ಸ್ಮಾರ್ಟ್‌ಫೋನ್ ಕಳ್ಳತನ: ಇರಲಿ ತಲೆಯಲ್ಲಿ ಎಚ್ಚರಿಕೆಯ ಘಂಟೆ

By Shwetha
|

ಹೊಚ್ಚ ಹೊಸ ಸ್ಮಾರ್ಟ್‌ಫೋನ್ ಅನ್ನು ಖರೀದಿಸಿದ ನಂತರ ಅದನ್ನು ಜಾಗರೂಕರಾಗಿ ಕಾಪಾಡಿಕೊಳ್ಳುವುದು ನಿಮ್ಮ ಕರ್ತವ್ಯವಾಗಿದೆ ಅಲ್ಲವೇ? ನಿಮ್ಮ ದುಬಾರಿ ಹೊಚ್ಚಹೊಸ ಫೋನ್ ತಪ್ಪು ಜನರ ಕೈಸೇರಿತು ಎಂದಾದಲ್ಲಿ ಅದರಿಂದಾಗುವ ನಷ್ಟಕ್ಕಿಂತ ನೀವು ಅಪಾಯದಲ್ಲಿ ಬೀಳುವುದೇ ಅಧಿಕವಾಗಿದೆ. ನಿಮ್ಮ ಫೋನ್‌ನಲ್ಲಿರುವ ಯಾವುದೇ ಗೌಪ್ಯ ಮಾಹಿತಿಗಳು, ವ್ಯವಹಾರ ವಿಷಯಗಳು ಕದೀಮರ ಕೈಗೆ ಸಿಲುಕಿದಲ್ಲಿ ನಂತರ ಆ ನಷ್ಟವನ್ನು ತುಂಬಲು ಯಾರಿಂದಲೂ ಸಾಧ್ಯವಾಗದು.

ಓದಿರಿ: ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಿಂದ ವೈರಸ್ ನಿವಾರಣೆ ಹೇಗೆ?

ಆದರೆ ಇಂತಹ ಸೋಲು ನಡೆಯುವ ಮುನ್ನವೇ ನೀವು ಎಚ್ಚೆತ್ತುಕೊಂಡು ನಿಮ್ಮ ಡಿವೈಸ್‌ನ ಸಂರಕ್ಷಣೆಯನ್ನು ಅದರಲ್ಲಿ ಕೆಲವೊಂದು ಭದ್ರತೆಗಳನ್ನು ಅಳವಡಿಸಿಕೊಂಡರೆ ನೀವು ಸಂರಕ್ಷಿತವಾಗಿರುತ್ತೀರಿ ಅದೇನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಇಂದಿನ ಆಧುನಿಕ ತಂತ್ರಜ್ಞಾನದಲ್ಲಿ ಎಲ್ಲಾ ಬಗೆಯ ಸಮಸ್ಯೆಗಳಿಗೆ ಪರಿಹಾರ ಇರುವುದರಿಂದ ನಿಮ್ಮ ಡಿವೈಸ್‌ಗಳ ಸಂರಕ್ಷಣೆಯನ್ನು ಈ ಸರಳ ವಿಧಾನಗಳ ಮೂಲಕ ಅಳವಡಿಸಿಕೊಂಡು ಕಳ್ಳಕಾಕರಿಂದ ಫೋನ್ ಅನ್ನು ಕಾಪಾಡಿಕೊಳ್ಳಬಹುದಾಗಿದೆ.

#1

#1

ಬೇಸಿಕ್‌ನೊಂದಿಗೆ ಪ್ರಾರಂಭಿಸಲು, ನಿಮ್ಮ ಡಿವೈಸ್ ಕಳೆದುಹೋದಲ್ಲಿ ಅಥವಾ ಬಿದ್ದುಹೋದಲ್ಲಿ, ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್ ಬಳಸಿಕೊಂಡು ಅದನ್ನು ಟ್ರ್ಯಾಕ್ ಮಾಡಿ.

#2

#2

ನೀವು ಅತಿ ಸುಲಭವಾದ ಪ್ಯಾಟ್ರನ್ ಅನ್ನು ರಚಿಸಿಕೊಳ್ಳದೇ ಅಪರಿಚಿತರು ಬಳಸಲು ಕ್ಲಿಷ್ಟಕರವಾಗಿರುವ ಪ್ಯಾಟ್ರನ್ ಅನ್ನೇ ನಿಮ್ಮದಾಗಿಸಿಕೊಳ್ಳಿ. ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಚ್ಚಿನ ಫೋನ್‌ಗಳು ಫಿಂಗರ್ ಪ್ರಿಂಟ್ ಸೆನ್ಸಾರ್ ಅನ್ನು ಇಟ್ಟುಕೊಂಡು ಬಂದಿರುವುದರಿಂದ ಇದರ ಬಳಕೆಯನ್ನು ನಿಮಗೆ ಮಾಡಬಹುದಾಗಿದೆ.

#3

#3

ನಿಮ್ಮ ಡಿವೈಸ್‌ನಲ್ಲಿ ಡೇಟಾ ಅತಿ ಹೆಚ್ಚು ಮುಖ್ಯವಾದುದು. ಇದು ಕದ್ದು ಅಥವಾ ಕಳೆದು ಹೋದಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಡೇಟಾವನ್ನು ಪ್ರವೇಶಿಸಲು ಸಾಧ್ಯವಿಲ್ಲ ಎಂಬುದನ್ನು ಖಾತ್ರಿಪಡಿಸಲು, ಬಳಕೆದಾರರು ಗೂಗಲ್‌ನ ಎನ್‌ಕ್ರಿಪ್ಟ್ ಹಂತ ಪ್ರಕ್ರಿಯೆ ವಿಧಾನವನ್ನು ಬಳಸಿಕೊಳ್ಳಬಹುದಾಗಿದೆ. ನಿಮ್ಮ ಆಂಡ್ರಾಯ್ಡ್ ಡಿವೈಸ್‌ನ ಭದ್ರತಾ ಸೆಟ್ಟಿಂಗ್ಸ್ ಮೂಲಕ ಇದನ್ನು ಮಾಡಬಹುದಾಗಿದೆ.

#4

#4

ಕಳ್ಳನು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಸ್ವಿಚ್ ಆಫ್ ಮಾಡಿ ಸಿಮ್ ಕಾರ್ಡ್ ಅನ್ನು ತೆಗೆದುಹಾಕುವ ಸಂಭವವಿರುತ್ತದೆ. ಆ ಕ್ಷಣದಲ್ಲಿ ನಿಮ್ಮ ಮನೆಯಿಂದಲೇ ಡಿವೈಸ್ ಅನ್ನು ನಿಷ್ಪ್ರಯೋಜಕವನ್ನಾಗಿ ಮಾಡಬಹುದಾಗಿದೆ. ಆಂಟಿ ಥೆಪ್ಟ್ ಅಪ್ಲಿಕೇಶನ್ ಅನ್ನು ಅಳವಡಿಸಿಕೊಂಡು, ಇದರ ಮೂಲಕ ಬ್ರೌಸರ್‌ನಿಂದ ನಿಮ್ಮ ಫೋನ್ ಅನ್ನು ನಿಯಂತ್ರಿಸಬಹುದಾಗಿದೆ.

#5

#5

ನಿಮ್ಮ ಫೋನ್‌ನಲ್ಲಿರುವ ಮಾಹಿತಿಯನ್ನು ಖದೀಮರು ಕೆಟ್ಟದ್ದಕ್ಕೆ ಬಳಸಿ ಅದು ನಿಮ್ಮ ಬುಡಕ್ಕೆ ಬಂದು ಪೊಲೀಸರು ನಿಮ್ಮನ್ನು ಹುಡುಕಿಕೊಂಡು ಬರುವ ಮುನ್ನವೇ ಪೊಲೀಸರನ್ನು ನೀವು ಹೋಗಿ ಕಾಣಿ. ನಮ್ಮ ಸರಕಾರಿ ಏಜೆನ್ಸಿಗಳು ಡಿವೈಸ್ ಅನ್ನು ಟ್ರ್ಯಾಕ್ ಮಾಡುವ ಮತ್ತು ಲಾಕ್ ಮಾಡುವ ವ್ಯವಸ್ಥೆಯನ್ನು ಹೊಂದಿದೆ.

#6

#6

ನಿಮ್ಮ ಫೋನ್ ಅನ್ನು ಲಾಕ್ ಮಾಡುವುದರಿಂದ ಮಾತ್ರವೇ ಅಪರಿಚಿತರು ನಿಮ್ಮ ಫೋನ್ ಅನ್ನು ಕದಿಯುವುದರಿಂದ ಡಿವೈಸ್ ಅನ್ನು ಸಂರಕ್ಷಣೆ ಮಾಡಲಾಗುವುದಿಲ್ಲ ಇದರ ಜೊತೆಗೆ ಅಪ್ಲಿಕೇಶನ್ ಲಾಕ್ ಕೂಡ ಹೆಚ್ಚು ಪ್ರಯೋಜನಕಾರಿಯಾದುದು. ಸೂಕ್ತ ದೃಢೀಕರಣವಿಲ್ಲದೆ ಅಪ್ಲಿಕೇಶನ್ ಲಾಕ್ ಅನ್ನು ಅನ್‌ಇನ್‌ಸ್ಟಾಲ್ ಮಾಡುವುದಿಲ್ಲ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಆಂಡ್ರಾಯ್ಡ್‌ನ ಈ ಫೀಚರ್ಸ್ ಅರಿತಲ್ಲಿ ನೀವೇ ಗಟ್ಟಿಗರು</a><br /><a href=ಮೊಬೈಲ್‌ನಲ್ಲಿ ಫೇಸ್‌ಬುಕ್‌ ಮೆಸೇಜಿಂಗ್‌ ಫೀಚರ್‌ ಡಿಸೇಬಲ್
'ಮಾರ್ಕ್‌ ಜುಕರ್‌ಬರ್ಗ್' ಸಾಮಾಜಿಕ ತಾಣಗಳ ಖಾತೆ ಹ್ಯಾಕ್" title="ಆಂಡ್ರಾಯ್ಡ್‌ನ ಈ ಫೀಚರ್ಸ್ ಅರಿತಲ್ಲಿ ನೀವೇ ಗಟ್ಟಿಗರು
ಮೊಬೈಲ್‌ನಲ್ಲಿ ಫೇಸ್‌ಬುಕ್‌ ಮೆಸೇಜಿಂಗ್‌ ಫೀಚರ್‌ ಡಿಸೇಬಲ್
'ಮಾರ್ಕ್‌ ಜುಕರ್‌ಬರ್ಗ್' ಸಾಮಾಜಿಕ ತಾಣಗಳ ಖಾತೆ ಹ್ಯಾಕ್" loading="lazy" width="100" height="56" />ಆಂಡ್ರಾಯ್ಡ್‌ನ ಈ ಫೀಚರ್ಸ್ ಅರಿತಲ್ಲಿ ನೀವೇ ಗಟ್ಟಿಗರು
ಮೊಬೈಲ್‌ನಲ್ಲಿ ಫೇಸ್‌ಬುಕ್‌ ಮೆಸೇಜಿಂಗ್‌ ಫೀಚರ್‌ ಡಿಸೇಬಲ್
'ಮಾರ್ಕ್‌ ಜುಕರ್‌ಬರ್ಗ್' ಸಾಮಾಜಿಕ ತಾಣಗಳ ಖಾತೆ ಹ್ಯಾಕ್

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಇನ್ನಷ್ಟು ಲೇಖನಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್‌ಗೆ ಭೇಟಿ ನೀಡಿ

Best Mobiles in India

English summary
We take a look at some of the best ways you can safeguard your phone and data contained within.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X