Subscribe to Gizbot

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಿಂದ ವೈರಸ್ ನಿವಾರಣೆ ಹೇಗೆ?

Written By:

ಜನಪ್ರಿಯ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಆಗಿ ಹೆಸರುವಾಸಿಯಾಗಿರುವ ಆಂಡ್ರಾಯ್ಡ್ ಬಳಕೆದಾರರಿಗಾಗಿ ಅತ್ಯುಪಯುಕ್ತ ಅಂಶಗಳನ್ನು ಹೊರತಂದಿದೆ. ಸ್ವತಂತ್ರ ವೇದಿಕೆಯಾಗಿ ಹೆಸರುವಾಸಿಯಾಗಿರುವ ಆಂಡ್ರಾಯ್ಡ್ ಮಾಲ್‌ವೇರ್ ಮತ್ತು ವೈರಸ್ ದಾಳಿಗೆ ಶೀಘ್ರವಾಗಿ ತುತ್ತಾಗುತ್ತದೆ.

ಓದಿರಿ: ಕಳೆದುಕೊಂಡ ಮೊಬೈಲ್‌ ಪತ್ತೆಗಾಗಿ 'I lost my phone' ಗೂಗಲ್‌ ಟೂಲ್

ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್ ವೈರಸ್ ದಾಳಿಗೆ ತುತ್ತಾಗಿದೆ ಎಂದಾದಲ್ಲಿ ಚಿಂತಿಸದಿರಿ ನಮ್ಮ ಬಳಿ ಇದೆ ಅದಕ್ಕೆ ಪರಿಹಾರ ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ನಿಂದ ವೈರಸ್ ಅನ್ನು ನಿವಾರಿಸುವುದು ಹೇಗೆ ಎಂಬುದನ್ನು ಕುರಿತು ಮಾಹಿತಿಯನ್ನು ನಾವು
ನೀಡುತ್ತಿದ್ದು ಕೆಳಗಿನ ಸ್ಲೈಡರ್‌ನಲ್ಲಿ ಮಾಹಿತಿಯನ್ನು ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೇಫ್ ಮೋಡ್‌

#1

ಯಾವುದೇ ಮಾಲ್‌ವೇರ್‌ನಿಂದ ಡಿವೈಸ್ ಅನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಅದನ್ನು ಸೇಫ್ ಮೋಡ್‌ನಲ್ಲಿರಿಸುವುದು ಮುಖ್ಯವಾಗಿದೆ. ಸೇಫ್ ಮೋಡ್ ಅನ್ನು ಸಕ್ರಿಯಗೊಳಿಸಲು, ಪವರ್ ಆಫ್ ಆಯ್ಕೆಯನ್ನು ಪಡೆದುಕೊಳ್ಳಲು ಪವರ್ ಬಟನ್ ಒತ್ತಿರಿ ತದನಂತರ ಸೇಫ್ ಮೋಡ್ ಆಪ್ಶನ್‌ನಲ್ಲಿ ಮರುಪ್ರಾರಂಭಿಸಲು ಪವರ್ ಆಫ್ ಬಟನ್ ಅನ್ನು ಒತ್ತಿಹಿಡಿದುಕೊಳ್ಳಿ

ಅಪ್ಲಿಕೇಶನ್ ಆರಿಸಿ

#2

ಡಿವೈಸ್‌ ಸೆಟ್ಟಿಂಗ್ಸ್‌ಗೆ ಹೋಗಿ ಮತ್ತು ಡೌನ್‌ಲೋಡೆಡ್ ಟ್ಯಾಬ್ ಅಡಿಯಲ್ಲಿ ಅಪ್ಲಿಕೇಶನ್ ಆರಿಸಿ. ಡಿವೈಸ್‌ನಲ್ಲಿ ಚಾಲನೆಯಾಗದೇ ಇರುವ ಇನ್‌ಸ್ಟಾಲ್ ಮಾಡಿರುವ ಅಪ್ಲಿಕೇಶನ್‌ಗಳನ್ನು ಕಂಡಲ್ಲಿ ಆ ಪಟ್ಟಿಗೆ ಹೋಗಿ

ಅನ್‌ಇನ್‌ಸ್ಟಾಲ್ ಕ್ಲಿಕ್ ಮಾಡಿ

#3

ದೋಷಪೂರಿತ ಅಪ್ಲಿಕೇಶನ್ ಮೇಲೆ ಸ್ಪರ್ಶಿಸಿ ಮತ್ತು ಅನ್‌ಇನ್‌ಸ್ಟಾಲ್ ಕ್ಲಿಕ್ ಮಾಡಿ.

ಅಪ್ಲಿಕೇಶನ್‌ಗಳ ಪೂರ್ಣ ಪಟ್ಟಿ

#4

ಇದೀಗ, ಡಿವೈಸ್ ಅಡ್‌ಮಿಸ್ಟ್ರೇಟರ್‌ಗೆ ಹೋಗಿ. ಅಡ್‌ಮಿನಿಸ್ಟ್ರೇಟರ್ ಸ್ಟೇಟಸ್‌ನೊಂದಿಗೆ ಅಪ್ಲಿಕೇಶನ್‌ಗಳ ಪೂರ್ಣ ಪಟ್ಟಿಯನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ನೀವು ತೆಗೆದುಹಾಕಬೇಕೆಂದಿರುವ ಅಪ್ಲಿಕೇಶನ್ ಅನ್ನು ಅನ್‌ಚೆಕ್ ಮಾಡಿ

ದೋಷಪೂರಿತ ಅಪ್ಲಿಕೇಶನ್‌

#5

ಇದೀಗ ಸುರಕ್ಷಿತ ದೋಷಪೂರಿತ ಅಪ್ಲಿಕೇಶನ್‌ ಅನ್‌ಇನ್‌ಸ್ಟಾಲ್ ಮಾಡಿದ ನಂತರ, ಸೇಫ್ ಮೋಡ್‌ನಿಂದ ಹೊರತರಲು ಸ್ಮಾರ್ಟ್‌ಫೋನ್ ಅನ್ನು ರೀಸ್ಟಾರ್ಟ್ ಮಾಡಿ. ಯಾವುದೇ ವೈರಸ್‌ನಿಂದ ನಿಮ್ಮ ಸ್ಮಾರ್ಟ್‌ಫೋನ್ ಇದೀಗ ಸುರಕ್ಷಿತವಾಗಿರುತ್ತದೆ.

ಇನ್ನಷ್ಟು ಓದಿ

ಗಿಜ್‌ಬಾಟ್ ಲೇಖನಗಳು

ಮನೆಯಲ್ಲೇ USB ಫ್ಯಾನ್‌ ತಯಾರಿಸುವುದು ಹೇಗೆ?
ಸ್ಮಾರ್ಟ್‌ಫೋನ್ ಚಾರ್ಜರ್ ಸಮಸ್ಯೆಗೆ ಇಲ್ಲಿದೆ ಪರಿಹಾರ
ಈ ತಪ್ಪುಗಳಿಂದ ಐಫೋನ್ ಬ್ಯಾಟರಿಯನ್ನು ಕೊಲ್ಲುತ್ತಿದ್ದೀರಿ

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಲೇಖನಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
There are a couple of simple, thoughtful things you can do to keep yourself safe as you enjoy your mobile device, and as long as you remember these steps you'll be good to go.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot