ಫೋನ್ ಹ್ಯಾಂಗಿಂಗ್ ಸಮಸ್ಯೆಗೆ ಇಲ್ಲಿದೆ ಪರಿಹಾರ

By Shwetha
|

ನಿಮ್ಮ ಸ್ಮಾರ್ಟ್‌ಫೋನ್ ಎಷ್ಟೇ ದುಬಾರಿಯಾಗಿದ್ದರೂ ಒಂದಿಲ್ಲೊಂದು ಸಮಸ್ಯೆಗಳನ್ನು ಅದು ಎದುರಿಸುತ್ತಲೇ ಇರುತ್ತದೆ. ಅದೊಂದು ಮುಗಿಯದ ಸರಮಾಲೆಯಂತಾಗಿದೆ. ಬ್ಯಾಟರಿ ಸಮಸ್ಯೆ, ಕ್ಯಾಮೆರಾ ಸಮಸ್ಯೆ ಹೀಗೆ ಒಂದಿಲ್ಲೊಂದು ಮೊಬೈಲ್ ದೋಷಗಳು ಇದ್ದೇ ಇರುತ್ತದೆ. ಈಗ ಇದಕ್ಕೆ ಪೂರಕವಾಗಿ ಹುಟ್ಟಿಕೊಂಡಿರುವುದೇ ಹ್ಯಾಂಗಿಂಗ್ ಸಮಸ್ಯೆಯಾಗಿದೆ.

ಓದಿರಿ: ಸ್ಮಾರ್ಟ್‌ಫೋನ್ ಬ್ಯಾಟರಿ ದೀರ್ಘತೆಗಾಗಿ ಟಾಪ್ ಸಲಹೆಗಳು

ಹಾಗಿದ್ದರೆ ಇದಕ್ಕೆ ಪೂರ್ಣ ಪ್ರಮಾಣದ ಅಂತ್ಯವನ್ನು ಹಾಡಲಾಗದೇ ಇದ್ದರೂ ಕೆಲವೊಂದು ವಿಧಾನಗಳನ್ನು ಅನುಸರಿಸುವುದರ ಮೂಲಕ ಹ್ಯಾಂಗಿಂಗ್ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಹಾಗಿದ್ದರೆ ಬನ್ನಿ ಇಂದಿನ ಲೇಖನದಲ್ಲಿ ಫೋನ್ ಹ್ಯಾಂಗಿಂಗ್ ಸಮಸ್ಯೆಗೆ ಪರಿಹಾರಗಳನ್ನು ಪಡೆದುಕೊಳ್ಳುವುದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳ ಮೂಲಕ ಅರಿತುಕೊಳ್ಳೋಣ.

ಫೋನ್ ಆಫ್ ಮಾಡಿ

ಫೋನ್ ಆಫ್ ಮಾಡಿ

ನಿಮ್ಮ ಫೋನ್ ಆಫ್ ಮಾಡಿ ಪವರ್ ಮೆನು ಕಾಣುವವರೆಗೆ ನಿಮ್ಮ ಫೋನ್‌ನಲ್ಲಿ ಪವರ್ ಬಟನ್ ಅನ್ನು ಒತ್ತಿ ಹಿಡಿಯಿರಿ.

ಫೋನ್ ರೀಸ್ಟಾರ್ಟ್ ಮಾಡಿ

ಫೋನ್ ರೀಸ್ಟಾರ್ಟ್ ಮಾಡಿ

ನಿಮ್ಮ ಪವರ್ ಬಟನ್ ಅಥವಾ ಸ್ಕ್ರೀನ್ ಟ್ಯಾಪ್ಸ್‌ಗೆ ನಿಮ್ಮ ಫೋನ್ ಪ್ರಕ್ರಿಯಿಸುತ್ತಿಲ್ಲ ಎಂದಾದಲ್ಲಿ, ನೀವು ಹೆಚ್ಚು ಫೋರ್ಸ್ ಮಾಡಿ ಫೋನ್ ಅನ್ನು ರೀಸ್ಟಾರ್ಟ್ ಮಾಡಬೇಕಾಗುತ್ತದೆ.

ಬ್ಯಾಟರಿ ಹೊರತೆಗೆಯಿರಿ

ಬ್ಯಾಟರಿ ಹೊರತೆಗೆಯಿರಿ

ನಿಮ್ಮ ಫೋನ್‌ನ ಬ್ಯಾಟರಿಯನ್ನು ಹೊರತೆಗೆದು ಕೂಡ ಫೋನ್ ಅನ್ನು ನಿಮಗೆ ರೀಸ್ಟಾರ್ಟ್ ಮಾಡಬಹುದಾಗಿದೆ.

ಹ್ಯಾಂಗ್ ಮಾಡುತ್ತಿರುವ ಅಪ್ಲಿಕೇಶನ್ ಅಳಿಸಿ

ಹ್ಯಾಂಗ್ ಮಾಡುತ್ತಿರುವ ಅಪ್ಲಿಕೇಶನ್ ಅಳಿಸಿ

ನಿಮ್ಮ ಫೋನ್ ಅನ್ನು ಹ್ಯಾಂಗ್ ಮಾಡುತ್ತಿರುವ ಅಪ್ಲಿಕೇಶನ್ ಅಳಿಸಿ ಕೆಲವೊಂದು ಅಪ್ಲಿಕೇಶನ್‌ಗಳು ನಿಮ್ಮ ಫೋನ್ ಅನ್ನು ಹ್ಯಾಂಗ್ ಮಾಡುತ್ತಿರಬಹುದು. ಇಂತಹ ಸಂದರ್ಭದಲ್ಲಿ ಅಂತಹ ಅಪ್ಲಿಕೇಶನ್‌ಗಳನ್ನು ಅಳಿಸುವುದು ಅತ್ಯವಶ್ಯಕವಾಗಿದೆ.

ಫ್ಯಾಕ್ಟ್ರಿ ರೀಸೆಟ್

ಫ್ಯಾಕ್ಟ್ರಿ ರೀಸೆಟ್

ಫೋನ್ ಹ್ಯಾಂಗ್ ಆದ ನಂತರ ಫೋನ್ ಆನ್ ಆಗುತ್ತಿಲ್ಲ ಎಂದಾದಲ್ಲಿ, ಫ್ಯಾಕ್ಟ್ರಿ ರೀಸೆಟ್ ನಿಮ್ಮ ಸಮಸ್ಯೆಗಳನ್ನು ಹೋಗಲಾಡಿಸಬಹುದು.

ಪ್ಲಗಿನ್

ಪ್ಲಗಿನ್

ಚಾರ್ಜರ್‌ಗೆ ನಿಮ್ಮ ಫೋನ್ ಅನ್ನು ಪ್ಲಗ್ ಮಾಡಿ ನಿಮ್ಮ ಫೋನ್‌ನಲ್ಲಿ ಬ್ಯಾಟರಿ ಇಲ್ಲದೇ ಫೋನ್ ಹ್ಯಾಂಗ್ ಸಮಸ್ಯೆಯನ್ನು ಅನುಭವಿಸುತ್ತಿರುವ ಪರಿಸ್ಥಿತಿ ಕೂಡ ಇದ್ದಿರಬಹುದು. ನಿಮ್ಮ ಫೋನ್ ಅನ್ನು ಕೆಲವು ನಿಮಿಷಗಳವರೆಗೆ ಪ್ಲಗಿನ್ ಮಾಡಿ.

ಹ್ಯಾಂಗ್

ಹ್ಯಾಂಗ್

ಅಪ್ಲಿಕೇಶನ್‌ಗಳ ಅಳಿಸುವಿಕೆ ನಿಮ್ಮ ಫೋನ್‌ನಲ್ಲಿ ಅನಗತ್ಯ ಅಪ್ಲಿಕೇಶನ್‌ಗಳು ಫೋನ್‌ನ ವೇಗದ ಮೇಲೆ ಪರಿಣಾಮವನ್ನು ಬೀರಿ ಹ್ಯಾಂಗ್ ಮಾಡುತ್ತಿರಬಹುದು. ಆದ್ದರಿಂದ ಫೋನ್‌ನಲ್ಲಿರುವ ಅಪರಿಮಿತ ಅಪ್ಲಿಕೇಶನ್‌ಗಳನ್ನು ನಿವಾರಿಸುವುದು ಅತೀ ಅಗತ್ಯವಾಗಿದೆ.

ಪವರ್ ಬಟನ್

ಪವರ್ ಬಟನ್

ನಿಮ್ಮ ಫೋನ್ ಆಫ್ ಮಾಡುವುದು "ಸ್ಲೈಡ್ ಟು ಪವರ್ ಆಫ್" ಸ್ಲೈಡರ್ ಕಾಣುವವರೆಗೆ ನಿಮ್ಮ ಫೋನ್‌ನಲ್ಲಿ ಪವರ್ ಬಟನ್ ಅನ್ನು ಒತ್ತಿಹಿಡಿಯಿರಿ.

ಐಟ್ಯೂನ್ಸ್

ಐಟ್ಯೂನ್ಸ್

ಐಫೋನ್‌ನಲ್ಲಿ ಐಟ್ಯೂನ್ಸ್ ಬಳಸಿ ರೀಸ್ಟೋರ್ ಮಾಡಿ ನಿಮ್ಮ ಐಫೋನ್‌ನಲ್ಲಿ ಐಟ್ಯೂನ್ಸ್ ಅನ್ನು ಬಳಸಿ ರೀಸ್ಟೋರ್ ಮಾಡುವುದು ಅತೀ ಅಗತ್ಯವಾಗಿದೆ. ಇದರಿಂದ ಹ್ಯಾಂಗ್ ಆಗಿರುವ ಐಫೋನ್ ರೀಸ್ಟೋರ್ ಮಾಡಬಹುದಾಗಿದೆ.

Best Mobiles in India

English summary
In this article we can see some steps on solve the Smartphone hanging problem what are the steps to taken.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X