Home
ಟೆಕ್ ನೌಕರಿ

ಈ ಫೇಸ್‌ಬುಕ್‌ ಪೋಸ್ಟ್‌ಗಳಿಂದ ದೂರವಿರಿ

By Ashwath

ಫೇಸ್‌ಬುಕ್‌ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಈ ಫೇಸ್‌ಬುಕ್‌ ಮೂಲಕ ಬಳಕೆದಾರರ ಮಾಹಿತಿಯನ್ನು ಕದಿಯುವ ಹ್ಯಾಕರ್‌‌ಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅದರಲ್ಲೂ ಫೇಸ್‌ಬುಕ್‌ ಸಂಸ್ಥಾಪಕ ಜುಕರ್‌ಬರ್ಗ‌ನ ಅಕೌಂಟ್‌ನ್ನೇ ಹ್ಯಾಕ್‌ ಮಾಡಿದ್ದಾರೆ ಎಂದ ಮೇಲೆ ಮತ್ತೇ ಸಾಮಾನ್ಯ ಬಳಕೆದಾರರ ಮಾಹಿತಿಯನ್ನು ಕದಿಯಲು ಸಾಧ್ಯವಿಲ್ಲ ಎಂದು ಹೇಳವುದು ಕಷ್ಟ.

ಯಾಕೆ ಈ ವಿಚಾರ ಅಂದ್ರೆ ಹ್ಯಾಕರ್‌ಗಳು ವಿವಿಧ ರೀತಿಯ ಮಾಲ್‌ವೇರ್‌ಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿ ವ್ಯಕ್ತಿಗಳ ಖಾಸಗಿ ಮಾಹಿತಿಯನ್ನು ಕದಿಯುತ್ತಾರೆ ಎನ್ನುವ ಅಂಶ ಬೆಳಕಿಗೆ ಬಂದಿದೆ. ಸ್ಲೋವಾಕಿಯಾದ ಆಂಟಿ ವೈರಸ್‌ ಕಂಪೆನಿ ಇಎಸ್‌ಇಟಿ(ESET) ಫೇಸ್‌ಬುಕ್‌ನಲ್ಲಿ ಹೇಗೆ ನಮ್ಮ ಮಾಹಿತಿಯನ್ನು ನಮ್ಮ ತಪ್ಪಿನಿಂದಲೇ ಹೇಗೆ ಹ್ಯಾಕರ್‌ಗಳು ಕದಿಯುತ್ತಾರೆ ಎನ್ನುವುದರ ಬಗ್ಗೆ ಅಧ್ಯಯನ ನಡೆಸಿದೆ. ಅಧ್ಯಯನದ ಪ್ರಕಾರ ಆರು ವಿವಿಧ ರೀತಿಯ ಪೋಸ್ಟ್‌ಗಳಿಂದ ಹ್ಯಾಕರ್‌ಗಳು ನಮ್ಮ ಮಾಹಿತಿಯನ್ನು ಕದಿಯುತ್ತಾರೆ ಎಂದು ತಿಳಿಸಿದೆ. ಹೀಗಾಗಿ ಇಲ್ಲಿ ಯಾವುದು ಆರು ಪೋಸ್ಟ್‌ಗಳು ಎನ್ನುವುದಕ್ಕೆ ಮುಂದಿನ ಪುಟದಲ್ಲಿ ಮಾಹಿತಿ ನೀಡಲಾಗಿದೆ. ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ: ಫೇಸ್‌ಬುಕ್‌ನಲ್ಲಿ ಇವರಿಂದ ದೂರವಿರಿ

ಈ ಫೇಸ್‌ಬುಕ್‌ ಪೋಸ್ಟ್‌ಗಳಿಂದ ದೂರವಿರಿ

ಈ ಫೇಸ್‌ಬುಕ್‌ ಪೋಸ್ಟ್‌ಗಳಿಂದ ದೂರವಿರಿ


ಸದ್ಯದ ಟ್ರೆಂಡಿಂಗ್‌ ವ್ಯಕ್ತಿ, ಸುದ್ದಿಯ ಬಗ್ಗೆ ಒಂದು ವಾಸ್ತವ ಸಂಗತಿ ಎಂದು ಹೇಳಿಪೋಸ್ಟ್‌ನಲ್ಲಿ ಒಂದು ವೆಬ್‌ಸೈಟ್‌ನ ಪೇಜ್‌ನ ಯುಆರ್‌ಎಲ್‌ ಇರುತ್ತದೆ. ಈ ರೀತಿಯ ಸುದ್ದಿ ಇರುವ ಪೇಜ್‌ಗಳನ್ನು ನೇರವಾಗಿ ಫೇಸ್‌ಬುಕ್‌‌ನಿಂದಲೇ ಓಪನ್‌ ಮಾಡಲು ಹೋಗಬೇಡಿ. ಈ ಪೇಜ್‌ಗಳಲ್ಲಿ ಮಾಲ್‌ವೇರ್‌‌ಗಳಿದ್ದು ಇವುಗಳು ನಿಮ್ಮ ಖಾಸಗಿ ಮಾಹಿತಿಯನ್ನು ಸುಲಭವಾಗಿ ಕದಿಯುವ ಸಾಧ್ಯತೆ ಇದೆ. ಹೀಗಾಗಿ ಈ ಮಾಹಿತಿಯನ್ನು ಓದಲೇಬೇಕಾದ ಅನಿವಾರ್ಯ‌ತೆ ಇದ್ದಲ್ಲಿ ಸುದ್ದಿಯ ಹೆಡ್‌ಲೈನ್‌ ನೋಡಿ ಗೂಗಲ್‌ ಅಥವಾ ಇನ್ಯಾವುದೋ ಸರ್ಚ್‌ ಇಂಜಿನ್‌ನಲ್ಲಿ ಆ ಹೆಡ್‌ಲೈನ್‌ ಟೈಪ್‌ ಮಾಡಿ ಮಾಹಿತಿ ಹುಡುಕಬಹುದು.

ಈ ಫೇಸ್‌ಬುಕ್‌ ಪೋಸ್ಟ್‌ಗಳಿಂದ ದೂರವಿರಿ

ಈ ಫೇಸ್‌ಬುಕ್‌ ಪೋಸ್ಟ್‌ಗಳಿಂದ ದೂರವಿರಿ


suggested posts ವಿಭಾಗದಲ್ಲಿ ಕೆಲವೊಮ್ಮೆ ಬ್ರೇಕಿಂಗ್‌ ನ್ಯೂಸ್‌ ಸುದ್ದಿಗಳ ಪೋಸ್ಟ್‌ಗಳು ಕಾಣುತ್ತಿರುತ್ತದೆ. ಈ ಪೋಸ್ಟ್‌‌ಗಳಲ್ಲಿ ಮಾಲ್‌ವೇರ್‌‌ಗಳಿದ್ದು ಕ್ಲಿಕ್‌ ಮಾಡುವುದರಿಂದಲೂ ನಿಮ್ಮ ಖಾಸಗಿ ಮಾಹಿತಿಗಳು ಕದಿಯುವ ಸಾಧ್ಯತೆ ಹೆಚ್ಚಿರುತ್ತದೆ.

ಈ ಫೇಸ್‌ಬುಕ್‌ ಪೋಸ್ಟ್‌ಗಳಿಂದ ದೂರವಿರಿ

ಈ ಫೇಸ್‌ಬುಕ್‌ ಪೋಸ್ಟ್‌ಗಳಿಂದ ದೂರವಿರಿ


ಸಾಮಾಜಿಕ ಚಟುವಟಿಕೆಗಳಿಗೆ ಈ ಕಾರ್ಯ‌ಕ್ರಮಗಳನ್ನು ಹಮ್ಮಿಕೊಂಡಿದ್ದು ನಮಗೆ ಲಕ್ಷ ಲೈಕ್‌‌ಗಳು ಎನ್ನುವ ಪೋಸ್ಟ್‌ಗಳು ಕೆಲವೊಮ್ಮೆ ಪರಿಚಯವಿಲ್ಲದ ವ್ಯಕ್ತಿ, ಸಂಘಟನೆಗಳ ಹೆಸರಿನಲ್ಲಿ ನಿಮ್ಮ ವಾಲ್‌ನಲ್ಲಿ ನುಸುಳಿ ಬಂದಿರುತ್ತದೆ. ಈ ರೀತಿಯ ಲೈಕ್‌ ಮಾಡಿ ಎಂದು ನಿಮ್ಮನ್ನು ಕಾಡಿ ಬೇಡಿಕೊಳ್ಳುವ ಪೋಸ್ಟ್‌‌ಗಳನ್ನು ಲೈಕ್‌ ಮಾಡದಿರಿ.

ಈ ಫೇಸ್‌ಬುಕ್‌ ಪೋಸ್ಟ್‌ಗಳಿಂದ ದೂರವಿರಿ

ಈ ಫೇಸ್‌ಬುಕ್‌ ಪೋಸ್ಟ್‌ಗಳಿಂದ ದೂರವಿರಿ


ತೂಕ ಕಡಿಮೆ ಮಾಡುವುದು ಹೇಗೆ?ತೂಕ ಹೆಚ್ಚು ಮಾಡಲು ಯಾವ ಸಮಯದಲ್ಲಿ ಯಾವ ರೀತಿಯ ಆಹಾರ ಸೇವಿಸಬೇಕು? ಈ ರೀತಿಯ ಜನರನ್ನು ಸೆಳೆಯುವ ಪೋಸ್ಟ್‌ಗಳು ವಾಲ್‌ನಲ್ಲಿ ಕಾಣುತ್ತಿರುತ್ತದೆ. ಅತೀ ಹೆಚ್ಚು ಮಾಲ್‌ವೇರ್‌ಗಳು ಈ ರೀತಿಯ ಪೋಸ್ಟ್‌ನಲ್ಲಿರುತ್ತದೆ ಎಂದು ಅಧ್ಯಯನ ತಿಳಿಸಿದೆ. ಹೀಗಾಗಿ ಈ ರೀತಿಯ ಪೋಸ್ಟ್‌ಗಳು ಕಂಡು ಬಂದಲ್ಲಿ ಅದರಲ್ಲಿರುವ ಯುಆರ್‌ಎಲ್‌ ಕ್ಲಿಕ್‌ ಮಾಡಿ ವೆಬ್‌ ಪುಟವನ್ನು ತೆರೆಯಲು ಹೋಗಬೇಡಿ.

ಈ ಫೇಸ್‌ಬುಕ್‌ ಪೋಸ್ಟ್‌ಗಳಿಂದ ದೂರವಿರಿ

ಈ ಫೇಸ್‌ಬುಕ್‌ ಪೋಸ್ಟ್‌ಗಳಿಂದ ದೂರವಿರಿ


ಸುದ್ದಿ ಸಂಸ್ಥೆಗಳ, ದೊಡ್ಡ ವ್ಯಕ್ತಿಗಳ ಹೆಸರಿನಲ್ಲಿ ಅನೇಕ ಪೋಸ್ಟ್‌ಗಳು ಫೇಸ್‌ಬುಕ್‌ನಲ್ಲಿ ಶೇರ್‌ ಆಗಿ ನಿಮ್ಮ ವಾಲ್‌ಗೂ ಬರುತ್ತಿರುತ್ತದೆ.ಈ ಪೋಸ್ಟ್‌ಗಳು‌ ಆ ಸಂಸ್ಥೆ,ವ್ಯಕ್ತಿಯ ಅಧಿಕೃತ ಖಾತೆಯಿಂದಲೇ ಬಂದಿದೆಯೇ ಎಂಬುದನ್ನು ಮೊದಲು ಪರೀಕ್ಷಿಸಿ. ನಂತರವಷ್ಟೇ ಆ ಪೋಸ್ಟ್‌ನಲ್ಲಿರುವ ಪೇಜ್‌ನ್ನು ಓಪನ್‌ ಮಾಡಲು ಹೋಗಿ.

ಈ ಫೇಸ್‌ಬುಕ್‌ ಪೋಸ್ಟ್‌ಗಳಿಂದ ದೂರವಿರಿ

ಈ ಫೇಸ್‌ಬುಕ್‌ ಪೋಸ್ಟ್‌ಗಳಿಂದ ದೂರವಿರಿ


ಬಹಳಷ್ಟು ಜನ ಈ ಗಿಫ್ಟ್‌ ಕಾರ್ಡ್‌ ಪೋಸ್ಟ್‌ಗಳಿಂದ ಮೋಸ ಹೋಗುತ್ತಿದ್ದಾರೆ. ಈ ರೀತಿಯ ಪೋಸ್ಟ್‌ಗಳು ಕಂಡುಬಂದಲ್ಲಿ ಕ್ಲಿಕ್‌ ಮಾಡಲು ಹೋಗದಿರಿ. ಒಂದು ವೇಳೆ ಆನ್‌ಲೈನ್‌ಲ್ಲೇ ಗಿಫ್ಟ್‌ ಕಳುಹಿಸಬೇಕು ಎಂದು ಯೋಚಿಸಿದ್ದಲ್ಲಿ ಉತ್ತಮ ಗ್ರಾಹಕ ಸ್ನೇಹಿ ಆನ್‌ಲೈನ್‌ ಶಾಪಿಂಗ್‌ ತಾಣಗಳಿಗೆ ತೆರಳಿ ಗಿಫ್ಟ್‌ ನೀಡಬಹುದು.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+