ನಿಮ್ಮ ವಾಟ್ಸಪ್ ಖಾತೆ ಸೇಫ್‌ ಆಗಿದೆಯಾ ಎಂದು ಚೆಕ್ ಮಾಡಲು ಹೀಗೆ ಮಾಡಿ!

|

ವಿಶ್ವದಲ್ಲಿಯೇ ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ 'ವಾಟ್ಸಪ್' ಆಪ್‌ ತನ್ನ ಬಳಕೆದಾರರಿಗೆ ಹಲವು ಸೂಕ್ತ ಪ್ರೈವೆಸಿ ಸೆಟ್ಟಿಂಗ್ ಆಯ್ಕೆಗಳನ್ನು ಪರಿಚಯಿಸಿದೆ. ಅದಾಗ್ಯೂ ಇತ್ತೀಚಿಗೆ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಶನ್ 'ವಾಟ್ಸಪ್' ಕೆಲವು ಸುರಕ್ಷತೆಯ ಲೋಪದಿಂದಾಗಿ ಸುದ್ದಿಯಾಗಿತ್ತು. ಹಾಗೆಯೇ ವಾಟ್ಸಪ್‌ ಕೆಲ ಆವೃತ್ತಿಗಳಿಗೆ 'ಎಂಪಿ4' ಫಾರ್ಮೆಟ್‌ ಮಾದರಿಯಲ್ಲಿ ಹಾಕರ್ಸ್‌ಗಳು ಕಳ್ಳಗಣ್ಣು ಹಾಕಿರುವ ಸುದ್ದಿ ಸಹ ಹೊರಬಂದಿತ್ತು. ಈ ನಡುವೆ ನಿಮ್ಮ ವಾಟ್ಸಪ್ ಖಾತೆ ಸುರಕ್ಷಿತವೇ ಎಂದು ಪರಿಶೀಲಿಸಿದ್ದಿರಾ.?

ಬಳಕೆದಾರರು

ಹೌದು, ಬಹುತೇಕ ಬಳಕೆದಾರರು ಅವರ ವಾಟ್ಸಪ್ ಖಾತೆ ಪ್ರೈವೆಸಿ ಸೆಕ್ಯೂರ್‌ ಆಗಿದೆಯಾ ಎಂದು ಚೆಕ್ ಮಾಡಿರುವುದಿಲ್ಲ. ಹೀಗೆ ನೀವು ನಿಮ್ಮ ವಾಟ್ಸಪ್ ಖಾತೆ ಸುರಕ್ಷಿತವಾಗಿದೆಯೇ ಎಂಬುದನ್ನು ತಿಳಿಯಲು ಕೆಲವು ಆಯ್ಕೆಗಳು ವಾಟ್ಸಪ್‌ನಲ್ಲಿವೆ. ಹಾಗೆಯೇ ವಾಟ್ಸಪ್‌ ಅನ್ನು ಅಪ್‌ಡೇಟ್ ಮಾಡುವುದು ಸಹ ಅಗತ್ಯವಾಗಿದೆ. ಹಾಗಾದರೇ ವಾಟ್ಸಪ್ ಖಾತೆ ಸುರಕ್ಷಿತವಾಗಿದೆಯೇ ಎಂಬುದನ್ನು ಹೇಗೆ ಪರಿಶೀಲಿಸುವುದು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಏನಿದು ಎಂಪಿ4 ಫೈಲ್‌ ಅಟ್ಯಾಕ್?

ಏನಿದು ಎಂಪಿ4 ಫೈಲ್‌ ಅಟ್ಯಾಕ್?

ಎಂಪಿ4 ಮಾದರಿಯ ಫೈಲ್‌ RCE (Remote Code Execution) ಮತ್ತು DoS (Denial of Service) ಸೈಬರ್ ಅಟ್ಯಾಕ್/ಹ್ಯಾಕ್ ಪ್ರಯತ್ನದ ಮಾದರಿಯಾಗಿದ್ದು, ಇದನ್ನು ಹ್ಯಾಕರ್ಸ್‌ಗಳು ವಿನ್ಯಾಸ್‌ಗೊಳಿಸಿದ್ದಾರೆ. ಅಪರಿಚಿತ ಮೂಲದಿಂದ ಬಳಕೆದಾರರ ವಾಟ್ಸಪ್ ಖಾತೆಗೆ ಎಂಪಿ4 ಫೈಲ್‌ ಮೆಸೆಜ್ ಬರುವುದು ಒಂದು ವೇಳೆ ಬಳಕೆದಾರರು ಆ ಫೈಲ್‌ ಅನ್ನು ಓಪೆನ್ ಮಾಡಿದರೇ ಅವರ ಪ್ರೈವೆಸಿ ಮಾಹಿತಿ ಸೋರಿಕೆಯ ಸಾಧ್ಯತೆಗಳಿರುತ್ತದೆ ಎನ್ನಲಾಗಿದೆ.

ಸೈಬರ್ ಸೆಕ್ಯುರಿಟಿ ತಜ್ಞರ ಮಾತು

ಸೈಬರ್ ಸೆಕ್ಯುರಿಟಿ ತಜ್ಞರ ಮಾತು

ಸೈಬರ್ ಸೆಕ್ಯುರಿಟಿ ತಜ್ಞರು ಗುರುತಿಸಿರುವ ಎಂಪಿ4 ಮಾದರಿಯ ಫೈಲ್ ದೋಷವು, ಆಂಡ್ರಾಯ್ಡ್‌ 2.19.274 ವರ್ಷನ್‌ ಮತ್ತು ಅದಕ್ಕಿಂತಲೂ ಕೆಳಗಿನ ಆವೃತ್ತಿಗಳಲ್ಲಿ ಕಂಡುಬಂದಿದೆ. ಹಾಗೂ ಐಓಎಸ್‌ ಆವೃತ್ತಿಯ ಮಾದರಿಯಲ್ಲಿ ವಾಟ್ಸಪ್ 2.19.100 ವರ್ಷನ್ ಮತ್ತು ಅದಕ್ಕಿಂತ ಕೆಳಗಿನ ಆವೃತ್ತಿಗಳಲ್ಲಿ ಕಂಡುಬಂದಿದೆ ಎಂದಿದ್ದಾರೆ. ಹಾಗೂ ವಿಂಡೊಸ್‌ ಫೋನ್‌ 2.18.368 ವಾಟ್ಸಪ್‌ ಆವೃತ್ತಿಯಲ್ಲಿ ದೋಷ ಗುರುತಿಸಲಾಗಿದೆ.

ವಾಟ್ಸಪ್‌ ಆವೃತ್ತಿ

ವಾಟ್ಸಪ್‌ ಆವೃತ್ತಿ

ಹಾಗೆಯೇ ವಾಟ್ಸಪ್‌ ಬ್ಯುಸಿನೆಸ್‌ ಆಪ್‌ನ ಕೆಲವು ಆವೃತ್ತಿಗಳು ದೋಷಕ್ಕೆ ಗುರಿಯಾಗುವ ಹಂತದಲ್ಲಿವೆ ಎನ್ನಲಾಗಿದೆ. ಆಂಡ್ರಾಯ್ಡ್‌ ಆವೃತ್ತಿಯಲ್ಲಿ ವಾಟ್ಸಪ್‌ 2.19.104 ವರ್ಷನ್ ಹಾಗೂ ಐಓಎಸ್‌ ವಾಟ್ಸಪ್ 2.18.368 ವರ್ಷನ್‌ ಮಾದರಿಗಳಲ್ಲಿ ಸಹ ಎಂಪಿ4 ಫೈಲ್ ಮಾದರಿಯ ದೋಷಗಳು ಕಂಡುಬಂದಿವೆ ಎಂದಿದ್ದಾರೆ. ಎಂಪಿ4 ಹ್ಯಾಕ್/ದೋಷ ವಾಟ್ಸಪ್‌ ಖಾತೆಗೆ ಲಗ್ಗೆ ಇಡಬಾರದೆಂದರೇ ವಾಟ್ಸಪ್‌ ಅಪ್‌ಡೇಟ್ ಮಾಡಬೇಕು. ಹೊಸ ಆವೃತ್ತಿಗೆ ನಿಮ್ಮ ವಾಟ್ಸಪ್‌ ಖಾತೆಯನ್ನು ಅಪ್‌ಡೇಟ್ ಮಾಡಿಕೊಳ್ಳುವುದು ಉತ್ತಮ ಎಂದು ಹೇಳಿದ್ದಾರೆ.

ವಾಟ್ಸಪ್‌ ಅಪ್‌ಡೇಟ್ ಮಾಡಿ

ವಾಟ್ಸಪ್‌ ಅಪ್‌ಡೇಟ್ ಮಾಡಿ

ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್‌ ತಂಡವು ಕೂಡಲೇ ವಾಟ್ಸಪ್ ಖಾತೆಯನ್ನು ಅಪ್‌ಡೇಟ್ ಮಾಡಿಕೊಳ್ಳಿ ಎಂದು ಬಳಕೆದಾರರಿಗೆ ಹೇಳಿದೆ. ಐಫೋನ್‌ನಲ್ಲಿ ವಾಟ್ಸಪ್ ಬಳಕೆದಾರರು ವಾಟ್ಸಪ್‌ ಹೊಸ 2.19.100 ಆವೃತ್ತಿಗೆ ಅಪ್‌ಡೇಟ್ ಮಾಡಿಕೊಳ್ಳಬೇಕು ಮತ್ತು ಆಂಡ್ರಾಯ್ಡ್‌ ಬಳಕೆದಾರರು 2.19.274 ಆವೃತ್ತಿಯ ವಾಟ್ಸಪ್‌ಗೆ ಅಪ್‌ಡೇಟ್ ಮಾಡಿಕೊಳ್ಳಲು ಈ ತಂಡ ತಿಳಿಸಿದೆ. ಅಪ್‌ಡೇಟ್ ಮಾಡುವುದರಿಂದ ಹ್ಯಾಕ್‌ ಸಾಧ್ಯತೆಗಳು ಕಡಿಮೆ ಎನ್ನಲಾಗಿದೆ.

ವಾಟ್ಸಪ್ ಆವೃತ್ತಿ - ಹೀಗೆ ಚೆಕ್‌ ಮಾಡಿರಿ

ವಾಟ್ಸಪ್ ಆವೃತ್ತಿ - ಹೀಗೆ ಚೆಕ್‌ ಮಾಡಿರಿ

ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಬ್ಬರು ಸಹ ತಮ್ಮ ವಾಟ್ಸಪ್‌ ಆವೃತ್ತಿ ಯಾವುದು ಎಂದು ತಿಳಿದುಕೊಳ್ಳಬಹುದಾಗಿದೆ. ಅದಕ್ಕಾಗಿ ಈ ಹಂತಗಳನ್ನು ಅನುಸರಿಸಿ. ಐಫೋನ್ ಬಳಕೆದಾರರು ಹೀಗೆ ಮಾಡಿ..(ವಾಟ್ಸಪ್ > ಸೆಟ್ಟಿಂಗ್ಸ್ > ಹೆಲ್ಪ್‌ ಆಯ್ಕೆ ಸೆಲೆಕ್ಟ್ ಮಾಡಿ > ಆಗ ನಿಮಗೆ ವಾಟ್ಸಪ್ ವರ್ಷನ್ ಕಾಣಿಸುತ್ತದೆ). ಅದೇ ರೀತಿ ಆಂಡ್ರಾಯ್ಡ್‌ ಓಎಸ್‌ ಬಳಕೆದಾರರು (ವಾಟ್ಸಪ್‌ > ಸೆಟ್ಟಿಂಗ್ಸ್‍ > 'ಹೆಲ್ಪ್‌' ಆಯ್ಕೆ ಸೆಲೆಕ್ಟ್ ಮಾಡಿ > ನಂತರ ಆಪ್‌ ಇನ್ಫೋ ಆಯ್ಕೆ ಒತ್ತಿರಿ) ಈ ಹಂತಗಳನ್ನು ಅನುಸರಿಸಿ.

Most Read Articles
Best Mobiles in India

English summary
Facebook has just issued a severe security warning for WhatsApp users. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X