌ಪೇಪರ್ ಬಳಸಿ ಫೋನ್‌ನಲ್ಲಿ ಬ್ಯಾಟರಿಯನ್ನು ಉಳಿಸಿಕೊಳ್ಳಬಹುದಾಗಿದೆ.

ಆಟೊ ಬ್ರೈಟ್‌ನೆಸ್ ಹೊಂದಿಸಿ

ಆಟೊ ಬ್ರೈಟ್‌ನೆಸ್ ಹೊಂದಿಸಿ

ಆಂಡ್ರಾಯ್ಡ್ ಬಳಕೆದಾರರು ಆಟೊ ಬ್ರೈಟ್‌ನೆಸ್ ಅನ್ನು ಆನ್ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಲೈಟಿಂಗ್ ಕಂಡೀಷನ್ ಅನ್ನು ಅನುಸರಿಸಿ ಇದರಿಂದ ಕೂಡ ಬ್ಯಾಟರಿಯನ್ನು ಉಳಿಸಬಹುದಾಗಿದೆ.

ಸ್ಕ್ರೀನ್ ಟೈಮ್ ಕನಿಷ್ಟವಾಗಿರಲಿ

ಸ್ಕ್ರೀನ್ ಟೈಮ್ ಕನಿಷ್ಟವಾಗಿರಲಿ

ಸ್ಕ್ರೀನ್ ಟೈಮ್ ಔಟ್ ಅನ್ನು ಹೊಂದಿಸುವುದರ ಮೂಲಕ ಸ್ಮಾರ್ಟ್‌ಫೋನ್‌ನ ಬ್ಯಾಟರಿ ಲೈಫ್ ಅನ್ನು ಸುಧಾರಿಸಬಹುದಾಗಿದೆ. ಸ್ಕ್ರೀನ್ ಟೈಮ್ ಔಟ್ ದೀರ್ಘವಾಗಿದ್ದರೆ ಬ್ಯಾಟರಿ ಜೀವನವನ್ನು ಡ್ರೈ ಮಾಡಿಬಿಡುತ್ತದೆ.

ವೈಬ್ರೇಶನ್ ಆಫ್ ಮಾಡಿ

ವೈಬ್ರೇಶನ್ ಆಫ್ ಮಾಡಿ

ನೀವು ಯಾವುದೇ ಸೂಚನೆಗಳನ್ನು ಮತ್ತು ಅಧಿಸೂಚನೆಗಳನ್ನು ಆರಿಸಿದ್ದಲ್ಲಿ ವೈಬ್ರೇಟ್ ಮೋಡ್ ಆನ್ ಮಾಡಿದ್ದರೆ ಇದು ನಿಮಗೆ ತಿಳಿಸುತ್ತದೆ. ಆದರೆ ವೈಬ್ರೇಶನ್ ಮೋಡ್ ಹೆಚ್ಚುವರಿ ಬ್ಯಾಟರಿಯನ್ನು ಬಳಸಿಕೊಳ್ಳಬಹುದಾಗಿದೆ. ವೈಬ್ರೇಶನ್ ಬೇಡ ಎಂದ ಸಂದರ್ಭದಲ್ಲಿ ಅದನ್ನು ಆಫ್ ಮಾಡಿಡಿ.

ಅಪ್ಲಿಕೇಶನ್ ಅಪ್‌ಡೇಟ್ ಮಾಡಿ

ಅಪ್ಲಿಕೇಶನ್ ಅಪ್‌ಡೇಟ್ ಮಾಡಿ

ಬ್ಯಾಟರಿ ಲೈಫ್ ಅನ್ನು ಉಳಿಸಲು ಅಪ್ಲಿಕೇಶನ್ ಅಪ್‌ಡೇಟ್ ಮಾಡುವುದೂ ಕೂಡ ಇನ್ನೊಂದು ವಿಧಾನವಾಗಿದೆ. ಅಪ್ಲಿಕೇಶನ್ ಅಪ್‌ಡೇಟ್ ಮಾಡುವುದು ಬ್ಯಾಟರಿ ಲೈಫ್ ಉಳಿಸಲು ಸಹಾಯ ಮಾಡುತ್ತದೆ ಇಲ್ಲಿ ಬ್ಯಾಟರಿ ದೀರ್ಘಗೊಳಿಸುವ ಉಪಾಯ ಕೂಡ ನಿಮಗೆ ದೊರೆಯಬಹುದು.

Best Mobiles in India

English summary
Here, we have come up with a few tips and tricks on how to save the battery life of your smartphone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X