ಗೂಗಲ್‌ನಿಂದ ಉಚಿತವಾಗಿ ಡಿಜಿಟಲ್ ಪಾಠ ಕಲಿಯುವುದು ಹೇಗೆ?..ಕಲಿಯಲೇಬೇಕು ಏಕೆ?

Written By:

ಆನ್‌ಲೈನ್ ಮೂಲಕವೇ ಇಂದಿನ ಎಲ್ಲಾ ವ್ಯವಹಾರಗಳು ನಡೆಯುತ್ತಿರುವುದು ನಿಮಗೆಲ್ಲಾ ಗೊತ್ತೇ ಇದೆ.! ಶಾಪಿಂಗ್, ನ್ಯೂಸ್, ಬ್ಯಾಂಕಿಂಗ್ ಎಲ್ಲವೂ ಆನ್‌ಲೈನ್ ಆಗಿರುವಾಗ ನಾವಿನ್ನು ಆನ್‌ಲೈನ್ ಪ್ರಪಂಚದ ಒಳಗೆ ಕಾಲಿಡದಿದ್ದರೆ ಒಂದು ತಲೆಮಾರು ಹಿಂದುಳಿಯುವುದರಿಂದ ಆನ್‌ಲೈನ್ ಪ್ರಪಂಚದ ಬಗ್ಗೆ ಎಲ್ಲರೂ ತಿಳಿಯಬೇಕು.!!

ಆದರೆ, ನಮ್ಮಲ್ಲಿ ಬಹುತೇಕರಿಗೆ ಇದು ಅಸಾಧ್ಯವಾಗಿದೆ.! ಹೌದು, ಸರಿಯಾಗಿ ಇಂಟರ್‌ನೆಟ್ ಎಂದರೆ ಏನು ಎಂಬುದನ್ನು ತಿಳಿಯದ ನಾವು ಒಂದೇ ಸಹ ಇಂಟರ್‌ನೆಟ್ ಪ್ರಪಂಚದ ಒಳಗೆ ಇಳಿದು ಡೇಟಾಬೇಸ್, ಎಸ್‌ಇಒ, ಕೀವರ್ಡ್, ಬ್ರೌಸರ್ ಟೈಟಲ್, ಫೈಲ್‌ ನೇಮ್ ಎಂಬೆಲ್ಲಾ ಪದಗಳನ್ನು ಮೊದಲಬಾರಿ ಕೇಳಿದಾಗ ತಲೆಚಿಟ್ಟಿಡಿಯುತ್ತದೆ.!!

ಗೂಗಲ್‌ನಿಂದ ಉಚಿತವಾಗಿ ಡಿಜಿಟಲ್ ಪಾಠ ಕಲಿಯುವುದು ಹೇಗೆ?..ಕಲಿಯಲೇಬೇಕು ಏಕೆ?

ಹಾಗಾಗಿ, ಇಂಟರ್‌ನೆಟ್ ದೈತ್ಯ ಡಿಜಿಟಲ್ ಪ್ರಪಂಚದ ಬಗ್ಗೆ ಉಚಿತವಾಗಿ ತರಬೇತಿ ನೀಡುತ್ತಿದೆ.! ಒಂದು ರೂಪಾಯಿಗಳ ಖರ್ಚಿಲ್ಲದೆ ಆನ್‌ಲೈನ್ ಮೂಲಕವೇ ಆನ್‌ಲೈನ್ ಪ್ರಪಂಚದ ಬಗ್ಗೆ ತಿಳಿಯಬಹುದಾದ ಆಯ್ಕೆಯನ್ನು ನೀಡಿದೆ.! ಹಾಗಾದರೆ, ಗೂಗಲ್‌ನ ಅಫಿಷಿಯಲ್ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಬಗ್ಗೆ ಹೆಚ್ಚು ತಿಳಿಯುವುದು ಹೇಗೆ ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೂಗಲ್ ಉಚಿತ ತರಬೇತಿ.!!

ಗೂಗಲ್ ಉಚಿತ ತರಬೇತಿ.!!

ಗೂಗಲ್ ಹೆಸರನ್ನು ಹೇಳಿಕೊಂಡು ಆನ್‌ಲೈನ್ ಪಾಥ ಹೇಳಿಕೊಡಲು ಹಲವು ಡಿಜಿಟಲ್ ಮಾರ್ಕೆಟಿಂಗ್ ಕಂಪೆನಿಗಳು ಸಾವಿರಾರು ಹಣವನ್ನು ಪೀಕುತ್ತವೆ. ಆದರೆ, ಒಂದು ರೂಪಾಯಿ ಹಣವನ್ನು ಸಹ ವ್ಯಯ ಮಾಡದೇ ಆನ್‌ಲೈನ್ ಮುಖಾಂತರವೇ ಗೂಗಲ್‌ನ ಅಫಿಷಿಯಲ್ ವೆಬ್‌ಸೈಟ್‌ಗಳಲ್ಲಿ ಆನ್‌ಲೈನ್ ಪ್ರಪಂಚದ ಬಗ್ಗೆ ತಿಳಿಯಬಹುದು.!!

How to Activate UAN Number? KANNADA
ಆನ್‌ಲೈನ್ ಜಗತ್ತಿನ ಬಗ್ಗೆ ಆನ್‌ಲೈನ್ ಟ್ರೈನಿಂಗ್!!

ಆನ್‌ಲೈನ್ ಜಗತ್ತಿನ ಬಗ್ಗೆ ಆನ್‌ಲೈನ್ ಟ್ರೈನಿಂಗ್!!

https://developers.google.com/training/ ಮತ್ತು https://analytics.google.com/analytics/academy/ ಈ ಎರಡು ಲಿಂಕ್‌ಗಳು ಆನ್‌ಲೈನ್ ಪ್ರಪಂಚದಲ್ಲಿ ನೀವು ಬಹು ಹೆಚ್ಚು ತಿಳಿದುಕೊಳ್ಳಲು ಸಹಾಯಕವಾಗಿವೆ. ನಿಮ್ಮ ಬಿಡುವಿನ ವೇಳೆಯಲ್ಲಿ ಇವುಗಳನ್ನು ತೆರೆದು ಆನ್‌ಲೈನ್ ಪ್ರಪಂಚದಲ್ಲಿ ನೀವು ಜಾಲಾಡಬಹುದು.!!

ಉಚಿತವಾಗಿ ಏನೆನೆಲ್ಲಾ ಕಲಿಯಬಹುದು?

ಉಚಿತವಾಗಿ ಏನೆನೆಲ್ಲಾ ಕಲಿಯಬಹುದು?

ಆಂಡ್ರಾಯ್ಡ್ ಡೆವಲಪ್‌ಮೆಂಟ್, ವೆಬ್ ಡೆವಲಪ್‌ಮೆಂಟ್, ಗೂಗಲ್ ಅನಾಲಿಟಿಕ್ಸ್, ಆನ್‌ಲೈನ್ ಸ್ಪೇಸ್ ಮತ್ತು ಮೊಬೈಲ್ ವೆಬ್ ಸ್ಪೆಷಲಿಸ್ಟ್ ಹೀಗೆ ಹತ್ತಾರು ಆನ್‌ಲೈನ್ ಚಟುವಟಿಕೆಗಳ ಬಗ್ಗೆ ನೀವು ಉಚಿತವಾಗಿ ಕಲಿಯಬಹುದು.! ಬರಹಗಳನ್ನು ಓದಿ, ವಿಡಿಯೋಗಳನ್ನು ನೋಡಿ ಮತ್ತು ಪ್ರಶ್ನೆಗಳನ್ನು ಕೇಳಿ ನೀವು ಇವುಗಳನ್ನು ಅರ್ಥ ಮಾಡಿಕೊಳ್ಳಬಹುದು.!!

ತಂತ್ರಜ್ಞಾನ ಕೌಶಲ್ಯಕ್ಕೆ ಪೂರಕ!!

ತಂತ್ರಜ್ಞಾನ ಕೌಶಲ್ಯಕ್ಕೆ ಪೂರಕ!!

ನೀವು ಇಂಜಿನಿಯರಿಂಗ್ ಮಾಡಿದ್ದರಷ್ಟೆ ಆನ್‌ಲೈನ್ ಪ್ರಪಂಚದ ಬಗ್ಗೆ ತಿಳಬೇಕೆಂದಿಲ್ಲ. ನೀವು ಆರ್ಟ್ಸ್, ಕಾಮರ್ಸ್, ಸೈನ್ಸ್ ಯಾವುದೇ ವಿಭಾಗದಲ್ಲಿ ಓದಿದ್ದರೂ ಅಥವಾ ಓದದೇ ಇದ್ದರೂ ಇಂದು ಆನ್‌ಲೈನ್ ಪ್ರಪಂಚದ ಬಗ್ಗೆ ತಿಳಿಯಲೇ ಬೇಕು. ಏಕೆಂದರೆ ಆನ್‌ಲೈನ್ ಇಲ್ಲದೇ ಭವಿಷ್ಯದಲ್ಲಿ ವ್ಯವಹಾರ ಕಲ್ಪನೆ ಕಷ್ಟ.!!

ಗೂಗಲ್ ಪ್ರಮಾಣ ಪತ್ರ!!

ಗೂಗಲ್ ಪ್ರಮಾಣ ಪತ್ರ!!

ಭವಿಷ್ಯದಲ್ಲಿ ಗೂಗಲ್‌ನಲ್ಲಿಯೇ ಕೆಲಸ ಪಡೆಯುವವನಿಂದ ಹಿಡಿದು ಒಬ್ಬ ವಾಚ್‌ಮ್ಯಾನ್ ಆಗುವವನಿಗೂ ಆನ್‌ಲೈನ್ ಪ್ರಪಂಚದ ಬಗ್ಗೆ ತಿಳಿದಿರಬೇಕು ಎನ್ನುತ್ತಾರೆ ಆನ್‌ಲೈನ್ ಮಾರುಕಟ್ಟೆ ವಿಶ್ಲೇಷಕರು. ಹಾಗಾಗಿ, ಭವಿಷ್ಯದಲ್ಲಿ ಒಂದು ಉದ್ಯೋಗ ಸಂಪಾದನೆ ಮಾಡಲು ಈ ಕೂರ್ಸ್ ಮುಗಿಸಿದವರಿಗೆ ಗೂಗಲ್ ಪ್ರಮಾಣ ಪತ್ರವನ್ನು ಸಹ ನೀಡಲಿದೆ.!!

ಓದಿರಿ:ಗುಡ್‌ಮಾರ್ನಿಂಗ್ ಮೆಸೇಜ್‌ ಕಳುಹಿಸದಂತೆ ಭಾರತೀಯರಿಗೆ 'ಗೂಗಲ್' ಮನವಿ!!..ಏಕೆ ಗೊತ್ತಾ!?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
You can become a digital marketing expert without the need for courses and trainingprograms.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot