ಮಾಲ್‌ವೇರ್‌ ಬರುತ್ತೆ ಎಚ್ಚರ. ಎಚ್ಚರ

Posted By:

ಕಂಪ್ಯೂಟರ್‌ ಬಳಕೆ ಮಾಡುವವರಿಗೆ ಮಾಲ್‌ವೇರ್‌ ಪದ ಚಿರಪರಿಚಿತ. ಹೀಗಾಗಿ ಈ ವರ್ಷ ಮಾಲ್‌ವೇರ್‌ಗಳಿಂದ ಕಂಪ್ಯೂಟರ್‌ ಸುರಕ್ಷತೆಗೆ ಜನ ಖರ್ಚು ಮಾಡಿದ ಹಣ ಎಷ್ಟು ಗೊತ್ತೆ ? ಬರೊಬ್ಬರಿ 22 ಬಿಲಿಯನ್‌ ಅಮೆರಿಕನ್‌ ಡಾಲರ್‌ನ್ನು ವಿಶ್ವದ ಜನ ಖರ್ಚು ಮಾಡಿದ್ದಾರಂತೆ.
ವಿಶ್ವದ ಜನ ಇಷ್ಟು ಮೊತ್ತದ ಹಣ ಖರ್ಚು ಮಾಡಿದ್ದರೆ ದೊಡ್ಡ ದೊಡ್ಡ ಕಂಪೆನಿಗಳು 114 ಬಿಲಿಯನ್‌ ಡಾಲರ್‌ ಹಣವನ್ನು ವ್ಯಯಮಾಡಿದೆ ಎಂದು ಮೈಕ್ರೋಸಾಫ್ಟ್‌ ಇಂಡಿಯಾ ತನ್ನ ಅಧ್ಯಯನದಲ್ಲಿ ತಿಳಿಸಿದೆ.

ಮಾಲ್‌ವೇರ್‌ ಬರುತ್ತೆ ಎಚ್ಚರ. ಎಚ್ಚರ

ವಿಶ್ವದ 10 ರಾಷ್ಟ್ರಗಳ 1,104 ಗ್ರಾಹಕರು, 973 ಉದ್ಯಮಿಗಳು ಮತ್ತು 268 ಐಟಿ ಕ್ಷೇತ್ರದ ಮ್ಯಾನೇಜರ್‌ಗಳ ಅಭಿಪ್ರಾಯವನ್ನು ಸಮೀಕ್ಷೆಗೆ ಬಳಸಿ ಮೈಕ್ರೋಸಾಫ್ಟ್‌ ಇಂಡಿಯಾದವರು ಈ ಅಧ್ಯಯನವನ್ನು ಕೈಗೊಂಡಿದ್ದಾರೆ.
ಗ್ರಾಹಕರು 22 ಬಿಲಿಯನ್‌ ಡಾಲರ್‌ ಖರ್ಚು ಮಾಡಿ ತಮ್ಮ 1.5 ಬಿಲಿಯನ್‌ನಷ್ಟು ಸಮಯವನ್ನು ಮಾಲ್‌ವೇರ್‌ಗಳಿಂದ ಮುಕ್ತಿ ಪಡೆಯಲು ಬಳಸಿದ್ದಾರೆ. ವಿಶ್ವದ ಮೂರು ಜನ ಗ್ರಾಹಕರಲ್ಲಿ ಒಬ್ಬರು ಮತ್ತು 10 ಉದ್ಯಮಿಗಳಲ್ಲಿ ಮೂವರು ಉದ್ಯಮಿಗಳು ಮಾಲ್‌ವೇರ್‌ಗಳಿಂದ ತೊಂದರೆ ಅನುಭವಿಸಿದ್ದಾರೆ ಎಂದು ತನ್ನ ಸಮೀಕ್ಷೆಯಲ್ಲಿ ತಿಳಿಸಿದೆ.

ಏನಿದು ಮಾಲ್‌ವೇರ್‌ ?
ವೈರಸ್‌, ವರ್ಮ್,ಸ್ಕೈವೇರ್‌ನಂತಹ ಯಾವುದೇ ದುರುದ್ದೇಶಪೂರಿತವಾದ ಸಾಫ್ಟ್‌ವೇರ್‌ನ್ನು ಒಟ್ಟಾರೆಯಾಗಿ ಮಾಲ್‌ವೇರ್‌ ಅಥವಾ ಕುತಂತ್ರಾಂಶ ಎಂದು ಕರೆಯುತ್ತೇವೆ. ಇಂದು ಇಂಟರ್‌ನೆಟ್‌ನಿಂದಾಗಿ ಹೆಚ್ಚಿನ ಪ್ರಮಾಣದ ಮಾಲ್ವೇರ್‌ಗಳು ಕಂಪ್ಯೂಟರ್‌,ಲ್ಯಾಪ್‌ಟಾಪ್‌ನ್ನು ಪ್ರವೇಶಿಸುತ್ತವೆ. ಹೀಗಾಗಿ ಡೌನ್‌ಲೋಡ್‌ ಮಾಡುವಾಗ ಹುಷಾರಾಗಿರಬೇಕು. ವೈರಸ್‌ ವಿರೋಧಿ ತಂತ್ರಾಂಶ ಇನ್‌ಸ್ಟಾಲ್‌ ಆಗಿದ್ದರೆ ಮಾಲ್‌ವೇರ್‌ಗಳಿಂದ ಕಂಪ್ಯೂಟರ್‌ಗೆ ಅಪಾಯವಾಗದಂತೆ ತಡೆಯಬಹುದು.

ಇನ್ನಷ್ಟು ವೈರಸ್‌, ಮಾಲ್‌ವೇರ್‌ಗಳ ಸುದ್ದಿಗಾಗಿ ಈ ಕೆಳಗಿನ ಲಿಂಕ್‌ ಕ್ಲಿಕ್ ಮಾಡಿ

ಕಂಪ್ಯೂಟರ್‌ನಲ್ಲಿ ವೈರಸ್‌ ಪತ್ತೆಹಚ್ಚುವುದು ಹೇಗೆ?
ಟಾಪ್ 5 ವೈರಸ್ ವಿರೋಧಿ ಉಚಿತ ಸಾಫ್ಟ್ ವೇರ್
ಪಬ್ಲಿಕ್‌ ವೈಫಿ ಬಳಸುವಾಗ ಇರಲಿ ಎಚ್ಚರ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot