360 ಡಿಗ್ರಿಯಲ್ಲಿ ಫೋಟೊ ಸೆರೆಹಿಡಿಯುವುದು ಹೇಗೆ?..ಯಾವ ಆಪ್ ಬೆಸ್ಟ್‌?

|

ಸಾಮಾನ್ಯವಾಗಿ ಪ್ರವಾಸ ಹೋದಾಗ ಅಲ್ಲಿನ ಪರಿಸರದ ಫೋಟೊ ಸೆರೆಹಿಡಿದು ಫೇಸ್‌ಬುಕ್‌ ಅಪ್‌ಲೋಡ್ ಮಾಡುತ್ತಾರೆ. ಫೋಟೊಗಳಲ್ಲಿ ಅಲ್ಲಿನ ಪ್ರಮುಖ ಕಟ್ಟಡ, ಆಕೃತಿ, ಫಾಲ್ಸ್‌, ದೇವಸ್ಥಾನ ಹೀಗೆ ಎಲ್ಲವನ್ನು ಪ್ರತ್ಯೇಕವಾಗಿ ಸೆರೆಹಿಡುಕೊಳ್ಳುತ್ತಿರಾ. ಆದರೆ ಒಂದು ಪ್ರದೇಶದ ಸುತ್ತಲಿನ ಪರಿಸರವನ್ನು ಒಂದೇ ಫೋಟೊದಲ್ಲಿ ಸೆರೆಹಿಡಿಯಲು ಸಾಧ್ಯ ಎಂದರೆ ನೀವು ಅಚ್ಚರಿ ಪಡುವ ಹಾಗಿಲ್ಲ. ಏಕೆಂದರೇ ಅದಕ್ಕಾಗಿಯೆ ಸಾಕಷ್ಟು ಆಪ್ಸ್‌ಗಳು ಪ್ಲಾಟ್‌ಫಾರ್ಮ್ ನೀಡಿದೆ.

ಸಾಮಾಜಿಕ ಜಾಲತಾಣ ಫೇಸ್‌ಬುಕ್

ಹೌದು, ಸಾಕಷ್ಟು ಆಪ್‌ಗಳು 360 ಡಿಗ್ರಿ ಕ್ಯಾಮೆರಾ ಆಯ್ಕೆಯನ್ನು ಪರಿಚಯಿಸಿವೆ. ಹಾಗೆಯೆ ಫೇಸ್‌ಬುಕ್‌ ಸಹ 360 ಡಿಗ್ರಿ ಕ್ಯಾಮೆರಾ ಅಳವಡಿಸಿದೆ. ಆದರೆ ಬಹುತೇಕರಿಗೆ 360 ಡಿಗ್ರಿ ಕ್ಯಾಮೆರಾ ಫೀಚರ್‌ ಬಳಕೆಯ ಬಗ್ಗೆ ತಿಳಿದಿಲ್ಲ. ಆದರೆ ಈ 360 ಕ್ಯಾಮೆರಾ ಆಪ್‌ ಮೂಲಕ ಬಳಕೆದಾರರು ಒಂದೇ ಫೋಟೊದಲ್ಲಿ ಒಂದು ಪ್ರದೇಶದ ಪೂರ್ಣ 360 ವ್ಯಾಪ್ತಿಯನ್ನು ಕವರ್ ಮಾಡಬಹುದಾದ ಸೌಲಭ್ಯ ಇದೆ. ಹಾಗಾದರೆ ಪ್ರಮುಖ ಐದು 360 ಡಿಗ್ರಿ ಕ್ಯಾಮೆರಾ ಆಪ್ಸ್‌ಗಳು ಯಾವುವು ಎಂಬುದನ್ನು ತಿಳಿಯಲು ಮುಂದೆ ಓದಿರಿ.

360 ಡಿಗ್ರಿ ಫೋಟೊ

360 ಡಿಗ್ರಿ ಫೋಟೊ

360 ಡಿಗ್ರಿ ಫೋಟೊ ಅಂದರೇ ನಿಮ್ಮ ಸುತ್ತಲಿನ ಪ್ರದೇಶವನ್ನು ವೃತ್ತಾಕಾರದಲ್ಲಿ ಸೆರೆಹಿಡಿಯುವುದೆ 360 ಡಿಗ್ರಿ ಫೋಟೊ ಆಗಿದೆ. ಈ ರೀತಿಯ ಫೋಟೊ ಸೆರೆಹಿಡಿಯಲು ಸಾಮಾಜಿಕ ತಾಣ ಫೇಸ್‌ಬುಕ್ ಅನುಕೂಲ ಮಾಡಿಕೊಟ್ಟಿದೆ. ಅದರೊಂದಿಗೆ ಹಲವು ಅಪ್ಲಿಕೇಶನ್ ಹಾಗೂ ಥರ್ಡ್‌ಪಾರ್ಟಿ ಆಪ್ಸ್‌ ಸಹ 360 ಡಿಗ್ರಿ ಕ್ಯಾಮೆರಾ ಸೌಲಭ್ಯಗಳನ್ನು ಒಳಗೊಂಡಿವೆ.

ಕ್ಯಾಮೆರಾ 360 ಆಪ್

ಕ್ಯಾಮೆರಾ 360 ಆಪ್

ಕ್ಯಾಮೆರಾ 360 ಆಪ್‌ ಒಂದು ಅತ್ಯುತ್ತಮ 360 ಫೋಟೊ ಸೆರೆಹಿಡಿಯುವ ಆಪ್‌ ಆಗಿದೆ. ಈ ಆಪ್‌ ಸುಮಾರು 1 ಬಿಲಿಯನ್‌ಗಿಂತಲೂ ಅಧಿಕ ಡೌನ್‌ಲೋಡ್ ಕಂಡಿದೆ. ಹಾಗೆಯೇ ಈ ಆಪ್‌ನಲ್ಲಿ ಹಲವು ಆಕರ್ಷಕ ಎಡಿಟಿಂಗ್ ಆಯ್ಕೆಗಳು ಇವೆ.

ಗೂಗಲ್ ಸ್ಟ್ರೀಟ್‌ವ್ಯೂವ್

ಗೂಗಲ್ ಸ್ಟ್ರೀಟ್‌ವ್ಯೂವ್

ಗೂಘಲ್ ಸ್ಟ್ರೀಟ್‌ವ್ಯೂವ್ 360 ಡಿಗ್ರಿ ಕ್ಯಾಮೆರಾ ಆಪ್ ಆಂಡ್ರಾಯ್ಡ್‌ ಫೋನ್ ಬಳಕೆದಾರರಿಗೆ ಉತ್ತಮ ಆಯ್ಕೆ ಆಗಿದೆ. ಬಳಕೆದಾರರು 360 ಡಿಗ್ರಿ ಫೋಟೊವನ್ನು ಸೆರೆಹಿಡಿಯಬಹುದಾಗಿದ್ದು, ಹಾಗೆಯೇ ಆ ಫೋಟೊವನ್ನು ಶೇರ್ ಮಾಡುವ ಅವಕಾಶಗಳು ಇದರಲ್ಲಿವೆ.

ಪನೋರಮಾ 360 ಕ್ಯಾಮೆರಾ

ಪನೋರಮಾ 360 ಕ್ಯಾಮೆರಾ

ಪನೋರಮಾ 360 ಡಿಗ್ರಿ ಕ್ಯಾಮೆರಾ ಸಹ 360 ಡಿಗ್ರಿಯಲ್ಲಿ ಫೋಟೊ ಸೆರೆಹಿಡಿಯಲು ಅತ್ಯುತ್ತಮ ಆಪ್‌ ಆಗಿದ್ದು, ಅತೀ ಸುಲಭವಾಗಿ ಈ ಆಪ್‌ ಅನ್ನು ಬಳಕೆ ಮಾಡಬಹುದಾಗಿದೆ. ಫೋಟೊಗಳನ್ನು ಫೇಸ್‌ಬುಕ್, ಟ್ವಿಟ್ಟರ್, ಸೇರಿದಂತೆ ಇತರೆ ಸಾಮಾಜಿಕ ತಾಣಗಳಲ್ಲಿ ನೇರವಾಗಿ ಶೇರ್ ಮಾಡಬಹುದಾಗಿದೆ.

ಕ್ಯಾಮೆರಾ 3D

ಕ್ಯಾಮೆರಾ 3D

ಕ್ಯಾಮೆರಾ 3D ಆಪ್‌ ಸಹ 360 ಡಿಗ್ರಿ ಕ್ಯಾಮೆರಾಗೆ ಪರ್ಯಾಯ ಅಪ್ಲಿಕೇಶನ್ ಆಗಿದೆ. ಈ ಆಪ್ ವಿಶೇಷವಾಗಿ GIF ಮಾದರಿಗಳಿಗೆ ಉತ್ತಮ ಆಗಿದೆ. ಫೋಟೊಗಳನ್ನು 3D ಮಾದರಿಗೆ ಬದಲಾವಣೆ ಮಾಡಬಹುದಾಗಿದೆ.

Best Mobiles in India

English summary
This best 360-degree camera apps help you shoot ೩೬೦ degree photo. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X