ಫೇಸ್‌ಬುಕ್ ವಿಡಿಯೋಗಳು ಎಷ್ಟು ಮೊಬೈಲ್ ಡೇಟಾವನ್ನು ಖಾಲಿಮಾಡುತ್ತಿವೆ ಗೊತ್ತಾ?!

|

ಪ್ರತಿದಿನ 2ಜಿಬಿ ಡೇಟಾ ಸಾಲುತ್ತಿಲ್ಲಾ ಎನ್ನುವ ಬದಲು ಫೇಸ್‌ಬುಕ್‌ನಲ್ಲಿ ಆಟೊರನ್ ಆಗುವ ವಿಡಿಯೋಗಳನ್ನು ಯಾವಾಗಲೂ ನೋಡದಿರುವುದು ಒಳ್ಳೆಯದು. ಏಕೆಂದರೆ, ಫೇಸ್‌ಬುಕ್ ನಿಮ್ಮೆಲ್ಲಾ ಡೇಟಾವನ್ನು ನಿಮಗೆ ಗೊತ್ತಿಲ್ಲದ ರೀತಿಯಲ್ಲಿಯೇ ಖಾಲಿ ಮಾಡುತ್ತಿದೆ. ಆದರೆ, ಉಚಿತವಾಗಿ ಮತ್ತು ಕಡಿಮೆಬೆಲೆಗೆ ಡೇಟಾ ಸಿಕ್ಕಿರುವುದರಿಂದ ನಿಮಗಿದು ತಿಳಿಯುತಿಲ್ಲ.

ಹೌದು, ಫೇಸ್‌ಬುಕ್‌ನಲ್ಲಿ ವಿಡಿಯೋಗಳು ಆಟೊ ರನ್ ಆಗುತ್ತಿರುವುದರಿಂದ ಬಳಕೆದಾರರಿಗೆ ಗೊತ್ತಿಲ್ಲದಂತೆಯೇ ಸಾಕಷ್ಟು ಡೇಟಾ ಬಳಕೆದಾರರಿಂದ ಕೈಜಾರುತ್ತಿದೆ. ಮೊಬೈಲ್ ಡೇಟಾ ಹೆಚ್ಚು ಇರುವುದರಿಂದ ಫೇಸ್‌ಬುಕ್ ಪ್ರೇರೇಪಿಸುವ ವಿಡಿಯೋಗಳನ್ನು ನೋಡುತ್ತಲೇ ಫೇಸ್‌ಬುಕ್ ಬಳಕೆದಾರರು ಡೇಟಾವನ್ನು ಬಹುಬೇಗ ಕಳೆದುಕೊಳ್ಳುತ್ತಿದ್ದಾರೆ ಎಂದು ವರದಿಯೊಂದು ಹೇಳಿದೆ.

ಫೇಸ್‌ಬುಕ್ ವಿಡಿಯೋಗಳು ಎಷ್ಟು ಮೊಬೈಲ್ ಡೇಟಾವನ್ನು ಖಾಲಿಮಾಡುತ್ತಿವೆ ಗೊತ್ತಾ?!

ಫೇಸ್‌ಬುಕ್ ವಿಡಿಯೋಗಳನ್ನು ನೋಡವುದು ಅಥವಾ ಬಿಡುವುದು ಮೊಬೈಲ್ ಬಳಕೆದಾರರ ಆಧ್ಯತೆಯಾಗಿದ್ದರೂ ಸಹ, ನಿಮ್ಮ ಡೇಟಾವನ್ನು ಕಬಳಿಸುತ್ತಿರುವ ಫೇಸ್‌ಬುಕ್‌ ನಿಂದ ಮೊಬೈಲ್ ಡೇಟಾವನ್ನು ಉಳಿಸಿಕೊಳ್ಳುವುದು ಹೇಗೆ? ಆಟೊ ರನ್ ವಿಡಿಯೋಗಳನ್ನು ಹೇಗೆ ತಡೆಯುವುದು ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ ಮತ್ತು ನಿಮ್ಮ ಡೇಟಾ ಉಳಿಸಿಕೊಳ್ಳಿರಿ.

ಸರಾಸರಿ 100MB ಡೇಟಾ ಫೆಸ್‌ಬುಕ್ ತೆಕ್ಕೆಗೆ!

ಸರಾಸರಿ 100MB ಡೇಟಾ ಫೆಸ್‌ಬುಕ್ ತೆಕ್ಕೆಗೆ!

ಮೊಬೈಲ್ ಡೇಟಾ ಬಳಕೆ ಹೆಚ್ಚಾದ ನಂತರ ಪ್ರತಿಯೋರ್ವ ಫೇಸ್‌ಬುಕ್ ಬಳಕೆದಾರನುಸರಾಸರಿ 100 ರಿಂದ 200MB ಡೇಟಾವನ್ನು ಫೇಸ್‌ಬುಕ್ ವಿಡಿಯೋಗಳನ್ನು ನೋಡುವ ಸಲುವಾಗಿಯೇ ಬಳಸಿಕೊಳ್ಳುತ್ತಿದ್ದಾನೆ. ಫೇಸ್‌ಬುಕ್ ವಿಡಿಯೋಗಳನ್ನು ನೋಡುತ್ತಾ ಮೊಬೈಲ್ ಬಳಕೆದಾರರಿಗೆ ಎಷ್ಟು ಡೇಟಾ ಖಾಲಿಯಾಗುತ್ತಿದೆ ಎಂಬುದೇ ತಿಳಿಯುತ್ತಿಲ್ಲ.

ವಿಡಿಯೋಗಳನ್ನು ನೋಡುತ್ತಾ ಮೈ ಮರೆಯಬೇಡಿ.!

ವಿಡಿಯೋಗಳನ್ನು ನೋಡುತ್ತಾ ಮೈ ಮರೆಯಬೇಡಿ.!

ಫೇಸ್‌ಬುಕ್ ಯಾವಾಗಲೂ ನೀವು ವಿಡಿಯೋಗಳನ್ನು ನೋಡುವಂತೆ ಪ್ರೇರೇಪಿಸುತ್ತದೆ ಎಂದು ವರದಿ ಹೇಳಿದೆ. ಒಂದು ವಿಡಿಯೋ ನೋಡಿದ ನಂತರ ತಕ್ಷಣವೇ ಮತ್ತೊಂದು ವಿಡಿಯೋವನ್ನು ನೋಡುವಂತೆ ಫೇಸ್‌ಬುಕ್ ಯಾವಾಗಲೂ ಪ್ರೇರೇಪಿಸುತ್ತದೆ ಹಾಗಾಗಿ, ವಿಡಿಯೋ ನೋಡುವಾಗ ವಿಡಿಯೋಗಳನ್ನು ನೋಡುತ್ತಾ ಮೈ ಮರೆಯದಿರುವುದು ಒಳ್ಳೆಯದು.

ಆಟೊರನ್ ವಿಡಿಯೋ ಆಯ್ಕೆ ಬೇಡ!

ಆಟೊರನ್ ವಿಡಿಯೋ ಆಯ್ಕೆ ಬೇಡ!

ನೀವು ಫೇಸ್‌ಬುಕ್ ಆಪ್ ಅನ್ನು ತೆರೆದು ನ್ಯೂಸ್‌ವೀಡ್ ಅನ್ನು ಸ್ಕ್ರಾಲ್ ಮಾಡುತ್ತಿದ್ದರೆ ವಿಡಿಯೊಗಳು ನಿಮಗೆ ಕಾಣಿಸಿಕೊಳ್ಳುತ್ತವೆ. ವಿಡಿಯೋ ಕಾಣಿಸಿಕೊಂಡ ನಂತರ ಅವುಗಳು ಆಟೋ ಪ್ಲೇ ಆಗುವುದನ್ನು ನೀವು ನೋಡಬಹುದು. ಇದು ಒಮ್ಮೊಮ್ಮೆ ಕಿರಿಕಿರಿಯಾಗುವುದಲ್ಲದೇ, ನಿಮ್ಮ ಮೊಬೈಲ್ ಡೇಟಾವನ್ನು ಬಹುಬೇಗ ಖಾಲಿ ಮಾಡುತ್ತಿದೆ ಎಂದರೆ ಆಶ್ಚರ್ಯವೇನಿಲ್ಲ.

ಆಟೊರನ್ ವಿಡಿಯೋಗಳನ್ನು ನಿಲ್ಲಿಸುವುದು ಹೇಗೆ?

ಆಟೊರನ್ ವಿಡಿಯೋಗಳನ್ನು ನಿಲ್ಲಿಸುವುದು ಹೇಗೆ?

ಫೇಸ್‌ಬುಕ್ ಆಪ್ ತೆರೆದು ಸೆಟಿಂಗ್ಸ್ ಕ್ಲಿಕ್ ಮಾಡಿ. ನಿಮ್ಮ ಎಡಭಾಗದಲ್ಲಿ ಕಾಣುವ ಹಲವು ಆಯ್ಕೆಗಳಲ್ಲಿ ಕೊನೆಯ ಆಯ್ಕೆಯಾದ ವಿಡಿಯೋಸ್ ಒತ್ತಿರಿ. ನಂತರ ಆಟೋಪ್ಲೇ ವಿಡಿಯೋಸ್' ಆಯ್ಕೆ ಮಾಡಿ. ಯೆಸ್, ಆಫ್ , ಡೀಫಾಲ್ಟ್ ಎನ್ನುವ ಮೂರು ಆಯ್ಕೆಗಳು ಇರುತ್ತವೆ.'ಆಫ್' ಆಯ್ಕೆ ಕ್ಲಿಕ್ ಮಾಡಿ. ವಿಡಿಯೋಗಳು ಸ್ವಯಂಚಾಲಿತವಾಗಿ ಚಾಲೂ ಆಗುವುದನ್ನು ತಪ್ಪಿಸಿ.

ಫೇಸ್‌ಬುಕ್ ಆಪ್ ಬ್ಯಾಕ್‌ರನ್ ಬೇಡ.!

ಫೇಸ್‌ಬುಕ್ ಆಪ್ ಬ್ಯಾಕ್‌ರನ್ ಬೇಡ.!

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಯಾವಾಗಲೂ ಫೇಸ್‌ಬುಕ್ ಆಪ್ ಆನ್‌ ಆಗಿಯೇ ಇರುತ್ತದೆ ಎನ್ನುವುದು ನಿಮಗೂ ಗೊತ್ತು. ಆದರೆ, ಬೇರೆ ಆಪ್‌ಗಳನ್ನು ಬಳಸುವಾಗಲಾದರೂ ಸಹ ಫೇಸ್‌ಬುಕ್ ಆಪ್ ಮೊಬೈಲ್‌ನಲ್ಲಿ ಬ್ಯಾಕ್‌ರನ್ ಆಗದಂತೆ ನೋಡಿಕೊಳ್ಳಿ. ಇಲ್ಲಾವಾದರೆ, ನೀರಿನಂತೆ ನಿಮ್ಮ ಡೇಟಾ ಫೆಸ್‌ಬುಕ್ ಪಾಲಾಗುತ್ತದೆ. ಇದು ನಿಮಗೆ ಹೆಚ್ಚು ನಷ್ಟ.!

Best Mobiles in India

English summary
it might not seem like a lot, but if you consume this much data every day. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X