ಫೋನ್ ಓವರ್ ಹೀಟ್‌ಗೆ ಪರಿಹಾರ ಇಲ್ಲಿದೆ

By Shwetha
|

ನಿಮ್ಮ ಸ್ಮಾರ್ಟ್‌ಫೋನ್ ಅನ್ನು ನೀವು ಹೆಚ್ಚು ಬಳಸಿದಂತೆಲ್ಲಾ ಇದು ಬೆಚ್ಚಗಾಗುವುದು ಖಂಡಿತ. ನೀವು ಫೋನ್ ಬಿಸಿಯಾಗುವುದನ್ನು ನಿರ್ಲಕ್ಷಿಸಲು ಖಂಡಿತ ಸಾಧ್ಯವಿಲ್ಲ. ಆದರೆ ನಿಮ್ಮ ಫೋನ್ ತೀರಾ ಬಿಸಿಯಾಗುತ್ತಿದೆ ಎಂದಾದಲ್ಲಿ ಕೆಲವೊಂದು ಅಂಶಗಳನ್ನು ನೀವು ಗಂಭೀರವಾಗಿ ಪರಿಗಣಿಸಲೇಬೇಕಾಗಿದೆ.

ಓದಿರಿ: ಸ್ಮಾರ್ಟ್‌ಫೋನ್ ಬ್ಯಾಟರಿ ದೀರ್ಘತೆಗಾಗಿ ಟಾಪ್ ಸಲಹೆಗಳು

ಫೋನ್ ಅತಿ ಹೆಚ್ಚು ಬಿಸಿಯಾಗುವುದು ಮೊಬೈಲ್‌ಗೆ ತೀವ್ರರೀತಿಯ ಸಂಕಷ್ಟಗಳನ್ನು ಒಡ್ಡಬಹುದು. ಹಾಗಿದ್ದರೆ ನಿಮ್ಮ ಫೋನ್‌ಗೆ ಈ ರೀತಿಯ ನಷ್ಟ ಉಂಟಾಗದಂತೆ ಕಾಪಾಡಿಕೊಳ್ಳುವುದು ಹೇಗೆ ಎಂಬುದಕ್ಕೆ ತಕ್ಕ ರೀತಿಯ ಸಲಹೆಗಳನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದು ಇಲ್ಲಿದೆ ಪರಿಹಾರಗಳು.

ಓದಿರಿ: ಫೋನ್ ಹ್ಯಾಂಗಿಂಗ್ ಸಮಸ್ಯೆಗೆ ಇಲ್ಲಿದೆ ಪರಿಹಾರ

ಸ್ಮಾರ್ಟ್‌ಫೋನ್ ಏಕೆ ಬಿಸಿಯಾಗುತ್ತದೆ

ಸ್ಮಾರ್ಟ್‌ಫೋನ್ ಏಕೆ ಬಿಸಿಯಾಗುತ್ತದೆ

ನಿಮ್ಮ ಸ್ಮಾರ್ಟ್‌ಫೋನ್ ದೈಹಿಕವಾಗಿ ಕೆಲಸ ಮಾಡಿದಂತೆಲ್ಲಾ ಇದು ಬಿಸಿಯಾಗುವ ಸಾಧ್ಯತೆ ಹೆಚ್ಚು. ನಿಮ್ಮ ಫೋನ್ ಬಿಸಿಯಾದಂತೆಲ್ಲಾ ಅದು ಉಂಟುಮಾಡುವ ಇಲೆಕ್ಟ್ರಿಸಿಟಿ ಕೂಡ ಅಧಿಕವಾಗಿರುತ್ತದೆ. ನೀವು ಹೆಚ್ಚು ರೆಸಲ್ಯೂಶನ್ ಆಟಗಳನ್ನು ಮೊಬೈಲ್‌ನಲ್ಲಿ ಆಡುತ್ತಿದ್ದೀರಿ ಎಂದಾದಲ್ಲಿ, ಸಾಕ್ ಬೆಚ್ಚಗಾಗುತ್ತದೆ ಮತ್ತು ಬಿಸಿಯನ್ನು ಉತ್ಪಾದಿಸುತ್ತದೆ. ಬಿಸಿಯಾವುದು ಸಾಮಾನ್ಯವಾಗಿದ್ದರೂ ಹೆಚ್ಚು ಬಿಸಿಯಾಗುವುದು ಅಪಾಯಕಾರಿಯಾಗಿದೆ.

ಸ್ಮಾರ್ಟ್‌ಫೋನ್ ಓವರ್ ಹೀಟಿಂಗ್ ಗಮನ ನೀಡಿ

ಸ್ಮಾರ್ಟ್‌ಫೋನ್ ಓವರ್ ಹೀಟಿಂಗ್ ಗಮನ ನೀಡಿ

ಹೆಚ್ಚಿನ ತಾಪಮಾನಗಳನ್ನು ತಡೆಹಿಡಿಯುವ ಸಾಮರ್ಥ್ಯವನ್ನು ಸಾಕ್ ಹೊಂದಿದ್ದು ಓವರ್ ಹೀಟಿಂಗ್ ಎಂಬುದು ಸಮಸ್ಯೆಯಾಗುವುದು ಅಪರೂಪದ ಸಮಯಗಳಲ್ಲಾಗಿದೆ. ನಿಮ್ಮ ಸ್ಮಾರ್ಟ್‌ಫೋನ್ ಅಪಾಯಕಾರಿ ಮಟ್ಟವನ್ನು ತಲುಪಿದೆ ಎಂದಾದಲ್ಲಿ, ಸಾಕ್ ಪ್ರೊಸೆಸರ್ ಸ್ಪೀಡ್ ಅನ್ನು ಕಡಿಮೆ ಮಾಡುತ್ತದೆ ಇದು ಓವರ್ ಹೀಟಿಂಗ್‌ಗೆ ಕಾರಣವಾಗಿರುತ್ತದೆ.

ಹೆಚ್ಚು ಬಿಸಿಗೆ ಕಾರಣಗಳು

ಹೆಚ್ಚು ಬಿಸಿಗೆ ಕಾರಣಗಳು

ನಿಮ್ಮ ಸ್ಮಾರ್ಟ್‌ಫೋನ್ ಆಗಾಗ್ಗೆ ಓವರ್ ಹೀಟಿಂಗ್ ಸಮಸ್ಯೆಯನ್ನು ಎದುರಿಸುತ್ತಿದೆ ಎಂದಾದಲ್ಲಿ, ಹಾರ್ಡ್‌ವೇರ್ ಹೆಚ್ಚು ಲೋಡ್ ಅನ್ನು ಉಂಟುಮಾಡುತ್ತಿದೆ ಎಂಬುದನ್ನು ಮನಗಾಣಿ. ಈ ಸಮಸ್ಯೆಯನ್ನು ಪರಿಹರಿಸಲು ಜಿಪಿಯುವನ್ನು ಹೆಚ್ಚು ಸಮಯದವರೆಗೆ ದೂಡಿ. ಅಂತೆಯೇ ಹೆಚ್ಚು ಬೇಡಿಕೆಯ ಅಪ್ಲಿಕೇಶನ್‌ಗಳನ್ನು ಬಳಸುವುದೂ ಕೂಡ ಸಿಪಿಯು ಮೇಲೆ ಹೊರೆಯನ್ನು ಹೇರಬಹುದು. ಮಲ್ಟಿ ಟಾಸ್ಕಿಂಗ್, ವಿಜೆಟ್‌ಗಳ ಬಳಕೆ, ಹೆಚ್ಚುವರಿ ವಿಶೇಷತೆಗಳು, ಸಂಪರ್ಕ ಮೊದಲಾದ ಕಾರಣಗಳು ಕೂಡ ಹೆಚ್ಚುವರಿ ಬಿಸಿಗೆ ಕಾರಣವಾಗಿರುತ್ತದೆ.

ಓವರ್ ಹೀಟಿಂಗ್‌ಗೆ ಬಾಹ್ಯ ಕಾರಣಗಳು

ಓವರ್ ಹೀಟಿಂಗ್‌ಗೆ ಬಾಹ್ಯ ಕಾರಣಗಳು

ಅಂತೆಯೇ ನಿಮ್ಮ ಡಿವೈಸ್ ಅನ್ನು ಅತಿಯಾದ ಬಿಸಿ ಸ್ಥಳದಲ್ಲಿ ಇರಿಸುವುದು, ಮೊದಲಾದ ಕಾರಣಗಳೂ ಇದ್ದಿರಬಹುದು. ಇದೆಲ್ಲವನ್ನೂ ನೀವು ಮಾಡುತ್ತಿಲ್ಲ ಎಂದಾದಲ್ಲಿ, ನಿಮ್ಮ ಫೋನ್‌ನ ಹಾರ್ಡ್‌ವೇರ್‌ನ ದೋಷವೂ ಆಗಿರಬಹುದಾಗಿದೆ.

ಬ್ಯಾಟರಿ ಹಾನಿ

ಬ್ಯಾಟರಿ ಹಾನಿ

ಲಿಯಾನ್ ಬ್ಯಾಟರಿಗಳು ಆಧುನಿಕ ಸ್ಮಾರ್ಟ್‌ಫೋನ್‌ಗಳಲ್ಲಿ ಅಳವಡಿಸಲಾಗಿದ್ದು ಇದು ಉತ್ತಮ ರೀಚಾರ್ಜೇಬಲ್ ಬ್ಯಾಟರಿ ಎಂಬುದಾಗಿ ಪ್ರಸಿದ್ಧತೆಯನ್ನು ಪಡೆದುಕೊಂಡಿದೆ. ಇಂತಹ ಬ್ಯಾಟರಿಗಳು ಬಿಸಿಗೆ ಹೆಚ್ಚು ಸೂಕ್ಷ್ಮವಾಗಿರುತ್ತದೆ. ಇದರಿಂದಾಗಿ ಕೂಡ ಬ್ಯಾಟರಿ ಬೇಗನೇ ಹಾನಿಗೊಳ್ಳುವ ಸಂಭವ ಇರುತ್ತದೆ.

ಬ್ಯಾಟರಿ ಓವರ್ ಹೀಟಿಂಗ್ ಗಮನ ಕೊಡದಿರುವುದು

ಬ್ಯಾಟರಿ ಓವರ್ ಹೀಟಿಂಗ್ ಗಮನ ಕೊಡದಿರುವುದು

ನಿತ್ಯವೂ ಫೋನ್‌ಗೆ 100 ಶೇಕಡಾದಷ್ಟು ಚಾರ್ಜ್ ಆಗುವವರೆಗೆ ಒತ್ತಡವನ್ನು ಹೇರುವುದು ಫೋನ್‌ನ ಬ್ಯಾಟರಿ ಜೀವನವನ್ನು ಕೊನೆಗೊಳಿಸುತ್ತದೆ. ಆದ್ದರಿಂದ ಆದಷ್ಟು 30 ರಿಂದ 80 ಶೇಕಡಾ ಚಾರ್ಜ್ ಆಗುವವರೆಗೆ ನೋಡಿಕೊಳ್ಳಿ.

ಸಾಕ್ ಮತ್ತು ಓವರ್ ಹೀಟಿಂಗ್

ಸಾಕ್ ಮತ್ತು ಓವರ್ ಹೀಟಿಂಗ್

ಪ್ರೊಸೆಸರ್ ವೇಗವು ಓವರ್ ಹೀಟಿಂಗ್ ಸಮಸ್ಯೆಯನ್ನು ತಡೆಯಬಹುದು ಮತ್ತು ನಿಮ್ಮ ಡಿವೈಸ್ ಅನ್ನು ಇದು ನಿಧಾನಗೊಳಿಸುತ್ತದೆ. ಹೆಚ್ಚು ಬಿಸಿಯಾಗುವಿಕೆಯು ಚಿಪ್ ಅನ್ನು ಹಾನಿಗೊಳಪಡಿಸಬಹುದು, ಆದರೆ ಇದು ತುಂಬಾ ವಿರಳ.

ಸಾಕ್ ಓವರ್ ಹೀಟಿಂಗ್ ತಡೆ

ಸಾಕ್ ಓವರ್ ಹೀಟಿಂಗ್ ತಡೆ

ಹೆಚ್ಚು ಬೇಡಿಕೆಯ ಗೇಮ್‌ಗಳನ್ನು ಆಡದಿರುವುದು ಮತ್ತು ಹೆಚ್ಚು ಕಾಲ ವೀಡಿಯೊಗಳನ್ನು ವೀಕ್ಷಿಸದೇ ಇರುವುದು ಮೊದಲಾದ ಫೋನ್ ಬಳಸಿ ಹೆಚ್ಚು ಸಮಯದವರೆಗೆ ಮಾಡುವ ಚಟುವಟಿಕೆಗಳಿಗೆ ತಡೆಯೊಡ್ಡಿದರೆ ಹೀಟಿಂಗ್ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದಾಗಿದೆ.

Best Mobiles in India

English summary
Here, you will get to know the reason why your smartphone gets heated up and overheated as well. Also, you will understand what damage it might cause and how you can avoid overheating of your smartphone. Take a look.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X